Connect with us

FILM

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬಂದ ಬೆನ್ನಲ್ಲೇ ಬಿಗ್​​ ಅಪ್​ಡೇಟ್ಸ್​​ ಕೊಟ್ಟ ರಾಕಿಂಗ್ ಸ್ಟಾರ್ ಯಶ್

Published

on

ಬೆಂಗಳೂರು: KGF ಸಿನಿಮಾದ ಬಳಿಕ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗ್ತಿದ್ದಾರೆ. ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನಿರಬಹುದು ಎಂದೂ ಫ್ಯಾನ್ಸ್​ ವಲಯದಲ್ಲಿ ಕುತೂಹಲವಿದೆ. ಯಶ್ ಅವರ ಹೊಸ ಸಿನಿಮಾದ ಅಪ್​ಡೇಟ್ ಏನಾದರೂ ಸಿಗುತ್ತೆಂದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್​ ಸಿನಿಮಾಗೆ ಅಭಿಮಾನಿ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀಮಂಜುನಾಥನ ಆಶೀರ್ವಾದ ಪಡೆದ ಬೆನ್ನಲ್ಲೇ ಇದೀಗ ತಮ್ಮ ಬಹು ನಿರೀಕ್ಷಿತ ಮೂವಿ ಟಾಕ್ಸಿಕ್​ಗೆ ಮುಹೂರ್ತ ಇಟ್ಟ ಸರಿಯಾದ ಸಮಯಕ್ಕೆ ಪೂಜೆ ನೆರವೇರಿಸಿದ್ದಾರೆ. ಟಾಕ್ಸಿಕ್ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರತಂಡ- ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತದ ದೇವರ ಪೂಜೆ ಮಾಡಲಾಯಿತು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಕ್ಸಿಕ್​ಗೆ ಅಭಿಮಾನಿ ಕೈಯಿಂದಲೇ ಕ್ಲ್ಯಾಪ್ ಮಾಡಿಸಲಾಗಿದೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಆರ್ಟ್ ಡಿಪಾರ್ಟ್​​ಮೆಂಟ್​​ನಲ್ಲಿ ಕೆಲಸ ಮಾಡುವ ಸುನೀಲ್ ಎನ್ನುವ ಅಭಿಮಾನಿ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ಅವರ ಬಹುತೇಕ ಸಿನಿಮಾಗಳಿಗೆ ಸುನೀಲ್ ಅವರೇ ಕೆಲಸ ಮಾಡಿದ್ದಾರೆ. ಒಳ್ಳೆಯ ಕೆಲಸಗಾರ. ಯಶ್ ಅವರ ಮಾತನ್ನು ತೆಗೆದು ಹಾಕದೆ ಕೆಲಸ ಮಾಡುತ್ತಾರೆ. ಅಲ್ಲದೇ ಸುನೀಲ್, ಯಶ್​​ಗೆ ದೊಡ್ಡ ಅಭಿಮಾನಿ ಕೂಡ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ಯಶ್ ಅವರು ಅಭಿಮಾನಿ ಸನೀಲ್​ರಿಂದ ಕ್ಲ್ಯಾಪ್ ಮಾಡಿಸಿದ್ದಾರೆ.

FILM

ಸುಪ್ರೀಂಕೋರ್ಟ್ ಅನುಮತಿ ನೀಡಿದರೂ ರಾಜ್ಯದಲ್ಲಿ “ಥಗ್‌ ಲೈಫ್‌” ಚಿತ್ರ ಬಿಡುಗಡೆ ಅನುಮಾನ

Published

on

ಮಂಗಳೂರು/ಬೆಂಗಳೂರು: ರಾಜ್ಯದಲ್ಲಿ “ಥಗ್‌ ಲೈಫ್” ಸಿನಿಮಾ ರಿಲೀಸ್ ಮಾಡಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೂ ಈ ಚಿತ್ರ ಬಿಡುಗಡೆ ಆಗುವುದು ಅನುಮಾನದಲ್ಲಿದೆ.


