Connect with us

FILM

ಖ್ಯಾತ ನಿರ್ದೇಶಕ ವಿಕ್ರಮ್ ಸುಗುಮಾರನ್ ಇನ್ನಿಲ್ಲ; ಏನಾಯ್ತು?

Published

on

ಮಂಗಳೂರು/ಚೆನ್ನೈ : ಖ್ಯಾತ ನಿರ್ದೇಶಕ ವಿಕ್ರಮ್ ಸುಗುಮಾರನ್ ವಿ*ಧಿವಶರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಹೊಸ ಸಿನಿಮಾ ತಯಾರಿಯಲ್ಲಿದ್ದ ಖ್ಯಾತ ನಿರ್ದೇಶಕನ ಅಚಾನಕ್ ಸಾ*ವು ಸಿನಿಪ್ರಿಯರಿಗೆ ಆ*ಘಾತವನ್ನುಂಟು ಮಾಡಿದೆ. ಅವನು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಇಂದು(ಜೂ.02) ವಿಕ್ರಮ್ ಸುಗುಮಾರನ್ ಮಧುರೈನಿಂದ ಚೆನ್ನೈಗೆ ಹೋಗಲು ಬಸ್ ಹತ್ತಿದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೃ*ದಯಾಘಾತದಿಂದ ವಿಕ್ರಮ್ ಇಹಲೋಕ ತ್ಯಜಿಸಿದ್ದು, ತಮ್ಮ ಮುಂದಿನ ಚಿತ್ರದ ಕಥೆಯನ್ನು ನಿರ್ಮಾಪಕರಿಗೆ ವಿವರಿಸಲು ಚೆನ್ನೈಗೆ ಹೊರಟಿದ್ದರು ಎನ್ನಲಾಗಿದೆ. ವಿಕ್ರಮ್ ನಿ*ಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಕಲಾವಿದರು, ಅಭಿಮಾನಿಗಳು ಸಂ*ತಾಪ ಸೂಚಿಸುತ್ತಿದ್ದಾರೆ.

ವಿಕ್ರಮ್ ಸುಗುಮಾರನ್ ಕಾಲಿವುಡ್‌ನ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅವರು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ, ವೆಟ್ರಮಾರನ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಬಳಿಕ ಸ್ವತಂತ್ರ ನಿರ್ದೇಶನದತ್ತ ಗಮನ ಹರಿಸಿದ ವಿಕ್ರಮ್ ಸುಗುಮಾರನ್ ಮಧಯನೈ ಕೂಟಂ ಎಂಬ ಚಿತ್ರ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು.

ಇದನ್ನೂ ಓದಿ : ವಿರಾಟ್ ಕೊಹ್ಲಿ ಮಾಲಕತ್ವದ ಬೆಂಗಳೂರಿನ ಪಬ್ ವಿರುದ್ಧ ಎಫ್‌ಐಆರ್

ಬಳಿಕ ರಾವಣ ಕೊಟ್ಟಂ ಚಿತ್ರ ನಿರ್ದೇಶಿಸಿ ಗೆದ್ದಿದ್ದರು. ಈ ಚಿತ್ರದಲ್ಲಿ ಖ್ಯಾತ ನಟ ಭಾಗ್ಯರಾಜ್ ಅವರ ಪುತ್ರ ಶಾಂತನು ನಟಿಸಿದ್ದರು.  ಅಲ್ಲದೇ, ನಟರಾಗಿಯೂ ಗಮನ ಸೆಳೆದಿದ್ದ ಅವರು, ಪೊಲ್ಲಾಧವನ್ ಮತ್ತು ಕೋಡಿವೀರನ್ ಚಿತ್ರಗಳಲ್ಲಿ ನಟಿಸಿದ್ದರು.

FILM

ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

Published

on

ಮಂಗಳೂರು/ಬೆಂಗಳೂರು :  ಸಿನಿಮಾ – ಕಿರುತೆರೆ ತಾರೆಯರು ಹೆಸರು ಬದಲಾಯಿಸುವುದು ಸಾಮಾನ್ಯ ಸಂಗತಿ. ಅದೆಷ್ಟೋ ನಟ – ನಟಿಯರು ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದೀಗ ನೀನಾದೆ ನಾ ಧಾರಾವಾಹಿ ಖ್ಯಾತಿಯ ಖುಷಿ ಶಿವು ಸರದಿ.

ನೀನಾದೆ ನಾ …ದಿಲ್ ಖುಷ್

ದಿಲೀಪ್ ಶೆಟ್ಟಿ ಮತ್ತು ಖುಷಿ ಶಿವು ನಟಿಸಿದ್ದ ‘ ನೀನಾದೆ ನಾ..’  ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ದಿಲೀಪ್ ಖುಷಿ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದರು. ಈ ಜೋಡಿಯನ್ನು ದಿಲ್ ಖುಷ್ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು.

