Connect with us

LATEST NEWS

ಐಪಿಎಲ್ ಆಟಗಾರನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು

Published

on

ಮಂಗಳೂರು/ಮುಂಬೈ: ಪ್ರಸ್ತುತ ಭಾರತದಲ್ಲಿ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದ್ದು, ಟಿ-20 ಕ್ರಿಕೆಟ್ ಹಬ್ಬ ವಿಶ್ವದಲ್ಲೆಡೆ ಆವರಿಸಿದೆ. ಈ ನಡುವೆ ಕಳೆದ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಕ್ರಿಕೆಟಿಗ ಶಿವಾಲಿಕ್ ಶರ್ಮಾ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ನಿಶ್ಚಿತಾರ್ಥಕ್ಕೂ ಮುನ್ನ ಶಿವಾಲಿಕ್ ಶರ್ಮಾ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿಯೊಬ್ಬಳು ಆರೋಪ ಮಾಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕ್ರಿಕೆಟಿಗ ಮತ್ತು ಸಂತ್ರಸ್ಥ ಯುವತಿ ಇಬ್ಬರೂ ಸ್ನೇಹಿತರಾಗಿದ್ದರು. ಅವರು ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಂತೆ ಆತ್ಮೀಯತೆ ಹೆಚ್ಚಾಯಿತು. ಇದಾದ ನಂತರ, ಇಬ್ಬರ ಪೋಷಕರು ಪರಸ್ಪರ ಭೇಟಿಯಾಗಿದ್ದರು. ಶಿವಾಲಿಕ್ ಅವರ ಪೋಷಕರು ಆಗಸ್ಟ್ 2023 ರಲ್ಲಿ ಜೋಧ್‌ಪುರಕ್ಕೆ ಬಂದರು. ಇದಾದ ನಂತರ, ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ನಡೆದಿತ್ತು.

ಇದನ್ನೂ ಓದಿ: ದಿಢೀರ್‌ ಏರಿಕೆ ಕಂಡ ವೈಭವ್‌ ಸೂರ್ಯವಂಶಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್..!

ಯುವತಿಯ ಪ್ರಕಾರ, ನಿಶ್ಚಿತಾರ್ಥದ ನಂತರ, ಶಿವಾಲಿಕ್ ಜೋಧ್‌ಪುರಕ್ಕೆ ಹಿಂತಿರುಗಿದಾಗ, ಅವರು ದೈಹಿಕ ಸಂಬಂಧ ಹೊಂದಿದ್ದರು. ಇಬ್ಬರೂ ಜೈಪುರ ಸೇರಿದಂತೆ ರಾಜಸ್ಥಾನದ ಹಲವು ಸ್ಥಳಗಳಿಗೆ ಹೋಗಿದ್ದರು. ಆದರೆ, ಆಗಸ್ಟ್ 2024 ರಲ್ಲಿ ಯುವತಿಯನ್ನು ವಡೋದರಾಕ್ಕೆ ಕರೆಸಿದಾಗ ವಿಷಯಗಳು ಬೇರೆಯದೇ ತಿರುವು ಪಡೆದುಕೊಂಡವು ಮತ್ತು ಶಿವಾಲಿಕ್ ಅವರ ಪೋಷಕರು “ಅವನು ಕ್ರಿಕೆಟಿಗ, ಅವನಿಗೆ ಬೇರೆ ಸ್ಥಳಗಳಿಂದ ಪ್ರಸ್ತಾಪಗಳು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮೊಂದಿಗಿನ ಈ ನಿಶ್ಚಿತಾರ್ಥ ಮುಂದುವರಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದರು.

ಇದಾದ ನಂತರ, ಯುವತಿ ಪೊಲೀಸರ ಬಳಿ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಕುಡಿ ಭಗತ್ಸುನಿ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಶಿವಾಲಿಕ್ ಶರ್ಮಾ 2024 ರಲ್ಲಿ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ಪರ ಆಡಿದ್ದರು.

