Connect with us

DAKSHINA KANNADA

ಮಂಗಳೂರಿನ ಕೋಡಿಕಲ್‌ನಲ್ಲಿ ಹಾಡುಹಗಲೇ ಮನೆಯಿಂದ ಚಿನ್ನ ಕಳವು

Published

on

ಮಂಗಳೂರು: ಹಾಡುಹಗಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಕೋಡಿಕಲ್ ಆಲಗುಡ್ಡೆಯಲ್ಲಿ ನಡೆದಿದೆ.

ಇಲ್ಲಿನ ಅರುಣ್ ಕುಮಾರ್ ಎಂಬವರು ಬೆಳಗ್ಗೆ ಮನೆಗೆ ಬೀಗ ಹಾಕಿ ಪತ್ನಿ ಮತ್ತು ಪುತ್ರಿಯೊಂದಿಗೆ ನಗರಕ್ಕೆ ಕೆಲಸದ ನಿಮಿತ್ತ ಹೋಗಿದ್ದರು. ಸಂಜೆ ವಾಪಸಾದಾಗ ಮನೆಯ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದಿರುವುದು ಕಂಡುಬಂದಿತ್ತು. ಒಳಗೆ ಹೋಗಿ ನೋಡಿದಾಗ ಕಬ್ಬಿಣದ ಕಪಾಟುಗಳನ್ನು ಒಡೆದು ಅದರಲ್ಲಿದ್ದ ಲಾಕರ್‌ನ್ನು ಒಡೆದಿದ್ದಾರೆ. ಅಂದಾಜು 14 ಲಕ್ಷ ರೂ. ಬೆಲೆಬಾಳುವ 360 ಗ್ರಾಂ ಚಿನ್ನಾಭರಣ ಹಾಗೂ ಹಾಗೂ 1,700 ರೂ. ನಗದು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ಅಲೋಶಿಯನ್ ಗೇಮ್ಸ್- 2026 : ಜ.3 ರಿಂದ ಮಂಗಳೂರಿನಲ್ಲಿ ಅಂತರ್‌ ಕಾಲೇಜು ಕ್ರೀಡೋತ್ಸವ

Published

on

ಮಂಗಳೂರು : ಮಂಗಳೂರಿನ ಸೈಂಟ್ ಅಲೋಶಿಯಸ್‌ ಡೀಮ್ಡ್ ಯೂನಿವರ್ಸಿಟಿ ವತಿಯಿಂದ ಅಲೋಶಿಯನ್ ಗೇಮ್ಸ್- 2026 ಎಂಬ ಮೆಗಾ ಅಂತರ್‌ ಕಾಲೇಜು ಕ್ರೀಡಾ ಉತ್ಸವವನ್ನು 2026 ಜನವರಿ 3 ರಿಂದ 11 ರ ತನಕ ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡದೆಂದು ಪರಿಗಣಿಸಲಾದ ಈ ಕ್ರೀಡೋತ್ಸವದಲ್ಲಿ 13 ಸ್ಪರ್ಧಾತ್ಮಕ ಕ್ರೀಡೆಗಳು ಮತ್ತು ಒಂದು ಮ್ಯಾರಥಾನ್‌ ನಡೆಯಲಿದೆ. ಕ್ರೀಡಾಳುಗಳು, ಪ್ರೇಕ್ಷಕರು ಮತ್ತು ಸ್ವಯಂ ಸೇವಕರು ಸೇರಿದಂತೆ 20,000 ಕ್ಕೂ ಅಧಿಕ ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಸೈಂಟ್‌ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಕುಲಪತಿ ವಂದನೀಯ ಡಾಕ್ಟರ್‌ ಪ್ರವೀಣ್ ಮಾರ್ಟಿಸ್‌ ಮತ್ತು ಕ್ರೀಡೋತ್ಸವ ಸಮಿತಿಯ ಅಸಿತ್ ಕುಲಕರ್ಣಿ ಅವರು ಸುದ್ದಿಗೋಷ್ಟಿಯಲ್ಲಿ ಈ ಕುರಿತಂತೆ ಮಾಹಿತಿ ನೀಡಿದರು.

13 ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಮ್ಯಾರಥಾನ್‌ ಓಟವು ಎಲ್ಲಾ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇವತ್ತಿನಿಂದಲೇ ನೋಂದಣಿ ಆರಂಭವಾಗಿದೆ.

