Connect with us

FILM

ಸಮಂತಾ ಔಟ್.. ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್ ಜಾಕ್ ಪಾಟ್..!

Published

on

ಸೌತ್ ನಟಿ ಸಮಂತಾ ನಾಯಕಿಯಾಗಿ ನಟಿಸಬೇಕಾಗಿದ್ದ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ ಚಾನ್ಸ್ ಗಿಟ್ಟಿಸಿಕೊಂಡಿದ್ದು, ಸ್ಯಾಮ್ ಔಟ್ ಆಗಿದ್ದಾರೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿದ್ದು ಈ ಹಿನ್ನೆಲೆ ದೊಡ್ಡ ಅವಕಾಶ ರಶ್ಮಿಕಾ ಪಾಲಾಗಿದೆ.

ಸದ್ಯ ಶ್ರೀವಲ್ಲಿ ಕೈಯಲ್ಲಿ ಪುಷ್ಪ 2, ಅನಿಮಲ್, ರೈನ್‌ಬೋ, ರವಿತೇಜ ಜೊತೆಗಿನ ಸಿನಿಮಾ, ವಿಜಯ್ ದೇವರಕೊಂಡ ಜೊತೆ ಚಿತ್ರ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

ತೆಲುಗಿನ ನಿರ್ದೇಶಕ ರಾಹುಲ್ ರವಿಚಂದ್ರನ್ ಡೈರೆಕ್ಷನ್ ಚಿತ್ರದಲ್ಲಿ ಸಮಂತಾ ನಟಿಸುತ್ತಾರೆ ಎಂದು ಫೈನಲ್ ಆಗಿತ್ತು. ಈಗ ಕಾರಣಾಂತರಗಳಿಂದ ಸ್ಯಾಮ್ ನಟಿಸುತ್ತಿಲ್ಲ.

ಆ ಪಾತ್ರಕ್ಕೆ ರಶ್ಮಿಕಾರನ್ನ ತಂಡ ಸಂಪರ್ಕಿಸಿ ಕಥೆ ಹೇಳಿದ್ದಾರಂತೆ, ನಟಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ರೈನ್‌ಬೋ ಸಿನಿಮಾದಲ್ಲಿ ಸಮಂತಾ ನಟಿಸಬೇಕಿತ್ತು. ಆದರೆ ಸ್ಯಾಮ್ ಆ ಪ್ರಾಜೆಕ್ಟ್‌ನ ಅನಾರೋಗ್ಯದ ದೃಷ್ಟಿಯಿಂದ ಕೈಬಿಟ್ಟಿದ್ದರು. ‘ರೈನ್‌ಬೋ’ ಸಿನಿಮಾ ಕೂಡ ರಶ್ಮಿಕಾ ಪಾಲಾಯ್ತು.

ಇದೀಗ 2ನೇ ಬಾರಿ ಸ್ಯಾಮ್ ನಟಿಸಿಬೇಕಿದ್ದ ಪಾತ್ರ ಮತ್ತೆ ರಶ್ಮಿಕಾ ಪಾಲಾಗಿದೆ.

FILM

ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ತಮನ್ನಾ

Published

on

ಮಂಗಳೂರು/ಮುಂಬೈ: ವಿಜಯ್ ಜೊತೆಗಿನ ಬ್ರೇಕಪ್ ಸುದ್ದಿಯಿಂದಲೇ ಸಖತ್ ಟ್ರೆಂಡಿಂಗ್‌ನಲ್ಲಿರುವ ಮಿಲ್ಕಿ ಬ್ಯೂಟಿ, ಇದ್ಯಾವುದಕ್ಕೂ ಉತ್ತರಿಸುವ ಅಥವಾ ಪ್ರತಿಕ್ರಿಯೆ ನೀಡುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಆದರೆ, ಕಡೆಗೂ ಈ ವಿಚಾರದ ಕುರಿತು ಮೌನ ಮುರಿದಿದ್ದಾರೆ.


