Connect with us

bengaluru

‘ಕಾಂತಾರ’ ಆಸ್ಕರ್‌ಗೆ ನಾಮಿನೆಟ್ ಆಗುತ್ತಾ…?-ಹೀಗಂದ್ರು ‘ಹೊಂಬಾಳೆ’ ಸಂಸ್ಥಾಪಕ ವಿಜಯ್ ಕಿರಗಂದೂರ್…

Published

on

ಬೆಂಗಳೂರು: ಕಾಂತಾರ ಸಿನಿಮಾ ಇಡೀ ಸಿನಿಮಾಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು ಆ ನಡುವೆ ಅನೇಕ ವಾದ ವಿವಾದ ಚರ್ಚೆಗಳು ಹುಟ್ಟಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಕಾಂತಾರ ಸಿನಿಮಾವನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ತಿಳಿಸಿದೆ.


2023ರ ಆಸ್ಕರ್ ಪ್ರಶಸ್ತಿಗೆ ಕಾಂತಾರ ಸಿನಿಮಾವನ್ನು ನಾಮನಿರ್ದೇಶನ ಮಾಡುವಂತೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಸಿನಿಮಾವನ್ನು ಕಳುಹಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಖಚಿತಪಡಿಸಿದೆ.

ಈ ಬಗ್ಗೆ ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ಕೊನೆಯ ಕ್ಷಣದಲ್ಲಿ ಅರ್ಜಿ ಕಳುಹಿಸಿದ್ದು, ನಾಮನಿರ್ದೇಶನಕ್ಕೆ ಪರಿಗಣಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಕಾಂತಾರ ಕಥೆಯು ಎಷ್ಟು ಬೇರೂರಿದೆ ಎಂದರೆ ಅದು ವಿಶ್ವದಾದ್ಯಂತ ಮಾರ್ಧನಿಸಿದೆ ಎಂದು ಈ ವೇಳೆ ಹೇಳಿಕೊಂಡಿದ್ದಾರೆ.

ಕೆಜಿಎಫ್ 2 ಬಳಿಕ 2022ರಲ್ಲಿ ಮೆಗಾ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದ ಕಾಂತಾರ ವಿಶ್ವದಾದ್ಯಂತ 400 ಕೋಟಿಗಿಂತಲೂ ಅಧಿಕ ಹಣ ಬಾಚಿಕೊಂಡಿದೆ. ಇದೀಗ ಆಸ್ಕರ್‌ನತ್ತ ಮುಖ ಮಾಡಿದೆ.

bengaluru

ಏರ್ಪೋರ್ಟ್ ನಲ್ಲಿ ಟಾಯ್ಲೆಟ್ ಗೆ ಕರೆದೊಯ್ದು ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ-ಸಿಬ್ಬಂದಿ ಅರೆಸ್ಟ್

Published

on

ಬೆಂಗಳೂರು: ವಿದೇಶಿ ಮಹಿಳೆಗೆ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ನಡೆದಿದೆ. ಏರ್ ಸಾಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಫ್‌.ಡಿ ಆಪ್ಪಾನ್ ಅಹಮದ್ ಬಂಧಿತ ಆರೋಪಿ.

ದಕ್ಷಿಣ ಕೊರಿಯಾ ಮೂಲದ 36 ವರ್ಷದ ಮಹಿಳೆಯೊಬ್ಬರು ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಮುಗಿಸಿ ಮತ್ತೆ ತನ್ನ ದೇಶಕ್ಕೆ ಹಿಂದಿರುಗಲು ಬೆಂಗಳೂರು ಏರ್‌ಪೋರ್ಟ್‌ಗೆ ವಾಪಸ್‌ ಆಗಿದ್ದರು. ಅಲ್ಲಿ ಭದ್ರತಾ ಪರಿಶೀಲನೆ ಮುಗಿಸಿ ಬೋರ್ಡಿಂಗ್ ಆಗುವ ವೇಳೆ ಎದುರಾದ ಆರೋಪಿ ಮಹಿಳಾ ಪ್ರಯಾಣಿಕರ ಬಳಿ ತಮ್ಮ ಬ್ಯಾಗೇಜ್ ಪರಿಶೀಲನೆ ಮಾಡಬೇಕು ಎಂದು ತಿಳಿಸಿ ಬ್ಯಾಗೇಜ್ ಪರಿಶೀಲನೆ ಮಾಡಿದ್ದಾರೆ.

ನಂತರ ವೈಯಕ್ತಿಕವಾಗಿ ಪರಿಶೀಲನೆ ಮಾಡಲಿದೆ ಎಂದು ತಿಳಿಸಿ ಈ ಮಹಿಳೆಯನ್ನ ಪುರುಷರ ಶೌಚಾಲಯದ ಒಳಗೆ ಕರೆದುಕೊಂಡು ಹೋಗಿ ಆಕೆಯನ್ನು ಮುಟ್ಟುವ ಹಾಗೂ ತಬ್ಬಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಇದರಿಂದ ವಿಚಲಿತಳಾದ ಮಹಿಳೆ ಸಿಐಎಸ್‌ ಎಫ್‌ ಸಿಬ್ಬಂದಿಗೆ ತಿಳಿಸಿದ್ದಾಳೆ.

ಕೂಡಲೇ ಸಿಐಎಸ್ ಎಫ್ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮಹಿಳೆಯ ಬಳಿ ದೂರು ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

 

 

Continue Reading

bengaluru

ಪಿಜಿಯಲ್ಲಿ ಸಿಲಿಂಡರ್ ಸ್ಫೋಟ-ಓರ್ವ ಸಾವು, ಮೂವರಿಗೆ ಗಂಭೀರ ಗಾಯ

Published

on

ಬೆಂಗಳೂರು: ಪಿಜಿಯೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಕುಂದಲಹಳ್ಳಿಯಲ್ಲಿ ನಡೆದಿದೆ.

