Connect with us

FILM

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದ ರಾಕಿಂಗ್‌ ಸ್ಟಾರ್‌ ಯಶ್‌

Published

on

ಉಡುಪಿ: ಕರಾವಳಿಯಲ್ಲಿ ಟೆಂಪಲ್‌ ರನ್‌ ಮಾಡುತ್ತಿರುವ ರಾಕಿಂಗ್‌ ಸ್ಟಾರ್‌ ಯಶ್‌ ಇಂದು ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದರು.


ಇಂದು ಬೆಳಿಗ್ಗೆ ಮಠಕ್ಕೆ ಭೇಟಿ ನೀಡಿದ ಅವರು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನ ಪಡೆದರು.

ಈ ವೇಳೆ ಕೆಜಿಎಫ್‌-2 ನಿರ್ಮಾಪಕ ವಿಜಯ್ ಕಿರಂಗದೂರು ಜೊತೆಗಿದ್ದರು. ಏಪ್ರಿಲ್ 14ರಂದು ಬಹುನಿರೀಕ್ಷಿತ ಕೆಜಿಎಫ್-2 ವಿಶ್ವಾದ್ಯಾಂತ ರಿಲೀಸ್ ಆಗುವ ನಿರೀಕ್ಷೆ ಇದೆ.

ಕುಂದಾಪುರದ ಬಸ್ರೂರಿನಲ್ಲಿ ಬಹುನಿರೀಕ್ಷಿತ ಕೆಜಿಎಫ್‌-2ನ ಕೊನೆಯ ಹಂತದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಕೆಲವು ದಿನಗಳಿಂದ ಬಸ್ರೂರಿನಲ್ಲಿ ಬೀಡು ಬಿಟ್ಟಿರುವ ಚಿತ್ರತಂಡ ಇತ್ತೀಚೆಗೆ ಕೊಲ್ಲೂರು, ಧರ್ಮಸ್ಥಳ ಸೇರಿದಂತೆ ಕ್ಷೇತ್ರ ದರ್ಶನ ಮಾಡಿದ್ದರು.

FILM

ಹೆಸರು ಬದಲಿಸಿಕೊಂಡ ಆಲಿಯಾ ಭಟ್… ಏನು ಗೊತ್ತಾ..?

Published

on

ರಣಬೀರ್ ಕಪೂರ್ ಪತ್ನಿ ಆಲಿಯಾ ಭಟ್ ಮದ್ಯೆಯಾಗಿ ಹಲವು ವರ್ಷಗಳ ನಂತರ ತಮ್ಮ ಹೆಸರಿನ ಮುಂದೆ ಇರುವ ಭಟ್ ಎನ್ನುವ ಸರ್ ನೇಮ್ ತೆಗೆದು ಆಲಿಯಾ ಕಪೂರ್ ಎಂದು ಬದಲಿಸಿಕೊಂಡಿದ್ದಾರೆ.

ಆಲಿಯಾ ಭಟ್ ಅವರು ಬ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್” ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಆಲಿಯಾ, ಕಪೂರ್ ಕುಟುಂಬದವರನ್ನು ವಿವಾಹ ಆಗಿದ್ದಾರೆ. ಈ ಕಾರಣದಿಂದಲೇ ಆಲಿಯಾ ಕಪೂರ್ ಎಂದು ಹೋಟೆಲ್ನವರು ಬದಲಿಸಿರಬಹುದು ಎಂಬುದು ಕೆಲವರ ಊಹೆ. ಸದ್ಯ ಆಲಿಯಾ ಅವರು ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.

Continue Reading

FILM

‘ಆ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ’: ಬರ್ತ್‌ಡೇ ಪಾರ್ಟಿ ಬಗ್ಗೆ ಮಂಗ್ಲಿ ಸ್ಪಷ್ಟನೆ

Published

on

ಮಂಗಳೂರು/ಹೈದರಾಬಾದ್: ಖ್ಯಾತ ಗಾಯಕಿ ಮಂಗ್ಲಿ ಅವರ ಬರ್ತ್‌ಡೇ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮದ್ಯ ಮತ್ತು ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಇದರ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.


ಹೈದರಾಬಾದ್‌ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಜೂನ್ 10ರಂದು ಗಾಯಕಿ ಮಂಗ್ಲಿಯ ಬರ್ತಡೇ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಹಲವರು ಭಾಗಿಯಾಗಿದ್ದರು. ಮ್ಯೂಸಿಕ್, ಡ್ರಿಂಕ್ಸ್ ಒಳಗೊಂಡಂತೆ ಬಲು ಜೋರಾಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ: Watch video: ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಪ್ರಕರಣ; ಪೊಲೀಸರಿಗೆ ಗಾಯಕಿ ಅವಾಜ್

ಇದೇ ಸಂದರ್ಭದಲ್ಲಿ ತಡರಾತ್ರಿ ಪೊಲೀಸರು ಮಂಗ್ಲಿ ಅವರ ಪಾರ್ಟಿಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮಾದಕ ವಸ್ತುಗಳು ಪತ್ತೆಯಾಗಿದೆ. ಇದಲ್ಲದೆ ಸ್ಥಳದಲ್ಲಿ ವಿದೇಶಿ ಮದ್ಯ ಕೂಡ ಪತ್ತೆಯಾಗಿದೆ. ವಿದೇಶಿ ಮದ್ಯವನ್ನು ವಶಕ್ಕೆ ಪಡೆದ ಬಗ್ಗೆ ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಈ ಬಗ್ಗೆ ಮಂಗ್ಲಿ ಕೊನೆಗೂ ಸ್ಪಷ್ಟನೆ ಕೊಟ್ಟಿದ್ದಾರೆ.