ಹೌದು, ಕಮಲ್ ಹಾಸನ್ ಅವರು ತಮ್ಮ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಹಠ ಹಿಡಿದಿದ್ದಾರೆ. ಸುಪ್ರೀಂ ಕೋರ್ಟ್ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದೆ. ಆದರೆ, ಕಳಪೆ ಬಾಕ್ಸ್ ಆಫೀಸ್ ಗಳಿಕೆಯಿಂದಾಗಿ ವಿತರಕರು ಮುಂದೆ ಬರುವುದು ಅನುಮಾನವೆನಿಸಿದೆ. ಕರ್ನಾಟಕದ ವಿತರಣೆ ಹಕ್ಕು ಪಡೆದಿದ್ದ ವೆಂಕಟೇಶ್ ಚಿತ್ರದ ವಿತರಣೆಯಿಂದ ಹಿಂದೆ ಸರಿದಿದ್ದಾರೆ.

‘ಥಗ್ ಲೈಫ್’ ಸಿನಿಮಾದ ಗಳಿಕೆ ಹೀನಾಯ ಸ್ಥಿತಿಯಲ್ಲಿದೆ. ಈ ಚಿತ್ರ ಮಂಗಳವಾರ (ಜೂನ್ 17) ಕೇವಲ 25 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾದ ಒಟ್ಟೂ ಗಳಿಕೆ ಇನ್ನೂ 47 ಕೋಟಿ ರೂಪಾಯಿಯಲ್ಲಿದೆ. ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆದರೂ ಜನರು ಚಿತ್ರವನ್ನು ಇಷ್ಟಪಡೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಹೀಗಾಗಿ, ತಂಡಕ್ಕೆ ಮತ್ತೊಂದಷ್ಟು ನಷ್ಟವೇ ಉಂಟಾಗಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ‘ಥಗ್‌ಲೈಫ್’ ರಿಲೀಸ್‌ಗೆ ಸುಪ್ರೀಂ ಆದೇಶ

ಈ ಮೊದಲು ‘ಥಗ್ ಲೈಫ್’ ಚಿತ್ರವನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿದ್ದ ವೆಂಕಟೇಶ್ ಅವರು ತಾವು ಸಿನಿಮಾನ ಹಂಚಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ಸಿನಿಮಾನ ಖರೀದಿ ಮಾಡಿದ್ದರು. ಈಗ ಸೋತ ಚಿತ್ರ ಎಂಬ ಹಣೆಪಟ್ಟಿ ಪಡೆದ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾದರೆ ನಷ್ಟವಾಗಬಹುದೆಂಬ ಕಾರಣಕ್ಕೆ ಅವರು ಕರ್ನಾಟಕದಲ್ಲಿ ಬಿಡುಗಡೆಗೆ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.

 

 

Continue Reading

FILM

ದುಬಾರಿ ಬೆಲೆಯ ಕಾರು ಖರೀದಿಸಿದ ಆಂಕರ್‌ ಅನುಶ್ರೀ.. ಈ ಕಾರಿನ ವಿಶೇಷತೆ ಏನು ಗೊತ್ತಾ..?

Published

on

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ ಅವರು ದುಬಾರಿ ಬೆಲೆಯ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರು ಖರೀದಿ ಮಾಡುವ ಫೋಟೋವನ್ನು ಅವರು ತಮ್ಮ ಇನ್‌ಸ್ಟಾ ಸ್ಟೋರಿಯನ್ನು ಹಾಕಿಕೊಂಡಿದ್ದಾರೆ. ಹಾಗಾದರೆ ಅನುಶ್ರೀ ಖರೀದಿಸಿದ ಹೊಸ ಕಾರು ಯಾವುದು? ಆ ಕಾರಿನ ಬೆಲೆ ಎಷ್ಟು? ಅನ್ನೋದನ್ನು ತಿಳಿಯೋಣ..

ಹೌದು.. ಅನುಶ್ರೀ ಖರೀದಿಸಿದ ಹೊಸ ಕಾರಿನ ಹೆಸರು ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್. ನೀಲಿ ಬಣ್ಣದ ಈ ಕಾರು ನೋಡುವುದಕ್ಕಂತೂ ಸಖತ್ ಆಗಿದೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿ. 25 ಲಕ್ಷದಿಂದ ಶುರುವಾದರೆ ಟಾಪ್ ಮಾಡಲ್ ₹40 ಲಕ್ಷದವರೆಗೂ ಹೋಗುತ್ತೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ; ಕೊನೆಗೂ ಎರಡನೇ ಬ್ಲ್ಯಾಕ್​ಬಾಕ್ಸ್​ ಪತ್ತೆ