LATEST NEWS

ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ: ಆದಂಪುರ್‌ ವಾಯುನೆಲೆಯಲ್ಲಿ ಪ್ರಧಾನಿ ಮೋದಿ

Published

on

ಮಂಗಳೂರು/ಆದಂಪುರ್: ಆಪರೇಷನ್ ಸಿಂಧೂರ್ ನಂತರ ಪ್ರಧಾನಿ ಮೋದಿ ನಿನ್ನೆ ಮೊದಲ ಬಾರಿಗೆ ಸಾರ್ವಜನಿಕ ಭಾಷಣ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬಿನ ಆದಂಪುರ್ ವಾಯುನೆಲೆಗೆ ಭೇಟಿ ನೀಡಿದರು.

ಪ್ರಧಾನಿ ಮೋದಿ ಅದಂಪುರ್ ಭೇಟಿ ಹೆಚ್ಚು ಮಹತ್ವ ಪಡೆದಿದ್ದು ಏಕೆಂದರೆ, ಪಾಕಿಸ್ತಾನದವರು ನಾವು ಆದಂಪುರ್‌ ವಾಯುನೆಲೆಯನ್ನು ಛಿದ್ರಗೊಳಿಸಿದ್ದೇವೆ ಎಂಬ ಸುಳ್ಳು ಸುದ್ದಿ ಹರಡಿದ್ದರು. ಆದರೆ, ಇಂದು ಬೆಳಿಗ್ಗೆ  ಪಂಜಾಬ್‌ನ  ಅದೇ ಆದಂಪುರ್ ವಾಯುನೆಲೆಯಲ್ಲಿ ಪ್ರಧಾನಿ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ!

ವಾಯುನೆಲೆಯಲ್ಲಿ ಐಎಎಫ್ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ನಾವು ಪೂರ್ಣವಾಗಿ ಉತ್ತರಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ಯಾವುದೇ ಭಯೋತ್ಪಾದಕ ದಾಳಿಗೆ ನಮ್ಮದೇ ಆದ ಷರತ್ತುಗಳ ಮೇಲೆ ನಿರ್ಣಾಯಕ ಉತ್ತರ ನೀಡಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿ ಪಾಕ್ ಸೇನೆಯ ಬೆವರಿಳಿಸಿದ್ದಾರೆ.

ಒಂದು ದಾಳಿ ಪಾಕಿಸ್ತಾನದಲ್ಲಿ ಮಹಾವಿನಾಶಕ್ಕೆ ಕಾರಣ!

“ನಾವು ಗಾಡ್‌ಫಾದರ್‌ಗಳು ಮತ್ತು ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಅವರು ಅಮಾಯಕರನ್ನು ಕೊಂದರೆ ಅವರಿಗೆ ವಿನಾಶವೊಂದೇ ಪರಿಹಾರ ಎಂದು ತಿಳಿದಿದೆ. ಪಾಕಿಸ್ತಾನದವರು ಹೇಡಿಗಳಂತೆ ಬಂದರು. ಆದರೆ ಅವರು ಎದುರಿಸಬೇಕಾಗಿದ್ದು ಭಾರತೀಯ ಸೇನೆಯನ್ನು ಎಂಬುದನ್ನು ಮರೆತಿದ್ದಾರೆ. ಪಾಕಿಸ್ತಾನದ 9 ಭಯೋತ್ಪಾದಕ ಪಡೆಗಳು ನಾಶವಾದವು. 100ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅವರ ಒಂದು ದಾಳಿ ಪಾಕಿಸ್ತಾನದಲ್ಲಿ ಮಹಾವಿನಾಶಕ್ಕೆ ಕಾರಣವಾಯಿತು. ಈಗ ಪಾಕಿಸ್ತಾನದವರು ನಮ್ಮ ಕ್ಷಿಪಣಿ, ಡ್ರೋನ್​ಗಳ ಬಗ್ಗೆ ಯೋಚನೆ ಮಾಡಿದರೆ ಸಾಕು ಕಣ್ಣುಮುಚ್ಚಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ನಿವಾಸದ ಮೇಲೆ ಬಾಂ*ಬ್ ದಾಳಿ ಆಗಬೇಕು ಎಂದಿದ್ದ ವ್ಯಕ್ತಿಯ ಬಂಧನ

