Connect with us

LATEST NEWS

ಪುತ್ತೂರು: ಅಂಗಡಿಯಿಂದ 15 ಲಕ್ಷ ರೂ. ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ..!

Published

on

ಎಂಟು ತಿಂಗಳ ಹಿಂದೆ ಅಂಗಡಿಯೊಂದರಿಂದ 15 ಲಕ್ಷ ರೂ. ನಗದು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು: ಎಂಟು ತಿಂಗಳ ಹಿಂದೆ ಅಂಗಡಿಯೊಂದರಿಂದ 15 ಲಕ್ಷ ರೂ. ನಗದು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್ ಬಡವಾಣೆಯ ಸಮೀರ್ (ಕಪ್ಪ) , ಹಾಸನ ಶಂಕರಿಪುರಂನ ಚಂದ್ರಶೇಖರ್ (ಚಂದು) ಬಂಧಿತ ಆರೋಪಿಗಳು.

ಪುತ್ತೂರಿನ ನಗರದ ಮುಖ್ಯ ರಸ್ತೆಯ ಮಾಯಿದೆ ದೇವುಸ್‌ ಚರ್ಚ್‌ ಸಮೀಪದ ಪ್ರಕಾಶ್‌ ಫೂಟ್ ವೇರ್‌ ಎಂಬ ಚಪ್ಪಲಿ ಅಂಗಡಿಗೆ ಆರೋಪಿಗಳು 2022 ಸೆ.16ರಂದು ನುಗ್ಗಿ ಸುಮಾರು 15ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಈ ಬಗ್ಗೆ ಪ್ರಕಾಶ್‌ ಫೂಟ್ ವೇರ್‌ ಮಳಿಗೆಯ ಮಾಲಕ ಸಮೀರ್‌ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನು ಹತ್ತಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

FILM

ನಟಿ ಮೇಲೆ ಲೈಂ*ಗಿಕ ದೌರ್ಜ*ನ್ಯ ಪ್ರಕರಣ : ನಟ ದಿಲೀಪ್ ಖುಲಾಸೆ

Published

on

ಮಂಗಳೂರು/ಕೊಚ್ಚಿ : ಬಹುಭಾಷಾ ನಟಿಗೆ ಲೈಂ*ಗಿಕ ಕಿರುಕು*ಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ. ಹಾಗೆಯೇ, ಸುನೀಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಮಂದಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ.

2017 ರಲ್ಲಿ ನಟಿಯನ್ನು ಅಪಹರಿಸಿ ಲೈಂ*ಗಿಕ ದೌರ್ಜ*ನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯ ಇಂದು(ಡಿ.08) ಮಹತ್ವದ ತೀರ್ಪು ಪ್ರಕಟಿಸಿದ್ದು, ನಟ ದಿಲೀಪ್‌ರನ್ನು ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಎನ್.ಎಸ್.ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಬಿ.ಮಣಿಕಂದನ್, ವಿ.ಪಿ.ವಿಜೀಶ್, ಎಚ್. ಸಲೀಂ(ವಡಿವಲ್ ಸಲೀಂ) ಮತ್ತು ಪ್ರದೀಪ್ ಅವರನ್ನು ತಪ್ಪಿತಸ್ಥರೆಂದು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಘೋಷಿಸಿದರು.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು 2017ರಲ್ಲಿ ದೂರು ನೀಡಲಾಗಿತ್ತು. ನಟ ದಿಲೀಪ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಘಟನೆಯ ಮುಖ್ಯ ಸೂತ್ರಧಾರ ನಟ ದಿಲೀಪ್‌ ಕುಮಾರ್‌ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಸಂತ್ರಸ್ತ ನಟಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಅತ್ಯಾ*ಚಾರಕ್ಕೆ ಸುಪಾರಿ ನೀಡಿದ್ದರು ಎಂದು ದಿಲೀಪ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಆದರೆ, ದಿಲೀಪ್ ಇದನ್ನು ಅಲ್ಲಗಳೆದಿದ್ದು, ತಾನೇನು ತಪ್ಪು ಮಾಡಿಲ್ಲವೆಂದು ವಾದಿಸಿದ್ದರು.

Continue Reading

LATEST NEWS

ಬೆಟ್ಟ ಹತ್ತುವಾಗ ಕಾಲು ಜಾರಿ ಬಿ*ದ್ದು ವೃದ್ಧ ಸಾ*ವು

Published

on

ಮಂಗಳೂರು/ರಾಮನಗರ : ಬೆಟ್ಟ ಹತ್ತುವಾಗ ಕಾಲು ಜಾ*ರಿ ಬಿ*ದ್ದು ವೃದ್ಧ ಸಾ*ವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ. ಬಿಡದಿ ಹೋಬಳಿಯ ಕೆಂಪನಹಳ್ಳಿ ನಿವಾಸಿ, 65 ವರ್ಷದ ರೇವಣ್ಣ ಮೃ*ತ ದು*ರ್ದೈವಿ.

ಕುಟುಂಬ ಸಮೇತ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದಿದ್ದ ರೇವಣ್ಣ ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ಕಾಲು ಜಾ*ರಿ ಕಂದಕಕ್ಕೆ ಬಿ*ದ್ದು, ಸ್ಥಳದಲ್ಲೇ ಕೊನೆಯು*ಸಿರೆಳೆದಿದ್ದಾರೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇವಣ್ಣ ಶ*ವ ಮೇಲಕ್ಕೆತ್ತಿದ್ದಾರೆ. ಘಟನೆ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ : ಡಿಸ್ಕಸ್ ಥ್ರೋನಲ್ಲಿ ಮಂಗಳೂರಿನ ಕೃತಿ ಎನ್.ಪಿ ಪ್ರಥಮ

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026 ನಡೆಯಿತು.

ಡಿಸ್ಕಸ್ ಥ್ರೋ ವಿಭಾಗದಲ್ಲಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಮಾಣಿಯ ವಿದ್ಯಾರ್ಥಿನಿ  ಕೃತಿ. ಎನ್.ಪಿ ಪ್ರಥಮ ಸ್ಥಾನ ಪಡೆದಿದ್ದು,  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ಕೃತಿ ಗೋಳ್ತಮಜಲು ಗ್ರಾಮದ ನಿವಾಸಿ ದಿನೇಶ್.ಬಿ ಮತ್ತು ತೇಜಾಕ್ಷಿ ದಂಪತಿ ಪುತ್ರಿ.

Continue Reading
Advertisement

Trending

Copyright © 2025 Namma Kudla News

You cannot copy content of this page