ಮಂಗಳೂರು: ಅಕಾಡೆಮಿಯ ಅಧ್ಯಕ್ಷನಾದ ನಾನು 2020 ರ ಎಪ್ರಿಲ್ ಹಾಗೂ ಮೇ 15 ರ ತನಕ ಮಾಸಿಕ ಗೌರವ ಧನ ಕೇವಲ 28000 ರೂ ಪಡೆದುಕೊಂಡಿರುವುದಕ್ಕೆ
ನನ್ನಿಂದ ಭ್ರಷ್ಟಾಚಾರ ನಡೆದಿದೆ ಎಂದು ಮಾಧ್ಯಮದ ಮೂಲಕ ಕುಮಟಾ ತಾಲೂಕಿನ ಅರವಿಂದ ಶ್ಯಾನಭಾಗ ಎಂಬವರು ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾಗಿದೆ.

ಅವರು ಆರೋಪ ಮಾಡಿದ ಅದೇ ತಿಂಗಳಲ್ಲಿ 140 ಮನೆಗೆ ಆಹಾರ ಸಾಮಾಗ್ರಿ ಕಿಟ್ ಅಕಾಡೆಮಿಯ ವತಿಯಿಂದ ವಿತರಿಸಲಾಗಿದ್ದು, 277 ಕಲಾವಿದರಿಗೆ ಸಹಾಯಧನವನ್ನು ನೇರವಾಗಿ ಖಾತೆಗೆ ಇಲಾಖೆಯ ಮುಖಾಂತರ ಜಮಾ ಮಾಡಲಾಗಿದೆ.
ಈ ಎಲ್ಲಾ ಕೆಲಸ ಕಾರ್ಯಗಳಿಗೆ ಲಾಕ್ ಡೌನ್ ಇದ್ದರೂ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಹಾಜರಾತಿ ಸೇರಿದಂತೆ ಎಲ್ಲಾ ದಾಖಲೆಗಳು ನನ್ನಲಿದೆ.
ನಾನು ಮಾತ್ರವಲ್ಲದೇ ಹಲವಾರು ಅಕಾಡೆಮಿಗಳು, ನಿಗಮ ಮಂಡಳಿಗಳ ಅಧ್ಯಕ್ಷರುಗಳು,
ಜನ ಪ್ರತಿನಿಧಿಗಳು ಎಲ್ಲರೂ ಸಹಜವಾಗಿಯೇ ಈ ಮಾಸಿಕ ಗೌರವ ಧನ, ಪ್ರಯಾಣ ಭತ್ಯೆಯನ್ನು ಪಡೆದಿದ್ದು, ಪೂರ್ವಾಗ್ರಹ ಪೀಡಿತರಾಗಿ ನಮ್ಮನ್ನು ಮಾತ್ರ ಆರೋಪಿಯಾಗಿಸಿ,
ಅರವಿಂದ ಶ್ಯಾನಭಾಗ ರವರವು ಭ್ರಷ್ಟಾಚಾರ ನಡೆಸಿದ್ದೇನೆ ಎಂಬ ಸುಳ್ಳಾರೋಪ ಮಾಡಿರುತ್ತಾರೆ.
ಮಾಹಿತಿ ಹಕ್ಕು ಕಾರ್ಯಕರ್ತರ ಬಗ್ಗೆ ನನಗೆ ಆಪಾರವಾದ ಗೌರವವಿದ್ದು ಪ್ರಾಮಾಣಿಕವಾದ ಮಾಹಿತಿ ಹಕ್ಕು ಕಾರ್ಯಕರ್ತರಿಂದ ಹಲವಾರು ಭ್ರಷ್ಟಾಚಾರಿಗಳಿಗೆ ಕಡಿವಾಣ ಬಿದ್ದಿದೆ.
ಆದರೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಾತಿ ಮಾಡುವ ಸಲುವಾಗಿ ಮತ್ತು ಇದನ್ನೇ ದಂಧೆಯಾಗಿಸಿಕೊಂಡಿರುವ ನಕಲಿ ಮಾಹಿತಿ ಹಕ್ಕು ಕಾರ್ಯಕರ್ತರ ಬಗ್ಗೆ ಜನ ಜಾಗೃತರಾಗಿರಬೇಕು.
ಇದೀಗ ನಮ್ಮ ಬಗ್ಗೆ ಮಾಹಿತಿ ಹಕ್ಕನ್ನು ಪಡೆದು ನನ್ನ ವಿರುದ್ದ ಆರೋಪ ಮಾಡಿರುವ ಅರವಿಂದ ಶ್ಯಾನಭಾಗರವರು ತಾನು ಬಡತನ ರೇಖೆಗಿಂತ ಕೆಳಗಿನವನಾಗಿದ್ದು ಎಂದು ಸುಳ್ಳು ದಾಖಲೆ ಘೋಷಿಸಕೊಂಡು ಬಿಪಿಎಲ್ ಕಾರ್ಡನ್ನು ಸರಕಾರದಿಂದ 01-02-2013 ಕ್ಕೆ ಪಡೆದುಕೊಂಡಿರುತ್ತಾರೆ.
ಇದೇ ಬಿಪಿಎಲ್ ಕಾರ್ಡನ್ನು ತೋರಿಸಿ ಬಡವರಿಗೆ ನೀಡಲಾಗುವ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಯಾವುದೇ ಹಣವನ್ನು ಸರಕಾರಕ್ಕೆ ಪಾವತಿ ಮಾಡದೆ ವಿವಿಧ ಇಲಾಖೆಗಳಲ್ಲಿ ನೂರಾರು ಪುಟಗಳನ್ನೊಳಗೊಂಡ ಮಾಹಿತಿಯನ್ನು ಉಚಿತವಾಗಿ ಪಡೆದುಕೊಂಡು ಎಲ್ಲಾ ಇಲಾಖೆಗಳಿಗೂ ವಂಚನೆಯನ್ನು ಎಸಗಿದ್ದಾರೆ.
ಇವರು 2017 ರಿಂದ 2019 ರ ವರೆಗೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು
ಈ ಸಂದರ್ಭದಲ್ಲಿ ಒಟ್ಟು ರೂ. 3,70,100/-(ರೂಪಾಯಿ ಮೂರು ಲಕ್ಷದ ಎಪ್ಪತ್ತು ಸಾವಿರದ ನೂರು ಮಾತ್ರ) ಮೊತ್ತವನ್ನು ಚೆಕ್/ನೇರವಾಗಿ ಖಾತೆಗೆ ಪಡೆದುಕೊಂಡಿರುತ್ತಾರೆ.
ನಗರದ ಕೊಟ್ಟಾರದಲ್ಲಿರುವ ಚೈತನ್ಯ ವಿದ್ಯಾಸಂಸ್ಥೆ ಎಂಬಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾಗ
ಎಪ್ರಿಲ್ 2020 ರಿಂದ ಡಿಸೆಂಬರ್ 2020 ವರೆಗೆ ಯಾವುದೇ ಸಿಬ್ಬಂದಿ ಕರ್ತವ್ಯ ನಿರ್ವಹಿಸದೇ ಇದ್ದಾಗಲೂ ಹಾಜರಾತಿಯಿಲ್ಲದೆಯೇ ಆನ್ ಲೈನ್ ಮುಖಾಂತರ ಕೂಡ ತರಗತಿಯನ್ನು ನಡೆಸದೆ
ರೂ. 1,17,950/-(ರೂಪಾಯಿ ಒಂದು ಲಕ್ಷದ ಹದಿನೇಳು ಸಾವಿರದ ಒಂಬೈನೂರ ಐವತ್ತು ಮಾತ್ರ) ಡಿಡಿ ಸಂಖ್ಯೆ 89107 ಮುಖಾಂತರ ಮಾನ್ಯ ಉಪನಿರ್ದೆಶಕರ ಕಛೇರಿಯಲ್ಲಿ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಪಡೆದುಕೊಂಡಿರುತ್ತಾರೆ.
