Connect with us

BANTWAL

ವಿಟ್ಲ: ಕಳ್ಳತನಕ್ಕೆ ವಿಫಲ ಯತ್ನ-ಇಬ್ಬರ ಬಂಧನ

Published

on

ಬಂಟ್ವಾಳ: ವಿಟ್ಲ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಣಿಲ ಶಾಖೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.


ಇಲ್ಲಿನ ಪೆರುವಾಯಿ ವ್ಯವಸಾಯ ಸಂಘದ ಮಾಣಿಲ ಶಾಖೆಯ ಮೇಲ್ಚಾವಣಿ ಹಂಚನ್ನು ಕಳ್ಳರು ತೆಗೆದು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದು ಯಾವುದೇ ಹಣ,ಬೆಲೆ ಬಾಳುವ ವಸ್ತು ಸಿಗದೆ ಕಳವಿಗೆ ಯತ್ನಿಸಿದ್ದರು. ಘಟನೆ ಬಗ್ಗೆ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಾಣಿಲ ಶಾಖೆ ವ್ಯವಸ್ಥಾಪಕ ಜಯರಾಮ ಅವರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.


ಘಟನೆ ನಡೆದು ಎರಡು ದಿನಗಳಲ್ಲಿ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ಎಚ್ ಇ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಪ್ರಸನ್ನ, ಹೇಮರಾಜ್, ಪ್ರತಾಪ್ ರೆಡ್ಡಿ, ಲೋಕೇಶ್ ಅವರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಪೆರುವಾಯಿ ವ್ಯವಸಾಯ ಸಂಘದ ಪ್ರಮುಖ ಶಾಖೆಯಲ್ಲಿ ಈ ಹಿಂದೆ ಕಳ್ಳತನ ನಡೆದಿತ್ತು. ಈ ಪ್ರಕರಣವನ್ನು ಕೂಡಾ ಇದೇ ಪೊಲೀಸರ ತಂಡ ಯಶಸ್ವಿಯಾಗಿ ಪತ್ತೆ ಹಚ್ಚಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

BANTWAL

ಸ್ಕೂಟರಿಗೆ ಢಿ*ಕ್ಕಿ ಹೊಡೆದ KSRTC ಬಸ್; ಸವಾರ ಸಾ*ವು

Published

on

ಬಂಟ್ವಾಳ: ಕೆ.ಎಸ್.ಆ‌ರ್.ಟಿ.ಸಿ ಬಸ್ಸು ಓವ‌ರ್ ಟೇಕ್ ಭರದಲ್ಲಿ ಸ್ಕೂಟರ್ ರೊಂದಕ್ಕೆ ಢಿ*ಕ್ಕಿಯಾಗಿ ಸವಾರ ಮೃ*ತಪಟ್ಟ ಘಟನೆ ಭಾನುವಾರ (ಮೇ 18) ತಡರಾತ್ರಿ ಪಾಣೆಮಂಗಳೂರಿನ ನೆಹರೂನಗರದಲ್ಲಿ ತಡರಾತ್ರಿ ನಡೆದಿದೆ.


ಮಂಗಳೂರು ನಿವಾಸಿ ಅಲಿಸ್ಟರ್ ಡಿಸೋಜ(24) ಮೃ*ತಪಟ್ಟವರು. ಅವರು ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರ ಜತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಬಿರುಗಾಳಿ; 25 ಮಂದಿ ಬಲಿ

ಮಂಗಳೂರು ಭಾಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಡಿ*ಕ್ಕಿ ಹೊಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ಲಾರಿಗಳು ಪರಸ್ಪರ ಡಿಕ್ಕಿಯಾಗಿ ಪಲ್ಟಿ; ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದು ಚಾಲಕ ಸಾ*ವು

Published

on

ಬಂಟ್ವಾಳ: ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಲಾರಿ ಚಾಲಕನ ಮೇಲೆ ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದ ಪರಿಣಾಮ ಸಾ*ವನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಬಳಿ ಗುರುವಾರ ನಡೆದಿದೆ.

