Connect with us

DAKSHINA KANNADA

ಎಪ್ರಿಲ್ 10 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ: ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಅವಕಾಶ..!

Published

on

ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಿವ ಕ್ಷೇತ್ರ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 10 ರಿಂದ 10 ದಿನ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದ್ದು,  ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.

ಎಪ್ರಿಲ್ 10 ರಂದು ಬೆಳಿಗ್ಗೆ 9.25 ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಎಪ್ರಿಲ್‌ 16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಭೇಟಿ, ಎಪ್ರಿಲ್ 17 ರಂದು ಸಿಡಿಮದ್ದು ಪ್ರದರ್ಶನ ಹಾಗು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಡೆಯಲಿದೆ ಎಂದರು.

ಈ ಬಾರಿ ದೇವರ ಪುಷ್ಕರಣಿಯಲ್ಲಿ ವರುಣ ದೇವರ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಪುಷ್ಕರಣಿಯಲ್ಲಿ ಇಳಿಯುವ ಭಕ್ತಾಧಿಗಳಿಗೆ ಕಡ್ಡಾಯ ವಸ್ತಸಂಹಿತೆಯನ್ನು ಜಾರಿಗೊಳಿಸಲಾಗಿದೆ.

ಕೇವಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವ ಭಕ್ತಾಧಿಗಳಿಗೆ ಮಾತ್ರ ವರುಣ ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದ ಅವರು ದೇವರ ಬ್ರಹ್ಮರಥ ಎಳೆಯುವ ಸೇವಾಕರ್ತರಿಗೂ ವಸ್ತ್ರಸಂಹಿತೆ ಕಡ್ಡಾಯವಾಗಿದೆ.

ಜಾತ್ರೆ ನಡೆಯುವ ಹತ್ತು ದಿನವೂ ಭಕ್ತಾಧಿಗಳು ಸಾಂಪ್ರದಾಯಿಕ ಉಡುಗೆಯಲ್ಲೇ ದೇವಸ್ಥಾನಕ್ಕೆ ಬರಬೇಕು ಎನ್ನುವುದು ಸಮಿತಿಯ ಆಗ್ರಹವಾಗಿದೆ ಎಂದು ಅವರು ಹೇಳಿದರು.

DAKSHINA KANNADA

ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

Published

on

ಮಂಗಳೂರು : ಇತ್ತಿಚೆಗೆ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಬ್ರಾಹ್ಮಣ ಸಮೂದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಿಂದೂ ಸಂಘಟನೆಗಳೂ ಕೂಡ ಪರೀಕ್ಷಾರ್ಥಿಗಳಿಗೆ ಜನಿವಾರ ತೆಗೆಸಿದ ವಿಚಾರವಾಗಿ ಪ್ರತಿಭಟನೆ ನಡೆಸಿತ್ತು. ಇದೀಗ ರೈಲ್ವೇ ಇಲಾಖೆ ಕೂಡಾ ಇಂತಹದೇ ಒಂದು ಯಡವಟ್ಟು ಮಾಡಿದೆ. ಅದೇನು ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನಿವಾರ ಪ್ರಕರಣ ತೀವ್ರ ಸುದ್ಧಿಯಾಗುತ್ತಿರುವ ಬೆನ್ನಲ್ಲೇ ಇದೀಗ ಪರೀಕ್ಷೆ ಬರೆಯಲು ಜನಿವಾರ ಮತ್ತು ಮಂಗಳ ಸೂತ್ರ ತೆಗೆದು ಬರುವಂತೆ ಸೂಚಿಸಿದೆ. ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಏಪ್ರಿಲ್ 29 ರಂದು ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲೇ ಈ ಸೂಚನೆಯನ್ನು ನೀಡಿದೆ.

ಮಂಗಳೂರು ನಗರದ ಬೋಂದೇಲ್‌ ಸಮೀಪದ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲಿ ನಮೂದಿಸಿದ ವಿಚಾರ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ವಿಚಾವಾಗಿದೆ. ಹೀಗಾಗಿ ಈ ಸೂಚನೆಯನ್ನು ರದ್ದು ಪಡಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಬೇಕು ಎಂದು ಹಿಂದೂ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

Continue Reading

DAKSHINA KANNADA

ವರುಣನ ಆರ್ಭಟಕ್ಕೆ ಮಂಗಳೂರು ಫುಲ್ ಕೂಲ್.. ಕೂಲ್.. !

