Connect with us

FILM

ಅತ್ತ ಬಿಗ್‌ ಬಾಸ್ ಫಿನಾಲೆ ತಲುಪಿದ ರಜತ್…ಇತ್ತ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ!

Published

on

ಮಂಗಳೂರು/ಬೆಂಗಳೂರು : ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿ ರಜತ್ ಕಿಶನ್ ಅವರು ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಅತ್ತ ಅವರು ಅದೃಷ್ಟ ಪರೀಕ್ಷೆಗಿಳಿದ್ದಿದ್ದರೆ, ಇತ್ತ ಅವರ ಪತ್ನಿ ಅಕ್ಷಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅದಕ್ಕೆ ಕಾರಣ ಟ್ರೋಲ್ ಪೇಜ್‌ಗಳು.

ಆ ಒಂದು ಫೋಟೋದಿಂದ ಅಕ್ಷಿತಾ ಪೊಲೀಸರ ಮೊರೆ ಹೋಗುವಂತಾಗಿದೆ.  ದೊಡ್ಮನೆಯೊಳಗಿರುವ ರಜತ್ ಗೆಲುವಿನ ಸನಿಹದಲ್ಲಿದ್ದಾರೆ. ಆದ್ರೆ,  ಹೊರಗಡೆ ಅವರ ಹಳೆ ಫೋಟೋವೊಂದು ವೈರಲ್ ಆಗಿದೆ. ರಜತ್ ಹಾಗೂ ಅವರ ಮಾಜಿ ಗೆಳತಿಯ ಜೊತೆಗಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿಡಿಗೇಡಿಯೊಬ್ಬ ಈ ಫೋಟೋವನ್ನು ವೈರಲ್ ಮಾಡಿದ್ದಾನೆ. ಇದೀಗ ಆ ಫೋಟೋವನ್ನು ಟ್ರೋಲ್ ಪೇಜ್‌ಗಳು ಬಳಸಿಕೊಳ್ಳುತ್ತಿವೆ. ಆ ಫೋಟೋ ಡಿಲೀಟ್ ಮಾಡುವಂತೆ ರಜತ್ ಪತ್ನಿ ಅಕ್ಷಿತಾ ಮನವಿ ಮಾಡಿದ್ದಾರೆ. ಆದರೆ, ಟ್ರೋಲ್ ಪೇಜ್‌ಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಫೋಟೋ ಡಿಲೀಟ್ ಮಾಡಲು ಅಕ್ಷಿತಾ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ  6,500 ರೂಪಾಯಿ ಹಣವನ್ನು ಹಾಕಿದ್ದಾರೆ. ಬಳಿಕ ಬೇರೆ ಬೇರೆ ಟ್ರೋಲ್ ಪೇಜ್‌ಗಳಲ್ಲಿ ಫೋಟೋ ಅಪ್ಲೋಡ್ ಆಗಿದೆ. ಫೋಟೋ ಡಿಲೀಟ್ ಮಾಡಲು ಹೇಳಿದಾಗ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ : ಕಾಂತಾರ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

ಟ್ರೋಲ್ ಪೇಜ್‌ಗಳ ಕಾಟಕ್ಕೆ ಬೇಸತ್ತ ಅಕ್ಷಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತ ಕೇಸ್ ದಾಖಲಾಗುತ್ತಿದ್ದಂತೆ ಅತ್ತ ಟ್ರೋಲ್ ಪೇಜ್‌ಗಳು ಫೋಟೋ ಡಿಲೀಟ್ ಮಾಡಿವೆ. ಅಲ್ಲದೇ, ಖಾತೆಗಳನ್ನೂ ಡಿಲೀಟ್ ಮಾಡಿದ್ದಾರೆ. ಸದ್ಯ, ಟ್ರೋಲ್ ಮಾಡಿ ಹಣ ಸುಲಿಗೆ ಮಾಡುತ್ತಿರುವ ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

FILM

ವೈರಲ್ ಪೋಸ್ಟ್ ನೋಡಿ ಅಭಿಮಾನಿಗಳಿಗೆ ಆಘಾತ; ಎರಡೇ ತಿಂಗಳಲ್ಲಿ ಪತಿಗೆ ಶಾಕ್ ಕೊಟ್ರಾ ಕೀರ್ತಿ ಸುರೇಶ್ ?

