Connect with us

DAKSHINA KANNADA

ಜಿಲ್ಲೆಯ ಏಕೈಕ ‘ಅಮರ್‌ ಜವಾನ್‌ ಜ್ಯೋತಿ’ಗೆ ಹಾನಿ

Published

on

ಪುತ್ತೂರು: ದೇಶದ ಸೈನಿಕರ ಬಲಿದಾನದ ನೆನಪಿಗಾಗಿ ನಿರ್ಮಿಸಿದ ‘ಅಮರ್‌ ಜವಾನ್‌ ಜ್ಯೋತಿ’ ಗೆ ಹಾನಿ ಮಾಡಿದ ಘಟನೆ ಇಲ್ಲಿನ ಕಿಲ್ಲೆ ಮೈದಾನದಲ್ಲಿ ನಡೆದಿದೆ. ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017 ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ಇಂದು ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ‌ ಮ್ಯಾನೇಜ್‌ ರವೀಂದ್ರರವರು ಸ್ಮಾರಕದ ಶುಚಿತ್ವಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಕುರಿತು ಪುತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ‘ಅಮರ್‌ ಜವಾನ್‌ ಜ್ಯೋತಿ’ಯಾಗಿದೆ. ಈ ಹಿಂದೆಯೂ ಎರಡು ಬಾರಿ ಇಂತಹ ಕೃತ್ಯ ನಡೆದಿದೆ.

 

DAKSHINA KANNADA

ಡಾ.ಹರಿಕೃಷ್ಣ ಪುನರೂರು , ಮಾಜಿ ಸಚಿವ ರಮಾನಾಥ ರೈಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

Published

on

ಬಂಟ್ವಾಳ :  ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಿದ ಮಹನೀಯರನ್ನು ಗೌರವಿಸುವುದು ಇಂದು ಪ್ರಸ್ತುತ. ಸಮಾಜವನ್ನು ಒಂದುಗೂಡಿಸುವ ಕಾರ್ಯ ಇಬ್ಬರ ಅಭಿನಂದನೆಯಿಂದ ನಡೆದಿದೆ ಎಂದು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಮಂಗಳವಾರ (ನ.18) ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಅರ್ಶೀವಚನಗೈದರು.

ದ.ಕ.ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಧರ್ಮದರ್ಶಿ , ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕುರಿತು ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕುರಿತು ಅಭಿನಂದನಾ ಭಾಷಣ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿಕೃಷ್ಣ ಪುನರೂರು, ಬಡವರ ಸೇವೆಗಾಗಿ ಜೀವನವನ್ನು ಸಮರ್ಪಿಸಿದ್ದೇವೆ. ಭಾಷಣ ಮಾಡುವ ಬದಲು ಕೆಲಸ ಮಾಡುವುದು ಮುಖ್ಯ  ಎಂದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ನನ್ನ ಕರ್ತವ್ಯದ ಭಾಗವನ್ನು ಮಾಡಿದ್ದೇನೆ. ಎಲ್ಲ ಜಾತಿ, ಮತ, ಭಾಷೆ ಮೀರಿ ಮನುಷ್ಯರಾಗಿ ಬಾಳಬೇಕು ಎಂದರು.

ಅಭಿನಂದನಾ ಸಮಿತಿ ಅಧ್ಯಕ್ಷ  ಕೈಯ್ಯೂರು ನಾರಾಯಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ರಘು ಎಲ್. ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ. ನಿರ್ದೇಶಕ ದಿನೇಶ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಉದ್ಯಮಿ ರಘುನಾಥ ಸೋಮಯಾಜಿ, ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ, ಅಭಿನಂದನಾ ಗ್ರಂಥದ ಸಂಪಾದಕ ಪ್ರೊ.ರಾಜಮಣಿ ರಾಮಕುಂಜ, ಕೋಶಾಧಿಕಾರಿ ರಾಮಗಣೇಶ್ ಪ್ರಭು  ಉಪಸ್ಥಿತರಿದ್ದರು.