ಈ ಧಾರಾವಾಹಿಯ ಯಶಸ್ಸಿಗೆ ಸಾಕ್ಷಿಯಾಗಿ ‘ನೀನಾದೆ ನಾ’ ಎರಡನೇ ಅಧ್ಯಾಯ  ಪ್ರಸಾರವಾಗಿತ್ತು.ಕರಾವಳಿಯಲ್ಲಿ ಹೊಸ ಪ್ರೇಮ ಕಥೆ ಅರಳಿ ನಲಿದಿತ್ತು. ತುಳುನಾಡಿನ ಸಂಸ್ಕೃತಿ, ಭಾಷೆಯ ಅನಾವರಣ ಮಾಡಲಾಗಿತ್ತು. ಆದರೆ, ಮೊದಲ ಅಧ್ಯಾಯದಷ್ಟು ಸಕ್ಸಸ್ ಸಿಗಲಿಲ್ಲ. ಹಾಗಾಗಿ ಕಥೆಯನ್ನು ಎಳೆಯದೆ ಧಾರಾವಾಹಿಗೆ ಅಂತ್ಯ ಹಾಡಲಾಯಿತು. ಆದರೆ, ದಿಲ್ ಖುಷ್‌ನ ಮಾತ್ರ ಜನ ಮರೆತಿಲ್ಲ.

ಇನ್ಮುಂದೆ ಖುಷಿ ಅಲ್ಲ… ರಮಿಕಾ :

ಖುಷಿ ಶಿವು ಸೋಶಿಯಲ್ ಮೀಡಿಯಾಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಫೋಟೋ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಇದೀಗ ಅವರು ಹೆಸರು ಬದಲಾಯಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸುಂದರವಾದ ಹೊಸ ಕಥೆಯ ಆರಂಭ ಎಂಬುದಾಗಿ ಬರೆದುಕೊಂಡಿರುವ ನಟಿ ಹೊಸ ಹೆಸರನ್ನು ಘೋಷಿಸಿದ್ದಾರೆ.

ಪ್ರೀತಿಯ ಅಭಿಮಾನಿಗಳೇ, ಸ್ನೇಹಿತರೇ ಮತ್ತು ಹಿತೈಷಿಗಳೇ, ಕೃತಜ್ಞತೆ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಿಮಗೆಲ್ಲರಿಗೂ ತಿಳಿಸುವುದೇನೆಂದರೆ, ಹೊಸ ಕನಸಿನೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು, ನೀವೆಲ್ಲರೂ ಪ್ರೀತಿಸಿದ, ಅಭಿಮಾನಿಸಿದ, ಹಾರೈಸಿದ, ನನ್ನ ‘ಖುಷಿ ಶಿವು’  ಹೆಸರನ್ನು ವಿಶೇಷ ಕಾರಣಗಳಿಂದ ‘ರಮಿಕಾ ಶಿವು’ ಎಂದು ಬದಲಾಯಿಸಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ : ಕಾಸರಗೋಡು: ಸಿನಿಮಾ ನಿರ್ದೇಶಕನ ಪುತ್ರ ಆತ್ಮಹತ್ಯೆ!

ಆದರೆ, ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಪ್ರೋತ್ಸಾಹ ಬದಲಾಗದೆ ಇನ್ನೂ ಹೆಚ್ಚಾಗುತ್ತದೆ ಎಂದು ನಂಬಿದ್ದೇನೆ. ಇದು ಸುಂದರವಾದ ಹೊಸ ಕಥೆಯ ಆರಂಭ. ಇಂತೀ ನಿಮ್ಮ ಪ್ರೀತಿಯ ರಮಿಕಾ ಶಿವು ಎಂದು ಬರೆದುಕೊಂಡಿದ್ದಾರೆ.

Continue Reading

BIG BOSS

ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿಗೆ ಕಾನೂನು ಸಂಕಷ್ಟ!? ಕಾರಣ ಏನು?

Published

on

BBK12: ಬಿಗ್‌ ಬಾಸ್‌ ಸೀಸನ್‌ 12ರ ಸ್ಪರ್ಧಿ ಗಿಲ್ಲಿನಟ ಅವರು ತಮ್ಮ ಆಟ, ವ್ಯಕ್ತಿತ್ವ ಜತೆಗೆ ಆರಂಭದಿಂದಲೂ ಬಿಗ್‌ಬಾಸ್‌ ಮನೆಯಲ್ಲಿ ಹಾಸ್ಯ ಸ್ವಾಭಾವದಿಂದ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ಆದರೆ ಇದೀಗ ಗಿಲ್ಲಿಗೆ ಶಾಕ್‌ವೊಂದು ಎದುರಾಗಿದೆ.


ಹೌದು, ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ಅವರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.


ಇತ್ತೀಚೆಗೆ ಗಿಲ್ಲಿ ಮತ್ತು ರಿಷಾ ಅವರ ನಡುವೆ ಮನಸ್ತಾಪ ಉಂಟಾಗಿತ್ತು. ಗಿಲ್ಲಿಅವರು ರಿಷಾ ಅವರ ಬಟ್ಟೆಗಳನ್ನು ಬಾತ್‌ ರೂಮ್‌ ಏರಿಯಾದಲ್ಲಿ ಇಟ್ಟಿದ್ದ ವಿಚಾರಕ್ಕೆ ಸಂಬಂಧಿಸಿ ಗಿಲ್ಲಿ ವಿರುದ್ಧ ದೂರು ನೀಡಲಾಗಿದೆ. ಜತೆಗೆ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತಾನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BBK12 : ಅಶ್ವಿನಿ ಗೌಡಗೆ ಶಿಕ್ಷೆ…ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ!

