Connect with us

LATEST NEWS

ಇಂಪ್ಯಾಕ್ಟ್ ಪ್ಲೇಯರ್ ಕುರಿತು ಅಸಮಾಧಾನ ಹೊರಹಾಕಿದ ರೋಹಿತ್ ಶರ್ಮಾ..!

Published

on

ಮಂಗಳೂರು/ಮುಂಬೈ: ಐಪಿಎಲ್‌ನ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಅನೇಕ ಕ್ರಿಕೆಟ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿಯೇ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾ, ತನಗೆ ಈ ಪಾತ್ರ ಇಷ್ಟವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ,”ನಾವು ಕೇವಲ 2-3 ಓವರ್‌ಗಳ ಬಗ್ಗೆ ಮಾತನಾಡುತ್ತೇವೆ. ಅದರಿಂದ ಅಂತಹ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ ಮೈದಾನದಿಂದ 17 ಓವರ್ ಹೊರಗಿದ್ದು, ಅನಂತರ ನೇರವಾಗಿ ಆಡಲಿಳಿಯುವುದು ಅಷ್ಟು ಸುಲಭವಲ್ಲ’ ಎಂದಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮ ಏನು ?
2023ರಲ್ಲಿ ಮೊದಲ ಬಾರಿಗೆ ಈ ನಿಯಮವನ್ನು ಜಾರಿಗೊಳಿಸಲಾಯಿತು. ಈ ನಿಮಯದಂತೆ ಎಲ್ಲಾ ತಂಡಗಳಿಗೂ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಡಿಸುವ ಅವಕಾಶ ಇದೆ. ಅಂದರೆ ಒಬ್ಬ ಆಟಗಾರನ ಬದಲಿಗೆ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೊಬ್ಬ ಆಟಗಾರನನ್ನು ಆಡಿಸಬಹುದು. ಬದಲಿ ಆಟಗಾರನಾಗಿದ್ದರೆ ಆತ ಫೀಲ್ದಿಂಗ್ ಮಾತ್ರ ಮಾಡಬಹುದಾಗಿರುತ್ತದೆ. ಬೌಲಿಂಗೋ, ಬ್ಯಾಟಿಂಗೋ ಮಾಡುವಂತಿಲ್ಲ.

ಅದೇ ಇಂಪ್ಯಾಕ್ಟ್ ಪ್ಲೇಯರ್ ನಿಮಯದಲ್ಲಿ ಮಾತ್ರ ಬದಲಿ ಆಟಗಾರನಾಗಿ ಕಣಕ್ಕಿಳಿದವ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಬಹುದಾಗಿದೆ. ಒಂದು ತಂಡ ತನ್ನ ಮೊದಲ ಇನ್ನಿಂಗ್ಸ್‌ನ ಮೊದಲ ಚೆಂಡನ್ನು ಎದುರಿಸಿದ ಬಳಿಕ ಎರಡನೇ ಇನ್ನಿಂಗ್ಸ್‌ನ ಕೊನೆಯ ಚೆಂಡಿಗೂ ಮೊದಲು ಪಂದ್ಯದ ಯಾವುದೇ ಹಂತದಲ್ಲಿ ಬೇಕಾದರೂ ಬದಲಿ ಆಟಗಾರನೊಂದಿಗೆ 11ರ ಬಳಗದ ಯಾವುದೇ ಆಟಗಾರನನ್ನು ಬೇಕಾದರೂ ಬದಲಾಯಿಸಬಹುದು.

ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಬಿಸಿಸಿಐ ಸಂತಾಪ; ಇಂದಿನ ಪಂದ್ಯದಲ್ಲಿ ಚಿಯರ್ ಲೀಡರ್ಸ್, ಸಿಡಿಮದ್ದು ಪ್ರದರ್ಶನ ಇರಲ್ಲ..!

