Connect with us

FILM

ದರ್ಶನ್‌ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಪುಷ್ಪಾ-2 ನಿರ್ದೇಶಕ ಸುಕುಮಾರ್ !

Published

on

ಮಂಗಳೂರು/ಬೆಂಗಳೂರು : ಚಾಲೆಂಜಿಗ್ ಸ್ಟಾರ್ ನಟ ದರ್ಶನ್‌ ತೂಗುದೀಪ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಈಗಗಾಲೇ, ಪುಷ್ಪಾ-2 ಸಿನಿಮಾದ ಮೋಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ದೂರದ ಪಾಕಿಸ್ತಾನದಲ್ಲಿ ಅಲ್ಲು ಅರ್ಜುನ್ ಅವರ ಸ್ವಾಗ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.ಈಗ ಇಂತಹ ಅದ್ಧೂರಿ ಸಿನಿಮಾ ನಿರ್ದೇಶಿಸಿದ ಸುಕುಮಾರ್ ಭಾರತದಲ್ಲಿಯೇ ಬಹು ಬೇಡಿಕೆಯ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

ಆದರೆ ಈಗ ಪುಷ್ಪಾ-2 ಖ್ಯಾತಿಯ ನಿರ್ದೇಶಕ ಸುಕುಮಾರ್, ಚಾಲೆಂಜಿಂಗ್ ಸ್ಟಾರ್ ಅವರಿಗೆ ಆಕ್ಷನ್ ಕಟ್ ಹೇಳಲು ಹೊರಟ್ಟಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತರಾಗಿರುವ ದರ್ಶನ್‌ ಅವರ ಪಾಪ್ಯುಲರ್ ಇಮೇಜ್‌ನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆಯನ್ನು ಹೆಣೆದಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ತೆಲುಗು ಪ್ರೊಡಕ್ಷನ್ ಹೌಸ್‌ನ ಬ್ಯಾನರ್‌ನಲ್ಲಿ ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಭಿಕ್ಷೆ ಬೇಡಿದ ವ್ಯಕ್ತಿಗೆ 10 ರೂಪಾಯಿ ಕೊಟ್ಟ ಬೈಕ್ ಸವಾರ: ಜೈಲು ಶಿಕ್ಷೆ !

ಎಲ್ಲವೂ ಅಂದುಕೊಂಡಂತೆ ನಡೆದರೆ ದರ್ಶನ್ ಹಾಗೂ ಸುಕುಮಾರ್ ಅವರ ಕಾಂಬಿನೇಶನ್ ನಲ್ಲಿ ಬರುವ ಚಿತ್ರ ಇಡೀ ಇಂಡಿಯಾದ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನು ಬರೆಯುವುದು ಗ್ಯಾರಂಟಿ ಎನ್ನಲಾಗಿದೆ. ಈಗ ಗಾಂಧೀ ನಗರದಲ್ಲಿ ಹರಡಿರುವ ಈ ಸುದ್ದಿ ಈಗ ಖಚಿತವಾಗಬೇಕಿದೆ. ಒಂದು ವೇಳೆ ಇದು ನಿಜವಾದಲ್ಲಿ ಅಭಿಮಾನಿಗಳ ಸಂತೋಷಕ್ಕೆ ನಿಜಕ್ಕೂ ಪಾರವೇ ಇರುವುದಿಲ್ಲ ಎಂದು ಹೇಳಬಹುದು.

ಅಲ್ಲದೆ ನಾನಾ ಕಾರಣಗಳಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಡೆವಿಲ್ ಸಿನಿಮಾದ ಶೂಟಿಂಗ್ ಮತ್ತೆ ಶುರುವಾಗಲಿದ್ದು, ಹೊಸ ಹೊಸ ಸಿನಿಮಾಗಳಲ್ಲಿ ದರ್ಶನ್‌ ಕಾಣಿಸಿಕೊಳ್ಳಲಿದ್ದಾರೆ.