Published

on

ಮಂಗಳೂರು : ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣ. ತಮ್ಮ ಬ್ಯೂಟಿ ಹಾಗೂ ನಟನೆಯ ಕೌಶಲ್ಯದಿಂದ ಪ್ರಖ್ಯಾತಿ ಪಡೆದಿರುವ ನಟಿ ಎಂದರೆ ಅದವೇ ಕೀರ್ತಿ ಸುರೇಶ್.  ತಮ್ಮ ಪ್ರೀತಿಯ ವಿಷಯವನ್ನು ಖಾಸಗಿಯಾಗಿಟ್ಟಿದ ಕೀರ್ತಿ ಸುರೇಶ್ ಸಂದರ್ಶನವೊಂದರಲ್ಲಿ ಮದುವೆಯ ನಂತರ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತನ್ನ ಗೆಳೆಯನನ್ನು ವಿವಾಹವಾದರು. ಅವರ ಡೆಸ್ಟಿನೇಷನ್ ವೆಡ್ಡಿಂಗ್ ಡಿಸೆಂಬರ್ 11-12 ರಂದು ಗೋವಾದಲ್ಲಿ ನಡೆಯಿತು. ಕೀರ್ತಿ ಸುರೇಶ್ ಮೊದಲು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು, ಮತ್ತು ನಂತರ ಅವರ ಪತಿ ಆಂಟನಿ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಈ ಸಂದರ್ಭದಲ್ಲಿ ಕೀರ್ತಿ ಸುರೇಶ್ ತಮ್ಮ ಪತಿಗೆ ಲಿಪ್ ಲಾಕ್ ನೀಡಿದ್ದ ಪೋಟೋ ಭಾರೀ ವೈರಲ್‌ ಆಗಿತ್ತು.

ಮದುವೆಯ ಸಂಭ್ರಮ ಮುಗಿದ ನಂತರ, ಕೀರ್ತಿ ಸುರೇಶ್ ತಮ್ಮ ಸಿನಿಮಾ ಚಿತ್ರೀಕರಣಕ್ಕೆ ಮರಳಿದ್ದಾರೆ. ಕೀರ್ತಿ ಈ ವರ್ಷ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಅವರು ಬಾಲಿವುಡ್‌ನ ಯುವ ನಾಯಕ ವರುಣ್ ಧವನ್ ಜೊತೆಗೆ ಬೇಬಿ ಜಾನ್ ಚಿತ್ರದಲ್ಲಿ ನಟಿಸಿದ್ದರು. ಆದರೆ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಇದರಿಂದ ಕೀರ್ತಿ ಸುರೇಶ್ ನಿರಾಶೆಗೊಂಡಿದ್ದರು.

ಇದನ್ನೂ ಓದಿ: ಹನುಮಂತನಿಗೆ SSLC ಅಲ್ಲಿ ಸಿಕ್ಕಿರೋ ಅಂಕ ಎಷ್ಟು ಗೊತ್ತಾ..?