ಈ ಅವಕಾಶವನ್ನು ತಂಡಗಳು ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಬಲಿಷ್ಠಪಡಿಸಿಕೊಳ್ಳಲು ಬಳಸಿಕೊಳ್ಳಲು ಅನುಕೂಲ ಆಗುತ್ತದೆ. ಈ ಅವಕಾಶ ಎರಡೂ ತಂಡಗಳಿಗಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವಿರಬಹುದು, ಅಥವಾ ಬೌಲಿಂಗ್ ಮಾಡುವ ತಂಡ ಇರಬಹುದು, ಎರಡಕ್ಕೂ ಈ ನಿಯಮದ ಲಾಭ ಎತ್ತಬಹುದು. ಅಂದರೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬ್ಯಾಟರ್ ಒಬ್ಬನ ಬದಲಿಗೆ ಬೌಲರ್ ಅನ್ನು ಸೇರಿಸಿಕೊಳ್ಳಬಹುದು. ಅದೇ ರೀತಿ ಮೊದಲು ಬೌಲಿಂಗ್ ಮಾಡಿದ ತಂಡ ಬಳಿಕ ಬ್ಯಾಟಿಂಗ್ ಇಳಿಯುವ ವೇಳೆ ಬ್ಯಾಟರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಒಂದು ಬಾರಿಗೆ 11 ಮಂದಿ ಮಾತ್ರ ಬ್ಯಾಟಿಂಗ್ ಮಾಡಬಹುದು. 12 ಮಂದಿ ಬ್ಯಾಟಿಂಗ್ ಮಾಡುವಂತಿಲ್ಲ.

 

 

 

LATEST NEWS

WATCH : ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಹೃದಯಾ*ಘಾತ; ಯುವಕ ಸಾ*ವು

Published

on

ಮಂಗಳೂರು/ವಿಜಯಪುರ : ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಜಯಪುರದಲ್ಲಿ ಯುವಕನೋರ್ವ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.  ಡ್ಯಾನ್ಸ್ ಮಾಡುವಾಗಲೇ ಯುವಕನೊಬ್ಬ ಹೃದಯಾ*ಘಾತದಿಂದ ಸಾ*ವನ್ನಪ್ಪಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ದು*ರಂತ ಸಂಭವಿಸಿದೆ.

28 ವರ್ಷದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಮೃ*ತ ಯುವಕ. ಮಹಮ್ಮದ್ ಪೈಗಂಬರ್ ಆಲ್ಯೂಮೀನಿಯಂ ಕಿಟಕಿ, ಬಾಗಿಲು ಕೆಲಸ ಮಾಡುತ್ತಿದ್ದ. ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ  ಹೃ*ದಯಾಘಾತಕ್ಕೊಳಗಾಗಿ ಕು*ಸಿದು ಬಿದ್ದಿದ್ದಾನೆ.

ಇದನ್ನೂ ಓದಿ : ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

ಕೂಡಲೇ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟುಹೊತ್ತಿಗಾಗಲೇ ಆತ ಮೃತಪಟ್ಟಿದ್ದಾನೆ. ಯುವಕನ ಕೊನೆಯ ಕ್ಷಣದ ವೀಡಿಯೋ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.

 

Continue Reading

LATEST NEWS

ಕೋವಿಡ್‌ ಕುರಿತು ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ

Published

on

ಮಂಗಳೂರು/ಬೆಳಗಾವಿ: ಮಹಾಮಾರಿ ಕೋವಿಡ್ ಕುರಿತು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮಿಜಿಯವರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಕೊವಿಡ್ ಕುರಿತು ಸ್ವಾಮೀಜಿ ಅವರು, ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರಿ. ಉಸಿರಾಟಕ್ಕೆ ತೊಂದರೆಯಾಗಿ ಸಾ*ವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪ ಸಂಭವಿಸಲಿದೆ. ಮತೀಯ ಗಲಭೆಗಳು ಹೆಚ್ಚಾಗಲಿವೆ’ ಎಂದರು.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ; ಮೋಹಕ ತಾರೆ ಬೇಸರ

‘ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಜನರಲ್ಲಿ ಅಶಾಂತಿ ಇದೆ. ಕೆಲವು ದೇಶಗಳು ಅಳಿದು ಹೋಗಲಿವೆ. ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ. ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ ಹಾಗೂ ಭಯವಿದೆ. ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತೆ ನೋಡಬೇಕು’ ಎಂದು ಸ್ವಾಮೀಜಿ ಹೇಳಿದ್ದಾರೆ.

