ಮಂಗಳೂರು/ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ನಟ ದರ್ಶನ್ ಹುಟ್ಟುಹಬ್ಬ. ಡಿಬಾಸ್ ಅಭಿಮಾನಿಗಳು ದಿನಗಣನೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಭೇಟಿಯಾಗುವ ಆಸೆಯಲ್ಲಿದ್ದಾರೆ. ಆದರೆ, ಅಭಿಮಾನಿಗಳಿಗೆ ದರ್ಶನ್ ನಿರಾಸೆಯುಂಟು ಮಾಡಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿ ದರ್ಶನ್ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂದಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವುದರಿಂದ ಬಹಳ ಹೊತ್ತು ನಿಲ್ಲಲಾಗುವುದಿಲ್ಲ. ಎಲ್ಲರಿಗೂ ವಿಶ್ ಮಾಡಲು ಆಗುವುದಿಲ್ಲ. ಇಂಜೆಕ್ಷನ್ ತೆಗೆದುಕೊಂಡು 10 – 20 ದಿನ ನೋವು ಕಡಿಮೆ ಇರುತ್ತದೆ. ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಹೆಚ್ಚಾಗುತ್ತದೆ. ಆಪರೇಷನ್ ಕಟ್ಟಿಟ್ಟ ಬುತ್ತಿ. ಅದನ್ನು ಮಾಡಿಸಬೇಕು. ಕೆಲವೇ ದಿನಗಳಲ್ಲಿ ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸೂರಪ್ಪ ಬಾಬು ಸಿನಿಮಾ ಬಗ್ಗೆ…
ಈ ನಡುವೆ ಯಾರ್ಯಾರ ಸಿನಿಮಾ ಒಪ್ಪಿಕೊಂಡಿದ್ದೇನೆ ಅವರೆಲ್ಲಾ ಕಾದಿದ್ದಾರೆ. ಅವರಿಗೆ ತೊಂದರೆಯಾಗೋದು ಇಷ್ಟ ಇಲ್ಲ. ಸೆಲೆಬ್ರಿಟಿಗಳು ಯಾವ ಊಹಾಪೋಹಗಳಿಗೂ ಕಿವಿ ಕೊಡಬೇಡಿ. ಸೂರಪ್ಪ ಬಾಬು ಅವರು ನನ್ನ ಬಳಿಗೆ ಸಿನಿಮಾ ಮಾಡಬೇಕೆಂದು ಬಂದಿದ್ದಾಗ ಅವರಿಗೆ ಸಹ ತುಂಬಾ ಕಮಿಟ್ ಮೆಂಟ್ ಗಳಿದ್ದವು. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ನಡುವೆ ತುಂಬಾ ವಿಷಯಗಳು ನಡೆದು ವಿಳಂಬವಾಯಿತು, ಸೂರಪ್ಪ ಬಾಬು ಅವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂದು ಅವರು ಕೊಟ್ಟ ಮುಂಗಡ ಹಣವನ್ನು ವಾಪಾಸ್ ಕೊಟ್ಟಿದ್ದೇನೆ ಮುಂದೊಂದು ದಿನ ಉತ್ತಮ ಸಬ್ಜೆಕ್ಟ್ ಸಿಕ್ಕಿದರೆ ಸೂರಪ್ಪ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದರು.
ಗೆಳತಿ ಆಸೆ ಈಡೇರಿಸುವೆ :
ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆ ಖಂಡಿತ ಸಿನಿಮಾ ಮಾಡೇ ಮಾಡುತ್ತೇನೆ. ಅವರು ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಆಸೆ ಕೂಡ ನಾನು ಸಿನಿಮಾ ಮಾಡಬೇಕು ಅಂತ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನಿಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇವೆ. ಮುಂದೆ ಖಂಡಿತ ಮಾಡುತ್ತೇನೆ ಎಂದರು.
ವಿಶೇಷ ಥ್ಯಾಂಕ್ಸ್ ಹೇಳಿದ ಡಿಬಾಸ್ :
ವೀಡಿಯೋದ ಆರಂಭದಲ್ಲಿ ದರ್ಶನ್ ಸೆಲೆಬ್ರಿಟಿಗಳಿಗೆ(ಅಭಿಮಾನಿಗಳು) ನಮಸ್ಕಾರ ಹೇಳಬೇಕೋ, ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಕೊನೆಯಲ್ಲಿ ಮತ್ತೆ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಯಾವಾಗಲೂ ಚಿರಋಣಿ ಎಂದಿದ್ದಾರೆ.
ಈ ವೇಳೆ ತನ್ನ ಕಷ್ಟ ಕಾಲದಲ್ಲಿ ಸಾಥ್ ಕೊಟ್ಟ ಮೂವರ ಹೆಸರು ಉಲ್ಲೇಖಿಸಿದ್ದಾರೆ. ನಟ ಧನ್ವೀರ್, ಬುಲ್ ಬುಲ್ ರಚಿತಾ ರಾಮ್, ಪ್ರಾಣ ಸ್ನೇಹಿತೆ ರಕ್ಷಿತಾಗೆ ತುಂಬಾ ಥ್ಯಾಂಕ್ಸ್ ಎಂದಿದ್ದಾರೆ.
ಇದನ್ನೂ ಓದಿ : ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್ ಇ*ನ್ನಿಲ್ಲ
ಇದೇ ಸಂದರ್ಭ ದರ್ಶನ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಗಾಸಿಪ್ ಬಗ್ಗೆ ಮಾತಾಡಿದ ಅವರು, ಈ ವಿಷಯ ಆಗಾಗ ಸುದ್ದಿಯಾಗುತ್ತಿರುತ್ತದೆ. ನನ್ನ ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ, ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ. ಇಲ್ಲಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.