Connect with us

BIG BOSS

ಬಿಗ್‌ಬಾಸ್ ಮನೆಯ ಪಯಣದ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರಕ್ಷಿತಾ ಶೆಟ್ಟಿ

Published

on

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮೊದಲ ರನ್ನರ್-ಅಪ್ ಆಗಿ ಹೊರಹೊಮ್ಮಿದ ಮಂಗಳೂರಿನ ಬೆಡಗಿ ರಕ್ಷಿತಾ ಶೆಟ್ಟಿ, ಇದೀಗ ಶೋ ಮುಗಿದ 15 ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಈಗ ವೈರಲ್ ಆಗಿದೆ. ಮೂರು ತಿಂಗಳ ಸಂತೋಷ, ನೋವು, ನಲಿವು, ಬಾಂಧವ್ಯಗಳನ್ನು ನೆನಪಿಸಿಕೊಂಡ ರಕ್ಷಿತಾ ಶೆಟ್ಟಿ, ಮನೆಯನ್ನು ಬಿಟ್ಟು ಬರುವ ಕ್ಷಣ ಅತ್ಯಂತ ಕಠಿಣವಾಗಿತ್ತು ಎಂದು ಹೇಳಿಕೊಂಡಿದ್ದಾರೆ.


ನನ್ನ ಜೀವನದಲ್ಲಿ ಎಂದಿಗೂ ಮರೆತೇ ಹೋಗದ ದಿನ ಎಂದರೆ ಅದು ಬಿಗ್‌ಬಾಸ್‌ ಮನೆಯ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ ಎಲ್ಲವೂ ಇತ್ತು. ಸ್ಪರ್ಧೆಯೊಂದಿಗೆ ಆರಂಭವಾದ ಈ ಮನೆ ಸಮಯದೊಂದಿಗೆ ನಿಜವಾದ ಮನೆಯಾಗಿ ಬಿಟ್ಟಿತು. ಬಿಗ್ ಬಾಸ್ ಮನೆಯು ಭಾವನೆಗಳು, ಬಾಂಧವ್ಯ ಮತ್ತು ಅಸಂಖ್ಯಾತ ನೆನಪುಗಳಿಂದ ಕೂಡಿದ ಮನೆ ಎಂದು ಅವರು ಬಣ್ಣಿಸಿದ್ದಾರೆ.

ಜತೆಗೆ, ಇದು ಕೇವಲ ಒಂದು ಪ್ರಯಾಣವಲ್ಲ, ನಾನು ಇಲ್ಲಿ ಅನೇಕ ಸಂಬಂಧಗಳನ್ನು ಕಟ್ಟಿಕೊಂಡೆ. ಬಹಳಷ್ಟು ಅಣ್ಣಂದಿರು, ಅಮೂಲ್ಯವಾದ ಬಾಂಧವ್ಯಗಳು ಸದಾ ನನ್ನ ಹೃದಯದಲ್ಲಿರುತ್ತವೆ. ಸುದೀಪ್ ಸರ್ ಮನೆಗೆ ಪ್ರವೇಶಿಸಿದ ಕ್ಷಣ ತುಂಬಾ ಸಂತೋಷ ತಂದಿತು. ಆದರೆ ಮನೆ ಬಿಟ್ಟು ಹೊರಡುವ ಸಮಯ… ಅದು ನನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಕಿಚ್ಚನಿಗೆ ಏಕಾಏಕಿ ಪತ್ರ ಬರೆದ ರಕ್ಷಿತಾ ಶೆಟ್ಟಿ!