ಸೆವೆನ್ ಹಿಲ್ಸ್ ಕೋ‌ಲಿವಿಂಗ್ ಬಾಯ್ಸ್ ಪಿಜಿಯಲ್ಲಿ ಘಟನೆ ನಡೆದಿದ್ದು, ಬಳ್ಳಾರಿ ಮೂಲದ ಅರವಿಂದ್ ಮೃತ ಯುವಕ. ವೆಂಕಟೇಶ್ (28), ವಿಶಾಲ್ (23), ಗೋಯಲ್ (25) ಎಂಬುವವರು ಗಾಯಗೊಂಡಿದ್ದಾರೆ. ಘಟನಾ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ದೌಡಾಯಿಸಿದ್ದಾರೆ.

ಪ್ರಾಥಮಿಕ ಮೂಲಗಳ ಪ್ರಕಾರ, ಪಿಜಿಯ ಕೆಳಮಹಡಿಯಲ್ಲಿದ್ದ ಅಡುಗೆ ಕೋಣೆಯಲ್ಲಿ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

ಸದ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪಿಜಿಯಲ್ಲಿದ್ದ ಇತರರನ್ನ ಬೇರೆ ಬೇರೆ ಪಿಜಿಗಳಿಗೆ ಶಿಫ್ಟ್ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಘಟನಾ ಸ್ಥಳಕ್ಕೆ ಜಿಬಿಎ ಅಧಿಕಾರಿಗಳು ಹಾಗೂ ಪೋರ್ವ ನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

Continue Reading

bengaluru

ಟೆಕ್ಕಿಯನ್ನು ಸರಸಕ್ಕೆ ಕರೆದು ಇವರು ಮಾಡಿದ್ದೇನು ಗೊತ್ತಾ..? ಮಹಿಳೆಯರು ಸೇರಿ ಐವರು ಅರೆಸ್ಟ್

Published

on

ಬೆಂಗಳೂರು: ಟೆಕ್ಕಿಯೋರ್ವನನ್ನು ಸರಸಕ್ಕೆ ಕರೆದು ಆತನಲ್ಲಿ ಹಣಕ್ಕೆ ಬೇಡಿಕೆಯಿಟ್ಟು ನಂತರ ಆತನಲ್ಲಿದ್ದ ಹಣವನ್ನು ದೋಚಿ ಹಲ್ಲೆ ಮಾಡಿದ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸುಮಲತಾ ಅಲಿಯಾಸ್ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ ಅಲಿಯಾಸ್ ಸ್ವೀಟಿ, ಜಗದೀಶ್, ಲೋಕೇಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಇಬ್ಬರು ಮಹಿಳೆಯರು ಸೇರಿಕೊಂಡು ಟೆಕ್ಕಿಯನ್ನು ಸರಸಕ್ಕೆ ಕರೆದಿದ್ದಾರೆ. ಆತ ಸ್ಥಳಕ್ಕೆ ಬರುತ್ತಿದ್ದಂತೆ 40 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಟೆಕ್ಕಿ ಅದಕ್ಕೆ ಒಪ್ಪದಿದ್ದಾಗ ಸಹಚರರನ್ನು ಕರೆದು ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ.

ಕೂಡಲೇ ಅಲ್ಲಿಂದ ಓಡಿಬಂದ ಟೆಕ್ಕಿ ಸ್ಥಳೀಯರ ಸಹಾಯದಿಂದ 112ಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೋದ ಹೊಯ್ಸಳ ಪೊಲೀಸರು ಟೆಕ್ಕಿ ಹಾಗೂ ಹಲ್ಲೆ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದಾಗ ಇವರ ವಂಚನೆ ಬೆಳಕಿಗೆ ಬಂದಿದೆ.

ಡಿ.10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಓರ್ವ ಹುಡುಗಿಯ ಪರಿಚಯವಾಗಿತ್ತು. ಆ ಹುಡುಗಿ 20,000 ರೂ. ಕೊಡಿ ಎಂದು ಕೇಳಿದ್ದು, ಟೆಕ್ಕಿ ಕೊಡುವುದಾಗಿ ಒಪ್ಪಿಕೊಂಡಿದ್ದರು. ಬಳಿಕ ಟೆಕ್ಕಿ ಮಹಿಳೆ ಮನೆಗೆ ಹೋಗಿದ್ದಾಗ ಬೆದರಿಸಿ, 20 ಸಾವಿರ ರೂ. ಕಸಿದುಕೊಂಡು ಕಳಿಸಿದ್ದರು.

ಬಳಿಕ ಅದೇ ಮಹಿಳೆ ತನ್ನ ಸ್ನೇಹಿತೆ ಸಹಾಯದಿಂದ ಅದೇ ಟೆಕ್ಕಿಯನ್ನು ಕರೆಸಿ ಮತ್ತೆ 20 ಸಾವಿರ ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದರು. ಈ ಕುರಿತು ಟೆಕ್ಕಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಟೆಕ್ಕಿಯ ದೂರಿನ ಆಧಾರದ ಮೇಲೆ ಆರ್ ಆರ್ ನಗರ ಪೊಲೀಸರು ಐವರನ್ನು ಬಂಧಿಸಿದ್ದರು. ಸದ್ಯ ಕೋರ್ಟ್ ಐವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page