ಈ ಕುರಿತು ಮಹಿಳಾ ಆಯೋಗ ಸಂಬಂಧ ಪಟ್ಟ ವಿಡಿಯೋ ಫೊಟೇಜ್‌ಗಳನ್ನು ಪರಿಶೀಲನೆ ಮಾಡಿದ್ದು, ಮೇಲ್ನೋಟಕ್ಕೆ ಗಿಲ್ಲಿ ಅವರು ತಪ್ಪಾಗಿ ನಡೆದುಕೊಂಡಿರುವ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎನ್ನಲಾಗಿದೆ. ಇದರಿಂದ ಪ್ರಕರಣವನ್ನು ಲೀಗಲ್‌ ಟೀಮ್‌ ಅಭಿಪ್ರಾಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ವರದಿಯಾಗಿದೆ.

Continue Reading

FILM

ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೀಸಿದ ಪಾಕಿಸ್ತಾನಿ ಕಲಾವಿದ!

Published

on

ಮಂಗಳೂರು/ಹೈದಾರಬಾದ್ : ತಲ್ಹಾ ಅಂಜುಮ್ ಅವರು ಪಾಕಿಸ್ತಾನದ ಜನಪ್ರಿಯ ಗಾಯಕ ಅಲ್ಲದೇ ಭಾರತದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ವೇದಿಕೆಯ ಪ್ರದರ್ಶನ ಮಾತ್ರವಲ್ಲದೇ ಕೆಲವೊಮ್ಮೆ ವಿವಾದಗಳಿಂದಲೂ ಸದ್ದು ಮಾಡುವ ಗಾಯಕ ಅವರು. ಇದೀಗ ಅವರು ಮತ್ತೊಮ್ಮೆ ಗಮನ ಸೆಳೆದಿದ್ದಾರೆ.


ನಾಟಕೀಯ ವಿಚಾರದಲ್ಲಿ ತಲ್ಹಾ ಅಂಜುಮ್ ಯಾವಾಗಲೂ ಚರ್ಚೆಗೊಳಪಡುವ ವ್ಯಕ್ತಿ. ಪ್ರೇಕ್ಷಕರ ವರ್ತನೆಗೆ ವೇದಿಕೆಯಿಂದ ತಕ್ಷಣ ಹೊರ ನಡೆಯುವ ವೀಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಮತ್ತೊಂದೆಡೆ ನೇಪಾಳದಲ್ಲಿ ಹೊಸದಾಗಿ ಸಂಗೀತ ಕಚೇರಿ ತೆರೆದಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.

ಭಾರತದ ಧ್ವಜ ಬೀಸಿದ ಗಾಯಕ :
ತಲ್ಹಾ ಅಂಜುಮ್ ಅವರ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ವೇದಿಕೆಯಲ್ಲಿ ಪ್ರದರ್ಶನ ವೇಳೆ ಭಾರತದ ಧ್ವಜವನ್ನು ಹೆಮ್ಮೆಯಿಂದ ಪ್ರೇಕ್ಷಕರತ್ತ ಬೀಸಿದ ಬಳಿಕ ಬೆನ್ನಿಗೆ ಸುತ್ತಿಕೊಂಡಿದ್ದಾರೆ. ಇದು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ.

ಇದನ್ನೂ ಓದಿ: BBK12 : ಅಶ್ವಿನಿ ಗೌಡಗೆ ಶಿಕ್ಷೆ…ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ!

ಈ ಬಗ್ಗೆ ಎಕ್ಸ್‌ಪೋಸ್ಟ್‌ನ ಮೂಲಕ ತಲ್ಹಾ ತನ್ನ ಮನದಾಳದ ವಿಚಾರ ಸ್ಪಷ್ಟಪಡಿಸಿದ್ದಾರೆ. ನನ್ನ ಹೃದಯದಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ, ನನ್ನ ಕಲೆಗೆ ಯಾವುದೇ ಗಡಿಯಿಲ್ಲ. ನಾನು ಭಾರತೀಯ ಧ್ವಜ ಹಿಡಿದದ್ದು ವಿವಾದಕ್ಕೆ ಕಾರಣವಾದರೆ ಹಾಗೇ ಆಗಲಿ. ನಾನು ಅದನ್ನು ಮತ್ತೆ ಮಾಡುತ್ತೇನೆ. ಮಾಧ್ಯಮ, ಯುದ್ಧಪ್ರೇ ಮಿ ಸರ್ಕಾರಗಳು ಮತ್ತು ಅವರ ಪ್ರಚಾರಗಳ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ಉರ್ದು ರಾಪ್ ಯಾವಾಗಲೂ ಗಡಿರಹಿತವಾಗಿರುತ್ತದೆ ಎಂದ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page