Connect with us

BANTWAL

ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿಯಂತೆ..!?

Published

on

ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿಯಂತೆ..!?

ಮಂಗಳೂರು : ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟ ಹಾಗೂ ರೌಡಿ ಶೀಟರ್ ಆಕಾಶ್ ಭವನ್ ಶರಣ್‌ ಗೆ ಎನ್ ಕೌಂಟರ್ ಭೀತಿ ಉಂಟಾಗಿದೆಯಂಂತೆ. ಶರಣ್‌ ಅಲಿಯಾಸ್ ಶರಣ್ ಪೂಜಾರಿ ಪ್ರಸ್ತುತ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದಾನೆ.

ಇತ್ತೀಚಿಚೆಗೆ ಬಂಟ್ವಾಳದಲ್ಲಿ ನಡೆದ ತುಳು ಚಿತ್ರನಟ ಮತ್ತೋರ್ವ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಮರ್ಡರ್ ಕೇಸ್ ನಲ್ಲಿ  ಶರಣ್ ನ ಹೆಸರು ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಬಾಡಿ ವಾರಂಟ್ ಪಡೆದು ಮಂಗಳೂರಿಗೆ ಕೆರೆತರಲು ಬಂಟ್ವಾಳ ಪೊಲೀಸರು ಯೋಜನೆ ರೂಪಿಸಿದ್ದಾರೆ.

ವಿಚಾರಣೆಗೆ ಕರೆ ತಂದಾಗ ಎನ್ ಕೌಂಟರ್ ಮಾಡುತ್ತಾರೆ ಅಂತಾ  ಭೀತಿ ವ್ಯಕ್ತ ಪಡಿಸಿ ಸ್ವತ: ಶರಣ್ ನಿಂದ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ ಎನ್ನಲಾಗಿದೆ.

ನನ್ನ ಜೀವಕ್ಕೆ ಅಪಾಯ ಇದೆ, ಪೊಲೀಸರು ನನ್ನನ್ನು ಎನ್‌ಕೌಂಟರ್ ಮಾಡಿ ಸಾಯಿತ್ತಾರೆ ಆದ್ದರಿಂದ ವಿಚಾರಣೆಯಿಂದ ವಿನಾಯಿತಿ ಕೋರಿ ಶರಣ್ ಪತ್ರ ಬರೆದಿದ್ದು ನ್ಯಾಯಾಧೀಶರಿಗೆ ಮನವಿ ಮಾಡಿದ್ದಾನೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಪತ್ರ ರವಾನೆಯಾಗಿದ್ದು ಅದರ ಪ್ರತಿ ಮಾದ್ಯಮಗಳಿಗೆ ದೊರೆತ್ತಿದೆ. ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

BANTWAL

2028ಕ್ಕೆ ರಮಾನಾಥ ರೈ ಅಭ್ಯರ್ಥಿ: ನಾವೂರು ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Published

on

ಬಂಟ್ವಾಳ: 2028ಕ್ಕೂ ನಾವೇ ಅಧಿಕಾರಕ್ಕೆ ಬಂದೇ ಬರ್ತೀವಿ. ನಾವು ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಏನು ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕಂಬಳಕ್ಕೆ ಹಣಕಾಸಿನ ನೆರವನ್ನೂ ಕೊಡ್ತೇವೆ, ರಮಾನಾಥ ರೈ ಅವರನ್ನು ಸೋಲಿಸಿದ್ದು ಬೇಸರ ತಂದಿದೆ, ಮುಂದಿನ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯಾಗ್ತಾರೆ, ಅವರನ್ನು ಮತ್ತೆ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಂಟ್ವಾಳದ ನಾವೂರು ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶನಿವಾರ ನಡೆದ ಮುಡೂರು ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಮಾನಾಥ ರೈ ಅವರು ತಮ್ಮ ಶಾಸಕ,ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿರುವುದು ನೋವಿನ ಸಂಗತಿಯಾಗಿದೆ. ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ ಎಂದರು

ಬೆಂಜನಪದವು ಕ್ರೀಡಾಂಗಣ
ಬೆಂಜನಪದವಿನಲ್ಲಿ ಹತ್ತು ಕೋಟಿ ರೂ ಮಂಜೂರಾಗಿತ್ತು, ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಕ್ರೀಡಾಂಗಣ ನಿರ್ಮಾಣಕ್ಕೆ ನನಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಪ್ರಾಸ್ರಾವಿಕವಾಗಿ ಮಾತನಾಡಿದ ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಈ ಬಾರಿ ಕ್ರೀಡಾಂಗಣ ನಿರ್ಮಾಣಕ್ಕೆ ನೆರವು ನೀಡುವುದಾಗಿ ಹೇಳಿದರು.

ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ಡಾ.ಸಂತೋಷ್ ಗುರೂಜಿ, ಎಂ ಎಲ್ ಸಿ ಸಲೀಮ್ ಆಹ್ಮದ್, ಐವಾನ್ ಡಿಸೋಜ, ಶಾಸಕರುಗಳಾದ ಅಶೋಕ್ ಕುಮಾರ್ ರೈ ,ಟಿ.ಡಿ.ರಾಜೇಗೌಡ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿವಿಧ ನಿಗಮದ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್,ಟಿ.ಎಮ್ ಶಹೀದ್ ತೆಕ್ಕಿಲ್, ಮಮತಾ ಡಿ.ಎಸ್. ಗಟ್ಟಿ,ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಸಹಿತ ಪ್ರಮುಖರು ಹಾಜರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.

WATCH VIDEO:

Continue Reading

BANTWAL

ಬಂಟ್ವಾಳ: ಅಪಘಾತಕ್ಕೊಳಗಾಗಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಸಾವು

Published

on

ಬಂಟ್ವಾಳ: ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ಕೂಟರ್ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ನಡೆದಿದೆ.

ಅಡ್ಯಾರು ನಿವಾಸಿ 65 ವರ್ಷದ  ಜಯರಾಮ  ಮೃತಪಟ್ಟ ವ್ಯಕ್ತಿ. ಎರಡು ದಿನಗಳ ಹಿಂದೆ ಬಂಟ್ವಾಳ ತಾಲೂಕಿನ ಬಡಗುಂಡಿ ಎಂಬಲ್ಲಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಸವಾರನಿಗೆ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ‌ಸ್ಕೂಟರ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಆದರ್ಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

BANTWAL

ಬಂಟ್ವಾಳ: ಮುದಿಮರ ಬರ್ಕೆಯಲ್ಲಿ ಧರ್ಮಚಾವಡಿಗೆ ಶಿಲಾನ್ಯಾಸ

Published

on

ಬಂಟ್ವಾಳ: ದಿ. ಕಾಂತಪ್ಪ ಪೂಜಾರಿ ಕುಟುಂಬಸ್ಥರ ಧರ್ಮದೈವಗಳ ಧರ್ಮಚಾವಡಿಯ ಶಿಲಾನ್ಯಾಸ ಕಾರ್ಯಕ್ರಮ ಸರಪಾಡಿ ಗ್ರಾಮದ ಮುದಿಮರ ಬರ್ಕೆಯಲ್ಲಿ ಫೆ.28ರಂದು ನಡೆಯಿತು.

ಧಾರ್ಮಿಕ ವಿದಿವಿಧಾನವನ್ನು ಸದಾಶಿವ ಮುಚ್ಚಿಣ್ಣಾಯ ಕಾರಿಂಜ ಅವರು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಗುತ್ತಿನ ಮನೆತನದವರು, ಕುಟುಂಭಸ್ಥರು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯೋಗಿಶ್‌ ಕೆ ಸುವರ್ಣ ಮುದಿಮರ ಸ್ವಾಗತಿಸಿ, ಪ್ರಕಾಶ್ ಅಂಚನ್‌ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ: ಮಂಗಳೂರು: ಅರ್ತಿವೊಡಲು ವಿಷ್ಣುಮೂರ್ತಿ ದೇವಳದ ಬ್ರಹ್ಮಕಲಶೋತ್ಸವ ಸಿದ್ಧತೆ; ಆಮಂತ್ರಣ ಪತ್ರಿಕೆ ಬಿಡುಗಡೆ

Continue Reading
Advertisement

Trending

Copyright © 2025 Namma Kudla News

You cannot copy content of this page