Connect with us

LATEST NEWS

ಮಲ್ಪೆ ಬೀಚ್‌ನಲ್ಲಿ ಜೀವಾಂತ್ಯಗೊಳಿಸಲು ಪ್ರಯತ್ನಿಸಿದ ಮಹಿಳೆಯ ರಕ್ಷಣೆ

Published

on

ಉಡುಪಿ: ಸಮುದ್ರಕ್ಕೆ ಇಳಿದು ಜೀವಾಂತ್ಯಗೊಳಿಸಲು ಪ್ರಯತ್ನಿಸಿದ ಮಹಿಳೆಯೋರ್ವರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಿನ್ನೆ ನಡೆದಿದೆ.

ಇಲ್ಲಿ ಯಾರೂ ಕೂಡ ನೀರಿಗೆ ಇಳಿಯದಂತೆ ಜೀವ ರಕ್ಷಕ ತಂಡ ನಿಗಾ ವಹಿಸಿತ್ತು. ಬೀಚ್‌ಗೆ ಇಳಿಯುವಲ್ಲಿ ನೆಟ್‌ ಆಳವಡಿಸಿ ಪ್ರವಾಸಿಗರು ನೀರಿಗಿಳಿದು ಅಪಾಯಕ್ಕೀಡಾಗದಂತೆ ಎಚ್ಚರ ವಹಿಸಲಾಗುತ್ತಿದೆ.

ಆದರೆ ನಿನ್ನೆ ಸಂಜೆ ಪುಣೆ ಮೂಲದ ಮಹಿಳೆ ನೀರಿಗಿಳಿದು ಅಪಾಯವನ್ನು ಆಹ್ವಾನಿಸಿದ್ದು ಜೀವರಕ್ಷಕರು ಆಕೆಯನ್ನು ರಕ್ಷಿಸಿದ್ದಾರೆ. ಮಗನೊಂದಿಗೆ ಕಡಲ ತೀರಕ್ಕೆ ಬಂದಿದ್ದು ಆತನನ್ನು ಬದಿಯಲ್ಲಿ ನಿಲ್ಲಿಸಿ ತಾನು ನೀರಿಗಿಳಿದು ಮುಂದೆ ಮುಂದೆ ಹೋಗುತ್ತಿದ್ದಳು.


ಇದನ್ನು ತತ್‌ಕ್ಷಣ ಗಮನಿಸಿದ ಜೀವರಕ್ಷಕರು ಧಾವಿಸಿ ಆಕೆಯನ್ನು ದಡ ಸೇರಿಸಿದರು. ಆಕೆ ಮತ್ತೆ ಅದೇ ಪ್ರಯತ್ನಕ್ಕೆ ಮುಂದಾದಾಗ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆಯು ಸ್ವಲ್ಪ ಮಟ್ಟಿನ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದಳು.

ತನ್ನ ಹೆಸರನ್ನು ಹೇಳುತ್ತಿರಲಿಲ್ಲ, ಊರು ಪುಣೆ ಎಂದಷ್ಟೇ ಹೇಳುತ್ತಿದ್ದಳು.
ಆಕೆ ಆತ್ಮಹತ್ಯೆಗೆ ಯತ್ನಿಸಿದಂತಿದೆ ಎಂದು ಬೀಚ್‌ ನಿರ್ವಾಹಕ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

LATEST NEWS

ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

Published

on

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸ್ನ್ಯಾಪ್‌ ಚಾಟ್‌ನಲ್ಲಿ ಅಶ್ಲೀಲ ವೀಡಿಯೋ ಕಳುಹಿಸಿ ಬೆದರಿಕೆ ಹಾಕಿದವನ ವಿರುದ್ಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಇರುವುದು ತಪ್ಪಲ್ಲ. ಆದರೆ ಮಿತಿಯಲ್ಲಿರಬೇಕು. ಇದೀಗ ದಾಖಲಾಗಿರುವ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಕೈಗೆ ಮೊಬೈಲ್ ಕೊಟ್ಟದ್ದು ಹೆತ್ತವರ ತಪ್ಪೂ ಹೌದು. ಜೊತೆಗೆ ಮೊಬೈಲ್‌ನಲ್ಲಿ ಆಕೆ ಏನು ಮಾಡುತ್ತಿದ್ದಾಳೆ ಎನ್ನುವುದನ್ನೂ ಗಮನಿಸುತ್ತಿರಬೇಕು. ವಿಶೇಷವಾಗಿ ಬಾಲಕಿಯರನ್ನು ಸೋಶಿಯಲ್ ಮೀಡಿಯಾದಿಂದ ಆದಷ್ಟು ದೂರ ಇರುವಂತೆ ಎಚ್ಚರಿಕೆ ನೀಡಬೇಕು. ಏಕೆಂದರೆ ಮುಂದಿನ ಸವಾಲಿನ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಇದೀಗ ನಡೆದಿರುವ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿ ವಿಡಿಯೋ ನೋಡಿ ಹೆದರಿ ಬಳಿಕ ಹೆತ್ತವರ ಸಹಾಯದೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

“ವ್ಯಕ್ತಿಯೋರ್ವ ತನ್ನ ಸ್ನ್ಯಾಪ್‌ಚಾಟ್ ಖಾತೆಗೆ ಆತನ ಸ್ನ್ಯಾಪ್‌ಚಾಟ್ ಖಾತೆಯಿಂದ ಅಶ್ಲೀಲತೆಯ ವೀಡಿಯೋ ಕಾಲ್‌ನ ಸ್ಟ್ರೀನ್ ರೆಕಾರ್ಡ್ ಮಾಡಿರುವ ವೀಡಿಯೋ ಫೈಲ್ ಸೆಂಡ್ ಮಾಡಿ ಬೆದರಿಕೆ ಹಾಕಿದ್ದಾನೆ” ಎಂದು ನ್ಯಾಷನಲ್ ಸೈಬ‌ರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ಗೆ (ಎನ್‌ಸಿಸಿಆರ್‌ಪಿ) ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಪೊಲೀಸರು ಮಂಗಳೂರಿನ ಓರ್ವ ಶಂಕಿತ ಸ್ನ್ಯಾಪ್‌ಚಾಟ್ ಖಾತೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Continue Reading

LATEST NEWS

ಈ ದೇಶದಲ್ಲಿ ಪ್ರೇಮಿಗಳ ದಿನದಂದು ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ !

Published

on

ಪ್ರಪಂಚದಾದ್ಯಂತ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅನೇಕ ಜನರು ಈ ದಿನ ತಮ್ಮ ಪ್ರೀತಿಯ ಸಂದೇಶಗಳೊಂದಿಗೆ ಕಾರ್ಡ್‌ಗಳು, ಹೂವುಗಳು ಅಥವಾ ಚಾಕೊಲೇಟ್‌ಗಳನ್ನು ಕಳುಹಿಸುವ ಮೂಲಕ ಇನ್ನೊಬ್ಬರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಈ ಒಂದು ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ.

ವ್ಯಾಲೆಂಟೆನ್ಸ್ ಡೇ ಬಹಳ ಜನಪ್ರಿಯವಾದ ದಿನವಾಗಿದೆ. ಪ್ರೀತಿಪಾತ್ರರ ನಡುವೆ ಈ ದಿನದಂದು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪ್ರೇಮಿಗಳ ದಿನದಂದು ಹೆಚ್ಚಾಗಿ ಹುಡುಗರು ಹುಡುಗಿಯರಿಗೆ ಗಿಫ್ಟ್‌ಗಳನ್ನು ಕೊಡುತ್ತಾರೆ. ಆದರೆ, ಜಪಾನ್ ದೇಶದಲ್ಲಿ ಹುಡುಗಿಯರು ಹುಡುಗರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇದರ ಬದಲಾಗಿ ಹುಡುಗರು ಹುಡುಗಿಯರು ಇಷ್ಟಪಡದ ವಸ್ತುಗಳನ್ನು ಹಿಂತಿರುಗಿಸಬೇಕು.

ಇದನ್ನೂ ಓದಿ: ಗೆಳತಿಗಾಗಿ ಕಳ್ಳನಾದ ಎಂಎಲ್ಎ ಮಗ !

ದಕ್ಷಿಣ ಆಫ್ರಿಕಾದಲ್ಲಿ ಫೆಬ್ರವರಿ 14ರಂದು ಅಲ್ಲಿನ ಜನರು ತಮ್ಮ ತಮ್ಮ ಪ್ರೀತಿಪಾತ್ರರ ಹೆಸರನ್ನು ಹೃದಯದ ಆಕಾರದಲ್ಲಿ ಭುಜದ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಎಲ್ಲಾ ದೇಶಗಳಲ್ಲೂ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಿದರೆ, ಬ್ರೇಜಿಲ್‌ನಲ್ಲಿ ಜೂನ್ 12 ರಂದು ವ್ಯಾಲೆಂಟೆನ್ಸ್ ಡೇ ಆಚರಿಸುತ್ತಾರೆ. ಫಿಲಿಪೈನ್ಸ್ ದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತವೆ.

Continue Reading

LATEST NEWS

ಗ್ರಿಲ್ಡ್ ಚಿಕನ್ ತಿಂದು 22 ಜನರು ಆಸ್ಪತ್ರೆಗೆ ದಾಖಲು

Published

on

ತಮಿಳುನಾಡು: ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದು 22 ಜನ ಆಸ್ಪತ್ರೆಗೆ ದಾಖಲಾದ ಘಟನೆ ತಮಿಳುನಾಡಿನ ಮಧುರೈ ಚೋಳವಂಧನ್‌ನಲ್ಲಿ ನಡೆದಿದೆ.

ಮಧುರೈನ ಹೋಟೆಲ್‌ವೊಂದರಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಇತ್ತು. ಇಲ್ಲಿ ಯಾವಾಗಲೂ ಜನಸಂಖ್ಯೆಯಿಂದಲೇ ಹೋಟೆಲ್ ತುಂಬಿಕೊಳ್ಳುತ್ತಿತ್ತು. ನಿನ್ನೆ ರಾತ್ರಿ ಬಾಸ್ಕೆಟ್ ಬಾಲ್ ಆಡಲು ಮಧುರೈಗೆ ಬಂದಿದ್ದ ಪ್ರಸನ್ನ ಎಂಬ ಆಟಗಾರ ತನ್ನ 10 ಜನ ಸ್ನೇಹಿತರೊಂದಿಗೆ ಈ ಹೋಟೆಲ್‌ನಲ್ಲಿ ಗ್ರಿಲ್ಡ್ ಚಿಕನ್ ತಿಂದಿದ್ದರು. ಇದನ್ನು ತಿಂದ ಬಳಿಕ ಅವರಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಹಾಗೆಯೇ ಗ್ರಿಲ್ಡ್ ಚಿಕನ್ ತಿಂದ ಉಳಿದವರಿಗೂ ಇದೇ ರೀತಿ ಆಗಿ ಅಸ್ವಸ್ಥಗೊಂಡಿದ್ದಾರೆ.

ಹುಷಾರ್‌ ಇಲ್ಲದೇ ಆದ ಎಲ್ಲರನ್ನೂ ಮಧುರೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page