FILM

ಟ್ರೆಂಡ್ ಬದಿಗಿಟ್ಟು ಮಗಳಿಗೆ ಅರ್ಥಗರ್ಭಿತ ಹೆಸರಿಟ್ಟ ನಟಿ ನೇಹಾ ಗೌಡ; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ಬೆಂಗಳೂರು : ಲಕ್ಷ್ಮೀ ಬಾರಮ್ಮ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ನಟಿ ನೇಹಾ ಗೌಡ. ಗೊಂಬೆ ಎಂದೇ ಖ್ಯಾತರಾಗಿದ್ದರು ನೇಹಾ. ಅದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 9 ರ ಶೋ ಮೂಲಕನೂ ಗಮನ ಸೆಳೆದಿದ್ದರು. ಅವರ ಪತಿ ಚಂದನ್ ಕೂಡ ‘ಅಂತರಪಟ’ ಧಾರಾವಾಹಿಯಲ್ಲಿ ನಟಿಸಿ ಮನೆ ಮಾತಾಗಿದ್ದರು. ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ನಾಮಕರಣ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ.

ಬೆಂಗಳೂರಿನಲ್ಲಿ ಅದ್ದೂರಿ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಕಿರುತೆರೆ, ಹಿರಿತೆರೆ ಕಲಾವಿದರು ಆಗಮಿಸಿ ಶುಭ ಹಾರೈಸಿದರು.

ವಿಶೇಷ ಅಂದ್ರೆ ಟ್ರೆಂಡ್ಸ್‌ ಬದಿಗಿಟ್ಟು ನೇಹಾ ದಂಪತಿ ಚಂದದ ಹೆಸರೊಂದನ್ನು ಮಗಳಿಗಿಟ್ಟಿದ್ದಾರೆ. ಇತ್ತೀಚೆಗೆ ವಿಭಿನ್ನ ಹೆಸರುಗಳದೇ ರಾಯಭಾರವಾಗಿರುವಾಗ ನೇಹಾ – ಚಂದನ್ ಮಾತ್ರ ಅರ್ಥಪೂರ್ಣವಾಗಿರುವ ಹೆಸರಿಟ್ಟಿದ್ದಾರೆ.

ಹೌದು, ಈ ದಂಪತಿ ಮಗುವಿಗೆ ಇಟ್ಟಿರುವ ಹೆಸರು ‘ಶಾರದಾ’. ದಂಪತಿ ನಿಲುವಿಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

ಬಾಲ್ಯದಲ್ಲೇ ಪ್ರೀತಿಯಲ್ಲಿ ಬಿದ್ದಿದ್ದ ನೇಹಾ – ಚಂದನ್ 2018ರಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಅಕ್ಟೋಬರ್‌ 29ರಂದು ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Continue Reading

FILM

ಸಿಕಂದರ್ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ..! ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಕನ್ನಡಿಗ..?

Published

on

ಮಂಗಳೂರು/ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್‌ನಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರೇ ಅಲ್ಲ, ಕನ್ನಡದ ಮತ್ತೊಬ್ಬ ನಟ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಿಕಂದರ್‌ನಲ್ಲಿ ಕನ್ನಡ ಪ್ರತಿಭೆಗಳ ಹವಾ ತುಂಬಾ ಜೋರಾಗಿದೆ.


ಸಲ್ಮಾನ್‌ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾರ್ಚ್ 30ಕ್ಕೆ ತೆರೆಮೇಲೆ ಬರಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಲ್ಲುಗೆ ನಾಯಾಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

