Connect with us

LATEST NEWS

ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಟ್ಯಾಂಕರ್ ಚಾಲನೆ ; ತಪ್ಪಿದ ಭಾರಿ ದುರಂ*ತ

Published

on

ಉಡುಪಿ : ಟ್ಯಾಂಕರ್ ಚಾಲಕನೊಬ್ಬ ರಾತ್ರಿಯ ಹೊತ್ತು ಹೆಡ್ ಲೈಟ್ ಕೂಡ ಹಾಕದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯರ್ರಾಬಿರ್ರಿಯಾಗಿ ಚಲಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಅದೃಷ್ಟವಶಾತ್,  ಕೂದಲೆಳೆಯ ಅಂತರದಲ್ಲಿ ಹಲವಾರು ಅಪ*ಘಾತಗಳು ತಪ್ಪಿದ್ದು, ಕೊನೆಗೆ ಅಂಬಲಪಾಡಿಯ ಬಳಿ ವಾಹನವನ್ನು ನಿಲ್ಲಿಸಿದ ವಿಶು ಶೆಟ್ಟಿ ಅಂಬಲಪಾಡಿ, ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದು, ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನಾಗಿದ್ದು, ಬಹಳಷ್ಟು ಮದ್ಯ ಸೇವಿಸಿ ರಾತ್ರಿ ಹೆಡ್ ಲೈಟ್ ಕೂಡ ಹಾಕದೆ ವೇಗವಾಗಿ ಯರ್ರಾ ಬಿರ್ರಿಯಾಗಿ ಬರುತ್ತಿದ್ದ. ಇದನ್ನು ಗಮನಿಸಿದ ಸಾರ್ವಜನಿಕರ ವಾಹನವೊಂದು ಆತನನ್ನು ಹಿಂಬಾಲಿಸಿಕೊಂಡು ಬಂದು ಅಂಬಲಪಾಡಿಯ ಬಳಿ ನಿಲ್ಲಿಸಿದ್ದಾರೆ. ಸಾರ್ವಜನಿಕರು ಹ*ಲ್ಲೆಯನ್ನೂ ನಡೆಸಿದ್ದಾರೆ‌.

ಇದನ್ನೂ ಓದಿ : ಬಿಗ್ ಬಾಸ್ ಮನೆಯೀಗ ‘ವಿಲನ್’ ತೆಕ್ಕೆಗೆ…ಚೈತ್ರಾ ಕಿರುಚಿದ್ದೇಕೆ!?

ವಿಶು ಶೆಟ್ಟಿ ಬಂದು ಆತನಿಗೆ ಹ*ಲ್ಲೆಯಾಗುವುದನ್ನು ತಡೆದು ಕೂಡಲೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ‌. ಬಳಿಕ  ವಿಶು ಶೆಟ್ಟಿ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಟ್ಯಾಂಕರನ್ನು ಚಾಲಕರೊಬ್ಬರ ಸಹಾಯದಿಂದ ಠಾಣೆಗೆ  ಮುಟ್ಟಿಸಿದ್ದಾರೆ.  ಟ್ಯಾಂಕರ್ ಚಾಲಕನನ್ನು ತಡೆಯದೆ ಹೋಗುತ್ತಿದ್ದರೆ ಬಹಳ ದೊಡ್ಡ ದುರಂ*ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗುತ್ತಿತ್ತು. ಅದೃಷ್ಟವಶಾತ್  ಅವಘಡವೊಂದು ತಪ್ಪಿದೆ.

LATEST NEWS

ಅತ್ಯಾಚಾರ ಪ್ರಕರಣಕ್ಕೆ ಸುಂದರ ಹುಡುಗಿಯರೇ ಕಾರಣ-ಕಾಂಗ್ರೆಸ್ ಶಾಸಕನ ಹೇಳಿಕೆಗೆ ವ್ಯಾಪಕ ಆಕ್ರೋಶ

Published

on

ಇಂದೋರ್‌: ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸುಂದರ ಹುಡುಗಿಯರೇ ಕಾರಣ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಫೂಲ್ ಸಿಂಗ್ ಬರೈಯ್ಯಾ ಹೇಳಿಕೆಯೊಂದನ್ನು ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಸಂಘಟನೆಗಳಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಬರೈಯ್ಯಾ, ಯಾವುದೇ ಒಬ್ಬ ಪುರುಷ ರಸ್ತೆಯಲ್ಲಿ ಹೋಗುವಾಗ ಸೌಂದರ್ಯ ಹೆಚ್ಚಿರುವ ಹುಡುಗಿಯನ್ನ ನೋಡಿದ್ರೆ ಅವನ ಮನಸ್ಸು ಚಂಚಲಗೊಳ್ಳುತ್ತದೆ, ಇದರಿಂದ ಅವನು ಹಳಿ ತಪ್ಪುತ್ತಾನೆ. ಅಲ್ಲದೇ ಈ ಚಂಚಲತೆ ಅತ್ಯಾಚಾರಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ .

ರುದ್ರಾಮಯಲ್ ತಂತ್ರ ಪುಸ್ತಕದ ವಿವರಣೆಯನ್ನು ಉಲ್ಲೇಖಿಸಿ ಮಾತನಾಡಿದ ಶಾಸಕ, ಕೆಲ ಸಮುದಾಯದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ತಮಗೆ ತೀರ್ಥಯಾತ್ರೆಗೆ ಸಮಾನವಾದ ಆಧ್ಯಾತ್ಮಿಕ ಅರ್ಹತೆ ತರುತ್ತದೆ ಎಂದು ಅಪರಾಧಿಗಳು ನಂಬುತ್ತಾರೆ. ಅಲ್ಲದೇ ಅತ್ಯಾಚಾರವನ್ನ ವ್ಯಕ್ತಿಗಳಿಗಿಂತ ಗುಂಪುಗಳು ಹೆಚ್ಚಾಗಿ ಮಾಡುತ್ತವೆ. ಇಂತಹ ಅಪರಾಧಗಳು ವಿಕೃತ ಮನಸ್ಥಿತಿಯಿಂದ ಉಂಟಾಗುತ್ತವೆ.

ಮಹಿಳೆಯೊಂದಿಗೆ ಸಂಭೋಗಿಸಿದರೆ, ನೀವು ತೀರ್ಥಯಾತ್ರೆಯ ಪ್ರತಿಫಲ ಪಡೆಯುತ್ತೀರಿ ಎಂದು ಧರ್ಮಗ್ರಂಥದಲ್ಲಿ ಬರೆಯಲಾಗಿದೆ. ತೀರ್ಥಯಾತ್ರೆಗೆ ಹೋಗಲು ಸಾಧ್ಯವಾಗದವರು ಈ ರೀತಿ ಅತ್ಯಾಚಾರ ಎಸಗುತ್ತಿದ್ದಾರೆ. ಇದು ಮಕ್ಕಳ ಮೇಲೂ ನಡೆಯುತ್ತಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

ಸೇರಿದಂತೆ ವಿವಿಧ ಸಂಘಟನೆಗಳು ಇವರ ಮಾತನ್ನು ತೀವ್ರವಾಗಿ ಖಂಡಿಸಿವೆ. ಶಾಸಕರ ಹೇಳಿಕೆ ಕ್ರಿಮಿನಲ್‌ ಮತ್ತು ವಿಕೃತ ಮನಸ್ಥಿತಿಯ ಪ್ರತಿಬಿಂಬ. ಮಹಿಳೆಯರನ್ನ ಅಂದದಲ್ಲಿ ತೂಗುವುದು, ದಲಿತ ಮತ್ತು ಬುಡಕಟ್ಟು ಮಹಿಳೆಯರ ಮೇಲಿನ ಘೋರ ಅಪರಾಧಗಳನ್ನ ಪವಿತ್ರ ಕಾರ್ಯವೆಂದು ಬಣ್ಣಿಸುವುದು ಸ್ತ್ರೀದ್ವೇಷಿ ಹಾಗೂ ದಲಿತ ವಿರೋಧಿ ಚಿಂತನೆ ಆಗಿದೆ ಎಂದು ಕಿಡಿಕಾರಿದೆ. ಅಲ್ಲದೇ ಬರೈಯ್ಯಾರನ್ನ ತಕ್ಷಣವೇ ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದೆ.

 

Continue Reading

LATEST NEWS

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

Published

on

ರಾಯಚೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಸಿರವಾರ ಕ್ರಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಶಾಂತಪ್ಪ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಶಾಂತಪ್ಪ ಕಾರು ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡ ಹಿನ್ನೆಲೆ ಕಾರು ಪಲ್ಟಿ ಹೊಡೆದು ಮೃತಪಟ್ಟಿದ್ದಾರೆ.