 

ಈ ಬಗ್ಗೆ ಮಾತನಾಡಿರುವ ಅವರು ‘ಆಲ್ಕೋಹಾಲ್ ನೀಡುವ ವಿಚಾರದಲ್ಲಿ ಒಪ್ಪಿಗೆ ಪಡೆಯಬೇಕು ಎನ್ನುವ ವಿಷಯ ನನಗೆ ನಿಜವಾಗಿಯೂ ತಿಳಿದಿರಲಿಲ್ಲ. ನಾನು ಹಾಗೆ ಮಾಡಲಿಲ್ಲ ಎಂಬ ಕೊರಗು ಇದೆ. ಯಾರಾದರೂ ನನಗೆ ಮಾರ್ಗದರ್ಶನ ನೀಡಿದ್ದರೆ, ನಾನು ಹಾಗೆ ಮಾಡುತ್ತಿದ್ದೆ. ಪಾರ್ಟಿಯಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಲಭ್ಯವಿದ್ದದ್ದು ಸ್ಥಳೀಯ ಮದ್ಯ ಮಾತ್ರ. ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ. ಯಾವುದೇ ಮಾದಕ ದ್ರವ್ಯ ಸಿಕ್ಕಿಲ್ಲ ಎಂದು ಕೂಡ ಹೇಳಿದ್ದಾರೆ’ ಎಂದು ಮಂಗ್ಲಿ ಹೇಳಿದ್ದಾರೆ.

Continue Reading

FILM

ರಾಮ್ ಚರಣ್ ನಿರ್ಮಾಣದ ಸಿನಿಮಾ ಸೆಟ್​ನಲ್ಲಿ ಅವಘ*ಡ; ಹಲವರಿಗೆ ಗಾ*ಯ

Published

on

ಮಂಗಳೂರು/ಹೈದರಾಬಾದ್ : ನಟ ರಾಮ್ ಚರಣ್ ನಿರ್ಮಿಸುತ್ತಿರುವ ‘ದಿ ಇಂಡಿಯನ್ ಹೌಸ್’ ಸಿನಿಮಾ ಸೆಟ್‌ನಲ್ಲಿ ಅವಘ*ಡವೊಂದು ಸಂಭವಿಸಿದೆ. ಸಹಾಯಕ ಕ್ಯಾಮರಾಮೆನ್ ಗಂ*ಭೀರವಾಗಿ ಗಾ*ಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚಿತ್ರದ ಸೆಟ್‌ಗೂ ಹಾ*ನಿಯಾಗಿದೆ ಎಂದು ತಿಳಿದುಬಂದಿದೆ.

ಚಿತ್ರದ ಶೂಟ್‌ಗಾಗಿ ದೊಡ್ಡ ಟ್ಯಾಂಕರ್ ನಿರ್ಮಾಣ ಮಾಡಲಾಗಿತ್ತು. ಆದರೆ, ಟ್ಯಾಂಕರ್ ಒಡೆದು ಹೋಗಿ ಭಾರೀ ಪ್ರಮಾಣದಲ್ಲಿ ನೀರು ಹೊರ ನುಗ್ಗಿದೆ ಎನ್ನಲಾಗಿದೆ. ಪರಿಣಾಮ ಸಹಾಯಕ ಕ್ಯಾಮರಾಮೆನ್ ಗಂ*ಭೀರವಾಗಿ ಗಾ*ಯಗೊಂಡಿದ್ದಾರೆ. ಕೆಲವರಿಗೆ ಸಣ್ಣ ಪುಟ್ಟ ಗಾ*ಯಗಳಾಗಿವೆ ಎಂದು ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ಶಂಶಾಬಾದ್‌ನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ನಿಖಿಲ್ ಸಿದ್ದಾರ್ಥ್ ನಾಯಕನಾಗಿ ನಟಿಸುತ್ತಿದ್ದು, ಅವರೂ ಅವ*ಘಡ ಸಂಭವಿಸುವ ವೇಳೆ ಸ್ಥಳದಲ್ಲಿದ್ದರು. ಆದರೆ, ಅವರಿಗೇನೂ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕಾಂತಾರ ಚಿತ್ರತಂಡಕ್ಕೆ ತಪ್ಪದ ಸಂಕಷ್ಟ; ಮತ್ತೊಬ್ಬ ಕಲಾವಿದ ಸಾ*ವು

ದಿ ಇಂಡಿಯನ್ ಹೌಸ್ ಸ್ವಾತಂತ್ರ್ಯ ಪೂರ್ವದ ಕಥಾಹಂದರವನ್ನೊಳಗೊಂಡಿದೆ ಎಂದು ಹೇಳಲಾಗಿದೆ. ರಾಮ್ ವಂಶಿ ಕೃಷ್ಣ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್ ಅಗರ್‌ವಾಲ್ ಹಾಗೂ ತೇಜ್ ನಾರಾಯಣ್ ಅಗರ್‌ವಾಲ್ ಬಂಡವಾಳ ಹೂಡಿದ್ದಾರೆ. ಇವರೊಂದಿಗೆ ರಾಮ್ ಚರಣ್ ಕೂಡ ಕೈ ಜೋಡಿಸಿದ್ದಾರೆ ಎಂದು ತಿಳಿದುಬಂದಿದೆ.

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page