Connect with us

BANTWAL

ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್​ ಅಲರ್ಟ್​ ಘೋಷಣೆ..!ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

Published

on

ಮಂಗಳೂರು : ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ವಿವಿಧೆಡೆ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಜೊತೆಗೆ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದ್ದು, ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಲೆನಾಡಿನ ಹಲವೆಡೆ ಮರಗಳು ಧರೆಗುರುಳಿವೆ, ರಸ್ತೆ ಹಾಗೂ ಸೇತುವೆಗಳು ಜಲಾವೃತವಾಗಿವೆ. ಕೃಷಿ ಭೂಮಿಗಳು ಮಳೆ ನೀರಿನಿಂದ ತುಂಬಿ ಹೋಗಿವೆ.

ಕಳೆದ ನಾಲ್ಕು ದಿನಗಳಿಂದ ಬಣಕಲ್, ಕೊಟ್ಟಿಗೆಹಾರ, ಬಾಳೂರು ಮತ್ತು ಚಾರ್ಮಾಡಿ ಘಾಟ್​ ಸುತ್ತಮುತ್ತ ಅಧಿಕ ಮಳೆಯಾಗುತ್ತಿದ್ದು, 39.58 ಸೆಂ.ಮೀ. ದಾಖಲಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ವರುಣನ ಅಬ್ಬರಕ್ಕೆ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಮಳೆಯ ಅಬ್ಬರದಿಂದ ಚಿಕ್ಕೋಡಿ ವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತವಾಗಿವೆ.

Advertisement
Click to comment

Leave a Reply

Your email address will not be published. Required fields are marked *

BANTWAL

ಬಂಟ್ವಾಳ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

Published

on

ಬಂಟ್ವಾಳ: ನಿಷೇಧಿತ ಅಮಲು ಪದಾರ್ಥಗಳನ್ನು ಮಾರಾಟ ಮಾಡುವ ಯತ್ನಿಸುತ್ತಿದ್ದ  ವ್ಯಕ್ತಿಯೋರ್ವನನ್ನು ಬಂಟ್ವಾಳ ಅಬಕಾರಿ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ನಡೆದಿದೆ.


ಉತ್ತರ ಪ್ರದೇಶ ಮೂಲದ ಸಂತೋಷ್ ಸೋಂಕರ್ (28) ಎಂಬಾತ ಬಂಧಿತ ಆರೋಪಿ. ಈತನಿಂದ 58, 650 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಲಾಗಿದೆ. 1173 ಪ್ಲಾಸ್ಟಿಕ್ ಸ್ಯಾಚೆಟ್ ಗಳಲ್ಲಿ ಗಾಂಜಾ ಪದಾರ್ಥವನ್ನು ಹೊಂದಿದ್ದು ,ಒಟ್ಟು 6.590 ಕೆ.ಜಿ.ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ ಎನ್‌ಡಿಪಿಎಸ್ ಕಾಯಿದೆ 1985 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‌

ಇದನ್ನೂ ಓದಿ: 19 ದಿನಗಳ ಹಿಂದೆ ರಷ್ಯಾದಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಶವ ನದಿಯೊಂದರ ಬಳಿ ಪತ್ತೆ!

ಆರೋಪಿ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯ ಸಮೀಪ ರೈಲ್ವೆ ಹಳಿಯಲ್ಲಿ ಗಿರಾಕಿಗಳಿಗೆ ನೀಡುವ ಉದ್ದೇಶದಿಂದ ಅಲೆದಾಡುವ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

Continue Reading

BANTWAL

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸುತ್ತೋಲೆಯಲ್ಲಿ ಎಡವಟ್ಟು ಮಾಡಿದ ಬಂಟ್ವಾಳ ತಾಲೂಕು ಆಡಳಿತ

Published

on

ಬಂಟ್ವಾಳ: ‌ತಾಲೂಕು ಆಡಳಿತದಿಂದ ಆದ ಎಡವಟ್ಟು, ಯಥಾ ಪ್ರಕಾರ ತಾಲೂಕು ಪಂಚಾಯತ್ ನಿಂದ ಗ್ರಾ.ಪಂ.ಗಳಿಗೆ ಸುತ್ತೋಲೆ ಕಳುಹಿಸುವ ಮೂಲಕ ಪೇಚಿಗೆ ಸಿಲುಕಿ ಗೌರವ ಕಳೆದುಕೊಂಡ ಘಟನೆಯೊಂದು ನಡೆದಿದ್ದು, ಈ ಸುತ್ತೋಲೆಯೊಂದು ಇದೀಗ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.


