Connect with us

ಕೊರೊನಾ ಓಡಿಸಲು ಸಿಂಹಗಳನ್ನು ರಸ್ತೆಗಿಳಿಸಿದ್ರಾ ಪುಟಿನ್.? ನಿಜವಾಗ್ಲೂ ನಡೆದಿದ್ದೇನು.?

Published

on

ಕೊರೊನಾ ಓಡಿಸಲು ಸಿಂಹಗಳನ್ನು ರಸ್ತೆಗಿಳಿಸಿದ್ರಾ ಪುಟಿನ್.? ನಿಜವಾಗ್ಲೂ ನಡೆದಿದ್ದೇನು.?

ಮಾಸ್ಕೋ: ಕಳೆದ ಕೆಲವು ತಿಂಗಳಿನಿಂದ ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕೊರೊನಾ ವೈರಸ್. ಕೊರೊನಾ ಹತ್ತಿಕ್ಕಬೇಕು ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಪರದಾಡುತ್ತಿವೆ.

ಆದರೆ, ಕೆಲವು ರಾಷ್ಟ್ರಗಳು ತಡವಾಗಿ ಎಚ್ಚೆತ್ತುಕೊಂಡು ಈಗ ಪರದಾಡುತ್ತಿವೆ. ಸೋಂಕು ಪಸರಿಸದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ.

ಜಗತ್ತಿನ ಬಲಿಷ್ಠ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾಕ್ಕೂ ಕೂಡ ಮಾರಕ ಕೊರೊನಾ ಎಂಟ್ರಿ ಕೊಟ್ಟಿದೆ. ಕೊರೊನಾ ಹತ್ತಿಕ್ಕಲು ರಷ್ಯಾ ಕೂಡ ಪರದಾಡುತ್ತಿದೆ.

ಆದರೆ, ಈಗ ಜನ ಬೀದಿಗಿಳಿಯದಂತೆ ತಡೆಯಲು ಪುಟಿನ್ ಸಿಂಹಗಳನ್ನು ಬೀದಿಗಿಳಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಕೊರೊನಾ ಸೋಂಕು ಹರಡದಂತೆ ತಡೆಯಲು ರಷ್ಯಾದಲ್ಲಿ ಜನರನ್ನು ಬೀದಿಗಿಳಿಯದಂತೆ ತಡೆಯಲು ಪುಟಿನ್ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಆದರೆ, ಈಗ ಜನ ಬೀದಿಗಿಳಿಯದಂತೆ ತಡೆಯಲು ಪುಟಿನ್ ಸಿಂಹಗಳನ್ನು ಬೀದಿಗಿಳಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ಕೊರೊನಾ ಸೋಂಕು ಹರಡದಂತೆ ತಡೆಯಲು ರಷ್ಯಾದಲ್ಲಿ ಜನರನ್ನು ಬೀದಿಗಿಳಿಯದಂತೆ ತಡೆಯಲು ಪುಟಿನ್ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಆದರೆ, ಇದಕ್ಕೆ ಜನ ಸೊಪ್ಪು ಹಾಕುತ್ತಿಲ್ಲವಾಗಿರುವುದರಿಂದ ಪುಟಿನ್ ಸುಮಾರು 1500 ಸಿಂಹಗಳನ್ನು ರಸ್ತೆಯಲ್ಲಿ ಬಿಟ್ಟಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಶುದ್ದ ಸುಳ್ಳು ಎಂಬುದು ಇದೀಗ ಬಯಲಾಗಿದೆ.

ಜನರನ್ನು ಹೆದರಿಸಲು ಸಿಂಹಗಳನ್ನು ಪುಟಿನ್ ರಸ್ತೆಗೆ ಬಿಟ್ಟಿದ್ದಾರೆ ಎಂಬ ಫೋಟೊ ರಷ್ಯಾದ್ದು ಅಲ್ಲವೇ ಅಲ್ಲ.

ರಸ್ತೆಯಲ್ಲಿ ಸಿಂಹವೊಂದು ಅಡ್ಡಾಡುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊ ದಕ್ಷಿಣ ಆಫ್ರಿಕಾದ್ದಾಗಿದೆ.

2016 ರಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಸಿಂಹ ಕಾಡಂಚಿನ ನಗರದಲ್ಲಿ ತಿರುಗಾಡಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಪುಟಿನ್ ಬಿಟ್ಟಿದ್ದಾರೆ ಅಂತ ಸುದ್ದಿ ಮಾಡಿದ್ದರು.

ರಷ್ಯಾದಲ್ಲಿಯೂ ಕೊರೊನಾ ಉಪಟಳ ನೀಡಿದೆ. ಅಲ್ಲಿ ಸೋಮವಾರದ (ಮಾರ್ಚ್ 23) ವರದಿ ಪ್ರಕಾರ 623 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಇಲ್ಲಿಯವರೆಗೆ 8 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. ಚೀನಾದಲ್ಲಿ ಕೊರೊನಾ ತಲ್ಲಣ ಸೃಷ್ಟಿಸಿದ ತರುವಾಯವೇ ಅವರು ಚೀನಾದೊಂದಿಗಿನ 2600 ಮೈಲಿ ಗಡಿಯನ್ನು ಸಂಪೂರ್ಣ ಮುಚ್ಚಲು ಆದೇಶಿಸಿದ್ದರು.