ಸತತವಾಗಿ ಈ ಸಿನಿಮಾ ಪ್ರಮೋಷನ್‌ಗೆ ಹೋದಾಗ ಎಂತಹ ಮಾಡರ್ನ್‌ ಡ್ರೆಸ್‌ ಇದ್ದರೂ ಕೀರ್ತಿ ತಾಳಿ ಧರಿಸಿದ್ದರು. ಇದನ್ನು ನೋಡಿದ ನೆಟ್ಟಿಗರು ಅವರನ್ನು ಹೊಗಳಿದ್ದರು. ಆದರೆ, ಈಗ ಅವರು ಕುತ್ತಿಗೆಯಲ್ಲಿ ತಾಳಿ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಹೌದು ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಪತಿ ಜೊತೆಗಿನ ಫೋಟೋಶೂಟ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ, ಕೀರ್ತಿ ಕುತ್ತಿಗೆಯಲ್ಲಿ ಮಂಗಳಸೂತ್ರವಿಲ್ಲದೇ ಕಾಣಿಸಿಕೊಂಡರು. ಇದರಿಂದಾಗಿ ನೆಟ್ಟಿಗರು ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ತಾಳಿಗೆ ಎಕ್ಸಪೈರ್ ಡೇಟ್ ಆಗಿದೆ.  ಕೀರ್ತಿ ಸುರೇಶ್ ಅವರ ಕುತ್ತಿಗೆಯಲ್ಲಿ ಕೇವಲ ಎರಡು ತಿಂಗಳಲ್ಲೇ ತಾಳಿ ಮಾಯವಾಗಿದೆಯೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Continue Reading

FILM

ಅಂದು ಟ್ರಕ್ ಕ್ಲೀನರ್, ಇಂದು ಮೋಸ್ಟ್ ವಾಂಟೆಡ್ ಹೀರೋ : ಕನ್ನಡದ ಈ ನಾಯಕನ ಬಗ್ಗೆ ನಿಮಗಷ್ಟು ಗೊತ್ತು ?

Published

on

ಒಂದು ಕಾಲದಲ್ಲಿ ಟ್ರಕ್ ಕ್ಲೀನರ್ ಆಗಿದ್ದ ಶರಣ್ ಟ್ರಕ್ ಖರೀದಿ ಮಾಡಿಕೊಳ್ಳಬೇಕು ಎಂದುಕೊಂಡಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಉತ್ತಮ ಬೇಡಿಕೆ ಉಳಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟನಾಗಿ ಶರಣ್ ಗುರುತಿಸಿಕೊಳ್ಳುತ್ತಿದ್ದಾರೆ. ಇಂದು (ಫೆ.6) ತಮ್ಮ 53ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಶರಣ್ ನಟನೆಯ ‘ಛೂ ಮಂತರ್’ ಎಂಬ ಹಾರರ್ ಶೈಲಿಯ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಯಶಸ್ಸು ಕಂಡಿದೆ.

ಶರಣ್ ಸಹೋದರಿ ಶ್ರುತಿ ಕನ್ನಡದ ಹಿರಿಯ ನಟಿ ಆಗಿದ್ದಾರೆ. ಅವರ ಕುಟುಂಬ ಬಹು ಹಿಂದಿನಿಂದಲೂ ಕಲಾ ಸೇವೆ ಮಾಡುತ್ತಾ ಬರುತ್ತಿದ್ದು, ಮೊದಲಿಗೆ ಅವರ ಕುಟುಂಬ ‘ಗುಬ್ಬಿ ಕಂಪನಿ’ಯಲ್ಲಿ ಕೆಲಸ ಮಾಡುತ್ತಿತ್ತು. ‘ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಎಲ್ಲವೂ ಆ ಭಗವಂತನ ಲೀಲೆ’ ಎಂದು ಶರಣ್ ಒಂದೆಡೆ ಬರೆದುಕೊಂಡಿದ್ದಾರೆ.

 

ಇದನ್ನೂ ಓದಿ : ಸ್ವರ್ಗದಿಂದ ಧರೆಗಿಳಿದಂತಿದೆ ಈ ಶ್ವೇತ ಸಾರಂಗ; ಅತ್ಯಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ

 