ಆ್ಯಕ್ಷನ್ ಅವತಾರದಲ್ಲಿ ಸಲ್ಲು..
ಸಲ್ಮಾನ್‌ ಖಾನ್ ಸಿನಿಮಾಗಳಲ್ಲಿ ಮಾಸ್ ಅಂಶಗಳು ಎಂದಿನಂತೆ ಪುನರಾವರ್ತನೆಯಾಗಿದೆ. ಈ ಚಿತ್ರದಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಕೆಟ್ಟ ಶಕ್ತಿಗಳು ಮತ್ತು ಸಮಾಜಕ್ಕೆ ಕೇಡು ಭಯಸುವವರ ವಿರುದ್ದ ಸಲ್ಮಾನ್ ಖಾನ್ ಅವರು ಹೋರಾಡುವಂತೆ ಟ್ರೈಲರ್‌ನಲ್ಲಿ ತೊರಿಸಲಾಗಿದೆ. ಮತ್ತೊಂದೆಡೆ ಸಲ್ಮಾನ್ ಖಾನ್ ಲವರ್ ಬಾಯ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಕ್ಯೂಟ್ ಆಗಿ ಕಾಣಿಸಿಕೊಂಡ ರಶ್ಮಿಕಾ
ಸಿಕಂದರ್ ಸಿನಿಮಾದಲ್ಲಿ ಸಲ್ಲುಗೆ ಜೊತೆಯಾಗಿ ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಕ್ಯೂಟ್ ಆಗಿ ಇರಲಿದೆ ಅನ್ನೋದು ಟ್ರೈಲರ್ ಮೂಲಕ ಫ್ಯಾನ್ಸ್‌ಗೆ ಪಕ್ಕಾ ಆಗಿದೆ. ರಶ್ಮಿಕಾ ಟ್ರೈಲರ್ ಉದಕ್ಕೂ ಕಾಣಿಸಿಕೊಂಡಿದ್ದಾರೆ. ಸಿಕಂದರ್‌ಗೆ ಇಷ್ಟ ಆಗುವ ಹುಡುಗಿಯಾಗಿ ನೋಡಬಹುದು.

ಇದನ್ನೂ ಓದಿ: ಸಿಕಂದರ್ ಸಿನಿಮಾಗೆ ರಶ್ಮಿಕಾ ಮಂದಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಕನ್ನಡಿಗ
ಸಿನಿಮಾದಲ್ಲಿ ಬಾಲಿವುಡ್ ಕಲಾವಿದರಿಗಿಂತ ದಕ್ಷಿಣದ ಮಂದಿಗೆ ಚಿತ್ರತಂಡ ಮಣೆ ಹಾಕಿದೆ. ಸಿಕಂದರ್‌ನಲ್ಲಿ ಕನ್ನಡಿಗ ಕಿಶೋರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟನಾಗಿ ಸೈ ಎನಿಸಿಕೊಂಡಿರುವ ಕನ್ನಡಿಗ ಕಿಶೋರ್, ಯಾವುದೇ ಭಾಷೆಯ ಸಿನಿಮಾ ಆಗಿದ್ರೂ ಪಾತ್ರಕ್ಕೆ ಜೀವ ತುಂಬುತ್ತಾರೆ.

ಸಲ್ಮಾನ್ ಖಾನ್ ಮುಂದೆ ಕಿಶೋರ್ ತೊಡೆ ತಟ್ಟಿದ್ದಾರೆ. ಟ್ರೈಲರ್‌ನಲ್ಲಿ ಚಿಕ್ಕದಾಗಿ ಸಲ್ಮಾನ್ ಮತ್ತು ಕಿಶೋರ್ ಫೈಟ್ ಸೀನ್ ತೋರಿಸಲಾಗಿದೆ. ಇಬ್ಬರ ನಡುವಿನ ಕಾಂಬಿನೇಶನ್ ಯಾವ ರೀತಿ ಇರಲಿದೆ ಎಂದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

‘ಘಜಿನಿ’ ರೀತಿಯ ಸಿನಿಮಾಗಳನ್ನು ನೀಡಿದ ಎ ಆರ್ ಮುರುಗದಾಸ್ ಅವರು ‘ಸಿಕಂದರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಸತ್ಯರಾಜ್, ಕಿಶೋರ್ ಮೊದಲಾದವರು ಪಾತ್ರವರ್ಗದಲ್ಲಿ ಇದ್ದಾರೆ.