ಇದೇ ವೇಳೆ ಪಾಕಿಸ್ತಾನದ ಬಗ್ಗೆ ಭಾರತಕ್ಕಿರುವ ಮೂರು ಪ್ರಮುಖ ನೀತಿಗಳ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಭಾರತದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ಭಾರತವು ಪರಮಾಣು ಬ್ಲ್ಯಾಕ್‌ಮೇಲ್‌ಗಳನ್ನು ಸ್ವೀಕರಿಸವುದಿಲ್ಲ. ಇನ್ನೂ ಭಯೋತ್ಪಾದಕರು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕ್ ಸರ್ಕಾರ ಕೂಡ ಭಯೋತ್ಪಾದಕರೇ ಆಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಭಾರತೀಯ ಯೋಧರನ್ನು ಶ್ಲಾಘಿಸಿದ ಪ್ರಧಾನಿ ಮೋದಿ

“ಇದು ಹೊಸ ಭಾರತ, ಶಾಂತಿಯನ್ನು ಬಯಸುತ್ತದೆ. ಆದರೆ ಪಾಕಿಸ್ತಾನದಿಂದ ಮಾನವೀಯತೆಯ ಮೇಲೆ ದಾಳಿ ನಡೆದರೆ, ನಾವು ನಿಮ್ಮನ್ನು ನಿರ್ನಾಮ ಮಾಡುತ್ತೇವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಯಾವುದೇ ಸ್ಥಳವೂ ಉಳಿದಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ” ಎಂದು ಭಾರತೀಯ ಯೋಧರನ್ನು ಶ್ಲಾಘಿಸಿದ್ದಾರೆ.

 

Continue Reading

LATEST NEWS

ಬದಲಾಯ್ತು ಗೂಗಲ್ ಲೋಗೋ; 10 ವರ್ಷಗಳ ಬಳಿಕ ಆಧುನಿಕ ಟಚ್

Published

on

ನವದೆಹಲಿ: ಸುಮಾರು 10 ವರ್ಷಗಳ ನಂತರ ಗೂಗಲ್ ಮತ್ತೊಮ್ಮೆ ತನ್ನ ಐಕಾನಿಕ್ ‘G’ ಲೋಗೋವನ್ನು ಬದಲಾಯಿಸಿದೆ.

2015 ರಲ್ಲಿ, ಗೂಗಲ್ ತನ್ನ ಕ್ಲಾಸಿಕ್ ಲೋಗೋವನ್ನು ಆಧುನಿಕ ಟೈಪ್‌ಫೇಸ್ ಪ್ರಾಡಕ್ಟ್ ಸ್ಯಾನ್ಸ್ ಗೆ ಬದಲಾಯಿಸಿತು. ಈಗ 2025 ರಲ್ಲಿ, ಕಂಪನಿಯು ಇದಕ್ಕೆ ಹೊಸ ದೃಶ್ಯ ತಿರುವನ್ನು ಸೇರಿಸಿದೆ.

ಹೊಸ ಲೋಗೋದಲ್ಲಿ ಗೂಗಲ್ ತನ್ನ ಬ್ರ್ಯಾಂಡ್‌ನ ಗುರುತಾಗಿರುವ ನೀಲಿ, ಕೆಂಪು, ಹಸಿರು ಮತ್ತು ಹಳದಿ ಎಂಬ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಉಳಿಸಿಕೊಂಡಿದೆ. ಆದರೆ ಈ ಬಾರಿ ವಿನ್ಯಾಸದಲ್ಲಿ ಹೊಸ ತಿರುವು ಇದೆ.