ಈ ಕಾರು ಪೆಟ್ರೋಲ್ ಹಾಗೂ ಬ್ಯಾಟರಿ ಎರಡೂ ತಂತ್ರಜ್ಞಾನವನ್ನು ಹೊಂದಿದೆ. ಕಾರು ಚಲಾಯಿಸುವಾಗ ಬ್ಯಾಟರಿ ಮುಗಿದು ಹೋದರೆ, ಪೆಟ್ರೋಲ್‌ಗೆ ಶಿಫ್ಟ್ ಆಗಬಹುದು. ಇದರಿಂದ ಚಾರ್ಜಿಂಗ್ ಪಾಯಿಂಟ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ. ಅಲ್ಲಿದೆ ಕಾರಿನ ಮೈಲೇಜ್ ಕೂಡ ಸುಮಾರು 25 ಕಿ.ಮೀ ಪ್ರತಿ ಲೀಟರ್‌ಗೆ ನೀಡುತ್ತದೆ ಎಂದು ಹೇಳಲಾಗಿದೆ.

ಆದರೆ, ಅವರು ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾರು ಯಾವ ವೇರಿಯೆಂಟ್ ಅನ್ನೋದು ಗೊತ್ತಾಗಿಲ್ಲ. ಸದ್ಯ ಈ ಕಾರಿನ ಬೆಲೆ ಅಂತೂ ದುಬಾರಿ ಅನ್ನೋದಂತೂ ಸದ್ಯ.

Continue Reading

FILM

’ಕಾಂತಾರ ಚಾಪ್ಟರ್ 1’ ಸೆಟ್​​ನಲ್ಲಿ ಮತ್ತೊಂದು ಭಾರಿ ಅವಘಡ; ರಿಷಬ್ ಶೆಟ್ಟಿ ಸೇರಿ 30 ಮಂದಿ ಅಪಾಯದಿಂದ ಪಾರು!

Published

on

ಮಂಗಳೂರು/ತೀರ್ಥಹಳ್ಳಿ: ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ ಆರಂಭವಾದಗಿನಿಂದಲೂ ಒಂದಲ್ಲ ಒಂದು ಅವಘಡಗಳು ಎದುರಾಗುತ್ತಲೇ ಇವೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್‌ನಲ್ಲಿ ಸಂಭವಿಸಿದೆ. ಕ್ಯಾಮರಾಮನ್, ನಟ ರಿಷಬ್ ಶೆಟ್ಟಿ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಚಿತ್ರದ ಕೊನೆಯ ಹಂತದ ಶೂಟಿಂಗ್ ಗಾಗಿ ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದ ಬಳಿ 15 ದಿನಗಳ ಕಾಲ ಶೂಟಿಂಗ್ ನಡೆಸಲಾಗುತ್ತಿತ್ತು. ಶೂಟಿಂಗ್ ನಡೆಸುತ್ತಿದ್ದ ವೇಳೆ ದೋಣಿ ಮಗುಚಿದೆ ಎಂದು ಹೇಳಲಾಗಿದ್ದು, ನಟ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಸ್ಥಳದಲ್ಲಿದ್ದರು ಎನ್ನಲಾಗಿದೆ.

ಅದೃಷ್ಟವಶಾತ್ ಚಿತ್ರತಂಡದ ಎಲ್ಲರೂ  ಸೇಫ್ ಆಗಿದ್ದು, ಕ್ಯಾಮರಾ ಮತ್ತು ಇತರ ಸಾಮಗ್ರಿಗಳು ನೀರು ಪಾಲಾಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಾಂತಾರ ಚಿತ್ರತಂಡಕ್ಕೆ ತಪ್ಪದ ಸಂಕಷ್ಟ; ಮತ್ತೊಬ್ಬ ಕಲಾವಿದ ಸಾ*ವು

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಸರಣಿ ಅವಘಡಗಳು
‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಸರಣಿ ಅವಘಡಗಳು ನಡೆಯುತ್ತಲೇ ಇವೆ. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾ*ಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃ*ದಯಾಘಾತದಿಂದ ಮೃ*ತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃ*ತಪಟ್ಟರು. ಅವರು ಸಹ ‘ಕಾಂತಾರ’ ಸಿನಿಮಾನಲ್ಲಿ ನಟಿಸುತ್ತಿದ್ದರು. ಇದೆಲ್ಲದರ ಬಳಿಕ ಈಗ ದೋಣಿಯೇ ಮುಗಿಚಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page