Connect with us

FILM

‘ತಾಯಿಯಂತೆ ಮಗಳು’-ಇನ್ಸ್ಟಾಗ್ರಾಮ್ ಫೋಟೋ ವೈರಲ್

Published

on

ಇನ್ಸ್ಟಾ ಗ್ರಾಮ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ತಾಯಿಯೊಂದಿಗೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿದ ಅನೇಕರು ದೃಷ್ಟಿ ತೆಗೆಸಿಕೊಳ್ಳುವಂತೆ ಕಿವಿಮಾತು ನೀಡಿದ್ದಾರೆ.

 

ಹೈದರಾಬಾದ್ : ಇನ್ಸ್ಟಾ ಗ್ರಾಮ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ತಾಯಿಯೊಂದಿಗೆ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿದ ಅನೇಕರು ದೃಷ್ಟಿ ತೆಗೆಸಿಕೊಳ್ಳುವಂತೆ ಕಿವಿಮಾತು ನೀಡಿದ್ದಾರೆ.


ರಶ್ಮಿಕಾ ತಾಯಿಯ ಮುದ್ದಿನ ಮಗಳು. ಅಮ್ಮ, ಅಪ್ಪ, ತಂಗಿಯ ಮುದ್ದಿನ ಮನೆ ಮಗಳು ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಶೂಟಿಂಗ್ ಕಾರಣದಿಂದ ಬೇರೆ ಬೇರೆ ನಗರಗಳಿಗೆ ತೆರಳ್ತಾ ಇರ್ತಾರೆ. ಹಾಗಾಗಿ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯೋಕೆ ಸಾಧ್ಯವಾಗೋಲ್ಲ.


ಹಾಗಾಗಿ ಮನೆಯವರನ್ನು ರಶ್ಮಿಕಾ ತುಂಬಾನೆ ಮಿಸ್ ಮಾಡ್ಕೋತಾರೆ.ಈ ಕಾರಣದಿಂದಾಗಿ ನಟಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತಾಯಿ ಸುಮನ್ ಅವರ ಭಾವಚಿತ್ರವಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.


ಫೋಟೋ ನೀಡಿದ ಕೆಲವರು ‘ತಾಯಿಯಂತೆ ಮಗಳು’ ಎಂದು ಕಮೆಂಟ್ ಮಾಡಿದ್ದಾರೆ.‘ಅಮ್ಮನ ಜೊತೆ ಗಾಸಿಪ್ ಮಾಡುತ್ತಿದ್ದೇನೆ. ನಾಲ್ಕು ವರ್ಷ ಹಿಂದಿನ ಫೋಟೋ. ಮಿಸ್ಸಿಂಗ್ ಫೀಲ್ ಆರಂಭ ಆಗಿದೆ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ.

FILM

ರನ್ಯಾ ರಾವ್ ಪ್ರಕರಣದಲ್ಲಿ ಮತ್ತೊಬ್ಬ ಅರೆಸ್ಟ್; ಚಿನ್ನ ಸಾಗಣೆಯಲ್ಲಿ ಈತನ ಪಾತ್ರವೇನು?

Published

on

ಮಂಗಳೂರು/ಬೆಂಗಳೂರು : ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆ ತೀವ್ರವಾಗಿದ್ದು, ಇದೀಗ ಮತ್ತೊಬ್ಬನನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಬಳ್ಳಾರಿ ಮೂಲದ ಸಾಹಿಲ್ ಸಕಾರಿಯಾ ಜೈನ್ ಬಂಧಿತ ಆರೋಪಿ.

ಈತನ ಪಾತ್ರವೇನು?

ಬಂಧಿತ ಸಾಹಿಲ್ ಸಕಾರಿಯಾ  ಜೈನ್ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ. ಈತ ವಿದೇಶದಿಂದ ಕಳ್ಳ ಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡುವ ಹವಾಲಾ ವಹಿವಾಟುಗಳಿಗೆ ಅನುಕೂಲ ಮಾಡಿಕೊಡುವ ಕೆಲಸದಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಕೇಳಿ ಬಂದಿದೆ.

ವಿದೇಶದಿಂದ ಕಳ್ಳ ಸಾಗಣೆ ಮೂಲಕ ತಂದ ಚಿನ್ನವನ್ನು ಮಾರಾಟ ಮಾಡಲು ಆತ ಸಹಕರಿಸಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಡಿಜಿಟಲ್ ದಾಖಲೆಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ನಟಿ ಅಪ್ಸರಾ ಕೊ*ಲೆ ಪ್ರಕರಣ : ದೇವಸ್ಥಾನದ ಅರ್ಚಕನಿಗೆ ಜೀ*ವಾವಧಿ ಶಿಕ್ಷೆ..!

ರನ್ಯಾ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡಲು ಹಲವು ಬಾರಿ ಸಹಾಯ ಮಾಡಿದ್ದ ಎಂದು ತಿಳಿದುಬಂದಿದೆ. ದುಬೈನಿಂದ ಕಳ್ಳಸಾಗಣೆ ಮೂಲಕ ಚಿನ್ನ ತರುವ ವೇಳೆ ರನ್ಯಾ ದುಬೈ ಸಂಖ್ಯೆಯ ಮೂಲಕ ಸಾಹಿಲ್‌ನನ್ನು ಸಂಪರ್ಕಿಸಿದ್ದಾಳೆ. ಈ ಸಂಭಾಷಣೆ ಅಧಿಕಾರಿಗಳಿಗೆ ಸಿಕ್ಕಿದೆ. ಈ ಆಧಾರದಲ್ಲಿ ಆತನನ್ನು ಬಂಧಿಸಿ, ವಿಶೇಷ ನ್ಯಾಯಾಲದ ಮುಂದೆ ಹಾಜರು ಪಡಿಸಿದ್ದು, ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Continue Reading

FILM

‘ದಿ ಡೆವಿಲ್’ ಶೂಟಿಂಗ್‌ಗಾಗಿ ಹೊರ ರಾಜ್ಯಕ್ಕೆ ತೆರಳಿದ ದಾಸ; ಬಾಲಿವುಡ್ ಸ್ಟಾರ್ ನಟನ ಎಂಟ್ರಿ?

