Connect with us

DAKSHINA KANNADA

ಆಂಧ್ರಪ್ರದೇಶದ ಗವರ್ನರ್ ಹುದ್ದೆ ಅಲಂಕರಿಸಿದ ಸುಪ್ರೀಂ ನಿವೃತ್ತ ಜಡ್ಜ್‌ ಮೂಡುಬಿದಿರೆಯ ಅಬ್ದುಲ್‌ ನಝೀರ್‌

Published

on

ನವದೆಹಲಿ: ಮಂಗಳೂರು ಮೂಲದ ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ರಾಷ್ಟ್ರಪತಿ ನೇಮಕ ಮಾಡಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಅಬ್ದುಲ್ ನಜೀರ್ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕವಾದ ಬಳಿಕ ಕೆಲ ಐತಿಹಾಸಿಕ ಮಹತ್ವದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠಗಳಲ್ಲಿ ಭಾಗಿಯಾಗಿದ್ದರು.

ತ್ರಿವಳಿ ತಲಾಖ್, ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಪೀಠದಲ್ಲೂ ಇವರು ಇದ್ದರು. ಇದೇ ಜ.14 ರಂದು ಇವರು ನಿವೃತ್ತರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದಲ್ಲಿ ಹುಟ್ಟಿದ ಎಸ್ ಅಬ್ದುಲ್ ನಜೀರ್ ಮಹಾವೀರ ಕಾಲೇಜಿನಲ್ಲಿ ಬಿಕಾಂ ಮತ್ತು ಎಸ್​ಡಿಎಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು.

ಇವರೊಂದಿಗೆ 12 ಜನ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ.

DAKSHINA KANNADA

ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ 5.75 ಮೀ ನೀರು ಸಂಗ್ರಹ..! ಎರಡು ತಿಂಗಳು ನಿರಾತಂಕ..!

Published

on

ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ನೀರಿನ ಸಂಗ್ರಹ ಕಡಿಮೆ ಆಗಿದೆ. ಹಾಗಂತ ಮುಂದಿನ 60 ದಿನಗಳ ಕಾಲ ನಗರದ ನೀರಿನ ಬೇಡಿಕ ಪೂರೈಸುವ ವಿಚಾರವಾಗಿ ಯಾವುದೇ ಆತಂಕ ಇಲ್ಲ ಎನ್ನಲಾಗಿದೆ. ಹಾಗಂತ ಮಳೆ ಬಾರದೆ ಬಿಸಿಲಿನ ತಾಪ ಏರಿಕೆಯಾದ್ರೆ ಕೊಂಚ ಮಟ್ಟಿನ ತೊಂದರೆಯನ್ನು ತಳ್ಳಿಹಾಕುವಂತಿಲ್ಲ.

ಮಂಗಳೂರು ನಗರಕ್ಕೆ ಪ್ರತಿ ನಿತ್ಯ 160 MLD ನೀರಿನ ಬೇಡಿಕೆ ಇದ್ದು, ತುಂಬೆ ಡ್ಯಾಮ್ ನಿಂದ ನಿರಂತರವಾಗಿ ನೀರು ಪೂರೈಕೆ ಆಗುತ್ತಿದೆ. ಮಂಗಳೂರಿನಲ್ಲಿರುವ 80 MLD ಸಾಮರ್ಥ್ಯದ ಎರಡು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಗೊಂಡು ನಗರದ ಜನರಿಗೆ ಪೂರೈಕೆ ಆಗುತ್ತಿದೆ. ತುಂಬೆ ಡ್ಯಾಮ್ ನ ಶೇಖರಣಾ ಸಾಮರ್ಥ್ಯ 6 ಮೀಟರ್ ಆಗಿದ್ದು, ಇದೀಗ ಮಾರ್ಚ್ ಅಂತ್ಯದ ವೇಳೆಗೆ 5.75 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ 5.85 ಇದ್ದು, ಕಳೆದ ವರ್ಷಕ್ಕಿಂತ ಈ ವರ್ಷ .10 ಮೀಟರ್ ಕಡಿಮೆ ನೀರಿನ ಸಂಗ್ರಹ ಇದೆ.

