Connect with us

BANTWAL

ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!

Published

on

ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.

ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.


ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BANTWAL

ಬಂಟ್ವಾಳ: ಮೂಡೂರು- ಪಡೂರು ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟ

Published

on

ಬಂಟ್ವಾಳ: 14 ನೇ ವರ್ಷದ ಹೊನಲು ಬೆಳಕಿನ “ಮೂಡೂರು- ಪಡೂರು” ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ.


ಕೆನೆಹಲಗೆ 10 ಜೊತೆ , ಅಡ್ಡಹಲಗೆ 06 ಜೊತೆ , ಹಗ್ಗ ಹಿರಿಯ 20 ಜೊತೆ, ನೇಗಿಲು ಹಿರಿಯ 24 ಜೊತೆ, ಹಗ್ಗ ಕಿರಿಯ 22 ಜೊತೆ, ನೇಗಿಲು ಕಿರಿಯ 86 ಜೊತೆ ಹೀಗೆ ಒಟ್ಟು 168 ಜೊತೆ ಕೋಣಗಳು ಭಾಗವಹಿಸಿದ್ದವು. ಇನ್ನು ಬಹುಮಾನ ವಿಜೇತರ ವಿವರ ಹೀಗಿದೆ..

ಕನೆ ಹಲಗೆ:
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು

ಬೀಯಪಾದೆ ಕೆರೆಕೋಡಿ ಗುತ್ತು ಶೇಖರ ಪೂಜಾರಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ನಾರಾವಿ ಯುವರಾಜ್ ಜೈನ್ (11.53)
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ “ಎ” (12.62)
ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್

ಹಗ್ಗ ಹಿರಿಯ:

ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ “ಬಿ” (11.48)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಎ” (11.55)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಲೊರೆಟ್ಟೋ ಮಹಲ್ ತೋಟ ಆನ್ಯ ಅವಿಲ್ ಮಿನೇಜಸ್ (11.68)
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ

ದ್ವಿತೀಯ: ಸುರತ್ಕಲ್ ಖಂಡಿಗೆ ಕುಸುಮಾಕರ್ ಸುವರ್ಣ (11.77)
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ನೇಗಿಲು ಹಿರಿಯ:

ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.25)
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ (11.41)
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ

ನೇಗಿಲು ಕಿರಿಯ:

ಪ್ರಥಮ: ದೂಜ ಅಭಿಮಾನಿ ಬಳಗ (11.80)
ಓಡಿಸಿದವರು: ಬೈಂದೂರು ಮಂಜುನಾಥ ಗೌಡ

ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶೆಟ್ಟಿ (12.13)
ಓಡಿಸಿದವರು: ಬಾರಾಡಿ ನತೇಶ್

 

Continue Reading

BANTWAL

14 ನೇ ವರ್ಷದ ಮೂಡೂರು – ಪಡೂರು ಜೋಡುಕರೆ ಕಂಬಳಕ್ಕೆ ಚಾಲನೆ

Published

on

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ 14 ನೇ ವರ್ಷದ ಹೊನಲು ಬೆಳಕಿನ ಮೂಡೂರು- ಪಡೂರು ಜೋಡುಕರೆ ಬಯಲು ಕಂಬಳಕ್ಕೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಇಂದು (ಮಾ.08) ಬೆಳಗ್ಗೆ ಚಾಲನೆ ಸಿಕ್ಕಿದೆ.


ದಿವಂಗತ ಆಲ್ಬರ್ಟ್ ಪಾಯ್ಸ್ ಕೂಡಿಬೈಲು ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಸೋಲೂರಿನ ಕರ್ನಾಟಕ ಆರ್ಯ- ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ರಾಬರ್ಟ್ ಡಿ’ಸೋಜಾ ಮತ್ತು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮ ಪ್ರಸಾದ್‌ ಅಜಿಲ ಕಂಬಳದ ಉದ್ಘಾಟನೆಯನ್ನು ನೆರವೇರಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.

ಅಗ್ರಾರ್‌ ಚರ್ಚ್ ಧರ್ಮಗುರು ವಂದನೀಯ ಡಾ. ಪೀಟರ್‌ ಡಿ’ಸೋಜಾ, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್‌. ಖಾದರ್‌, ಫರ್ಲಾ ವೆಲಂಕಣಿ ಮಾತೆ ಚರ್ಚ್ ಧರ್ಮಗುರು ವಂದನೀಯ ಮಾರ್ಕ್ ಅರುಣ್‌ ಡಿ’ಸೋಜಾ, ಬಂಟ್ವಾಳ ಪುರ ಸಭಾಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್‌, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಆರ್. ಪೂಜಾರಿ, ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಮತ್ತು ಇತರರು ಮುಖ್ಯ ಅತಿಥಿಗಳಾಗಿದ್ದರು.