ಕೊರೊನಾ ಹತ್ತಿಕ್ಕಲು ಪುಟಿನ್ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ವಿಶ್ವಕಪ್ ಗೆದ್ದ ರಿಚಾ ಘೋಷ್‌ಗೆ ಪೊಲೀಸ್ ಹುದ್ದೆ; ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ

Published

on

ಕೋಲ್ಕತಾ: ಮಹಿಳಾ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ರಿಚಾ ಘೋಷ್‌ಗೆ ಅವರ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆ ನೀಡಿ ಗೌರವಿಸಲಾಗಿದೆ.


ಶನಿವಾರ (ನವೆಂಬರ್ 8) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಿಚಾ ಘೋಷ್‌ರಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.ಇದೇ ವೇಳೆ ರಿಚಾಗೆ ಬಾಂಗ್ಲಾ ಭೂಷಣ್ ಪ್ರಶಸ್ತಿ ನೀಡಲಾಯಿತು.

ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ 34 ರನ್ ಬಾರಿಸಿದ್ದಕ್ಕಾಗಿ ಪ್ರತೀ ರನ್ನಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟಾರೆ 34 ಲಕ್ಷ ರೂ. ನಗದು ಪುರಸ್ಕಾರ ನೀಡಿತು. ಹೆಚ್ಚುವರಿಯಾಗಿ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಪರವಾಗಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ: IND vs AUS: ಟಿ20I ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದ ಅಭಿಷೇಕ್ ಶರ್ಮಾ

ಭಾರತದ ವಿಶ್ವಕಪ್ ಅಭಿಯಾನದುದ್ದಕ್ಕೂ ರಿಚಾ ಘೋಷ್ ಅತ್ಯುತ್ತಮ ಪ್ರದರ್ಶನ ನೀಡಿದ್ದು ಆಡಿರುವ ಎಂಟು ಪಂದ್ಯಗಳಲ್ಲಿ 39.16 ಸರಾಸರಿ ಮತ್ತು 133.52 ಪ್ರೈಕ್ ರೇಟ್‌ನಲ್ಲಿ 235 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ 94 ರನ್ ಗಳಿಸುವ ಮೂಲಕ ವೈಜಾಜ್ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. ನವಿ ಮುಂಬೈನಲ್ಲಿ ನಡೆದ ಪೈನಲ್ ಪಂದ್ಯದಲ್ಲಿಯೂ ನಿರ್ಣಾಯಕ 34 ರನ್ ಬಾರಿಸಿದ್ದರು.

Continue Reading

LATEST NEWS

ಕಜ್ಜಾಯ ಕೊಡೋ ನೆಪದಲ್ಲಿ ವೃದ್ಧೆಯನ್ನ ಮನೆಗೆ ಕರೆದು ಕೊ*ಲೆ ಮಾಡಿದ ಪಾಪಿ ಮಹಿಳೆ

Published

on

ಆನೇಕಲ್: ಕಜ್ಜಾಯ ಕೊಡುವ ನೆಪದಲ್ಲಿ ಮನೆಗೆ ಕರೆದು ವೃದ್ಧೆಯನ್ನು ಕೊಲೆ ಮಾಡಿ ಮಹಿಳೆ ಚಿನ್ನಾಭರಣ ದೋಚಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ.


ಮೃತದೇಹವನ್ನು ಕೆರೆಗೆ ಎಸೆದು ಮಹಿಳೆ ಪರಾರಿಯಾಗಿದ್ದಳು. ದೀಪಾವಳಿ ಹಬ್ಬಕ್ಕೆ ಮಾಡಿದ ಕಜ್ಜಾಯ ನೀಡುತ್ತೇನೆ ಬನ್ನಿ ಎಂದು ಅಜ್ಜಿಯೊಬ್ಬರನ್ನು ಕರೆದ ಅದೇ ಊರಿನ ಮಹಿಳೆ, ಅಜ್ಜಿ ಬಳಿ ಇರುವ ಚಿನ್ನಕ್ಕಾಗಿ ಆಕೆಯನ್ನೇ ಕೊಂದು ಕೆರೆಗೆ ಎಸೆದಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೂರು ಬಳಿ ನಡೆದಿದೆ.