Published

on

ಮಂಗಳೂರು/ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ದಿ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ದರ್ಶನ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ಕೊಟ್ಟಿದೆ ಚಿತ್ರತಂಡ.


‘ದಿ ಡೆವಿಲ್’ ಸಿನಿಮಾದ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಬಿರುಸಿನಿಂದ ಶೂಟಿಂಗ್ ಮಾಡಲಾಗುತ್ತಿದೆ. ಕಾರಣಾಂತರಗಳಿಂದ ವಿಳಂಬ ಆಗಿದ್ದ ಚಿತ್ರಕರಣಕ್ಕೆ ಮರುಚಾಲನೆ ನೀಡಿದ್ದು, ರಾಜಸ್ಥಾನದಲ್ಲಿ ಶೂಟಿಂಗ್ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚನಾ ರೈ ಹಾಗೂ ಇನ್ನುಳಿದ ಕಲಾವಿದರು ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ ‘ದಿ ಡೆವಿಲ್’ ಸಿನಿಮಾದ ಶೂಟಿಂಗ್ ಆರಂಭವಾಗಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು.

ಈಗ ಇದೇ ಮೊದಲ ಬಾರಿಗೆ ಹೊರ ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ನ್ಯಾಯಾಲಯ ಹೊರ ರಾಜ್ಯದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಅನುಮತಿಯನ್ನು ನೀಡಿದ್ದರಿಂದ ‘ದಿ ಡೆವಿಲ್’ ಶೂಟ್ ರಾಜಸ್ಥಾನದಲ್ಲಿ ನಡೆಯುತ್ತಿದೆ. ರಾಜಸ್ಥಾನದಲ್ಲಿ ದಿ ಡೆವಿಲ್ ಸಿನಿಮಾದ ಟಾಕಿ ಪೋಷನ್ (ಮಾತಿನ ಭಾಗದ) ಚಿತ್ರೀಕರಣ ನಡೆಯುತ್ತಿದೆ.

ಇದನ್ನೂ ಓದಿ: ಮತ್ತೆ ಆರಂಭವಾಯ್ತು ‘ದಿ ಡೆವಿಲ್’ ಶೂಟಿಂಗ್; ಭಾರೀ ಮೊತ್ತ ಕಟ್ಟಿದ್ದು ಯಾಕೆ ಚಿತ್ರತಂಡ?

ದರ್ಶನ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ
ದಿ ಡೆವಿಲ್ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಕೂಡಾ ನಟಿಸಲಿದ್ದಾರೆ. ಡೆವಿಲ್ ಮೂಲಕ ಸಖತ್ ಆಗಿರುವ ಒಂದು ಕಾಂಬಿನೇಷನ್ ಪ್ರೇಕ್ಷಕರ ಮುಂದೆ ಬರಲಿದೆ. ಬಾಲಿವುಡ್‌ನ ಹೆಸರಾಂತ ನಟ-ಸ್ಕ್ರಿಪ್ಟ್ ರೈಟರ್-ಪ್ರೊಡ್ಯೂಸರ್ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ಕನ್ನಡದ ಒಂದು ಸಿನಿಮಾದಲ್ಲಿ ಮಹೇಶ್ ಮಂಜ್ರೇಕರ್ ನಟಿಸಿದ್ದರು. ಈಗ ಡೆವಿಲ್ ಮೂಲಕ ಮತ್ತೆ ಚಂದನವನದಲ್ಲಿ ಈ ನಟ ಸೌಂಡ್ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಚನಾ ರೈ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್, ತುಳಸಿ, ಶ್ರೀನಿವಾಸ್ ಪ್ರಭು, ಶೋಭರಾಜ್ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

Continue Reading

FILM

ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು… ಅಷ್ಟಕ್ಕೂ ಏನಾಯಿತು ಗೊತ್ತಾ..?

Published

on

ಬೆಂಗಳೂರು: ಇತ್ತೀಚಿಗಷ್ಟೇ ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ನಟ ಶಿವರಾಜ್‌ಕುಮಾರ್ ಚಿಕಿತ್ಸೆ ಪಡೆದು ಹುಷಾರ್ ಆಗಿ ಅಮೇರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಅವರು ಗುಣಮುಖರಾದ ಕೂಡಲೇ ಪತ್ನಿ ಗೀತಾ ಶಿವರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ಅವರಿಗೆ ನರದ ಸಮಸ್ಯೆಯಿಂದ ಕತ್ತಿನ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕತ್ತಿನ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ವರದಿಯಾಗಿದೆ.

ಈ ಮೊದಲೇ ಅವರು ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ಆದರೆ ಇದು ಆಗಿರಲಿಲ್ಲ. ಈಗ ಅವರಿಗೆ ಕತ್ತಿನ ಭಾಗದಲ್ಲಿ ಸರ್ಜರಿ ನಡೆದಿದೆ. ಅವರು ಬೇಗ ಹುಷಾರ್ ಆಗಿ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page