ಇದನ್ನೂ ಓದಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗೆ ನೀರು ಹಾಕಲು ಹೋಗಿ ಬಾಲಕಿ ಸಾವು

ಮೊದಲು ಈ ಬಣ್ಣಗಳನ್ನು G ಲೋಗೋದಲ್ಲಿ ಬ್ಲಾಕ್ ಶೈಲಿಯಲ್ಲಿ ಕಾಣಲಾಗುತ್ತಿತ್ತು. ಈಗ ಅದೇ ಬಣ್ಣಗಳನ್ನು ಗ್ರೇಡಿಯಂಟ್‌ನಲ್ಲಿ ಅಂದರೆ ಬೆಳಕಿನಿಂದ ಗಾಢ ಛಾಯೆಗಳವರೆಗೆ ಕಾಣಬಹುದು. ಇದು ಜನರಿಗೆ ಕ್ರಿಯಾತ್ಮಕ ಮತ್ತು ಆಧುನಿಕ ಅನುಭವವನ್ನು ನೀಡುತ್ತದೆ. ಗೂಗಲ್‌ನ ಈ ಹೊಸ ಲೋಗೋ ಕಂಪನಿಯು ಈಗ ತನ್ನ ಹಳೆಯ ನೋಟವನ್ನು ಮೀರಿ ಹೆಚ್ಚು ಸ್ಮಾರ್ಟ್, ಫ್ಯೂಚರಿಸ್ಟಿಕ್ ಮತ್ತು ಎಐ-ಪವರ್ಡ್​ ಬ್ರ್ಯಾಂಡಿಂಗ್‌ನತ್ತ ಸಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

Continue Reading

LATEST NEWS

ಆರ್‌ಸಿಬಿ ತಂಡಕ್ಕೆ ಮೊದಲ ಮ್ಯಾಚ್; ಇಲ್ಲಿದೆ ನೋಡಿ IPL 2025ರ ಪರಿಷ್ಕೃತ ವೇಳಾಪಟ್ಟಿ

Published

on

ಮಂಗಳೂರು/ಮುಂಬೈ: ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಡಿಮೆಯಾಗಿದ್ದು, ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಶನಿವಾರದಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ.


ಹೌದು, ಈಗಾಗಲೇ ಗುಜರಾತ್ ಟೈಟನ್ಸ್ ಸೇರಿದಂತೆ ಕೆಲ ತಂಡಗಳು ಐಪಿಎಲ್‌ನ ಉಳಿದ ಪಂದ್ಯಗಳಿಗಾಗಿ ಸಿದ್ದತೆಗಳನ್ನು ಆರಂಭಿಸಿವೆ. ಈ ಸಿದ್ದತೆಗಳ ನಡುವೆ ಮತ್ತೊಂದು ಮಾಹಿತಿ ಕೂಡ ಹೊರಬಿದ್ದಿದೆ. ಅದೇನೆಂದರೆ.. ಐಪಿಎಲ್ ಪುನರಾಂಭಗೊಳ್ಳುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯದೊಂದಿಗೆ ಎಂಬುದು. ಹೀಗಾಗಿ ಆರ್‌ಸಿಬಿ ಅಭಿಮಾನಿಗಳಿಗೆ ಈ ಸುದ್ದಿ ಮತ್ತಷ್ಟು ಖುಷಿ ಕೊಟ್ಟಿದೆ. ಇನ್ನು ಈ ಬಾರಿಯ ಫೈನಲ್ ಪಂದ್ಯವನ್ನು ಜೂನ್ 3ರಂದು ಆಯೋಜಿಸಲು ನಿರ್ಧರಿಸಲಾಗಿದೆ.

ಐಪಿಎಲ್ 2025ರ ಪರಿಷ್ಕೃತ ವೇಳಾಪಟ್ಟಿ

Continue Reading
Advertisement

Trending

Copyright © 2025 Namma Kudla News

You cannot copy content of this page