ಈ ಎಲ್ಲಾ ತಿಂಗಳುಗಳ ನಂತರ ಈ ಮನೆಯನ್ನು ಬಿಟ್ಟು ಹೋಗುವುದು ಸುಲಭವಾಗಿರಲಿಲ್ಲ. ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ. ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗಲು ಬಿಡುವುದಿಲ್ಲ ಅವು ನಮ್ಮೊಳಗೇ ಉಳಿದುಬಿಡುತ್ತವೆ. ಮನೆಯ ಹೊರಗಿದ್ದ ನನ್ನ ಜನರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಮತ್ತು ಮತಗಳು ನನಗೆ ಶಕ್ತಿ ನೀಡಿದವು. ನಾನು ಅಷ್ಟು ದೂರ ಬಿಗ್‌ಬಾಸ್‌ ಮನೆಯಲ್ಲಿ ಉಳಿಯಲು ನೀವೇ ಕಾರಣ. ಈ ಕೃತಜ್ಞತೆ, ನೆನಪುಗಳು ಯಾವತ್ತಿಗೂ ಇರುತ್ತದೆ ಎಂದು ಬಿಗ್ ಬಾಸ್ ಮನೆಯು ಭಾವನೆಗಳು, ಬಾಂಧವ್ಯ ಮತ್ತು ಅಸಂಖ್ಯಾತ ನೆನಪುಗಳಿಂದ ಕೂಡಿದ ಮನೆ ಎಂದು ಅವರು ಬಣ್ಣಿಸಿದ್ದಾರೆ.

BIG BOSS

‘ನೀನು ಹೇಳೋವರೆಗೂ ಈ ವಿಷಯ ಯಾರಿಗೂ ಗೊತ್ತಿರಲಿಲ್ಲ’- ರಕ್ಷಿತಾ ಕಾಲೆಳೆದ ಪ್ರಥಮ್!

Published

on

ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಒಳ್ಳೆ ಹುಡುಗ’ ಪ್ರಥಮ್, ಅಶ್ವಿನಿ ಗೌಡ, ಜಾಹ್ನವಿ, ಮತ್ತು ರಕ್ಷಿತಾ ಶೆಟ್ಟಿ ಭಾಗವಹಿಸಿದ್ದರು. ಆ ವೇಳೆ ಪ್ರಥಮ್‌ ರಕ್ಷಿತಾ ಶೆಟ್ಟಿ ಅವರ ಬಗ್ಗೆ ಮಾತನಾಡುತ್ತಾ, ಆಕೆಯ ವೈಯಕ್ತಿಕ ವಿಚಾರವೊಂದನ್ನು ಹಂಚಿಕೊಂಡಾಗ ರಕ್ಷಿತಾ ನಾಚಿಕೊಂಡ ಪ್ರಸಂಗ ನಡೆದಿದೆ.


ವೇದಿಕೆ ಮೇಲೆ ಮಾತನಾಡುತ್ತಿದ್ದ ಪ್ರಥಮ್, ರಕ್ಷಿತಾ ಶೆಟ್ಟಿ ಅವರನ್ನು ‘ಗಿಲ್ಲಿ ನಟನ ತಂಗಿ’ ಎಂದು ಹೇಳುವ ಮೂಲಕ ಕಾಲೆಳೆದರು. ಆಗ ರಕ್ಷಿತಾ, ‘ತಂಗಿ ಅಂತ ಹೇಳಬೇಡಿ, ವಂಶದ ಕುಡಿ ಎಂದು ಹೇಳಿ ಸಾಕು’ ಎಂದು ಹೇಳಿದ್ದಾರೆ. ರಕ್ಷಿತಾ ಅವರ ಮಾತಿನ ಹೊರತಾಗಿಯೂ ಪ್ರಥಮ್ ಕಿಚಾಯಿಸುವುದನ್ನು ಮುಂದುವರಿಸಿದರು, ಇದರಿಂದ ರಕ್ಷಿತಾ ನಾಚಿಕೆಯಿಂದ ಮುಗುಳ್ನಕ್ಕರು.

