Connect with us

LATEST NEWS

ಪುತ್ತೂರು: ‘ಗೃಹಲಕ್ಷ್ಮಿ’ ಹಣದಿಂದ ಪತಿಗೆ ಸ್ಕೂಟರ್ ಕೊಡಿಸಿದ ಪತ್ನಿ!

Published

on

ಪುತ್ತೂರು: ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟ ಗೃಹಿಣಿಯೊಬ್ಬರು ಆ ಹಣದಿಂದ ತನ್ನ ಪತಿಗೆ ಸ್ಕೂಟರ್ ಕೊಡಿಸಿ ಗಮನಸೆಳೆದಿದ್ದಾರೆ.

ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ರಿಯಾ ಎಂಬವರು ತನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿ ಸಲೀಂರಿಗಾಗಿ ಸ್ಕೂಟರ್ ಖರೀದಿಸಿದ್ದಾರೆ. ವೃತ್ತಿಯಲ್ಲಿ ಪೈಂಟರ್ ಆಗಿರುವ ಸಲೀಂ ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಪತಿ ಕೆಲಸಕ್ಕೆ ತೆರಳಲು ಪತ್ನಿ ಮಿಸ್ರಿಯಾರ ಗೃಹಲಕ್ಷ್ಮಿ ಹಣ ಅನುಕೂಲ ಕಲ್ಪಿಸಿದೆ.

ಆರ್ಥಿಕ ನೆರವು ಗೃಹಲಕ್ಷ್ಮಿ!

ತನ್ನ ಸ್ಕೂಟರ್ ನಲ್ಲಿ ಸಲೀಂ ‘ಆರ್ಥಿಕ ನೆರವು ಗೃಹಲಕ್ಷ್ಮಿ’ ಎಂಬ ಭಿತ್ತಿಪತ್ರ ಅಂಟಿಸಿದ್ದು, ಅದರಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮರ್, ಲಕ್ಣ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಫೊಟೋ ಹಾಕಿದ್ದಾರೆ.

ಶಾಸಕರಿಂದ ಸನ್ಮಾನ

ಸಲೀಂ ತನ್ನ ಪತ್ನಿ ನೀಡಿದ ಸ್ಕೂಟರ್ ನೊಂದಿಗೆ ಶಾಸಕರನ್ನು ಭೇಟಿಯಾಗಿ ಸರಕಾರದ ಗೃಹಲಕ್ಷ್ಮೀ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹೇಳಿದ್ದಾರೆ. ತನಗೆ ಕೆಲಸಕ್ಕೆ ತೆರಳಲು ಈ ವಾಹನ ನೆರವಾಗಲಿದೆ. ಸರಕಾರಕ್ಕೆ ಹಾಗೂ ಶಾಸಕರಿಗೆ ಸಲೀಂ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಶಾಸಕರು ಸಲೀಂರನ್ನು ಸನ್ಮಾನಿಸಿ ಗೌರವಿಸಿದರು.

LATEST NEWS

ಪತ್ನಿಗೆ ವಿಡಿಯೋ ಕಾಲ್ ಮಾಡಿ ಖ್ಯಾತ ಪತ್ರಕರ್ತ ಆತ್ಮಹತ್ಯೆ; ಕಾರಣ ನಿಗೂಢ ..!

Published

on

ಮಂಗಳೂರು/ಗದಗ : ನ್ಯೂಸ್‌ಗೆ ಬೇಕಾಗುವ ದೃಶ್ಯಾವಳಿಗಳನ್ನ ಸೆರೆ ಹಿಡಿಯುವಲ್ಲಿ ಪರಿಣತರಾಗಿದ್ದು, ಒಂದೇ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದ ರವಿ ಗಿರಣಿ ನಿನ್ನೆ (ಮಾ.21) ಸಂಜೆ ಸಾವನ್ನಪ್ಪಿದ್ದಾರೆ. ಈ ಸುದ್ಧಿ ಪತ್ರಕರ್ತ ವಲಯಕ್ಕೆ ನೋವುಂಟು ಮಾಡಿದೆ.

