Connect with us

LATEST NEWS

ಐಪಿಎಲ್ ಉಳಿದ ಪಂದ್ಯಗಳು ರದ್ದು : ಬಿಸಿಸಿಐ ಸ್ಪಷ್ಟನೆ

Published

on

ಮಂಗಳೂರು/ಮುಂಬೈ: ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆ ಉಂಟಾಗಿದದೆ. ಇದರ ಪರಿಣಾಮ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉಳಿದ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂಬುವುದಾಗಿ ಬಿಸಿಸಿಐ ಸ್ಪಷ್ಟನೆ ನೀಡಿದೆ.

ನಿನ್ನೆ (ಮೇ 08) ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಜಮ್ಮು ಮತ್ತು ಪಠಾಣ್‌ಕೊಟ್‌ನಲ್ಲಿ ವಾಯುದಾಳಿ ಎಚ್ಚರಿಕೆಯ ಕಾರಣದಿಂದ ಮಧ್ಯದಲ್ಲಿಯೇ ರದ್ದು ಮಾಡಲಾಗಿತ್ತು. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ನಿಲುವನ್ನು ಸ್ಪಷ್ಠೀಕರಿಸಿದೆ. ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳ ಸುರಕ್ಷತೆಯೇ ಪ್ರಮುಖ ಕಾಳಜಿ ಎಂದು ಘೋಷಿಸಿದೆ. ಹಾಗಾಗಿ ಮುಂದಿನ ಪಂದ್ಯಗಳನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ : ಮಂಗಳೂರು : ದೇಶ ವಿರೋಧಿ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ವಿರುದ್ಧ ಭಾರೀ ಆಕ್ರೋಶ

ಬಿಸಿಸಿಐ ಹೇಳಿದ್ದೇನು ಗೊತ್ತಾ ..?

ಹಲವಾರು ಅಂತಾರಾಷ್ಟ್ರೀಯ ಆಟಗಾರರು ಮತ್ತು ತರಬೇತುದಾರರು ಭಾಗಿಯಾಗಿರುವುದರಿಂದ ಈ ನಿರ್ಧಾರವು ವಿದೇಶಿ ಕ್ರಿಕೆಟ್ ಮಂಡಳಿಗಳ ಗಮನವನ್ನೂ ಸೆಳೆದಿದೆ.  ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಆರಂಭದಲ್ಲಿ ಮೇ 9 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯೋಜಿಸಿದಂತೆ ನಡೆಯಲಿದೆ ಎಂದು ಸೂಚಿಸಿದ್ದರರು. ಆದರೆ ಹದಗೆಟ್ಟ ಭದ್ರತಾ ಪರಿಸ್ಥಿತಿಯು ಇದೀಗ ಹೊಸ ನಿರ್ಧಾರಕ್ಕೆ ಕಾರಣವಾಗಿದೆ. ‘ಮುಂದಿನ ಸೂಚನೆ ಬರುವವರೆಗೂ ಲೀಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ’ ಎಂದು ಬಿಸಿಸಿಐ ದೃಢಪಡಿಸಿದೆ.

LATEST NEWS

ಬದಲಾಯ್ತು ಗೂಗಲ್ ಲೋಗೋ; 10 ವರ್ಷಗಳ ಬಳಿಕ ಆಧುನಿಕ ಟಚ್

Published

on

ನವದೆಹಲಿ: ಸುಮಾರು 10 ವರ್ಷಗಳ ನಂತರ ಗೂಗಲ್ ಮತ್ತೊಮ್ಮೆ ತನ್ನ ಐಕಾನಿಕ್ ‘G’ ಲೋಗೋವನ್ನು ಬದಲಾಯಿಸಿದೆ.

2015 ರಲ್ಲಿ, ಗೂಗಲ್ ತನ್ನ ಕ್ಲಾಸಿಕ್ ಲೋಗೋವನ್ನು ಆಧುನಿಕ ಟೈಪ್‌ಫೇಸ್ ಪ್ರಾಡಕ್ಟ್ ಸ್ಯಾನ್ಸ್ ಗೆ ಬದಲಾಯಿಸಿತು. ಈಗ 2025 ರಲ್ಲಿ, ಕಂಪನಿಯು ಇದಕ್ಕೆ ಹೊಸ ದೃಶ್ಯ ತಿರುವನ್ನು ಸೇರಿಸಿದೆ.

ಹೊಸ ಲೋಗೋದಲ್ಲಿ ಗೂಗಲ್ ತನ್ನ ಬ್ರ್ಯಾಂಡ್‌ನ ಗುರುತಾಗಿರುವ ನೀಲಿ, ಕೆಂಪು, ಹಸಿರು ಮತ್ತು ಹಳದಿ ಎಂಬ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಉಳಿಸಿಕೊಂಡಿದೆ. ಆದರೆ ಈ ಬಾರಿ ವಿನ್ಯಾಸದಲ್ಲಿ ಹೊಸ ತಿರುವು ಇದೆ.