ಕುಟುಂಬದ ಒತ್ತಾಯಕ್ಕೆ ಶರಣ್ ನಟನೆಗೆ ಕಾಲಿಟ್ಟಿದ್ದು, ಮೊದಲಿಗೆ ಧಾರವಾಹಿಗಳಲ್ಲಿ ನಟಿಸಿದ್ದರು. ಬಳಿಕಕಾಮಿಡಿಯನ್ ಆಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾ ಬಂದ ಶರಣ್ ಬಳಿಕ ಹೀರೋ ಆಗುವ ಕನಸನ್ನೂ ನನಸಾಗಿಸಿಕೊಂಡಿದ್ದಾರೆ. ಬಹುಬೇಡಿಕೆಯ ನಟನಾಗಿ ಗುರುತಿಕೊಳ್ಳುತ್ತಿರುವ ಶರಣ್ ತಮ್ಮದೇ ರೀತಿಯ ಸಿನಿಮಾಗಳನ್ನು ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಹಾಡನ್ನು ಹಾಡುತ್ತಾ ಎಲ್ಲರ ಗಮನ ಸೆಳೆದ ನಟ, 100 ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ ಹಾಗೂ 10 ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.

Continue Reading

FILM

ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ ಗೊತ್ತಾ ? ಈ ಬಗ್ಗೆ ಏನಂದ್ರು ಧನಂಜಯ್ ಅವರ ಭಾವಿ ಪತ್ನಿ

Published

on

ಮಂಗಳೂರು/ಬೆಂಗಳೂರು : ಡಾಲಿ ಧನಂಜಯ್ ಹಾಗೂ ಅವರ ಬಹುಕಾಲದ ಗೆಳತಿ ವೈದ್ಯೆಯಾಗಿರುವ ಧನ್ಯತಾ ಇಬ್ಬರೂ ಮದುವೆ ಆಗುತ್ತಿದ್ದಾರೆ. ಈ ಗುಡ್‌ನ್ಯೂಸ್‌ನ ಧನಂಜಯ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಭಾವಿ ಪತ್ನಿ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದರು.

ನಟ ಡಾಲಿ ಧನಂಜಯ್ ಹಾಗೂ ಅವರ ಭಾವಿ ಪತ್ನಿ ಧನ್ಯತಾ ಅವರು ಮದುವೆಯ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಧನ್ಯತಾಗೆ ಡಾಲಿ ಇಷ್ಟ ಆಗಿದ್ದು ಯಾಕೆ ಎಂಬುವುದನ್ನು ರಿವೀಲ್ ಮಾಡಿದ್ದಾರೆ.

ಡಾಲಿ ಬಗ್ಗೆ ಏನಂದ್ರು ಭಾವಿ ಪತ್ನಿ?

ಧನಂಜಯ್ ಅವರ ಬಗ್ಗೆ ಭಾವಿ ಪತ್ನಿ ಧನ್ಯತಾ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡಾಲಿ ತಮಗೆ ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಧನ್ಯತಾ ಹೇಳಿಕೊಂಡಿದ್ದಾರೆ. ಧನ್ಯತಾ ಡಾಲಿ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರಂತೆ. ಆರಂಭದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಕುಟುಂಬಸ್ಥರಿಗೆ ಹತ್ತಿರವಾಗಿದೆ. ಬಳಿಕ ಪೋಷಕರು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿ ಮದುವೆಗೆ ಒಪ್ಪಿದ್ದಾರೆ.

ಡಾಲಿಗೆ ಧನ್ಯತಾ ಇಷ್ಟ ಆಗಲು ಕಾರಣ ಏನು?

