ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ? ಈ ಪ್ರಶ್ನೆ ಕೇಳಿದಾಗೆಲ್ಲಾ ರಮ್ಯಾ ನಕ್ಕು ಸುಮ್ಮನಾಗ್ತಾರೆ. ಆದ್ರೆ ಇದೀಗ ಸಂದರ್ಶನವೊಂದರಲ್ಲಿ ರಮ್ಯಾ ತಮ್ಮ ಪಾರ್ಟ್‌ನರ್ ಬಗ್ಗೆ ಮಾತನಾಡಿದ್ದಾರೆ.

ಹೌದು, ಮೋಹಕ ತಾರೆ ರಮ್ಯಾ ತಮ್ಮ ಪಾರ್ಟ್‌ನರ್ ಬಗ್ಗೆ ಮಾತನಾಡಿದ್ದಾರೆ. ಅರೇ ಇದು ಯಾರು ಹೊಸ ಪಾರ್ಟ್‌ನರ್ ಅಂತ ಫ್ಯಾನ್ಸ್ ತೆಲೆಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ, ರಮ್ಯಾ ಮದುವೆ ಯಾವಾಗ? ಈ ಚೆಲುವೆಯ ಕೈಹಿಡಿಯುವ ಲಕ್ಕಿಮ್ಯಾನ್ ಯಾರು ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ..? ಈ ಬಗ್ಗೆ ಇಲ್ಲಿದೆ ಉತ್ತರ…
ರಮ್ಯಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ರಾಫೇಲ್ ಅನ್ನೋ ವಿದೇಶಿ ಹುಡುಗನ ಜೊತೆ ರೀಲೆಷನ್‌ಶಿಪ್‌ನಲ್ಲಿದ್ರು. ಈ ಬಗ್ಗೆ ಖುದ್ದು ನಟಿಯೇ ಸಡಗರದಿಂದ ಹೇಳಿಕೊಳ್ಳುತ್ತಿದ್ರು. ಆದ್ರೆ ಅದ್ಯಾಕೋ ವಿದೇಶಿ ಗೆಳೆಯ ರಮ್ಯಾ ಪಾಲಿಗೆ ಬಾಳ ಗೆಳೆಯ ಆಗಲೇ ಇಲ್ಲ.
ಮುಂದೆ ರಮ್ಯಾ ರಾಜಕೀಯದಲ್ಲಿ ಬ್ಯುಸಿ ಆದ್ರೂ. ಆದ್ರೆ ಮದುವೆ ಬಗ್ಗೆ ಮುಂದುಕ್ಕೆ ಹೋಗ್ತಾನೆ ಹೋಯ್ತು. ಸದ್ಯ ರಮ್ಯಾಗೆ 43 ವರ್ಷ. ಈಗಲೂ ರಮ್ಯಾ ಒಬ್ಬಂಟಿ. ಸೋ ಈಗಲೂ ಒಂಟಿ ಚೆಲುವೆ ಜಂಟಿ ಆಗೋದು ಯಾವಾಗ ಅಂತ ಫ್ಯಾನ್ಸ್ ಕೇಳ್ತಾನೆ ಇರುತ್ತಾರೆ.
ಇತ್ತೀಚೆಗೆ ಶುಭ್ರಾ ಅಯ್ಯಪ್ಪ ಯೂಟ್ಯುಬ್ ಚಾನಲ್‌ಗೆ ರಮ್ಯಾ ಸಂದರ್ಶನ ಕೊಟ್ಟಿದ್ದಾರೆ. ಅದರಲ್ಲಿ ತಮ್ಮ ಸಿನಿಮಾ, ವೈಯಕ್ತಿಕ, ಪ್ರೀತಿ-ಬದುಕು ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ರಮ್ಯಾ ಪಾರ್ಟ್‌ನರ್ ಬಗ್ಗೆ ಹೇಳಿದ್ದಾರೆ.
“ನನ್ನ ಪಾರ್ಟ್‌ನರ್ ನೀನ್ಯಾಕೆ ಹೀಗೆ.. ನೀನ್ಯಾಕೆ ನನ್ನ ಬಳಿ ಏನೂ ಹೇಳಿಕೊಳ್ಳುವುದಿಲ್ಲ.. ನಿನ್ನನ್ನು ಹೇಗೆ ಅರ್ಥ ಮಾಡಿಕೊಳ್ಳೋದು ಅಂತ ಕೇಳ್ತಾ ಇರ್ತಾರೆ. ಆದ್ರೆ ನಾನು ಇರುವುದೇ ಹೀಗೆ. ಮತ್ತೊಬ್ಬರ ಬಳಿ ಹೇಳಿಕೊಳ್ಳುವುದು ದೌರ್ಬಲ್ಯ ಅಂತ ನಾನು ನಂಬುವ ಕಾರಣ ಅಷ್ಟು ಸುಲಭವಾಗಿ ಏನನ್ನೂ ಹೇಳಿಕೊಳ್ಳುವುದಿಲ್ಲ” ಎಂದು ರಮ್ಯಾ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷಾಂತರ ಹಣ ವಂಚನೆ ಆರೋಪ
ಅಷ್ಟಕ್ಕೂ, ಇಲ್ಲಿ ರಮ್ಯಾ ಯಾರ ಬಗ್ಗೆ ಹೇಳಿದ್ದಾರೆ ಎಂದು ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ನಿಜಕ್ಕೂ ರಮ್ಯಾ ಯಾರ ಜೊತೆನಾದ್ರೂ ಸೀರಿಯಸ್ ರೀಲೆಷನ್‌ಶಿಪ್‌ನಲ್ಲಿದ್ದಾರಾ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ.
ಇನ್ನು ಈ ಸಂದರ್ಶನದಲ್ಲಿ ರಮ್ಯಾ, ನನಗೆ ಮದುವೆ-ಮಕ್ಕಳಾಗಿದೆ ಅಂತ ಎಲ್ಲಾ ಗಾಸಿಪ್ ಹರಿದಾಡಿದೆ.. ಅದರ ಬಗ್ಗೆ ಎಲ್ಲಾ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಸಂದರ್ಶನದಿಂದ ರಮ್ಯಾ ಲವ್ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಆದ್ದರಿಂದ ರಮ್ಯಾ ಸದ್ಯದಲ್ಲೇ ಏನೋ ಸಿಹಿ ಸುದ್ದಿ ಕೊಡ್ತಾರೆ ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ತಮ್ಮ ಬಾಯ್‌ಫ್ರೆಂಡ್ ಯಾರು ಎಂಬ ಬಗ್ಗೆ ರಮ್ಯಾ ಗುಟ್ಟು ಬಿಟ್ಟುಕೊಟ್ಟಿಲ್ಲ.