Continue Reading

FILM

ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮಿಲ್ಕಿ ಬ್ಯೂಟಿ ರಾಯಭಾರಿ; ಮೋಹಕ ತಾರೆ ಬೇಸರ

Published

on

ಮಂಗಳೂರು/ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ಗೆ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿರುವುದರಿಂದ ಎದ್ದಿರುವ ವಿವಾದದ ಬೆನ್ನಲ್ಲೇ, ಮೋಹಕ ತಾರೆ ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಬೇಸರ ಹಂಚಿಕೊಂಡಿದ್ದಾರೆ.

ಕರ್ನಾಟಕ ಡಿಟರ್ಜೆಂಟ್ಸ್ ಕಂಪನಿಯು ತನ್ನ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ಅವರಿಗೆ ಎರಡು ವರ್ಷಗಳಿಗೆ 6.2 ಕೋಟಿ ರೂ. ಸಂಭಾವನೆಯನ್ನು ಗೊತ್ತುಪಡಿಸಿದೆ. ತಮನ್ನಾ, ಸಂಸ್ಥೆಯ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಕೂಡ ಪೋಸ್ಟ್‌ ಮಾಡಿದ್ದು, ಸಂಚಲನ ಮೂಡಿಸಿದೆ.

ಇದನ್ನೂ ಓದಿ: ಮೈಸೂರು ಸ್ಯಾಂಡಲ್‌ ಸೋಪ್ ರಾಯಭಾರಿಯಾಗಿ ಬಾಲಿವುಡ್ ನಟಿ! ಸಂಭಾವನೆ ಎಷ್ಟು?

‘ರಾಯಭಾರಿಗಳನ್ನು ನೇಮಿಸುವುದು ಹಳೆಯ ಸಂಪ್ರದಾಯ. ಇದರಿಂದ ತೆರಿಗೆ ಪಾವತಿದಾರರ ಹಣ ವ್ಯರ್ಥಮಾಡಿದಂತಾಗುತ್ತದೆ. ಒಂದು ಉತ್ಪನ್ನಕ್ಕೆ ಜನ ಗ್ರಾಹಕರಾಗಲು, ಆ ಉತ್ಪನ್ನ ಉತ್ತಮವಾಗಿರಬೇಕು. ನಮ್ಮ ಮೈಸೂರು ಸ್ಯಾಂಡಲ್‌ ಸೋಪ್ ಉತ್ತಮ ಉತ್ಪನ್ನವಷ್ಟೇ ಅಲ್ಲ, ಅದು‌ ನಮ್ಮ ಪರಂಪರೆಯಾಗಿದೆ. ಮೈಸೂರು ಸ್ಯಾಂಡಲ್ ಸೋಪ್ ಬಳಸಿದ ಪ್ರತಿಯೊಬ್ಬ ವ್ಯಕ್ತಿಯು ಅದರ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗ ಸಹ ಅದರ ರಾಯಭಾರಿ, ಅದನ್ನು ಪ್ರತಿಯೊಬ್ಬ ಕನ್ನಡಿಗನು ಉಚಿತವಾಗಿ ಜಗತ್ತಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡುತ್ತಾನೆ’ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

‘ಜಗತ್ತಿನ ಯಶಸ್ವಿ ಬ್ರಾಂಡ್‌ಗಳಲ್ಲಿ ಒಂದಾದ ಆ್ಯಪಲ್ ಸಂಸ್ಥೆ ಬ್ರಾಂಡ್ ಅಂಬಾಸಿಡರ್ ಹೊಂದಿಲ್ಲ. ರಾಯಭಾರಿಗಾಗಿ ಆ ಕಂಪನಿ ಹಣ ವ್ಯಯಿಸುವುದಿಲ್ಲ. ಹಾಗೆಯೇ, ಡವ್‍ ಸೋಪ್‍ ಪ್ರಚಾರ ಬಹಳ ಚೆನ್ನಾಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page