ಇದನ್ನೂ ಓದಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗೆ ನೀರು ಹಾಕಲು ಹೋಗಿ ಬಾಲಕಿ ಸಾವು

ಮೊದಲು ಈ ಬಣ್ಣಗಳನ್ನು G ಲೋಗೋದಲ್ಲಿ ಬ್ಲಾಕ್ ಶೈಲಿಯಲ್ಲಿ ಕಾಣಲಾಗುತ್ತಿತ್ತು. ಈಗ ಅದೇ ಬಣ್ಣಗಳನ್ನು ಗ್ರೇಡಿಯಂಟ್‌ನಲ್ಲಿ ಅಂದರೆ ಬೆಳಕಿನಿಂದ ಗಾಢ ಛಾಯೆಗಳವರೆಗೆ ಕಾಣಬಹುದು. ಇದು ಜನರಿಗೆ ಕ್ರಿಯಾತ್ಮಕ ಮತ್ತು ಆಧುನಿಕ ಅನುಭವವನ್ನು ನೀಡುತ್ತದೆ. ಗೂಗಲ್‌ನ ಈ ಹೊಸ ಲೋಗೋ ಕಂಪನಿಯು ಈಗ ತನ್ನ ಹಳೆಯ ನೋಟವನ್ನು ಮೀರಿ ಹೆಚ್ಚು ಸ್ಮಾರ್ಟ್, ಫ್ಯೂಚರಿಸ್ಟಿಕ್ ಮತ್ತು ಎಐ-ಪವರ್ಡ್​ ಬ್ರ್ಯಾಂಡಿಂಗ್‌ನತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

Continue Reading

LATEST NEWS

ಆರ್‌ಸಿಬಿ ತಂಡಕ್ಕೆ ಮೊದಲ ಮ್ಯಾಚ್; ಇಲ್ಲಿದೆ ನೋಡಿ IPL 2025ರ ಪರಿಷ್ಕೃತ ವೇಳಾಪಟ್ಟಿ

Published

on

ಮಂಗಳೂರು/ಮುಂಬೈ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಡಿಮೆಯಾಗಿದ್ದು, ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಶನಿವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ.


ಹೌದು, ಈಗಾಗಲೇ ಗುಜರಾತ್ ಟೈಟನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್‌ನ ಉಳಿದ ಪಂದ್ಯಗಳಿಗಾಗಿ ಸಿದ್ದತೆಗಳನ್ನು ಆರಂಭಿಸಿವೆ. ಈ ಸಿದ್ದತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ.. ಐಪಿಎಲ್ ಪುನರಾಂಭಗೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದೊಂದಿಗೆ ಎಂಬುದು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಈ ಸುದ್ದಿ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ಬಾರಿಯ ಫೈನಲ್ ಪಂದ್ಯವನ್ನು ಜೂನ್ 3ರಂದು ಆಯೋಜಿಸಲು ನಿರ್ಧರಿಸಲಾಗಿದೆ.

ಐಪಿಎಲ್ 2025ರ ಪರಿಷ್ಕೃತ ವೇಳಾಪಟ್ಟಿ

Continue Reading

LATEST NEWS

ಜಿಮ್ಸ್ ಆಸ್ಪತ್ರೆಯಲ್ಲಿ ಕೈ ಕೊಟ್ಟ ಲಿಫ್ಟ್; ಗೋಡೆ ಒಡೆದು 9 ಮಂದಿ ಸಿಬ್ಬಂದಿಯ ರಕ್ಷಣೆ

Published

on

ಕಲಬುರಗಿ: ಆಸ್ಪತ್ರೆಯಲ್ಲಿ ಲಿಫ್ಟ್ ಕೈ ಕೊಟ್ಟಿದ್ದು, ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ 9 ಮಂದಿ ಸಿಬ್ಬಂದಿಯನ್ನು ಗೋಡೆ ಒಡೆದು ರಕ್ಷಣೆ ಮಾಡಿದ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ. ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ ಒಂಭತ್ತು ಜನ ಸಿಬ್ಬಂದಿ ಉಸಿರಾಡಲು ಪರದಾಡುವಂತಾಯಿತು. ಹೊರಗಡೆ ಬರಲಾಗದೆ ಕಂಗಾಲಾಗಿದ್ದರು. ತಕ್ಷಣವೇ ಲಿಫ್ಟ್​ನಲ್ಲಿದ್ದ ಒರ್ವ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ‌‌. ತಕ್ಷಣವೇ ಲಿಫ್ಟ್​​ನಲ್ಲಿ ಸಿಲುಕಿದ 9 ಮಂದಿಯ ರಕ್ಷಣೆಗಾಗಿ ಸಿಬ್ಬಂದಿ ಮುಂದಾಗಿದ್ದಾರೆ.

ಬಳಿಕ ತಡೆ ಗೋಡೆ ಇರುವ ಕಡೆ ಲಿಫ್ಟ್ ಸಿಲುಕಿದ ಪರಿಣಾಮ ಒಳಗಿನವರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಲಿಫ್ಟ್ ದುರಸ್ತಿ ಆಗದ ಕಾರಣ ಡ್ರಿಲ್ಲಿಂಗ್ ಮಷಿನ್ ಬಳಸಿ ತಡೆಗೋಡೆಯನ್ನು ಒಡೆದು ಲಿಫ್ಟ್ ಒಳಗಿದ್ದವರನ್ನು ರಕ್ಷಿಸಲಾಯಿತು.

Continue Reading
Advertisement

Trending

Copyright © 2025 Namma Kudla News

You cannot copy content of this page