ತುಂಬೆ ವೆಂಟೆಡ್ ಡ್ಯಾಮ್ ಗೂ ಮೊದಲು ಸಿಗುವ ಎಎಂಆರ್, ಸರಳಿಕಟ್ಟೆ, ಜಕ್ಕ್ರಿಬೆಟ್ಟು, ಮೊದಲಾದ ಕಡೆಯಲ್ಲೂ ನೀರಿನ ಸಂಗ್ರಹ ಇರುವ ಕಾರಣ ಮಂಗಳೂರು ನಗರಕ್ಕೆ ನೀರು ಪೂರೈಕೆಗೆ ಯಾವುದೇ ಆತಂಕ ಇಲ್ಲಾ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಂತ ನೀರನ್ನು ಜನರು ಇತಿಮಿತಿಯಲ್ಲಿ ಬಳಸುವ ಮೂಲಕ ನೀರಿನ ಉಳಿತಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

Continue Reading

DAKSHINA KANNADA

ಹಳೆ ಮೀಸಲು ಪಟ್ಟಿಯಂತೆ ಪಾಲಿಕೆ ಚುನಾವಣೆ ..!? ಶೀಘ್ರವೇ ಆಗಲಿದೆ ಘೋಷಣೆ..!

Published

on

ಮಂಗಳೂರು / ಮೈಸೂರು: ಮಂಗಳೂರು ಸೇರಿದಂತೆ ರಾಜ್ಯದ ಐದು ಮಹಾನಗರ ಪಾಲಿಕೆಗೆ ಈ ವರ್ಷದಲ್ಲೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಸರ್ಕಾರದಿಂದ ಈ ಐದೂ ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ನೀಡಿದ್ರೆ ಅದರಂತೆ ಚುನಾವಣೆ ನಡೆಯಲಿದೆ. ಇಲ್ಲವಾದಲ್ಲಿ ಹೈ ಕೋರ್ಟ್ ಮೊರೆ ಹೋಗಿ ಹಳೆ ಮೀಸಲು ಪಟ್ಟಿಯಂತೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.


ಮಂಗಳೂರು ಸೇರಿದಂತೆ ಮೈಸೂರು, ಶಿವಮೊಗ್ಗ, ದಾವರಣಗೆರೆ, ತುಮಕೂರು ಈ ಐದು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿದಿಗಳ ಅವದಿ ಮುಕ್ತಾಯಗೊಂಡಿದೆ. ಈ ಐದೂ ಮಹಾನಗರ ಪಾಲಿಕೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ಆಯೋಗ ರಾಜ್ಯ ಸರ್ಕಾರದ ಬಳಿ ಮೀಸಲು ಪಟ್ಟಿ ನೀಡಲು ಮನವಿ ಮಾಡಿದೆ. ನಿಯಮಾನುಸಾರ ಸರ್ಕಾರ ಮೀಸಲು ಪಟ್ಟಿ ಕೊಟ್ಟ ಬಳಿಕ ಅದರಂತೆ ಚುನಾವಣೆ ನಡೆಸಲಾಗುತ್ತದೆ. ಆದ್ರೆ ಸರ್ಕಾರ ಇನ್ನೂ ಮೀಸಲು ಪಟ್ಟಿ ನೀಡುವ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೊಂದು ವೇಳೆ ಮೀಸಲು ಪಟ್ಟಿ ನೀಡದೇ ಇದ್ರೆ ಈ ಹಿಂದಿನ ಮೀಸಲು ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣ ಆಯಕ್ತು ಜಿ.ಎಸ್. ಸಂಗ್ರೇಶಿ ಮಾಹಿತಿ ನೀಡಿದ್ದಾರೆ. ಮತದಾರರ ಪಟ್ಟಿ ಸಿದ್ಧವಾಗಿದೆಯಾದ್ರೂ ಮೀಸಲು ಪಟ್ಟಿಗಾಗಿ ಮಾತ್ರ ಕಾಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Continue Reading

DAKSHINA KANNADA

ಜಸ್ಟ್ ಪಾಸ್ ಮಾಡಲು ದೈವಕ್ಕೆ ಮನವಿ ಸಲ್ಲಿಸಿದ ವಿದ್ಯಾರ್ಥಿ..! ಹುಂಡಿಯಲ್ಲಿ ಪತ್ತೆಯಾದ ಚೀಟಿ..!

Published

on

ಉಡುಪಿ :  ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಕೋರಿಕೊಂಡ ಪತ್ರವೊಂದು ವೈರಲ್ ಆಗಿದೆ.

ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.

ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್‌ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.

Continue Reading
Advertisement

Trending

Copyright © 2025 Namma Kudla News

You cannot copy content of this page