ಇತ್ತೀಚೆಗೆ ವಿಜಯ್ ಮತ್ತು ತಮನ್ನಾ 2 ವರ್ಷಗಳ ಡೇಟಿಂಗ್‌ಗೆ ಬ್ರೇಕ್ ಬಿದ್ದಿದೆ ಎಂದು ವರದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಬ್ರೇಕಪ್ ಸುದ್ದಿ ಬಗ್ಗೆ ಮಾತನಾಡಿದ ತಮನ್ನಾ, “ಇಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಬಯಸುತ್ತೇನೆ. ನನಗೆ ಅದು ಸರಿ ಎಂದು ಅನಿಸಿದರೆ ಮಾತ್ರ ಹಂಚಿಕೊಳ್ಳುತ್ತೇನೆ. ಎಲ್ಲಿ ಯಾವ ವಿಷಯವನ್ನು ಹೇಳಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ. ನನ್ನ ಕಡೆಯಿಂದ ಯಾರ ಬಗ್ಗೆಯೂ ಹಾಗೂ ಯಾವುದರ ಬಗ್ಗೆಯೂ ದೂರುಗಳಿಲ್ಲ ಎಂದಿದ್ದಾರೆ.‌ ಈ ಮೂಲಕ ಪರೋಕ್ಷವಾಗಿ ಬ್ರೇಕಪ್‌ ಸುದ್ದಿ ನನ್ನ ವೈಯಕ್ತಿಕ ವಿಚಾರ” ಎಂದಿದ್ದಾರೆ.

“ನಾನು ಜನಪರ ವ್ಯಕ್ತಿ. ಅವರೊಂದಿಗೆ ಮಾತನಾಡುವುದನ್ನು ನಾನು ಆನಂದಿಸುವೆ. ಏರ್‌ಪೋರ್ಟ್‌ನಲ್ಲಿ ಫೋಟೋಗ್ರಾಫರ್, ಅಭಿಮಾನಿಗಳನ್ನು ನಗುಮುಖದಿಂದಲೇ ಮಾತನಾಡಿಸುತ್ತೀನಿ. ಫೋಟೋ, ಸೆಲ್ಫಿ ಎಂದು ಕೇಳುವ ಜನರಿಗೆ ನಾನು ಓಕೆ ಅಂತೀನಿ. ಇದನ್ನೆಲ್ಲ ನಾನು ಬಹಳ ಸಂತೋಷದಿಂದ, ಹೃದಯದಿಂದ ಮಾಡುತ್ತಿದ್ದೇನೆ. ನಾನು ಮಾಡಿಕೊಂಡಿರುವ ಆಯ್ಕೆಯಲ್ಲಿ ಖುಷಿಯಾಗಿದ್ದೇನೆ. ಅಪರಿಚಿತರೊಂದಿಗೆ ಮಾತನಾಡುವ ಮೂಲಕ ನಾವು ಸಾಕಷ್ಟು ವಿಷಯಗಳನ್ನು ಕಲಿಯಬಹುದು ಎಂದು ತಮನ್ನಾ” ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ; ‘ಮಂಡ್ಯದ ಗಂಡು’ ನಿರ್ದೇಶಕ ಎಟಿ ರಘು ನಿಧನ

ಅಂದಹಾಗೆ, ಇತ್ತೀಚೆಗೆ ರವೀನಾ ಟಂಡನ್ ಮನೆಯಲ್ಲಿ ಹೋಳಿ ಹಬ್ಬ ಆಯೋಜಿಸಿದ್ದರು. ಈ ವೇಳೆ, ವಿಜಯ್ ಮತ್ತು ತಮನ್ನಾ ಪ್ರತ್ಯೇಕವಾಗಿ ಭಾಗಿಯಾಗಿದ್ದರು. ಇದು ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.

Continue Reading

FILM

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ; ‘ಮಂಡ್ಯದ ಗಂಡು’ ನಿರ್ದೇಶಕ ಎಟಿ ರಘು ನಿಧನ

Published

on

ಮಂಗಳೂರು/ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಶುಕ್ರವಾರ ಒಂದು ಶಾಕಿಂಗ್ ಸುದ್ದಿ ಸಿಕ್ಕಿದೆ. ಶುಭ ಶುಕ್ರವಾರ ಸಿನಿಮಾ ರಿಲೀಸ್ ಆಗುವ ದಿನವೇ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು ನಿಧನ ಹೊಂದಿದ್ದಾರೆ.