ಇನ್ನೂ ಧನ್ಯತಾ ಅವರು ಇಷ್ಟ ಆಗಿದ್ದು ಯಾಕೆ ಎನ್ನುವ ಬಗ್ಗೆ ಕೂಡ ಧನಂಜಯ್ ಹೇಳಿಕೊಂಡಿದ್ದಾರೆ. ನನಗೆ ಧನ್ಯತಾ ಇಷ್ಟ ಆಗಿದ್ದು ಅವರು ಯಾವಾಗಲೂ ಸಮಾಜ ಸೇವೆಯಲ್ಲಿ ನಿರತರಾಗಿರುತ್ತಾರೆ. ಯಾವಾಗಲೂ ಅಲ್ಲಿ ಕ್ಯಾಂಪ್ ಮಾಡುತ್ತಿದ್ದೇನೆ ಅಂತಲೇ ಹೇಳುತ್ತಲೇ ಇರುತ್ತಾರೆ. ಅದು ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ. ನಾನು ಬ್ಯೂಸಿ ಇದ್ದಾಗ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಅವರದ್ದೂ ಬ್ಯೂಸಿ ಪ್ರೋಫೇಷನ್ ಅದು ನನಗೂ ಅರ್ಥ ಆಗುತ್ತೆ. ಹೊಂದಿಕೊಂಡು ಹೋಗಲು ಇಷ್ಟು ಸಾಕು ಎಂದಿದ್ದಾರೆ.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಮೋದಿ; ಅಷ್ಟಕ್ಕೂ ಪ್ರಧಾನಿ ಇದೆ ದಿನ ಆಯ್ಕೆ ಮಾಡಿಕೊಂಡಿದ್ದು ಏಕೆ ?

ಧನಂಜಯ್ ಹಾಗೂ ಧನ್ಯತಾ ಇಬ್ಬರೂ ಕೂಡ ಸಾಮಾನ್ಯ ಕುಟುಂಬದಿಂದ ಬಂದವರು. ಕೆಲವೊಮ್ಮೆ ಜನ ಜೈಕಾರ ಹಾಕಿದಾಗ ಈ ವಿಚಾರವನ್ನು ನಾವು ಮರೆಯೋದು ಸಹಜ. ಆದರೆ ನಾವು ಸಾಮಾನ್ಯ ವರ್ಗದಿಂದ ಬಂದವರು ಎನ್ನುವುದನ್ನು ಆಗಾಗ ಧನ್ಯತಾ ಎಚ್ಚರಿಸುತ್ತಾರೆ. ಈ ಗುಣ ನನಗೆ ಇಷ್ಟ ಆಯ್ತು ಎಂದಿದ್ದಾರೆ ಡಾಲಿ.

ಅಷ್ಟಕ್ಕೂ ಈ ಜೋಡಿ ಭೇಟಿ ಮಾಡಿದ್ದು ಎಲ್ಲಿ?

ಧನಂಜಯ್ ಹಾಗೂ ಧನ್ಯತಾ ಇಬ್ಬರದ್ದು ಬೇರೆ ಬೇರೆ ವೃತ್ತಿ. ಧನ್ಯತಾ ವೈದ್ಯೆಯಾದರೆ ಧನಂಜಯ್ ನಟ. ಆದರೂ ಕೂಡ ಇಬ್ಬರೂ ಮೆಚ್ಚಿಕೊಂಡಿದ್ದಾರೆ. ಆದರೆ ಇವರಿಬ್ಬರ ಪೋಷಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ಅವರಿಬ್ಬರ ಪರಿಚಯವಾಗಿದೆ. ಇಬ್ಬರ ಪೋಷಕರು ಪರಿಚಯವಾದ ನಂತರ ಈ ಜೋಡಿ ಸ್ನೇಹ ಮಾಡಿಕೊಂಡಿದೆ. ಮೊದಲು ಸ್ನೇಹಿತರಾಗಿದ್ದ ಇವರಿಬ್ಬರೂ ನಂತರ ವೃತ್ತಿಯನ್ನು ಗೌರವಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳದಲ್ಲಿ ಮದುವೆ

ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಧನಂಜಯ್ ಅವರ ಮದುವೆ ನೆರವೇರಲಿದೆ. ಚಿತ್ರರಂಗದವರು, ರಾಜಕೀಯದವರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಮೈಸೂರು ನಗರ ಧನಂಜಯ್ ಮತ್ತು ಧನ್ಯತಾ ಇಬ್ಬರಿಗೂ ಭಾವನಾತ್ಮಕವಾಗಿ ಕನೆಕ್ಟ್ ಆದ ಸ್ಥಳ. ಹೀಗಾಗಿ ಅಲ್ಲಿಯೇ ಹಸೆಮನೆ ಏರುವ ನಿರ್ಧಾರ ಮಾಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page