2025 ರ ನ.1 ರಂದು ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ತಾಲೂಕು ಸಮಿತಿ ವತಿಯಿಂದ ತಹಶಿಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸುತ್ತೋಲೆಯೊಂದನ್ನು ತಹಶಿಲ್ದಾರ್ ಮಂಜುನಾಥ್ ಅವರು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಅವರಿಗೆ ಕಳುಹಿಸಿದ್ದಾರೆ.

ಸಚಿನ್ ಅವರು ತಹಶಿಲ್ದಾರ್ ಅವರು ಕಳುಹಿಸಿದ ಸುತ್ತೋಲೆಯನ್ನು ಯಥಾ ಪ್ರಕಾರ ತಾಲೂಕಿನ ಗ್ರಾ.ಪಂ.ಪಿಡಿಒಗಳಿಗೆ ರವಾನೆ ಮಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. 2022 ರಲ್ಲಿ ಅಂದಿನ ಸಮಿತಿ ಪ್ರಿಂಟ್ ಮಾಡಿದ ಸುತ್ತೊಲೆಯನ್ನೇ 2025 ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಕಳುಹಿಸುವ ದುಸ್ಥಿತಿ ಒದಗಿ ಬಂದಿರುವುದು ಬೇಸರದ ವಿಚಾರವಾಗಿದ್ದು, 2022 ರಲ್ಲಿ ಪ್ರಿಂಟ್ ಮಾಡಲಾದ ಸುತ್ತೋಲೆಯಲ್ಲಿ ದಿನಾಂಕವನ್ನು ಕರೆಕ್ಷನ್ ಮಾಡಿ ಕಳುಹಿಸುವ ಭರದಲ್ಲಿ ತಪ್ಪಿ ಹೋಗಿದ್ದು, ಇದೀಗ ಸುತ್ತೊಲೆ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಮಂಗಳೂರು: ಓವರ್ ಟೇಕ್‌ ಮಾಡುವ ಭರದಲ್ಲಿ ಡಿವೈಡರ್ ಮೇಲೇರಿದ ಖಾಸಗಿ ಸಿಟಿ ಬಸ್

ಪತ್ರದ ಕ್ರಮ ಸಂಖ್ಯೆಯೂ ಹಿಂದಿನದ್ದು. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಆಮಂತ್ರಿಸುವಂತೆ ಕೋರಿ ಜನಪ್ರತಿನಿಧಿಗಳಿಗೆ ತಿಳಿಸುವ ಪತ್ರದ ವಿಚಾರದಲ್ಲಿ ತಾಲೂಕು ಮಟ್ಟದ ಇಬ್ಬರು ಅಧಿಕಾರಿಗಳ ಕಾರ್ಯ ಕ್ಷಮತೆಯ ಬಗ್ಗೆ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

 

Continue Reading

BANTWAL

ಬಂಟ್ವಾಳ: ಆಂಬುಲೆನ್ಸ್ ಗೆ ಅಡ್ಡ ಬಂದು ಹುಚ್ಚಾಟ, ಸೈಡ್ ನೀಡದೇ ಸತಾಯಿಸಿದ ಸ್ಕೂಟರ್ ಸವಾರ

Published

on

ಬಂಟ್ವಾಳ: ಬಿಸಿಲೆ ಘಾಟ್ ನಲ್ಲಿ ಇಂದು ಸಂಭವಿಸಿದ ಮದುವೆ ತಂಡದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ.

ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಸಾಗಿಸುವ ಮದ್ಯೆ ಬಂಟ್ವಾಳದ ಬಿ.ಸಿ. ರೋಡ್ ಬಳಿ ಸ್ಕೂಟರ್ ಸವಾರನೊಬ್ಬ ಆಂಬುಲೆನ್ಸ್ ಗೆ ದಾರಿಮಾಡಿಕೊಡದೆ ಸುಮಾರು 4 ಕಿಲೋ ಮೀಟರ್ ಸತಾಯಿಸಿದ್ದಾನೆ.

ಆಂಬುಲೆನ್ಸ್ ಚಾಲಕ ಹಾರ್ನ್ ಹಾಕಿದರೂ, ಸೈರನ್ ಶಬ್ದವಿದ್ದರೂ ಸ್ಕೂಟಿ ಸವಾರ ದಾರಿ ಬಿಟ್ಟುಕೊಡಲಿಲ್ಲ. ಸ್ಕೂಟಿ ಸವಾರನ ಹುಚ್ಚಾಟವನ್ನು ಆಂಬುಲೆನ್ಸ್ ಸಹಚಾಲಕ ಕಾರ್ತಿಕ್ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ದೂರು ನೀಡಲು ನಿರ್ಧರಿಸಿದ್ದಾರೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page