ಅಂದಹಾಗೆ ರಕ್ಷಿತಾ ಶೆಟ್ಟಿ ಅವರು ತಮಗೆ ಬರುವ ಕನ್ನಡದಲ್ಲೇ ಮಾತನಾಡಿದ್ದಾರೆ. ಆ ವೇದಿಕೆ ಮೇಲೆ ಸ್ವಾಮೀಜಿಗಳು ಕೂಡ ಇದ್ದರು. ಆಗ ಅಶ್ವಿನಿ ಗೌಡ ಅವರು ರಕ್ಷಿತಾಗೆ, ‘ಪೂಜ್ಯ ಗುರುಗಳಿಗೆ ನಮಸ್ಕಾರ ಎಂದು ಹೇಳು’ ಎಂದಿದ್ದಾರೆ. ಆಗ ರಕ್ಷಿತಾ ಅವರು ನಮಸ್ಕಾರ ಎಂದಿದ್ದಾರೆ, ಅದನ್ನು ಕೇಳಿದ ಸ್ವಾಮೀಜಿಗಳು ನಕ್ಕಿದ್ದಾರೆ.‌

ಇದನ್ನೂ ಓದಿ: ಕೋಟ : ಗೂಗಲ್ ಮ್ಯಾಪ್ ಎಡವಟ್ಟು; ಕೊಲ್ಲೂರಿಗೆ ಹೊರಟವರು ತಲುಪಿದ್ದೆಲ್ಲಿಗೆ ಗೊತ್ತಾ?

ಪ್ರಥಮ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 4 ಶೋ ಗೆದ್ದಿದ್ದಾರೆ ಎಂದು ರಕ್ಷಿತಾ ಹೇಳಿದ್ದಾರೆ. ಆಗ ಪ್ರಥಮ್‌, ‘ನೀನು ಹೇಳಿದಮೇಲೆ ಜನರಿಗೆ ಈ ವಿಷಯ ಗೊತ್ತಾಗಿದೆ, ಅಲ್ಲಿಯವರೆಗೆ ಯಾರಿಗೂ ಗೊತ್ತಿರಲಿಲ್ಲ’ ಎಂದು ರಕ್ಷಿತಾ ಅವರ ಬಗ್ಗೆ ತಮಾಷೆಯಾಗಿ ಕಾಲೆಳೆದಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ಮುಗಿಸಿ ಬಂದಿರುವ ರಕ್ಷಿತಾ ಅವರಿಗೆ ಇದು ಸಾರ್ವಜನಿಕವಾಗಿ ದೊರೆತ ಭರ್ಜರಿ ಸ್ವಾಗತದ ಭಾಗವಾಗಿತ್ತು.

Continue Reading

BIG BOSS

‘ಆ ತರ ನೋಡಬೇಡಿ, ಗಿಲ್ಲಿಗೆ ಇಷ್ಟ ಆಗಲ್ಲ’: ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಗಿಲ್ಲಿ ಫ್ಯಾನ್ಸ್!

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಶೋ ಮುಗಿದ ಬಳಿಕ ಸ್ಪರ್ಧಿಗಳೆಲ್ಲರೂ ದೊಡ್ಮನೆ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಇದರ ಪ್ರೋಮೋ ರಿಲೀಸ್‌ ಆಗಿದ್ದು, ರಕ್ಷಿತಾ ಶೆಟ್ಟಿ ಎಮೊಶನಲ್‌ ಆಗಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರವೂ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.


ಇತ್ತೀಚಿನ ‘ದೊಡ್ಮನೆ ಹಬ್ಬ’ ಕಾರ್ಯಕ್ರಮದ ವೇಳೆ ಗಿಲ್ಲಿ ಮತ್ತು ಕಾವ್ಯ ಅವರ ಕೆಮಿಸ್ಟ್ರಿ ನೋಡಿ ರಕ್ಷಿತಾ ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಬಿಗ್‌ಬಾಸ್‌ ಮುಗಿದು ತುಂಬ ದಿನ ಆಗಿದೆ. ಬಿಗ್‌ಬಾಸ್‌ ಮನೆಯಲ್ಲಿ ಒಟ್ಟಾಗಿ ಕೂತು ತುಂಬಾ ಮಾತನಾಡುತ್ತಿದ್ದೆವು. ಡಿಸ್‌ಕನೆಕ್ಟ್‌ ಆದರೆ ಬೇಜಾರು ಆಗುತ್ತದೆ. ದಯವಿಟ್ಟು ಕನೆಕ್ಷನ್‌ ಬ್ರೇಕ್‌ ಮಾಡಬೇಡಿ ಎಂದು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಆಗ ಗಿಲ್ಲಿ ನಟ, ರಘು ಬಂದು ಎಮೋಶನಲ್‌ ಆಗಿ ಮೂವರು ಅಪ್ಪಿಕೊಂಡಿದ್ದಾರೆ.