ಇದನ್ನೂ ಓದಿ : ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

ಅಭಿನಂದನಾ ಸಮಿತಿಯ ಮಹಾಲಿಂಗ ಭಟ್, ಹರಿಕೃಷ್ಣ ಪುನರೂರು ಅವರ ಅಭಿನಂದನಾ ಪತ್ರ ವಾಚಿಸಿದರು. ಬೆಳಗ್ಗೆ 8 ರಿಂದ ಮಹಾಗಣಪತಿ ಹೋಮ, ಮಧ್ಯಾಹ್ನ ಭೋಜನದ ಬಳಿಕ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು

Continue Reading

DAKSHINA KANNADA

ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜರಿಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

Published

on

ಮಂಗಳೂರು : 27 ವರ್ಷಗಳ ಶ್ರೀಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ  ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು.

ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಳೆದ 9 ವರ್ಷ ಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನಿಸಿದರು.

ಅಭಿನಂದನಾ ಭಾಷಣ ಮಾಡಿದ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ, ರವಿಶಂಕರ್ ಅವರು ಹಾಸ್ಯ ರತ್ನ ನಯನ ಕುಮಾರ್, ಉಂಡೆಮನೆ ಶ್ರೀ ಕೃಷ್ಣ ಭಟ್ ಅವರಿಂದ ಯಕ್ಷ ಶಿಕ್ಷಣ ಪಡೆದು ಕಟೀಲು ಮೇಳಕ್ಕೆ ಸೇರಿದ ಮೂರು ವರ್ಷದಲ್ಲೇ ಪ್ರಧಾನ ಹಾಸ್ಯಗಾರರಾಗಿ ಮುನ್ನಡೆದವರು. ಯಕ್ಷಗಾನ ಪ್ರಸಂಗ ದೃಶ್ಯಾವಳಿ, ವಾಚಿಕ ಸಮಾರಾಧನೆ, ಯಕ್ಷ ಪಾತ್ರ ದೀಪಿಕಾ, ಪ್ರಸಂಗ ವಾಚಿಕ, ಯಕ್ಷಗಾನ ಪ್ರಸಂಗಗಳಲ್ಲಿ ನಾರದ, ರಂಗ ನಡೆಗೊಂದು ಕೈಪಿಡಿ ಮೊದಲಾದ ಅನುಭವ ಜನ್ಯ ಅಪೂರ್ವ ಸಾಹಿತ್ಯ ಕೃತಿಗಳನ್ನು ಯಕ್ಷರಂಗಕ್ಕೆ ನೀಡಿದ ಯಕ್ಷ ಸಾಹಿತಿ, ಸಂಪಾದಕ, ತಾಳಮದ್ದಳೆ ಅರ್ಥಧಾರಿ, ಸಂಪನ್ಮೂಲ ವ್ಯಕ್ತಿಎಂದು ಶ್ಲಾಘಿಸಿದರು.

ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಖ್ಯಾತ ವೈದ್ಯ ಡಾ. ಜಯಶಂಕರ್ ಮಾರ್ಲ, ಲೀಲಾಕ್ಷ ಬಿ. ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ. ಎಸ್. ಭಂಡಾರಿ,ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣoಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯoತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿ ಗುತ್ತು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಕದ್ರಿ ವಿಷ್ಣು ಸಂಸ್ಮರಣೆ

ಇಚ್ಲಂಪಾಡಿ, ಕೂಡ್ಲು,ಕೊರಕೋಡು, ಅಡೂರು, ಕುಂಡಾವು, ಕದ್ರಿ,ಧರ್ಮಸ್ಥಳ,ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರೆದಿದ್ದ ಮೇರು ಕಲಾವಿದ ಕದ್ರಿ ವಿಷ್ಣು. ಕಟೀಲು ಮೇಳದ ತಿರುಗಾಟದಿಂದ ನಿವೃತ್ತಿ ಪಡೆಯುವ ಸಂದರ್ಭದಲ್ಲಿ ಕದ್ರಿ ದೇವಸ್ಥಾನದಲ್ಲಿ ಐದು ದಶಕಗಳ ಪೂರ್ವ ದಲ್ಲಿ ನಡೆದಿದ್ದ ಅದ್ದೂರಿಯ ‘ಕದ್ರಿ ವಿಷ್ಣು ಸನ್ಮಾನ’ ಕಾರ್ಯಕ್ರಮದ ಮೆಲುಕಿನೊಂದಿಗೆ ಸಂಸ್ಮರಣೆ ನಡೆಸಲಾಯಿತು.

