Connect with us

LATEST NEWS

ಪುತ್ತೂರಿನಲ್ಲಿ ರಸ್ತೆ ಅಪಘಾತ: ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಹಿಳಾ PSI

Published

on

ಪುತ್ತೂರು: ಆಟೋ ರಿಕ್ಷಾವೊಂದು ಡಿವೈಡರ್‌ಗೆ ಡಿಕ್ಕಿ ಯಾಗಿ ಪಲ್ಟಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯ ಪಡೀಲ್ ನಲ್ಲಿ ನಡೆದಿದ್ದು, ಅಪಘಾತದಲ್ಲಿ ಗಾಯಗೊಂಡ ಮಹಿಳೆ ಮತ್ತು ಚಾಲಕನನ್ನು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ಸೇಸಮ್ಮ, ಎ.ಎಸ್.ಐ ರಾಧಾಕೃಷ್ಣ ಅವರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಚಾಲಕ ಅಬ್ದುಲ್ ಎಂಬವರ ಆಟೋ ಡಿವೈಡರ್ ಗೆ ಬಡಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಯಾದ ಮಹಿಳೆ ಕುಸುಮಾವತಿ ಎಂಬವರಿಗೆ ಗಾಯವಾಗಿತ್ತು.


ಈ ವೇಳೆ ಜನರು ಕೂಡ ಅಪಘಾತ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಇದೇ ರಸ್ತೆಯಲ್ಲಿ ಕರ್ತವ್ಯಕ್ಕೆಂದು ತೆರಳುತ್ತಿದ್ದ ಮಹಿಳಾ ಠಾಣಾ ಪಿ ಎಸ್ ಐ ಸೇಸಮ್ಮ ಮತ್ತು ಎ ಎಸ್ ಐ ರಾಧಾಕೃಷ್ಣ ಮಹಿಳೆಯನ್ನು ಮತ್ತು ಚಾಲಕನನ್ನು ಆಸ್ಪತ್ರೆಗೆ ತಮ್ಮ ಸರ್ಕಾರಿ ವಾಹನದಲ್ಲಿ ಕರೆದುಕೊಂಡು ಹೋದರು.


ಹೀಗೆ ಮಹಿಳೆ ಹಾಗು ಚಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಸಿಗುವಂತೆ ಮಾಡುವ ಮೂಲಕ ಮಹಿಳಾ ಅಧಿಕಾರಿಗಳಿಬ್ಬರು ಮಾನವೀಯತೆ ಮೆರೆದರು.

DAKSHINA KANNADA

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ : ಡಿಸ್ಕಸ್ ಥ್ರೋನಲ್ಲಿ ಮಂಗಳೂರಿನ ಕೃತಿ ಎನ್.ಪಿ ಪ್ರಥಮ

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026 ನಡೆಯಿತು.

ಡಿಸ್ಕಸ್ ಥ್ರೋ ವಿಭಾಗದಲ್ಲಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಮಾಣಿಯ ವಿದ್ಯಾರ್ಥಿನಿ  ಕೃತಿ. ಎನ್.ಪಿ ಪ್ರಥಮ ಸ್ಥಾನ ಪಡೆದಿದ್ದು,  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ಕೃತಿ ಗೋಳ್ತಮಜಲು ಗ್ರಾಮದ ನಿವಾಸಿ ದಿನೇಶ್.ಬಿ ಮತ್ತು ತೇಜಾಕ್ಷಿ ದಂಪತಿ ಪುತ್ರಿ.

Continue Reading

LATEST NEWS

ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

Published

on

ಮಂಗಳೂರು/ರಾಮನಗರ : ಹಾಲಿನ ಟ್ಯಾಂಕರ್‌ ಗೆ ಹಿಂಬದಿಯಿಂದ ಡಿ*ಕ್ಕಿಯಾಗಿ ಕಾರೊಂದು ಹೊ*ತ್ತಿ ಉರಿದ ಘಟನೆ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದಿನಿಂದ ಹೋಗುತ್ತಿದ್ದ ಹಾಲಿನ ಟ್ಯಾಂಕರ್‌ ಗೆ ಗು*ದ್ದಿದ್ದಾನೆ. ಕೂಡಲೇ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳತೊಡಗಿದೆ. ಅಪಾಯ ಅರಿತ ಕಾರಿನಲ್ಲಿದ್ದವರು ತಕ್ಷಣ ಕೆಳಕ್ಕಿಳಿದು ದೂರಕ್ಕೆ ಓಡಿದ್ದಾರೆ.  ಅದಾದ ಕೆಲವೇ ಕ್ಷಣದಲ್ಲಿ ಕಾರಿನಲ್ಲಿ ಬೆಂ*ಕಿ ಕಾಣಿಸಿಕೊಂಡು ಹೊ*ತ್ತಿ ಉ*ರಿದಿದೆ.

ಇದನ್ನೂ ಓದಿ : ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

ಸ್ಥಳಕ್ಕೆ ಬಂದ ಅ*ಗ್ನಿಶಾಮಕ ದಳದ ಸಿಬ್ಬಂದಿ ಬೆಂ*ಕಿ ನಂದಿಸಿದ್ದಾರೆ. ಕಾರು ಸು*ಟ್ಟು ಕರಕಲಾಗಿದ್ದು, ಟ್ಯಾಂಕರ್‌ ನ ಹಿಂಭಾಗ ಜಖಂಗೊಂಡಿದೆ.  ಘಟನೆ ಬಗ್ಗೆ ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಇಂದೆಂಥ ದುರವಸ್ಥೆ! 108 ಆ್ಯಂಬುಲೆನ್ಸ್ ಸಿಗದೆ ಪರದಾಟ; ಗೂಡ್ಸ್ ಟೆಂಪೋ ಮೂಲಕ ರೋಗಿ ಆಸ್ಪತ್ರೆಗೆ!

Published

on

ಉಡುಪಿ : ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧ ರೋಗಿಯೊಬ್ಬರಿಗೆ  ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ತನ್ನ ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ ಆಘಾತಕಾರಿ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ರೋಗಿಗೆ ಸಂಬಂಧಪಟ್ಟವರು ರಾತ್ರಿ 7 ಗಂಟೆಗೆ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, 9.30 ಆದರೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಹೀಗಾಗಿ ಅವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿದ್ದಾರೆ. ರೋಗಿಯ ಚಿಂತಾಜನಕ ಸ್ಥಿತಿ ಕಂಡ ವಿಶು ಶೆಟ್ಟಿ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ.

ಇದನ್ನೂ ಓದಿ : ಸುರತ್ಕಲ್‌: ದೇವರಿಗೆ ಕೈಮುಗಿವ ನೆಪದಲ್ಲಿ ಭಕ್ತರೊಬ್ಬರ ಬ್ಯಾಗಿಗೆ ಕನ್ನ ಹಾಕಿದ ಕಳ್ಳ

ಕಳೆದ ಒಂದು ವರ್ಷದಿಂದ 108 ಆ್ಯಂಬುಲೆನ್ಸ್  ಸಮಸ್ಯೆ ತಲೆದೋರುತ್ತಿದ್ದು, ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಂಡು ಸಹಕರಿಸಿ.  ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಬೇಡಿ ಎಂದು  ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page