Connect with us

DAKSHINA KANNADA

ಬೆಳ್ತಂಗಡಿಯಲ್ಲಿ ರಸ್ತೆ ಗುಂಡಿ ಮುಚ್ಚಿಸಿ ಜೀವ ಉಳಿಸಿದ ಲೋಕೋಪಯೋಗಿ ಇಲಾಖೆ

Published

on

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಜಂಕ್ಷನ್‌ನಿಂದ ಗುರುವಾಯನಕೆರೆ ತನಕ ಗುಂಡಿಬಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ತೇಪೆ ಹಚ್ಚಿ ಮುಚ್ಚಿದೆ.
ಕಳೆದ ಬುಧವಾರ ‘ಗುಂಡಿ ಮುಚ್ಚಿ ಜನರ ಜೀವ ಉಳಿಸಿ’ ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು.


ಈ ಬಗ್ಗೆ ಪ್ರತಿಕ್ರಿಯಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಹೆಚ್ ಪೈ “ಜನರ ಜೀವ ಉಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ಫಲಭರಿತವಾಗಿದೆ. ತಾಲೂಕಿನ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಪರಿಸ್ಥಿತಿ ಗುಂಡಿಯಲ್ಲಿ ರಸ್ತೆಯೋ,

ರಸ್ತೆಯಲ್ಲಿ ಗುಂಡಿಯೋ ಎಂಬಾಂತಾಗಿತ್ತು. ಇದರಿಂದಾಗಿ ಹಲವಾರು ಅಪಘಾತಗಳು ಸಂಭವಿಸಿ ಕೈಕಾಲು ಮುರಿದು ಜೀವಹಾನಿಯಾಗಿತ್ತು. ಇದೀಗ ನಮ್ಮ ಹೋರಾಟಕ್ಕೆ ಮಣಿದು ಆಡಳಿತ ವ್ಯವಸ್ಥೆ ರಸ್ತೆಯ ಗುಂಡಿ ಮುಚ್ಚುವ ತುರ್ತು ಕಾರ್ಯ ಮಾಡಿದ್ದಾರೆ ಎಂದರು.

DAKSHINA KANNADA

ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಆರೋಪ; ಆರೋಪಿಯ ಬಂಧನ

Published

on

ಮಂಗಳೂರು : ವಿದ್ಯಾರ್ಥಿಗಳಿಗೆ ಮಾ*ದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಮಂಗಳೂರಿನ ಕದ್ರಿ ಠಾಣೆಯ ಪೊಲೀಸರು ಶನಿವಾರ(ಜ.17) ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಮುತೊಲಪುರಂ ನಿವಾಸಿ 20 ವರ್ಷದ ಜೂಡ್ ಮಾಥ್ಯೂ ಬಂಧಿತ ಆರೋಪಿ. ಆತನಿಂದ 5.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, ಕೃ*ತ್ಯಕ್ಕೆ ಬಳಸಿದ  ಬೈಕ್ ಸಮೇತ ಒಟ್ಟು 70 ಸಾವಿರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ; ಗಮನ ಸೆಳೆದ ಕಿಚ್ಚ ಸುದೀಪ್ ಪೋಸ್ಟ್ !

ಮಂಗಳೂರಿನ ಪದವು ಗ್ರಾಮದ ಕೈಲಾಸ ಕಾಲನಿ ಸಮೀಪ ಯುವಕನೋರ್ವ ಮಾ*ದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಕದ್ರಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

 

Continue Reading

DAKSHINA KANNADA

ಮೂಡುಬಿದಿರೆ : ಸ್ವಂತ ಉದ್ಯಮದ ಸಿದ್ಧತೆಯಲ್ಲಿದ್ದ ಯುವಕ ಆ*ತ್ಮಹ*ತ್ಯೆ

Published

on

ಮೂಡುಬಿದಿರೆ : ಸ್ವಂತ ಉದ್ಯಮ ಸ್ಥಾಪಿಸುವ ಕನಸು ಹೊತ್ತು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವ ಆ*ತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೂಡುಬಿದಿರೆಯ ರಿಂಗ್‌ರೋಡ್ ಬಳಿ ನಡೆದಿದೆ.  ಮೂಡುಬಿದಿರೆ ರಿಂಗ್ ರೋಡ್‌ನ ನಾಗರಕಟ್ಟೆ-ಒಂಟಿಕಟ್ಟೆ ಕ್ರಾಸ್ ಬಳಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡುತ್ತಿರುವ ಶ್ರೀನಿವಾಸ್ ಎಂಬುವವರ ಪುತ್ರ ದೀಕ್ಷಿತ್ (35) ಮೃ*ತಪಟ್ಟ ಯುವಕ.