68 ವರ್ಷದ ಭದ್ರಮ್ಮ ಮೃತ ದುರ್ದೈವಿ. ದೀಪ ಕೊಲೆ ಮಾಡಿರುವ ಚಾಲಾಕಿ ಕಿಲ್ಲರ್ ಲೇಡಿ ಆಗಿದ್ದಾಳೆ. ಅ.30 ರಂದು ಭದ್ರಮ್ಮ ಕಾಣೆಯಾಗಿದ್ದಾಳೆಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆಯನ್ನು ಚುರುಕುಗೊಳಿಸಿದಾಗ ದೀಪಾ ಮೇಲೆ ಅನುಮಾನ ಮೂಡಿತ್ತು. ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ಹೊರಬಂದಿದೆ. ಅಜ್ಜಿಯನ್ನು ಕಜ್ಜಾಯ ನೀಡಲು ಮನೆಗೆ ಕರೆದ ದೀಪ ಅಜ್ಜಿಯ ಬಳಿ ಚಿನ್ನಾಭರಣ ದೋಚಲು ಕೊಲೆ ಮಾಡಿದ್ದಾಳೆ. ಆನಂತರ ಎರಡು ದಿನ ಶವವನ್ನು ಮನೆಯಲ್ಲೇ ಬಚ್ಚಿಟ್ಟಿದ್ದಳು.

ಇದನ್ನೂ ಓದಿ: VIDEO: ವೇಟರ್ ಮುಖಕ್ಕೆ ಬಿಸಿ ಕಾಫಿಯನ್ನು ಎರಚಿದ ಮಹಿಳೆ! ಕಾರಣ?

ಆದರೆ, ದುರ್ವಾಸನೆ ಬರುತ್ತಿದ್ದಂತೆ ದೊಡ್ಡತಿಮ್ಮಸಂದ್ರ ಕೆರೆಗೆ ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೆಣವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದಾಳೆ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಸದ್ಯ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಗ್ರಾಮಾಂತರ ಅಡಿಷನಲ್ ಎಸ್‌ಪಿ ಮಾಹಿತಿ ನೀಡಿದ್ದಾರೆ.

Continue Reading

INTERNATIONAL

VIDEO: ವೇಟರ್ ಮುಖಕ್ಕೆ ಬಿಸಿ ಕಾಫಿಯನ್ನು ಎರಚಿದ ಮಹಿಳೆ! ಕಾರಣ?

Published

on

ಏನೂ ತಪ್ಪೇ ಮಾಡದ ವೈಟರ್ ಮೇಲೆ ಮಹಿಳೆ ಬಿಸಿ ಬಿಸಿ ಕಾಫಿ ಎರಚಿರುವ ಘಟನೆ ಅಮೆರಿಕದಲ್ಲಿ ನಡೆದಿದ್ದು, ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಇಂದಿನ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯತೆ ಅನ್ನೋದು ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಅಮೆರಿಕದಲ್ಲೊಂದು ಘಟನೆ ನಡೆದಿದ್ದು, ಇದರ ವೀಡಿಯೋವನ್ನು ಬ್ಯೂನಾ ವಿಸ್ಟಾ ಪೊಲೀಸ್ ಇಲಾಖೆ ಹಂಚಿಕೊಂಡಿದೆ.

ವೀಡಿಯೋದಲ್ಲೇನಿದೆ?
ಮಹಿಳೆ ಅಂಗಡಿಯ ವೈಟರ್‌ನೊಂದಿಗೆ ವಾಗ್ವಾಧ ನಡೆಸುತ್ತಿರುತ್ತಾಳೆ. ಸಿಬ್ಬಂದಿ ಆ ಮಹಿಳೆಯನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ, ಆಕೆ ಸಮಾಧಾನವಾಗದೇ ವಾದ ಮಾಡುವುದನ್ನ ವೀಡಿಯೋದಲ್ಲಿ ನೋಡಬಹುದು.

ಅಷ್ಟಕ್ಕೂ ಆಗಿದ್ದೇನು?
ಮಹಿಳೆ ತಾನೂ ಆರ್ಡರ್ ಮಾಡಿದ ಕಾಫಿ 1 ಗಂಟೆಯಾದರೂ ನೀಡಿಲ್ಲ ಎಂಬ ಕಾರಣಕ್ಕೆ ಮೆಕ್‌ಡೊನಾಲ್ಡ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಾಳೆ. ವೈಟರ್‌ನ್ನು ಸುಳ್ಳುಗಾರ ಎಂದು ದೂಷಿಸುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಸಿಬ್ಬಂದಿ ನಿಮ್ಮ ಕಾಫಿ ಬಂದಿದೆ. ಇದಕ್ಕೆ ಶುಲ್ಕ ವಿಧಿಸಲಾಗಿದೆ. ನಿಮ್ಮ ಮರುಪಾವತಿಗೆ 48 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿ ಹೋಗುತ್ತಾರೆ. ಇದಕ್ಕೆ ಕೋಪಗೊಂಡ ಆರೋಪಿ ಮಹಿಳೆ ಬಿಸಿ ಕಾಫಿಯನ್ನು ಸಿಬ್ಬಂದಿ ಮೈಮೇಲೆ ಎರಚಿದ್ದಾಳೆ.

ಘಟನೆಯ ಕುರಿತು ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿ ಮಹಿಳೆಯ ನಡವಳಿಕೆಯ ವಿರುದ್ದ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page