ಮಾರೆಪ್ಪ, ಶಿನು ಪವಾರ್ ಎಂಬವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗದ ಮರಗಮದಿಬ್ಬಿ ತಾಂಡದವರಾದ ಮೂವರು ಅರಕೇರಾದಿಂದ ಸಿರವಾರಕ್ಕೆ ಹೊರಟಿದ್ದ ವೇಳೆ ಕಾರು ಪಲ್ಟಿಯಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

 

Continue Reading

DAKSHINA KANNADA

ಡಾ. ಬಿ. ವಿ. ಮಂಜುನಾಥ್ ಅವರಿಗೆ FRCP (ಗ್ಲಾಸ್ಗೋ–ಯುಕೆ) ಪ್ರಶಸ್ತಿ

Published

on

ಮಂಗಳೂರು : ಯುನೈಟೆಡ್ ಕಿಂಗ್ಡಮ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆಯು ಹೃದಯರೋಗ ಕ್ಷೇತ್ರದಲ್ಲಿ ವಿಶಿಷ್ಟ ವೈದ್ಯಕೀಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ, ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ,  ಮುಖ್ಯಸ್ಥರ ಹಾಗೂ ಮುಖ್ಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಬಿ. ವಿ. ಮಂಜುನಾಥ್ ಅವರಿಗೆ ಅತ್ಯಂತ ಗೌರವಾನ್ವಿತ “ಆನರರಿ FRCP” (ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್) ಪ್ರಶಸ್ತಿಯನ್ನು ಪ್ರದಾನಿಸಿದೆ.

ಡಾ. ಮಂಜುನಾಥ್ ಅವರಿಗೆ 36 ವರ್ಷಗಳಿಗಿಂತ ಹೆಚ್ಚು ಹೃದಯರೋಗ ಚಿಕಿತ್ಸಾ ಅನುಭವವಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಲೇಖನಗಳು ಮತ್ತು ಪ್ರಸ್ತುತಿಗಳು, ಪಿಎಚ್‌ಡಿ ಮಾರ್ಗದರ್ಶಕರಾಗಿ ಹಾಗೂ ವಿಶ್ವವಿದ್ಯಾಲಯದ ಪರೀಕ್ಷಕರಾಗಿ ಸೇವೆ, ಮತ್ತು ಅನೇಕ ಪದವಿ, ಸ್ನಾತಕೋತ್ತರ ಹಾಗೂ ಡಿಎಂ ಕಾರ್ಡಿಯಾಲಜಿ ಫೆಲೋಶಿಪ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಹೃದಯ ಕ್ಯಾಥ್ ಲ್ಯಾಬ್‌ನಲ್ಲಿ ಅನೇಕ ಸಂಕೀರ್ಣ ಇಂಟರ್ವೆನ್ಶನಲ್ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆನರರಿ FRCP ಪದವಿ ಪರೀಕ್ಷಾಧಾರಿತ ಪದವಿಯಿಂದ ಭಿನ್ನವಾಗಿದ್ದು, ಇದು ಅನುಭವಿ ವೈದ್ಯರಿಗೆ ನೀಡಲಾಗುವ ಅತ್ಯಂತ ಅಪರೂಪದ ಹಾಗೂ ಗೌರವಾನ್ವಿತ ಅಂತಾರಾಷ್ಟ್ರೀಯ ಫೆಲೋಶಿಪ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದವರಿಗೆ ಈ ಗೌರವ ಲಭಿಸುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದ ಸಹೋದ್ಯೋಗಿ ಮಾನ್ಯತೆಯನ್ನು ನೀಡುತ್ತದೆ.

ಇದನ್ನೂ ಓದಿ : ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

ಈ ಗೌರವವನ್ನು ವಿಶ್ವದಾದ್ಯಂತ ಆಯ್ಕೆಯಾದ ಕೆಲವೇ ವೈದ್ಯರಿಗೆ (ವಾರ್ಷಿಕವಾಗಿ ಗರಿಷ್ಠ 15 ಜನರಿಗೆ ಮಾತ್ರ) ರಾಯಲ್ ಕಾಲೇಜ್ ಸದಸ್ಯರ ಮತದಾನದ ಮೂಲಕ ಪ್ರದಾನಿಸಲಾಗುತ್ತದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page