Connect with us

sports

ಎರಡನೇ ಮಗುವಿಗೆ ತಂದೆಯಾದ ಟೀಂ ಇಂಡಿಯಾ ನಾಯಕ; ಜೂನಿಯರ್ ಹಿಟ್ ಮ್ಯಾನ್ ಆಗಮನ

Published

on

ಮಂಗಳೂರು/ಮುಂಬಯಿ : ಭಾರತ ಕ್ರಿಕೆಟ್ ತಂಡದ ನಾಯಕ  ರೋಹಿತ್ ಶರ್ಮಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ರೋಹಿತ್ ಪತ್ನಿ ರಿತಿಕಾ ಸಜ್ದೇ ಶುಕ್ರವಾರ(ನ.15) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ರೋಹಿತ್  ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಷ್ ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ರೋಹಿತ್ ಶರ್ಮಾ ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾ ಅವರನ್ನು 2015 ರ ಡಿಸೆಂಬರ್ 13ರಂದು ವರಿಸಿದ್ದರು. ರೋಹಿತ್ ಮತ್ತು ರಿತಿಕಾ ದಂಪತಿ 2018ರಲ್ಲಿ ಮಗಳು ಸಮೈರಾಳನ್ನು ಸ್ವಾಗತಿಸಿದ್ದರು.

ಇದನ್ನೂ ಓದಿ : ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ : ರಂಗ ಕಲಾವಿದರಿಬ್ಬರ ದಾ*ರುಣ ಸಾವು..!

2ನೇ ಮಗುವಿನ ನಿರೀಕ್ಷೆಯಲ್ಲಿದ್ದ ರೋಹಿತ್ ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗುತಿತ್ತು. ಒಂದು ವೇಳೆ ರೋಹಿತ್ ಮೊದಲ ಪಂದ್ಯದಲ್ಲಿ ಭಾಗಿಯಾಗದಿದ್ದಲ್ಲಿ ಭಾರತ ತಂಡವನ್ನು ಜಸ್ಪ್ರೀತ್ ಬೂಮ್ರಾ ಮುನ್ನಡೆಸಲ್ಲಿದ್ದಾರೆ.  ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ.

LATEST NEWS

ಏಕದಿನ ಸರಣಿಯ ನಡುವೆ ಟೀಂ ಇಂಡಿಯಾಗೆ ಬಿಗ್ ಶಾಕ್; ನಿವೃತ್ತಿ ಘೋಷಿಸಿದ ಸ್ಟಾರ್ ಬೌಲರ್!

Published

on

ಮುಂಬೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದ ನಡೆಯುತ್ತಿರುವ ಏಕದಿನ ಸರಣಿ ಮಧ್ಯದಲ್ಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಭಾರತ ತಂಡದ ಸ್ಟಾರ್ ಬೌಲರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.


‘ಇಂದಿನಿಂದ, ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಹರಿಯಾಣವನ್ನು ಪ್ರತಿನಿಧಿಸುವುದರಿಂದ ಹಿಡಿದು ಭಾರತೀಯ ಜೆರ್ಸಿ ಧರಿಸಿ, ಐಪಿಎಲ್‌ನಲ್ಲಿ ಆಡುವವರೆಗೆ, ನನಗೆ ತುಂಬಾ ಸವಲತ್ತು ಸಿಕ್ಕಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಬೆನ್ನೆಲುಬಾಗಿರುವ ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಅರ್ಪಿಸುತ್ತೇನೆ’. ಮೋಹಿತ್ ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳು, ತಮ್ಮ ಸಹ ಆಟಗಾರರು, ತರಬೇತುದಾರರು, ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಕ್ರಿಕೆಟ್ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

ಮೋಹಿತ್ ಶರ್ಮಾ 2013ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 26 ಏಕದಿನ ಪಂದ್ಯಗಳಲ್ಲಿ 35 ವಿಕೆಟ್, ಎಂಟು ಟಿ20 ಪಂದ್ಯಗಳಿಂದ ಆರು ವಿಕೆಟ್ ಗಳಿಸಿದ್ದಾರೆ. 2015ರ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿದ್ದ ಭಾರತ ತಂಡದಲ್ಲಿಯೂ ಅವರಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅವರು ‘ಡೆತ್ ಓವರ್’ ಪರಿಣಿತರಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: BBK12: ಬಾಯಿಬಿಟ್ಟು ನಿಜ ಹೇಳಿದ್ರಾ ರಜತ್? ಬಿಚ್ಚಿಟ್ಟ ಸತ್ಯ ಏನು?

ಮೋಹಿತ್ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳಲ್ಲಿಯೂ ಆಡಿದ್ದರು.

Continue Reading

LATEST NEWS

ಎರಡನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿದ ಕೊಹ್ಲಿ; ಚೊಚ್ಚಲ ಸೆಂಚುರಿ ಬಾರಿಸಿದ ಗಾಯಕ್ವಾಡ್

Published

on

ರಾಯ್​ಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಇದೇ ವೇಳೆ ಋತುರಾಜ್ ಗಾಯಕ್ವಾಡ್ ಕೂಡ ಭರ್ಜರಿ ಶತಕ ಸಿಡಿಸಿ ಚೊಚ್ಚಲ ಶತಕವನ್ನು ಪೂರೈಸಿದ್ದಾರೆ.


ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ 62 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ ಆರಂಭದಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಕೊಹ್ಲಿಗೆ ಗಾಯಕ್ವಾಡ್ ಉತ್ತಮ ಸಾಥ್ ನೀಡಿದರು.

ಕಳೆದ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಗಾಯಕ್ವಾಡ್, ಎರಡನೇ ಏಕದಿನ ಪಂದ್ಯದಲ್ಲಿ ಸಾಕಷ್ಟು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 77 ಎಸೆತಗಳನ್ನು ಎದುರಿಸಿ ಗಾಯಕ್ವಾಡ್ ಚೊಚ್ಚಲ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಋತುರಾಜ್ ಗಾಯಕ್ವಾಡ್ 83 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 105 ರನ್ ಬಾರಿಸಿ ಮಾರ್ಕೊ ಯಾನ್ಸನ್‌ಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ವಿರಾಟ್ ಕೊಹ್ಲಿ; ರಿಎಂಟ್ರಿ ಬಗ್ಗೆ ಖಚಿತ ಪಡಿಸಿದ ಕಿಂಗ್!

ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲೂ ಶತಕ ಪೂರೈಸಿದ್ದ ಕೊಹ್ಲಿ, ಇದೀಗ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ. ವಿಶೇಷ ಅಂದ್ರೆ ಕೊಹ್ಲಿ ಟಿ-20 ಕ್ರಿಕೆಟ್​ನಂತೆ ಬ್ಯಾಟ್ ಬೀಸಿ ವೀಕ್ಷಕರನ್ನ ಸಖತ್ ಎಂಟರ್ಟೈನ್​ ಮಾಡಿದರು. 110.99 ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 93 ಬಾಲ್ ಎದುರಿಸಿ 2 ಸಿಕ್ಸರ್, 7 ಬೌಂಡರಿಯೊಂದಿಗೆ 105 ರನ್​ ಚಚ್ಚಿ ಲುಂಗಿ ಎನ್‌ಗ್ಡಿಗೆ ವಿಕೆಟ್ ಒಪ್ಪಿಸಿದರು.

Continue Reading

LATEST NEWS

ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ವಿರಾಟ್ ಕೊಹ್ಲಿ; ರಿಎಂಟ್ರಿ ಬಗ್ಗೆ ಖಚಿತ ಪಡಿಸಿದ ಕಿಂಗ್!

Published

on

ನವದೆಹಲಿ: ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.


ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಬಾರಿಸಿದ್ದರು. ಇದೀಗ ರಾಯ್‌ಪುರದಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ಆಡುತ್ತಿದ್ದಾರೆ. ಇನ್ನು ಈ ಸರಣಿಯ ಬಳಿಕ ಕೊಹ್ಲಿಯನ್ನು ಕಾಣಲು ನ್ಯೂಜಿಲೆಂಡ್ ಸರಣಿವರೆಗೆ ಕಾಯಬೇಕೆ ಎಂದು ಬೇಸರ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಕೊಹ್ಲಿ ಸಿಹಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ.

50 ಓವರ್‌ಗಳ ದೇಶೀಯ ಪಂದ್ಯವಾಳಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ದಿಗ್ಗಜ ವಿರಾಟ್ ಕೊಹ್ಲಿ ಆಡಲು ಸಜ್ಜಾಗಿದ್ದಾರೆ. ದೆಹಲಿ ತಂಡಕ್ಕೆ ತಮ್ಮ ಲಭ್ಯತೆಯನ್ನು ಖಚಿತಪಡಿಸಿದ್ದಾರೆ ಎಂದು ದೆಹಲಿ ಜಿಲ್ಲಾ ಕ್ರಿಕೆಟ್ ಆಸೋಸಿಯೇಷನ್ (DDCA) ಕ್ರಿಕ್‌ಬಜ್‌ಗೆ ದೃಢಪಡಿಸಿದೆ.

ಈ ಮೂಲಕ ವಿರಾಟ್ ದೇಶೀಯ ಅಂಗಳಕ್ಕೆ ಮರಳುತ್ತಿರುವುದು ಪಕ್ಕಾ ಎನ್ನಲಾಗಿದೆ. ಅದು ಕೂಡ ಬರೋಬ್ಬರಿ 15 ವರ್ಷಗಳ ಬಳಿಕ ಎನ್ನುವುದು ವಿಶೇಷ. ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010ರಲ್ಲಿ. ಅಂದು ದೆಹಲಿ ಪರ ಐದು ಇನ್ನಿಂಗ್ಸ್‌ಗಳಲ್ಲಿ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು.

ಇದನ್ನೂ ಓದಿ: ಭಾರತದ ಅತ್ಯಂತ ಜನಪ್ರಿಯ ತಾರೆಯರ​ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ!

ಡಿಸೆಂಬರ್ 24ರಿಂದ ಶುರುವಾಗಲಿರುವ ವಿಜಯ ಹಝಾರೆ ಏಕದಿನ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವಿರುದ್ದದ ಸರಣಿಗಾಗಿ ಕೊಹ್ಲಿ ಸಿದ್ದತೆ ನಡೆಸಲಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page