ಇದನ್ನೂ ಓದಿ : ಸೌದಿ ಬಸ್ ದುರಂತ ಪ್ರಕರಣ; ಒಂದೇ ಕುಟುಂಬದ 18 ಮಂದಿಯ ದುರಂತ ಅಂತ್ಯ!

ಕದ್ರಿ ಯಕ್ಷ ಬಳಗದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ತಾರಾನಾಥ ಶೆಟ್ಟಿ ಬೋಳಾರ, ಶಿವ ಪ್ರಸಾದ್ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಸುಧಾಕರ್ ಶೆಟ್ಟಿ ದೋಣಿoಜೆ ಗುತ್ತು, ಕೃಷ್ಣ ಶೆಟ್ಟಿ ತಾರೆಮಾರ್, ಹರೀಶ್ ಕುಮಾರ್, ನಿವೇದಿತಾ ಎನ್ ಶೆಟ್ಟಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ  ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಕಟೀಲು ಮೇಳದವರಿಂದ ‘ದಶಾವತಾರ’ ಯಕ್ಷಗಾನ ಬಯಲಾಟ ಜರುಗಿತು.

Continue Reading

DAKSHINA KANNADA

ಕಡಬ–ಪಂಜ ರಸ್ತೆಯಲ್ಲಿ ಏಕಾಏಕಿ ಮುರಿದುಬಿದ್ದ ಮರ; ಪ್ರಾಣಾಪಾಯದಿಂದ ಪಾರದ ಬೈಕ್ ಸವಾರ

Published

on

ಕಡಬ: ತಾಲೂಕಿನ ಕಡಬ–ಪಂಜ ರಾಜ್ಯ ಹೆದ್ದಾರಿಯ ಕೋಡಿಂಬಾಳ ಪಂಜ ಮಾರ್ಗದಲ್ಲಿ ಹಳೇ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದ್ದು, ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ.


ಈ ಹಿಂದೆ ಇದೇ ತಿರುವಿನಲ್ಲಿ ಯಶವಂತ್ (42) ಎಂಬ ಬೈಕ್ ಸವಾರ ಚಲಿಸುತ್ತಿದ್ದ ಸಮಯದಲ್ಲಿ, ರಸ್ತೆಯ ಬದಿಯಲ್ಲಿ ಹಳೆಯ ಹಾಲುಮಡ್ಡಿ ಮರ ಅಡ್ಡವಾಗಿ ಮೇಲೆ ಬಿದ್ದು ಅಪಘಾತವಾಗಿತ್ತು. ಯಶವಂತ್ ಅವರು ಹೆಲ್ಮೆಟ್ ಧರಿಸಿದ್ದರಿಂದ ತಲೆಯ ತೀವ್ರ ಗಾಯ ತಪ್ಪಿದರೂ, ಕೈ, ಕಾಲು ಮತ್ತು ದೇಹದ ಹಲವೆಡೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.

2024ರಲ್ಲಿ ಕೂಡಾ ಪುಳಿಕುಕ್ಕು ತಿರುವಿನಲ್ಲಿ ಸ್ಕೂಟರ್ನಲ್ಲಿ ಚಲಿಸುತ್ತಿದ್ದ ಎಡಮಂಗಲ ನಿವಾಸಿ ಸೀತರಾಮಗೌಡ ಎಂಬವರ ಸ್ಕೂಟಿಯ ಮೇಲೆಯೇ ಮರ ಬಿದ್ದು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಂತರ ಸ್ಥಳೀಯರು ರಸ್ತೆ ತಡೆ ನಡೆಸಿ ಅಪಾಯಕಾರಿಯಾದ ಮರಗಳನ್ನು ತಕ್ಷಣ ಕಡಿದು ತೆರವುಗೊಳಿಸಲು ಆಗ್ರಹಿಸಿದ್ದರು.

ಇದನ್ನೂ ಓದಿ: ಬೆಳ್ತಂಗಡಿ: 18 ಅಡಿ ಎತ್ತರದಿಂದ ಬಿದ್ದಿದ್ದ ಪೈಂಟರ್ ಸಾ*ವು

ಸಾರ್ವಜನಿಕರು ಇಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದಿದ್ದರೂ ಮರಗಳನ್ನು ಕಡಿಯಲು ಇಲಾಖೆ ಮುಂದಾಗಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page