ಇದನ್ನೂ ಓದಿ: ದಶಕಗಳ ಬೇಡಿಕೆಗೆ ಸಿಎಂ ಅಸ್ತು: ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜು ಮಂಜೂರು

ಕಂಬಳ ಸಮಿತಿಯ ಅಧ್ಯಕ್ಷ ಪಿಯುಸ್‌ ಎಲ್‌. ರೊಡ್ರಿಗಸ್‌, ಸಂಚಾಲಕ ಬಿ. ಪದ್ಮಶೇಖರ ಜೈನ್‌, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಪ್ ಫ್ರ್ಯಾಂಕ್‌ ಮತ್ತು ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

Continue Reading

BANTWAL

ನಿರ್ಬಂಧದ ನಡೆವೆಯೂ ಅಡ್ಡೂರು ಸೇತುವೆ ಮೇಲೆ ಲಾರಿ ಸಂಚಾರ; ಸಾರ್ವಜನಿಕರ ಆಕ್ರೋಶ

Published

on

ಬಂಟ್ವಾಳ : ಪೊಳಲಿ ಸಮೀಪದ ಅಡ್ಡೂರು ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿಗೆ. ಈ ವೇಳೆ ರಾತ್ರಿ ಲಾರಿಯೊಂದು ಸೇತುವೆ ಮೇಲೆಯೇ ಹಾದು ಹೋಗಿದ್ದು ಸಾರ್ವಜನಿಕರು ಈ ವಿರುದ್ಧ ಕಿಡಿಕಾರಿದ್ದಾರೆ.

ಅಡ್ಡೂರು ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆ ಅಳವಡಿಸುವ ಜತೆಗೆ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಬಳಿಕ ವಾಹನ ಡಿಕ್ಕಿಯಾಗಿಒಂದು ಬದಿಯ ಗಾರ್ಡ್‌ಗೆ ಹಾನಿಯಾಗಿದ್ದ ಕಾರಣ ಅದನ್ನು  ತೆರವು ಮಾಡಲಾಗಿದ್ದು, ಮತ್ತೊಂದು ಬದಿಯ ತಡೆಯೇ ಇಲ್ಲ. ‘ಚೆಕ್‌ಪೋಸ್ಟ್ ಬರೀ ನಾಮಕಾವಸ್ಥೆಗೆ ಮಾಡಲಾಗಿದ್ದು, ಅಲ್ಲಿ ಯಾರೂ ಕೂಡ ನಿಲ್ಲುತ್ತಿಲ್ಲ’ ಎಂದು ಸಾರ್ವಜನಿಕರು ಆಕ್ರೋಶಿಸುತ್ತಿದ್ದಾರೆ.

ಸೇತುವೆಯ ಸಾಮರ್ಥ್ಯ ಕುಸಿದಿದೆ ಎಂದು ಘನ ವಾಹನ ಸಂಚಾರ ನಿಷೇಧಿಸಿ ಸೇತುವೆ ಸಾಮರ್ಥ್ಯ ವೃದ್ಧಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟು ಶಾಲಾ ವಾಹನಗಳು, ಬಸ್‌ಗಳು ಸೇರಿದಂತೆ ಯಾವುದಕ್ಕೂ ಸಂಚಾರಕ್ಕೆ ಅವಕಾಶವಿಲ್ಲ. ಬಸ್ಸಿಗೆ ಸಂಚರಿಸಲು ಅವಕಾಶ ನೀಡಿ ಎಂದು ಸಾಕಷ್ಟು ಹೋರಾಟಗಳು ನಡೆದರೂ ದ.ಕ. ಜಿಲ್ಲಾಡಳಿತ ಖಡಾಖಂಡಿತವಾಗಿ ಲಘು ವಾಹನ ಹೊರತುಪಡಿಸಿ ಯಾವುದೇ  ವಾಹನಕ್ಕೂ ಅವಕಾಶ ನೀಡಿರಲಿಲ್ಲ.

ಈ ನಡುವೆ ರಾತ್ರಿ ಹೊತ್ತು ಸರಕು ತುಂಬಿದ ಲಾರಿಯೊಂದು ಯಾವುದೇ ಅಡೆ ತಡೆ ಇಲ್ಲದೆ ಸೇತುವೆಯನ್ನು ದಾಟುತ್ತಿದ್ದು, ಅದನ್ನು ಯಾರೋ ಹಿಂದಿನಿಂದ ಕಾರಿನಲ್ಲಿ ತೆರಳಿ ವೀಡಿಯೋ ಮಾಡಿದ್ದು, ಅದು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ . ಈ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ‘ಸೇತುವೆಯನ್ನು ಹಗಲು ಹೊತ್ತು ಬಂದ್ ಮಾಡಿ, ರಾತ್ರಿ ವ್ಯವಹಾರ ಕುದುರಿಸುವ ಅಧಿಕಾರಿಗಳಿಗೆ ಧಿಕ್ಕಾರವಿರಲಿ’ , ‘ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದ್ದು, ಜಿಲ್ಲಾಧಿಕಾರಿಗಳೇ ಇದಕ್ಕೆ ನೀವೇ ಹೊಣೆ’ , ‘ನಾಟಕ ನಿಲ್ಲಿಸಿ, ಶಾಲಾ ವಾಹನಗಳು, ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಹಗಲು ಹೊತ್ತು ಕೂಡ ಸೇತುವೆಯನ್ನು ತೆರವುಗೊಳಿಸಿ’ ಎಂಬೆಲ್ಲಾ ಆಕ್ರೋಶದ ಮಾತುಗಳು ಹರಿದಾಡುತ್ತಿವೆ.

Continue Reading
Advertisement

Trending

Copyright © 2025 Namma Kudla News

You cannot copy content of this page