ಮಂಗಳೂರು/ಚೆನ್ನೈ: ಇದೇ ಮಾರ್ಚ್ 22ರಂದು ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ವಿಶ್ವದ ಶ್ರೀಮಂತ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಐಪಿಎಲ್ ಜ್ವರ ಶುರುವಾಗಿದೆ. ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಮುಖಾಮುಖಿಯಾಗಲಿವೆ.
ಆ ಬಳಿಕ ಟೂರ್ನಿಯ ಎರಡನೇ ದಿನದಂದು ಎರಡನೇ ಪಂದ್ಯದಲ್ಲಿ ಮತ್ತೆರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ತಮ್ಮ ತಮ್ಮ ಮೊದಲ ಪಂದ್ಯವನ್ನು ಆಡಲಿವೆ.
ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಫ್ರಾಂಚೈಸಿ ತನ್ನ ತವರು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತವರು ಪಂದ್ಯಗಳಿಗೆ ಪ್ರಯಾಣಿಸುವ ಅಭಿಮಾನಿಗಳಿಗೆ ಉಚಿತ ಬಸ್ ಟಿಕೆಟ್‌ಗಳನ್ನು ಒದಗಿಸಲು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಲಿಮಿಟೆಡ್ (MTC) ನೊಂದಿಗೆ ಕೈ ಜೋಡಿಸಿದೆ. ಇದರ ಅಡಿಯಲ್ಲಿ ಸಿಎಸ್‌ಕೆ ಅಭಿಮಾನಿಗಳು ಮೆಟ್ರೋ ಮತ್ತು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶ ಹೊಂದಿದ್ದಾರೆ.
ಇದನ್ನೂ ಓದಿ: 2028ರ ಆ ಒಂದು ಪಂದ್ಯಕ್ಕಾಗಿ ಟಿ20 ನಿವೃತ್ತಿಯನ್ನು ಹಿಂಪಡೆಯುತ್ತೇನೆ ಎಂದ ಕಿಂಗ್ ಕೊಹ್ಲಿ!
ಉಚಿತ ಬಸ್ ಪ್ರಯಾಣ
ಇದು ಮೊದಲ ಬಾರಿಗೆ ಅಲ್ಲ. ಸತತ ಎರಡನೇ ವರ್ಷ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಪಂದ್ಯಗಳಿಗೆ ಟಿಕೆಟ್ ಹೊಂದಿರುವ ಅಭಿಮಾನಿಗಳು ಪಂದ್ಯ ಪ್ರಾರಂಭವಾಗುವ ಮೊದಲು ಅಂದರೆ ಮೂರು ಗಂಟೆಗಳ ಮೊದಲು ಎಂಟಿಸಿ ಬಸ್‌ಗಳಲ್ಲಿ (NON-AC) ಉಚಿತವಾಗಿ ಪ್ರಯಾಣಿಸಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ 7 ಪಂದ್ಯಗಳನ್ನು ಆಡಲಿದೆ. ಈ 7 ಪಂದ್ಯಗಳಿಗೂ ಅಭಿಮಾನಿಗಳನ್ನು ಸೆಳೆಯಲು ವಿಶೇಷ ಯೋಜನೆಯನ್ನು ಹಾಕಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ, ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಮತ್ತು ಮೆಟ್ರೋಪಾಲಿಟನ್ ಸಾರಿಗೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಸಿಎಸ್‌ಕೆ ಅಭಿಮಾನಿಗಳು ಮೆಟ್ರೋ ಮತ್ತು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶ ಹೊಂದಿದ್ದಾರೆ.

ಇನ್ನು, ಅಭಿಮಾನಿಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸಲು ಇದು ಉತ್ತೇಜಿಸುವಂತಾಗಿದೆ. ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳನ್ನು ಅಭಿಮಾನಿಗಳು ಇದರಿಂದಾಗಿ ಸಂಪೂರ್ಣವಾಗಿ ಆನಂದಿಸಬಹುದು. 2024ರಲ್ಲಿ ಪ್ರತಿ ಪಂದ್ಯಕ್ಕೂ ನಗರದ ವಿವಿಧ ಭಾಗಗಳಿಂದ ಸುಮಾರು 8000 ಅಭಿಮಾನಿಗಳು ಬಸ್ ಸೇವೆ ಬಳಿಸಿದ್ದರು.
ಉಚಿತ ಪ್ರಯಾಣ ಭಾಗ್ಯ ಪಡೆಯುವುದು ಹೇಗೆ ?
ಇನ್ನು ಸಿಎಸ್‌ಕೆ ಅಭಿಮಾನಿಗಳು ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣ ಸೌಲಭ್ಯ ಪಡೆಯುವುದು ಹೇಗೆಂದರೆ.. ಈ ಸೌಲಭ್ಯವನ್ನು ಬಳಸಿಕೊಳ್ಳಲು ಇಚ್ಚಿಸುವ ಅಭಿಮಾನಿಗಳು ಆ ದಿನದಂದು ನಡೆಯುವ ಪಂದ್ಯದ ಟಿಕೆಟ್ ಅನ್ನು ಖರೀದಿಸಿರಬೇಕು. ಯಾರ ಕೈಯಲ್ಲಿ ಅಂದಿನ ಪಂದ್ಯದ ಟಿಕೆಟ್ ಇರುತ್ತದೆಯೋ, ಅವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಬಾರ್‌ಕೋಡ್ ಹೊಂದಿರುವ ಟಿಕೆಟ್‌ಗಳು ಮೆಟ್ರೋ ಟಿಕೆಟ್‌ಗಳಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಯಾವುದೇ ಅಭಿಮಾನಿಗಳು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.