ಟಿವಿ9 ಪ್ರಾರಂಭವಾದ ಮೊದಲ ದಿನದಿಂದಲೇ ಹುಬ್ಬಳ್ಳಿ ಕ್ಯಾಮೆರಾಮೆನ್ ಆಗಿ ಸೇರಿಕೊಂಡಿದ್ದರು. ಬಳಿಕ ದಾವಣಗೆರೆ , ಮಂಗಳೂರು ಬಳಿಕ ಪ್ರಸ್ತುತ ಗದಗದಲ್ಲಿ ಕೆಲಸ ಮಾಡಿದ್ದರು. ಮಂಗಳೂರಿನಲ್ಲಿ ಅನೇಕ ವರ್ಷ ಕೆಲಸ ಮಾಡಿರುವ ರವಿ ಗಿರಣಿ ಜಿಲ್ಲೆಯಲ್ಲಿ ಅನೇಖ ಸ್ನೇಹಿತರನ್ನು ಪಡೆದುಕೊಂಡಿದ್ದರು.

ಶುಕ್ರವಾರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಹೋಗಿದ್ದ ಅವರು ಪತ್ನಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು ಕಾರಣ ಏನು ಎಂದು ತಿಳಿಸಿರಲಿಲ್ಲ. ರವಿ ಅವರ ಪತ್ನಿ ಗಂಗಾವತಿಯಲ್ಲಿ ಶಿಶು ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಕ್ಷಣ ಮನೆ ಸಮೀಪದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಜನರು ಬಂದು ನೋಡುವಷ್ಟರಲ್ಲಿಯೇ ರವಿ ಇಹಲೋಕ ತ್ಯಜಿಸಿದ್ದರು.

ರವಿ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ರಾಘವ ಅತ್ತಾವರ ವಿಧಿವಶ ; ಕದ್ರಿ ನವನೀತ ಶೆಟ್ಟಿ ಸಂತಾಪ

Published

on

ಮಂಗಳೂರು : ಕೆಲವೊಂದು ಸಾವುಗಳು ನಮ್ಮನ್ನು ಮೌನವಾಗಿಸುತ್ತವೆ. ವ್ಯಕ್ತಿ ಅಳಿದರೂ  ಆತನ ನೆನಪುಗಳು ಸದಾ ಹಸಿರಾಗುತ್ತದೆ. ಆತನ ಸಾಧನೆಗಳು ಎಂದಿಗೂ ಮರೆಯದಂತೆ ಇರುತ್ತದೆ. ಇದೀಗ ಅಂತಹದ್ದೇ ಸಾಧಕನೊಬ್ಬ ನಮ್ಮನ್ನಗಲಿದ್ದಾರೆ. ಮಂಗಳೂರಿನ ಬಹುಮುಖ ಪ್ರತಿಭೆ ಕದ್ರಿ ನವನೀತ ಶೆಟ್ಟಿ ಮೃತರ ಕುರಿತು ಬರೆದ ಲೇಖನವು ಮನಮುಟ್ಟುವಂತಿದೆ.

ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷ ಧಾರಿ  ರಾಘವ ಅತ್ತಾವರ ವಿಧಿವಶ ರಾಗಿ 5 ದಿನ ಕಳೆಯಿತು…ವೃತ್ತಿ ಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್. ಪ್ರವೃತ್ತಿ..ರಂಗ ಭೂಮಿ…ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರ ದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿ ನೂರಾರು ನಾಟಕ ಗಳನ್ನು ನಿರ್ದೇಶಿಸಿದವರು. ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕ ದ ಯಶಸ್ವಿ ಪ್ರದರ್ಶನ  ನೋಡಿ ಸಂಭ್ರಮ ಪಡುತಿದ್ದ ಕಲಾರಾಧಕ.

ಹಲವಾರು ಮಹಿಳಾ ಮಂಡಳಿ ಗಳು, ಯುವಕ ಮಂಡಳಿ ಗಳ ಗದ್ದೆ ಯ ಪರದೆ ನಾಟಕ ಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿ ಸಿ ಬೆಳೆಸಿದ ರಂಗ ಸಾಧಕ…ತಾರುಣ್ಯ ದಲ್ಲಿ ಸ್ತ್ರೀ ವೇಷ ಧಾರಿ ಯಾಗಿ   ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕ ಗಳಲ್ಲಿ ಮನೋಜ್ಞ ಅಭಿನಯ ನೀಡುತಿದ್ದ ಅಗ್ರ ಪಂಕ್ತಿ ಯ ಕಲಾವಿದ….ಶೋಭಾ ಯಾತ್ರೆ ಗಳ, ಮಂಗಳಾದೇವಿ ರಥೋತ್ಸವ ದ ಟ್ಯಾಬ್ಲೋ ಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿ ಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ…ರಾಘವ ಅತ್ತಾವರ ಅವರ ನಿರ್ದೇಶನ ದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕ ಗಳಲ್ಲಿ  ಅಭಿನಯ ಮಾಡಿದ್ದೇನೆ.

ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆ ಯ ಹಲವಾರು ನಾಟಕ ಗಳಲ್ಲಿ ಸುಮಾರು ಎರಡು ದಶಕ ಗಳ ಕಾಲ ಅವರು ಹಲವಾರು ನಾಟಕ ಗಳನ್ನು ನಿರ್ದೇಶಿ ಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯಹೆಗ್ಡೆ    ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.ನಾನು ರಚಿಸಿದ ಮೊದಲ ಹತ್ತು ನಾಟಕ ಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ… ಮೂರು ದಶಕ ಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ “ಕಾರ್ನಿಕದ ಶಿವ ಮಂತ್ರ ” ನಾಟಕ ದ ಮೊದಲ ಗುರು ಇವರೇ. ಸಾಮಾಜಿಕ ನಾಟಕ ಗಳಲ್ಲಿ ಅಭಿನಯ ಮಾಡುವಾಗ ಇಣುಕು ತಿದ್ದ  ಯಕ್ಷಗಾನ ದ ಛಾಯೆ ಯನ್ನು ಬೈದು, ತಿದ್ದಿ ತೀಡಿ,ನೇರ್ಪು ಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.

ಅವರ ನಿರ್ದೇಶನ ದ ನಾಟಕ ದ ಅಂಕ ದ ಪರದೆ  ತೆರೆಯುವ ಹಾಗೂ ಹಾಕುವ  ಕಾಯಕ ವನ್ನು ಸ್ವತಃ ಅವರೇ ಮಾಡುತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲ ದಲ್ಲಿ ನೆನಪಾಗುತ್ತಾರೆ. ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ… ರಂಗ ವೇದಿಕೆ ಯನ್ನು ಆರಾಧನಾ ಮಂದಿರದಂತೆ ಕಾಣುತಿದ್ದವರು… ನಾಟಕದ ಅಂಕದ ಪರದೆ ಯನ್ನು  ನಾಟಕ ಮುಗಿದಾಗ ಅವರೇ ಎಳೆಯು ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ…ಅವರ ನಿಧನ ವಾರ್ತೆ ಯನ್ನು ಇಂದು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು…”ಬದುಕಿನ ಅಂಕದ ಪರದೆ ಯನ್ನೂ ಅವರೇ ಎಳೆದು ಬಿಟ್ಟ ರಲ್ಲಾ… ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!”

ಬರಹ : ಕದ್ರಿ ನವನೀತ ಶೆಟ್ಟಿ

Continue Reading

DAKSHINA KANNADA

ಮಂಗಳೂರು : ಕೂಳೂರು ಸೇತುವೆ ಬಳಿ ದರ್ಪ ; ಪೊಲೀಸರಿಂದ ಸ್ಪಷ್ಟನೆ

Published

on

ಮಂಗಳೂರು : ಮಾ.21ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ಕೂಳೂರು ಸೇತುವೆ ಬಳಿ ದರ್ಪ ಮೆರೆದ ಸಂಚಾರ ಪೊಲೀಸರು” ಎಂಬ ವೀಡಿಯೊ 2024ರ ಡಿ.23ರಂದು ಕುದುರೆಮುಖ ಜಂಕ್ಷನ್‌ ನಲ್ಲಿ ನಡೆದಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

ಪಾನಮತ್ತನಾದ ಓರ್ವ ವ್ಯಕ್ತಿ ಕುದುರೆಮುಖ ಜಂಕ್ಷನ್ ನಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರು ಆ ವ್ಯಕ್ತಿಯನ್ನು ಬದಿಗೆ ಕಳುಹಿಸಿದರೂ ಆತ ಮತ್ತೆ ಪದೇ ಪದೇ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಸಮಯ ತುಂಬಾ ಕುಡಿದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ಆತನಿಗೆ ಮೂಗಿನಲ್ಲಿ ರಕ್ತ ಬಂದಿರುತ್ತದೆ.

ಈ ವೇಳೆ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವಾಹನದ ಬಳಿ ಕರೆದುಕೊಂಡು ಬರುತ್ತಿರುವಾಗ ಯಾರೋ ಸಾರ್ವಜನಿಕರು ತಪ್ಪಾಗಿ ತಿಳಿದುಕೊಂಡು ವೀಡಿಯೊ ಮಾಡಿ ವೈರಲ್‌ ಮಾಡಿದ್ದಾರೆ ಎಂದು ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page