ಅಭಿಮಾನಿಗಳ ಆಕ್ರೋಶ: 

ರಕ್ಷಿತಾ ಗಿಲ್ಲಿನ ಬರಿ ಫ್ರೆಂಡ್ ತರ ನೋಡಿದ್ರೆ ನಮಗೂ ಅವಳಿಷ್ಟ. ಆದರೆ ಗಿಲ್ಲಿ ಬಹಳ ಸಲ ತಂಗಿ ಅಂದ ಮೇಲು ಅವಳು ಅದನ್ನ ಒಪ್ಪಿಕೊಂಡಂಗೆ ಇಲ್ಲ, ಆಚೆ ಬಂದ ಮೇಲು ಕಾವ್ಯ ಗಿಲ್ಲಿ ಒಂದಾಗೋದು ಇಷ್ಟ ಇಲ್ಲ ಅಂತಾನೆ ಹೇಳಿದ್ದಾಳೆ, ಅದು ಬೇಡ ಅಲ್ವಾ ಅವಳು ಸತ್ಯನ ಒಪ್ಕೋಬೇಕು ಅಲ್ವಾ? ಆಗ ಎಲ್ಲ ಚೆನ್ನಾಗಿರುತ್ತೆ, ನಮಗೂ ರಕ್ಷಿತಾ ಇಷ್ಟ ಆಗ್ತಾಳೆ. ಗಿಲ್ಲಿ ನಿನಗೆ ತಂಗಿ ಸ್ಥಾನದಲ್ಲಿ ನೋಡುತ್ತಿದ್ದಾನೆ. ನೀನು ಬೇರೆ ರೀತಿ ನೋಡುತ್ತಿದ್ದಿಯಾ. ಅದು ಅವನಿಗೆ ಇಷ್ಟ ಆಗಲ್ಲ.

ಇದನ್ನೂ ಓದಿ: ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಗಿಲ್ಲಿ ಗೆದ್ದು ಇಷ್ಟು ದಿನ ಆದ್ರೂ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ.. ಒಂದು ಕಾಲ್ ಮಾಡಿ ಅಭಿನಂದನೆ ಕೂಡ ಹೇಳಲಿಲ್ಲ. ಈಗ ಕ್ಯಾಮರಾ ಮುಂದೆ ಕಣ್ಣೀರು ಸುರಿಯುತ್ತೆ. ಗಿಲ್ಲಿ ನಟ ಗೆದ್ದಾಗ ಇಬ್ಬರು ಕೂಡ ಒಂದು ಪೋಸ್ಟ್ ಹಾಕಿ ವಿಶ್ ಮಾಡಲಿಲ್ಲ. ಆದರೆ ಈಗ ಕಂಟೆಂಟ್‌ಗಾಗಿ ಗಿಲ್ಲಿ ಬೇಕು, ಕಣ್ಣೀರು ಬರಲೇ ಬೇಕು. ಇಷ್ಟು ಮನಸಿಗೆ ತಗೋ ಬೇಡ ಕ್ರಮೇಣ ಎಲ್ಲ ಸಂಬಂಧಗಳು ಒಂದಿನ ಹೀಗೆ ಜೀವನ ಆದ್ರೂ ಶೋ ಆದ್ರೂ ಅಷ್ಟೇ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

Continue Reading

BIG BOSS

ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

Published

on

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಶೋ ಮುಗಿದ ಮೇಲೆ ದೊಡ್ಮನೆ ಹಬ್ಬ ಎಂದು ಕಾರ್ಯಕ್ರಮ ಮಾಡಲಾಗಿದೆ.ಈ ಕಾರ್ಯಕ್ರಮದಲ್ಲಿ BBK12ರ ಎಲ್ಲಾ ಸ್ಪರ್ಧಿಗಳು ಒಂದೇ ಬಾರಿ ಭೇಟಿಯಾಗಿದ್ದಾರೆ. ಇದರ ನಿರೂಪಕಿಯಾದ ನಟಿ ಸುಷ್ಮಾ ರಾವ್‌ ಆವರು ಬಿಗ್‌ಬಾಸ್‌ ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ್ದಾರೆ.