ಇದನ್ನೂ ಓದಿ : ಕುಟುಂಬ ಸಮೇತರಾಗಿ ಕಾಪು ಕ್ಷೇತ್ರಕ್ಕೆ ನಟಿ ಶ್ರುತಿ ಭೇಟಿ

‘ಕ್ರೀಡಾ ಚಟುವಟಿಕೆಗಳ ಮೂಲಕ ಬಾಂಧವ್ಯ ನಿರ್ಮಾಣ’ ಎಂಬ ಟ್ಯಾಗ್‌ ಲೈನ್‌ ಅಡಿಯಲ್ಲಿ ದೇಶಾದ್ಯಂತದ ಯುವ ಕ್ರೀಡಾಳುಗಳನ್ನು ಒಂದು ಗೂಡಿಸುವ ಉದ್ದೇಶದೊಂದಿಗೆ ಈ ಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್‌ ಎಂ. ಡಿ’ಸೋಜಾ ಮತ್ತು ನಿತಿಶಾ ರೊಡ್ರಿಗಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಚಂದ್ರಕಲಾ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

 

Continue Reading

DAKSHINA KANNADA

ಕುದ್ರೋಳಿ ಕ್ಷೇತ್ರದಲ್ಲಿ ಇಂದು ಭೈರವಾಷ್ಟಮಿ

Published

on

ಮಂಗಳೂರು : ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ಇಂದು(ನ.12) ಭೈರವಾಷ್ಟಮಿ ಪ್ರಯುಕ್ತ ಬೆಳಿಗ್ಗೆ ಭೈರವ ದೇವರಿಗೆ ಅಭಿಷೇಕ, ಮಹಾಪೂಜೆ ನೆರವೇರಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಜೈರಾಜ್ ಹೆಚ್ ಸೋಮಸುಂದರಂ ಮತ್ತು ಕಾರ್ಯದರ್ಶಿ ಮಾಧವ ಸುವರ್ಣ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಟೀಲು ಏಳನೇ ಮೇಳದ ಪದಾರ್ಪಣೆ ಸಂಭ್ರಮ; ನ.15ರಂದು ನಡೆಯಲಿದೆ ವೈಭವದ ಮೆರವಣಿಗೆ

ಕ್ಷೇತ್ರದಲ್ಲಿ ಇಂದು(ನ.12) ಸಂಜೆ 7.30 ಕ್ಕೆ ಭೈರವ ತರ್ಪಣ ಮತ್ತು ಮಹಾಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಯಲ್ಲಿ ಆಗಮಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿ ವಿನಂತಿಸಿಕೊಂಡಿದೆ.

Continue Reading

DAKSHINA KANNADA

ನಂದಿಗುಡ್ಡೆಯಲ್ಲಿ ಕೊರಗಜ್ಜ ಚಿತ್ರ ತಂಡದಿಂದ ಹರಕೆಯ ಕೋಲ ಸೇವೆ

Published

on

ಮಂಗಳೂರು: ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿ ಬಂದಿರುವ 6 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ಕೊರಗಜ್ಜ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮುನ್ನ ಚಿತ್ರ ತಂಡ ಮಂಗಳೂರಿನ ನಂದಿಗುಡ್ಡೆ ಕೊರಗಜ್ಜನ ಸಾನಿಧ್ಯದಲ್ಲಿ ಹರಕೆಯ ಕೋಲ ಸೇವೆ ಮಾಡಿ ಚಿತ್ರದ ಯಶಸ್ವಿಗೆ ಪ್ರಾರ್ಥನೆ ಮಾಡಿದೆ.


ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಶ್ರುತಿ, ಭವ್ಯ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಶ್ರುತಿ ತಂದೆ, ತಾಯಿ ಸಹಿತ ಚಿತ್ರರಂಗದ ಹಲವು ಮಂದಿ ಸೇರಿ ಸುಮಾರು 1500 ಅಧಿಕ ಮಂದಿ ಭಕ್ತರು ಕೊರಗಜ್ಜನ ಕೋಲದಲ್ಲಿ ಭಾಗಿಗಳಾಗಿದ್ದರು.

ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಸಕ್ಸಸ್ ಫಿಲ್ಮ್ಸ್’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಕೆಲಸ ಮಾಡಿದ್ದಾರೆ.


ತುಳು, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಗೊಳ್ಳಲಿದೆ. ಇನ್ನು ಸಿನೆಮಾದಲ್ಲಿ ನಟಿಸಿರುವ ಖ್ಯಾತ ನಟಿ ಶ್ರುತಿ ಅವರು ಚಿತ್ರದ ಅಭಿನಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

 

Continue Reading
Advertisement

Trending

Copyright © 2025 Namma Kudla News

You cannot copy content of this page