ಇವಿಷ್ಟೆ ಅಲ್ಲದೆ ಇದೇ ಸಂಸ್ಥೆಯಿಂದ ಉಚಿತ ವಾಸ್ತವ್ಯ, ಊಟೋಪಚಾರ ಮತ್ತು ಪ್ರಯಾಣ ಭತ್ಯೆಯನ್ನು ಹೆಚ್ಚುವರಿಯಾಗಿ ಪಡೆದುಕೊಂಡಿರತ್ತಾರೆ.
ಇದೇ ರೀತಿ ಶಾರದಾ ವಿದ್ಯಾಸಂಸ್ಥೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಎಲ್ಲಾ ದಾಖಲೆಗಳನ್ನು ಮಂಗಳೂರು
ವಿಶ್ವ ವಿದ್ಯಾನಿಲಯದ ಕುಲಾಧಿಪತಿಯವರಿಂದ ಹಾಗೂ ಚೈತ್ಯನ್ಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಿಂದ ಲಿಖಿತವಾಗಿ ಮಾಹಿತಿ ಹಕ್ಕಿನ ಮುಖಾಂತರ ಪಡೆದುಕೊಂಡಿದ್ದು,
ಈ ಮಾಹಿತಿಯನ್ನು ಕುಮಟಾ ತಾಲೂಕಿನ ತಹಶೀಲ್ದಾರರವರಿಗೆ ಈಗಾಗಲೇ ನಾನು ನೀಡಿದ್ದು, ಅದರಂತೆ ಇವರ ಬಿಪಿಎಲ್ ಕಾರ್ಡನ್ನು ರದ್ದುಗೊಳಿಸುವಂತೆ ತಹಶೀಲ್ದಾರರು ಸಂಬಂಧಪಟ್ಟ ಆಹಾರ ಇಲಾಖೆಯ ಅಧೀಕ್ಷಕರಿಗೆ ಪತ್ರ ಬರೆದು ಆದೇಶಿಸಿರುತ್ತಾರೆ ಎಂಬ ಬಗ್ಗೆ ತಹಶೀಲ್ದಾರರು ನನಗೆ ಮೌಖಿಕವಾಗಿ ತಿಳಿಸಿರುತ್ತಾರೆ.
ಸರಕಾರದ ವಿವಿಧ ಇಲಾಖೆಯ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡುವ ವ್ಯಕ್ತಿಗಳು ಪ್ರಾಮಾಣಿಕರಾಗಿರಬೇಕಾಗಿರುತ್ತದೆ.
ಆದರೆ ಸ್ವತ: ಸರಕಾರವನ್ನು ವಂಚಿಸಿ ವಿವಿಧ ಇಲಾಖೆಗಳನ್ನು ಮಾಹಿತಿ ಹಕ್ಕಿನ ಹೆಸರಿನಲ್ಲಿ ಬ್ಲಾಕ್ ಮೆಲ್ ಮಾಡುವ ಅರವಿಂದ ಶ್ಯಾನಭಾಗ ಇವರ ವಿರುದ್ದ ಕ್ರಿಮಿನಲ್ ಹಾಗೂ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗುವುದು.
ಸಾರ್ವಜನಿಕರು ಹಾಗೂ ಇಲಾಖಾ ಮುಖ್ಯಸ್ಥರು ಇಂತಹ ವ್ಯಕ್ತಿಗಳನ್ನು ಗುರುತಿಸಿ ಇಂತವರನ್ನು ದೂರವಿಡುವ ಮೂಲಕ ಸಮಾಜದಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಸೇವೆ ಸಲ್ಲಿಸುವ ಮಾಹಿತಿ ಹಕ್ಕು ಕಾರ್ಯರ್ತರಿಗೆ ಈ ಮೂಲಕ ಗೌರವ ಸಲ್ಲುವಂತೆ ಮಾಡಬೇಕು.