ದೊಡ್ಮನೆ ಹಬ್ಬದಲ್ಲಿ ಸ್ಪರ್ಧಿಗಳಿಗೆ ಒಂದು ಗೇಮ್‌ ಆಡಿಸಲಾಗಿದೆ. ಕೆಲ ಸ್ಪರ್ಧಿಗಳ ಫೋಟೋಗಳನ್ನು ಇಡಲಾಗಿದ್ದು, ಯಾರು ಯಾರ ಹಲ್ಲನ್ನು ಮುರಿಯಲು ಇಷ್ಟಪಡುತ್ತಾರೆ? ಜತೆಗೆ ಅದಕ್ಕೆ ಕಾರಣ ಹೇಳಿ ಸೂಚಿಸಿದ ಸ್ಪರ್ಧಿಗಳ ಫೋಟೋಗೆ ಬಾಲ್‌ ಎಸೆಯಬೇಕು.

ಆ ವೇಳೆ, ‘ಗಿಲ್ಲಿ ಬಿಗ್‌ಬಾಸ್‌ ಮನೆಯೊಳಗೆ ಹಲ್ಲು ಸೆಟ್‌ ಎಂದು ರೇಗಿಸಿದ್ದಾನೆ’ ಎಂದು ಅಶ್ವಿನಿ ಗೌಡ ಆರೋಪಿಸಿದ್ದಾರೆ. ಆಗ ಗಿಲ್ಲಿ ನಟ, ‘ನಾನು ಕೂಡ ಹಲ್ಲು ಸೆಟ್‌ ಮುರಿಯಬಹುದಿತ್ತು, ಆದರೆ ಅವರೇ ಹಲ್ಲು ಸೆಟ್‌ ಎಂದು ಹೇಳಿದ್ರು, ನಾನು ಹೇಗೆ ಹಲ್ಲು ಮುರಿಯಲಿ? ಎಂದು ಅಶ್ವಿನಿ ಗೌಡರ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.


ಇದನ್ನೂ ಓದಿ: ರಕ್ಷಿತಾ ಶೆಟ್ಟಿಯ ತಮಾಷೆಯ ಪ್ರಶ್ನೆ: ಬೆಂಗಳೂರಿಗರು ಫುಲ್‌ ಫಿದಾ!

ಬಳಿಕ ಕಾವ್ಯಾ ಶೈವಾ, ಸೀಸನ್‌ ಪೂರ್ತಿ ರೇಗಿಸಿದ್ದಕ್ಕೆ ಗಿಲ್ಲಿ ನಟನ ಹಲ್ಲು ಮುರಿದಿದ್ದಾರೆ. ‘ಬಿಗ್‌ಬಾಸ್‌ ಮನೆಯಲ್ಲಿ ರೇಗಿಸೋದಲ್ಲ. ಮನೆ ಹತ್ತಿರ ಹೋಗಿ ರೇಗಿಸ್ತೀನಿ, ಮೆಸೇಜ್ ಅಲ್ಲಿ ರೇಗಿಸ್ತೀನಿ’ ಎಂದು ಗಿಲ್ಲಿ ನಟ ಹೇಳಿದ್ದರು. ಗಿಲ್ಲಿ ನಟ ಮತ್ತು ಕಾವ್ಯಾ ಶೈವಾ ಮಾತು ಕೇಳಿ, ರಕ್ಷಿತಾ ಶೆಟ್ಟಿ ಆ ಕ್ಷಣ ತುಸು ಗಂಭೀರವಾಗಿ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಲರ್ಸ್‌ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಅವರ ಹಾವ ಭಾವ ಸೆರೆಯಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page