ಹಲವು ವರ್ಷಗಳ ಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದ ದೀಕ್ಷಿತ್, ಒಂದೂವರೆ ವರ್ಷದ ಹಿಂದೆ ತವರಿಗೆ ಮರಳಿದ್ದರು. ಮೂಡುಬಿದಿರೆಯ ರಿಂಗ್‌ರೋಡ್ ಬಳಿ ಹೋಟೆಲ್ ಉದ್ಯಮ ಪ್ರಾರಂಭಿಸಬೇಕೆಂಬ ಹಂಬಲ ಹೊಂದಿದ್ದ ಅವರು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಶನಿವಾರ(ಜ.17) ಮಧ್ಯಾಹ್ನ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮಲಗಿದ್ದ ಸಮಯದಲ್ಲಿ, ಮನೆಯ ಕೋಣೆಯ ಕಿಟಕಿಗೆ ನೇ*ಣು ಬಿಗಿದುಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ರಸ್ತೆ ವಿಭಜಕಕ್ಕೆ ಎಸ್ ಯುವಿ ಡಿ*ಕ್ಕಿ; 5 ಮಂದಿ ಸಾ*ವು

ದೀಕ್ಷಿತ್ ಅವರ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಉತ್ತಮ ಭವಿಷ್ಯದ ಕನಸು ಕಂಡಿದ್ದ ಯುವಕನ ಆ*ತ್ಮಹ*ತ್ಯೆಯು ಕುಟುಂಬಸ್ಥರಲ್ಲಿ ಮತ್ತು ಸ್ನೇಹಿತರಲ್ಲಿ ಭಾರೀ ಶೋಕವನ್ನುಂಟು ಮಾಡಿದೆ.

 

 

Continue Reading

DAKSHINA KANNADA

ಡಾ. ಬಿ. ವಿ. ಮಂಜುನಾಥ್ ಅವರಿಗೆ FRCP (ಗ್ಲಾಸ್ಗೋ–ಯುಕೆ) ಪ್ರಶಸ್ತಿ

Published

on

ಮಂಗಳೂರು : ಯುನೈಟೆಡ್ ಕಿಂಗ್ಡಮ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆಯು ಹೃದಯರೋಗ ಕ್ಷೇತ್ರದಲ್ಲಿ ವಿಶಿಷ್ಟ ವೈದ್ಯಕೀಯ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ, ಕಾರ್ಡಿಯಾಲಜಿ ವಿಭಾಗದ ಪ್ರಾಧ್ಯಾಪಕ,  ಮುಖ್ಯಸ್ಥರ ಹಾಗೂ ಮುಖ್ಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಬಿ. ವಿ. ಮಂಜುನಾಥ್ ಅವರಿಗೆ ಅತ್ಯಂತ ಗೌರವಾನ್ವಿತ “ಆನರರಿ FRCP” (ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್) ಪ್ರಶಸ್ತಿಯನ್ನು ಪ್ರದಾನಿಸಿದೆ.

ಡಾ. ಮಂಜುನಾಥ್ ಅವರಿಗೆ 36 ವರ್ಷಗಳಿಗಿಂತ ಹೆಚ್ಚು ಹೃದಯರೋಗ ಚಿಕಿತ್ಸಾ ಅನುಭವವಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಶೋಧನಾ ಲೇಖನಗಳು ಮತ್ತು ಪ್ರಸ್ತುತಿಗಳು, ಪಿಎಚ್‌ಡಿ ಮಾರ್ಗದರ್ಶಕರಾಗಿ ಹಾಗೂ ವಿಶ್ವವಿದ್ಯಾಲಯದ ಪರೀಕ್ಷಕರಾಗಿ ಸೇವೆ, ಮತ್ತು ಅನೇಕ ಪದವಿ, ಸ್ನಾತಕೋತ್ತರ ಹಾಗೂ ಡಿಎಂ ಕಾರ್ಡಿಯಾಲಜಿ ಫೆಲೋಶಿಪ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶ್ರೇಷ್ಠ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ, ಅವರು ಹೃದಯ ಕ್ಯಾಥ್ ಲ್ಯಾಬ್‌ನಲ್ಲಿ ಅನೇಕ ಸಂಕೀರ್ಣ ಇಂಟರ್ವೆನ್ಶನಲ್ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಆನರರಿ FRCP ಪದವಿ ಪರೀಕ್ಷಾಧಾರಿತ ಪದವಿಯಿಂದ ಭಿನ್ನವಾಗಿದ್ದು, ಇದು ಅನುಭವಿ ವೈದ್ಯರಿಗೆ ನೀಡಲಾಗುವ ಅತ್ಯಂತ ಅಪರೂಪದ ಹಾಗೂ ಗೌರವಾನ್ವಿತ ಅಂತಾರಾಷ್ಟ್ರೀಯ ಫೆಲೋಶಿಪ್ ಆಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯಕೀಯ, ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದವರಿಗೆ ಈ ಗೌರವ ಲಭಿಸುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ಮಟ್ಟದ ಸಹೋದ್ಯೋಗಿ ಮಾನ್ಯತೆಯನ್ನು ನೀಡುತ್ತದೆ.

ಇದನ್ನೂ ಓದಿ : ಅಂತ್ಯ ಅಲ್ಲ….ಇದು ಹೊಸ ಆರಂಭ..ಧ್ರುವಂತ್ ಗೆಟಪ್ ಚೇಂಜ್

ಈ ಗೌರವವನ್ನು ವಿಶ್ವದಾದ್ಯಂತ ಆಯ್ಕೆಯಾದ ಕೆಲವೇ ವೈದ್ಯರಿಗೆ (ವಾರ್ಷಿಕವಾಗಿ ಗರಿಷ್ಠ 15 ಜನರಿಗೆ ಮಾತ್ರ) ರಾಯಲ್ ಕಾಲೇಜ್ ಸದಸ್ಯರ ಮತದಾನದ ಮೂಲಕ ಪ್ರದಾನಿಸಲಾಗುತ್ತದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page