ಮಂಗಳೂರು/ಬೆಂಗಳೂರು : ಡಾಲಿ ಧನಂಜಯ್ ಹಾಗೂ ಅವರ ಬಹುಕಾಲದ ಗೆಳತಿ ವೈದ್ಯೆಯಾಗಿರುವ ಧನ್ಯತಾ ಇಬ್ಬರೂ ಮದುವೆ ಆಗುತ್ತಿದ್ದಾರೆ. ಈ ಗುಡ್‌ನ್ಯೂಸ್‌ನ ಧನಂಜಯ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಭಾವಿ ಪತ್ನಿ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದರು.

ನಟ ಡಾಲಿ ಧನಂಜಯ್ ಹಾಗೂ ಅವರ ಭಾವಿ ಪತ್ನಿ ಧನ್ಯತಾ ಅವರು ಮದುವೆಯ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ ಎಂಬುವುದನ್ನು ರಿವೀಲ್ ಮಾಡಿದ್ದಾರೆ.
ಡಾಲಿ ಬಗ್ಗೆ ಏನಂದ್ರು ಭಾವಿ ಪತ್ನಿ?
ಧನಂಜಯ್ ಅವರ ಬಗ್ಗೆ ಭಾವಿ ಪತ್ನಿ ಧನ್ಯತಾ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡಾಲಿ ತಮಗೆ ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಧನ್ಯತಾ ಹೇಳಿಕೊಂಡಿದ್ದಾರೆ. ಧನ್ಯತಾ ಡಾಲಿ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರಂತೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಕುಟುಂಬಸ್ಥರಿಗೆ ಹತ್ತಿರವಾಗಿದೆ. ಬಳಿಕ ಪೋಷಕರು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿ ಮದುವೆಗೆ ಒಪ್ಪಿದ್ದಾರೆ.
ಡಾಲಿಗೆ ಧನ್ಯತಾ ಇಷ್ಟ ಆಗಲು ಕಾರಣ ಏನು?
ಇನ್ನೂ ಧನ್ಯತಾ ಅವರು ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಕೂಡ ಧನಂಜಯ್ ಹೇಳಿಕೊಂಡಿದ್ದಾರೆ. ನನಗೆ ಧನ್ಯತಾ ಇಷ್ಟ ಆಗಿದ್ದು ಅವರು ಯಾವಾಗಲೂ ಸಮಾಜ ಸೇವೆಯಲ್ಲಿ ನಿರತರಾಗಿರುತ್ತಾರೆ. ಯಾವಾಗಲೂ ಅಲ್ಲಿ ಕ್ಯಾಂಪ್ ಮಾಡುತ್ತಿದ್ದೇನೆ ಅಂತಲೇ ಹೇಳುತ್ತಲೇ ಇರುತ್ತಾರೆ. ಅದು ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ. ನಾನು ಬ್ಯೂಸಿ ಇದ್ದಾಗ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಅವರದ್ದೂ ಬ್ಯೂಸಿ ಪ್ರೋಫೇಷನ್ ಅದು ನನಗೂ ಅರ್ಥ ಆಗುತ್ತೆ. ಹೊಂದಿಕೊಂಡು ಹೋಗಲು ಇಷ್ಟು ಸಾಕು ಎಂದಿದ್ದಾರೆ.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಮೋದಿ; ಅಷ್ಟಕ್ಕೂ ಪ್ರಧಾನಿ ಇದೆ ದಿನ ಆಯ್ಕೆ ಮಾಡಿಕೊಂಡಿದ್ದು ಏಕೆ ?
ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಕೂಡ ಸಾಮಾನ್ಯ ಕುಟುಂಬದಿಂದ ಬಂದವರು. ಕೆಲವೊಮ್ಮೆ ಜನ ಜೈಕಾರ ಹಾಕಿದಾಗ ಈ ವಿಚಾರವನ್ನು ನಾವು ಮರೆಯೋದು ಸಹಜ. ಆದರೆ ನಾವು ಸಾಮಾನ್ಯ ವರ್ಗದಿಂದ ಬಂದವರು ಎನ್ನುವುದನ್ನು ಆಗಾಗ ಧನ್ಯತಾ ಎಚ್ಚರಿಸುತ್ತಾರೆ. ಈ ಗುಣ ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ.
ಅಷ್ಟಕ್ಕೂ ಈ ಜೋಡಿ ಭೇಟಿ ಮಾಡಿದ್ದು ಎಲ್ಲಿ?
ಧನಂಜಯ್ ಹಾಗೂ ಧನ್ಯತಾ ಇಬ್ಬರದ್ದು ಬೇರೆ ಬೇರೆ ವೃತ್ತಿ. ಧನ್ಯತಾ ವೈದ್ಯೆಯಾದರೆ ಧನಂಜಯ್ ನಟ. ಆದರೂ ಕೂಡ ಇಬ್ಬರೂ ಮೆಚ್ಚಿಕೊಂಡಿದ್ದಾರೆ. ಆದರೆ ಇವರಿಬ್ಬರ ಪೋಷಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ಅವರಿಬ್ಬರ ಪರಿಚಯವಾಗಿದೆ. ಇಬ್ಬರ ಪೋಷಕರು ಪರಿಚಯವಾದ ನಂತರ ಈ ಜೋಡಿ ಸ್ನೇಹ ಮಾಡಿಕೊಂಡಿದೆ. ಮೊದಲು ಸ್ನೇಹಿತರಾಗಿದ್ದ ಇವರಿಬ್ಬರೂ ನಂತರ ವೃತ್ತಿಯನ್ನು ಗೌರವಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳದಲ್ಲಿ ಮದುವೆ
ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಧನಂಜಯ್ ಅವರ ಮದುವೆ ನೆರವೇರಲಿದೆ. ಚಿತ್ರರಂಗದವರು, ರಾಜಕೀಯದವರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಮೈಸೂರು ನಗರ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮನೆ ಏರುವ ನಿರ್ಧಾರ ಮಾಡಿದ್ದಾರೆ.