Published

on

ಮಂಗಳೂರು : ಬೆಂದಿದ್ದ ಧರೆಯ ತಂಪಾಗಿಸಲು ಭುವಿಗಿಳಿದ ವರುಣ… ರಾತ್ರಿ ಮಲಗುವ ವೇಳೆ “ಎಂಥಾ ಸೆಕೆ ಮಾರ್ರೆ ?” ಎನ್ನುತ್ತಿದ್ದವರೂ ಸಹ ಫ್ಯಾನ್ ಆಫ್ ಮಾಡಿ ಮಲಗಿದ್ದಾರೆ. ಹೌದು .. ನಿನ್ನೆ(ಏ.27) ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆ ಈ ಕುರಿತು ಮೊದಲೇ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಕನ್ನಡದ ಹಲವೆಡೆ ನಿನ್ನೆ ಹಾಗೂ ಮೊನ್ನೆ (ಏ.26) ಗುಡುಗು ಮಿಂಚು ಸಹಿತ ವರುಣನ ಆರ್ಭಟ ಜೊರಾಗಿಯೇ ಇತ್ತು,

ನಿನ್ನೆ ಹಗಲು ಬಿಸಿಲು ಇತ್ತು. ಆದರೆ ಸಂಜೆ ಹೊತ್ತಿಗೆ ಯಾರೂ ಊಹಿಸದ ರೀತಿ ಮಳೆ ಸುರಿದಿದೆ. ಧಾರಕಾರ ಮಳೆಯಿಂದ ಬಿಸಿ ಬಿಸಿಯಾಗಿದ್ದ ನಗರ ಫುಲ್ ಕೂಲ್ ಆಗಿದೆ. ಬಿಸಿ ವಾತಾವರಣ ಪೂರ್ತಿ ನಿವಾರಣೆಯಾಗಿದೆ.

ಎರಡು ಮೂರು ದಿನಗಳಿಂದ ದಕ್ಷಿಣ ಕನ್ನಡ ಹಲವು ಕಡೆಗಳಲ್ಲಿ ಆಗಾಗ ಮಳೆ ಕಾಣಿಸಿಕೊಳ್ಳುತ್ತಿದೆ. ಇಂದು (ಏ.28) ಮಂಗಳೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂಬುವುದಾಗಿ ಹವಮಾನ ಇಲಾಖೆ ಸೂಚಿಸಿದ್ದು, ಸಂಜೆ ತನಕ ಕಾದು ನೋಡಬೇಕಷ್ಟೇ.

Continue Reading

DAKSHINA KANNADA

2024-25ರ ಆರ್ಥಿಕ ವರ್ಷದಲ್ಲಿ ಎಂಆರ್‌ಪಿಎಲ್‌ಗೆ 371 ಕೋಟಿ ರೂ. ಲಾಭ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್‌) ಕಂಪನಿಯು 2024-25ನೇ ಹಣಕಾಸು ವರ್ಷದ ತ್ರೈಮಾಸಿಕ ಲಾಭದ ಪ್ರಮಾಣ ಶೇ.20ರಷ್ಟು ಏರಿಕೆ ಕಂಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಸ್ಥೆ 371 ಕೋಟಿ ರೂ. ಲಾಭ ಗಳಿಸಿದೆ.

ಶನಿವಾರ ನಡೆದ ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ನಾಲ್ಕನೇ ತ್ರೈಮಾಸಿಕದ ವರದಿಗೆ ಅನುಮೋದನೆ ನೀಡಲಾಯಿತು.

ಸಂಸ್ಕರಣಾಗಾರದ ಕಾರ್ಯಾಚರಣೆಯಿಂದ ನಿವ್ವಳ ಆದಾಯವು ಶೇ.12.5ರಷ್ಟು ಏರಿಕೆಯಾಗಿ 24,596ಕ್ಕೆ ತಲುಪಿದೆ. 2025ನೇ ಹಣಕಾಸು ವರ್ಷದಲ್ಲಿ ಪ್ರತಿ ಬ್ಯಾರೆಲ್‌ಗೆ 4.45 ಡಾಲರ್ ಒಟ್ಟು ಸಂಸ್ಕರಣಾ ಲಾಭಾಂಶ ಗಳಿಸಿದೆ. ಕಳೆದ ವರ್ಷ ಇದು ಪ್ರತಿ ಬ್ಯಾರೆಲ್ ಕಚ್ಛಾ ತೈಲಕ್ಕೆ 10.36 ಡಾಲರ್ ಕಡಿಮೆಯಾಗಿತ್ತು.

ಇದನ್ನೂ ಓದಿ: ಎಂಆರ್‌ಪಿಎಲ್‌ 2ನೇ ತ್ತೈಮಾಸಿಕ ಅವಧಿ ಫಲಿತಾಂಶ; ನಷ್ಟ ಎಷ್ಟು ಗೊತ್ತಾ ?

ಅಲ್ಲದೆ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿರುವ ಈ ಸಂಸ್ಥೆಯು, ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲವನ್ನು ಇಂಧನವಾಗಿ ಪರಿವರ್ತಿಸುವ ಮೂಲಕ 6.23 ಡಾಲರ್ ಗಳಿಸಿದೆ. ಕಳೆದ ವರ್ಷ ಪ್ರತಿ ಬ್ಯಾರಲ್‌ಗೆ 11.35 ಡಾಲರ್ ಆಗಿತ್ತು.

ಪ್ರಸಕ್ತ ವರ್ಷದಲ್ಲಿ ಹೊಸದಾಗಿ 66 ಪೆಟ್ರೋಲ್ ಪಂಪ್‌ಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಈ ಸಂಸ್ಥೆಯ ಪೆಟ್ರೋಲ್ ಪಂಪ್‌ಗಳ ಸಂಖ್ಯೆ 167ಕ್ಕೆ ತಲುಪಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page