ಮೃತರನ್ನು ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಎಂಬಾತನ ಕೈ ಕಾಲುಗಳ ಮೇಲೆ ಡಾಮರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಕ್ಲೀನರ್ ಅಲ್ಪಾಸ್ ಎಂಬವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಚಿನಡ್ಕಪದವು ಎಂಬಲ್ಲಿ ಈ ಅಪ*ಘಾತ ಸಂಭವಿಸಿದ್ದು , ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಸಜೀಪನಡು ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಿಸಿ ಡಾಮರು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.​​​​​

ಅಪ*ಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಎರಡೂ ಟಿಪ್ಪರ್ ಲಾರಿಗಳು ಪಲ್ಟಿಯಾಗಿ ರಸ್ತೆಯ ಬದಿಯಲ್ಲಿರುವ ಅಡಿಕೆ ತೋಟದಲ್ಲಿ ಪಲ್ಟಿಯಾಗಿ ಬಿದ್ದಿದೆ. ಟಿಪ್ಪರ್‌ನಲ್ಲಿ ಸಂಗ್ರಹಿಸಲಾದ ಜಲ್ಲಿಕಲ್ಲು ಮಿಶ್ರಿತ ಬಿಸಿ ಡಾಮಾರು ಕೆಂಪು ಕಲ್ಲು ತುಂಬಿದ ಲಾರಿಯ ಚಾಲಕನ ಮೇಲೆ ಚೆಲ್ಲಿದ ಕಾರಣ ಅವರ ಮೈ ಸಂಪೂರ್ಣ ಬೆಂದು ಹೋಗಿದೆ. ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ರಫೀಕ್ ಜೊತೆಗಿದ್ದ ಕ್ಲೀನರ್ ಯೂಸುಫ್ ಅವರ ಮೇಲೂ ಬಿಸಿ ಡಾಮಾರು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರ ಆತ್ಮಹ*ತ್ಯೆ ಪ್ರಕರಣ; ಎಸ್ಪಿ ಡಾ. ಅರುಣ್‌ ಹೇಳಿದ್ದೇನು?

ಸಜೀಪನಡುವಿಲ್ಲಿ ರಸ್ತೆಗೆ ಡಾಮರು ಹಾಕುವ ಉದ್ದೇಶದಿಂದ ಡಾಮರು ಸಾಗಿಸುವ ವೇಳೆ ಘಟನೆ ನಡೆದಿದೆ.ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯತನದ ಚಾಲನೆ ಹಾಗೂ ಅಜಾಗರೂಕತೆಯೆ ಕಾರಣ ಎನ್ನಲಾಗಿದೆ. ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

BANTWAL

ದ್ವಿಚಕ್ರ ವಾಹನಕ್ಕೆ ಕಾರು ಡಿ*ಕ್ಕಿ; ಗಂ*ಭೀರ ಗಾಯಗೊಂಡಿದ್ದ ಸವಾರ ಸಾ*ವು

Published

on

ಬಂಟ್ವಾಳ: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವಿದ್ಯಾರ್ಥಿ ಮಂಚಿ ಕುಕ್ಕಾಜೆ ನಿವಾಸಿ ಲಿಖಿತ್‌(22) ಎಂಬಾತನಿಗೆ ಕಾರು ಡಿಕ್ಕಿಯಾಗಿ ಗಂ*ಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಈತ ರಜೆಯಲ್ಲಿ ಸ್ಟೇಜ್ ಡೆಕೋರೇಷನ್ ಕೆಲಸಕ್ಕೆ ಹೋಗುತ್ತಿದ್ದ ಎಂದು ಹೇಳಲಾಗಿದೆ. ಲಿಖಿತ್ ಮೇ 13ರ ಮಂಗಳವಾರ ಸಂಜೆ ಸುಮಾರು 5.30 ರ ವೇಳೆಗೆ ಬಿಸಿರೋಡಿನಿಂದ ಮನೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಪಾಣೆಮಂಗಳೂರು ಎಂಬಲ್ಲಿ ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಕಾರು ಡಿ*ಕ್ಕಿಯಾಗಿದೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣ; ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಅಪ*ಘಾತದಲ್ಲಿ ಗಂ*ಭೀರವಾಗಿ ಗಾಯಗೊಂಡಿದ್ದ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಟ್ರಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page