ಸ್ಯಾಂಡಲ್​ವುಡ್​ನ​ ಖ್ಯಾತ ನಿರ್ದೇಶಕ ಎ.ಟಿ. ರಘು ಅವರು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎ.ಟಿ. ರಘು ಅವರು ‘ಮಂಡ್ಯದ ಗಂಡು’ ಸೇರಿದಂತೆ 55ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ರಘು ಅವರ ನಿಧನದ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗ ಆಘಾತಕ್ಕೆ​ ಒಳಗಾಗಿದೆ.

ರಘು ತೀವ್ರ ಅನಾರೋಗ್ಯದಿಂದ ಬಳಲುತ್ತಾ ಇದ್ದರು. ನಿರಂತರವಾಗಿ ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಸದ್ಯ ಬೆಂಗಳೂರಿನ ಆರ್​ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದೆ. ಇಂದು (ಮಾರ್ಚ್ 21) ಮಧ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಖ್ಯಾತ ಹಿಂದೂ ನಾಯಕ, ವಕೀಲ ಅಶ್ವಿನ್ ತ್ರಿಕಾಮಿ ವಿಧಿವಶ

ಮಂಡ್ಯದ ಗಂಡು, ಮಿಡಿದ ಹೃದಯಗಳು, ಮೈಸೂರ್ ಜಾಣಾ, ಅಂತಿಮ ತೀರ್ಪು, ನ್ಯಾಯ ನೀತಿ ಧರ್ಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಂಬರೀಶ್​ ಅವರಿಗೆ ಸುಮಾರು 27ಕ್ಕೂ ಅಧಿಕ ಸಿನಿಮಾ ನಿರ್ದೇಶನ ಮಾಡಿದ್ದರು. ರಜನಿಕಾಂತ್ ನಟನೆಯ ಮೇರಿ ಅದಾಲತ್ ಸಿನಿಮಾವನ್ನು ಕೂಡ ರಘು ನಿರ್ದೇಶಿಸಿದ್ದರು.

Continue Reading

FILM

ಟಾಲಿವುಡ್‌ನ 25 ಖ್ಯಾತ ನಟ, ನಟಿಯರ ಮೇಲೆ ಕೇಸ್ ದಾಖಲು

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್‌ನ 25 ಖ್ಯಾತ ನಟ, ನಟಿಯರಿಗೆ ತೆಲಂಗಾಣ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ನಿಧಿ ಅಗರವಾಲ್, ಕನ್ನಡದ ನಟಿ ಪ್ರಣೀತಾ ವಿರುದ್ದ ಕೇಸ್ ದಾಖಲಾಗಿದೆ.

32 ವರ್ಷದ ಉದ್ಯಮಿ ಫಣೀಂದ್ರ ಶರ್ಮಾ ಸಲ್ಲಿಸಿದ ಅರ್ಜಿಯ ಮೇರೆಗೆ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ BNS ಸೆಕ್ಷನ್ 318 (4), ಸೆಕ್ಷನ್ 112, 49ರಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾಗೆ ಭರ್ಜರಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಆನ್‌ಲೈನ್ ಬೆಟ್ಟಿಂಗ್ ದಂಧೆಯಿಂದ ಯುವಜನರು ಹಾಳಾಗುತ್ತಿದ್ದಾರೆ. ಸಮಾಜದಲ್ಲಿ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್‌ಗಳ ಆಘಾತಕಾರಿ ವಿಚಾರ ಗೊತ್ತಿದ್ದರೂ ಖ್ಯಾತ ನಟ, ನಟಿಯರು ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.

ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ದೂರು ಸಲ್ಲಿಕೆಯಾಗಿತ್ತು. ಈ ದೂರಿನ ಆಧಾರದ ಮೇಲೆ ನಟ, ನಟಿಯರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page