Continue Reading

FILM

ಕ್ರಿಕೆಟಿಗ ಡೇವಿಡ್ ವಾರ್ನರ್‌ಗೆ ನೀನೊಬ್ಬ ದೊಡ್ಡ ಕಳ್ಳ.. ಎಂದ ಹಿರಿಯ ನಟ ರಾಜೇಂದ್ರ ಪ್ರಸಾದ್!

Published

on

ಮಂಗಳೂರು/ಹೈದರಾಬಾದ್: ಟಾಲಿವುಡ್ ನಟ ನಿತಿನ್ ಮತ್ತು ಶ್ರೀಲೀಲಾ ಅಭಿನಯದ ‘ರಾಬಿನ್‌ಹುಡ್‌’ ಸಿನಿಮಾದಲ್ಲಿ ಡೇವಿಡ್ ವಾರ್ನರ್ ಕೂಡ ಬಣ್ಣ ಹಚ್ಚಿದ್ದು, ಸಿನಿಮಾ ಮಾ. 28ರಂದು ತೆರೆಗೆ ಬರಲಿದೆ.


ಸಿನಿಮಾದ ಫ್ರೀ ರಿಲೀಸ್ ಈವೆಂಟ್‌ ಭಾನುವಾರ (ಮಾ.23) ಹೈದರಾಬಾದ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಡೇವಿಡ್ ವಾರ್ನರ್ ಕೂಡ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಾರ್ನರ್‌ಗೆ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ನೀಡಿದ ಹೇಳಿಕೆಗಳು ವೈರಲ್ ಆಗಿದೆ.

ಈ ಸಿನಿಮಾದಲ್ಲಿ ರಾಜೇಂದ್ರ ಪ್ರಸಾದ್ ಪ್ರಧಾನ ಹಾಸ್ಯ ಕಲಾವಿದನಾಗಿ ಬಣ್ಣ ಹಚಿದ್ದಾರೆ. ಫ್ರೀ ರಿಲೀಸ್ ಈವೆಂಟ್‌ ವೇದಿಕೆಯಲ್ಲಿ ಮಾತನಾಡಿದ ರಾಜೇಂದ್ರ ಪ್ರಸಾದ್, ಡೇವಿಡ್ ವಾರ್ನರ್ ಅವರು, ನೀವು ಕ್ರಿಕೆಟ್ ಆಡಿದರೆ, ನೀವು ನಟಿಸುತ್ತಿರುವಂತೆ ಕಾಣುತ್ತದೆ ಎಂದು ಹೇಳಿದರು. ಅಲ್ಲದೇ, ನೀನೊಬ್ಬ ದೊಡ್ಡ ಕಳ್ಳ, ನೀವೇನು ಸಾಮಾನ್ಯ ವ್ಯಕ್ತಿಯಲ್ಲ ಎಂದರು. ಆದರೆ, ರಾಜೇಂದ್ರ ಪ್ರಸಾದ್ ಇದನ್ನೆಲ್ಲ ತಮಾಷೆಗಾಗಿ ಹೇಳಿದ್ದಾರೆ.

ಇದನ್ನೂ ಓದಿ: ಏರ್ ಇಂಡಿಯಾ ವಿರುದ್ದ ಆಕ್ರೋಶಗೊಂಡ ಕ್ರಿಕೆಟಿಗ ಡೇವಿಡ್ ವಾರ್ನರ್!

ಮುಂದುವರಿದು, ತಾನು 48 ವರ್ಷಗಳಿಂದ ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣ ಯಾರು ಎಂಬುದನ್ನು ಹೇಳಿದ್ದಾರೆ. ನಾನು ಇಲ್ಲೇ ಇರುವುದಕ್ಕೆ ಕಾರಣ ಮೈತ್ರಿ ಮೂವೀಸ್. ಇದು ನನ್ನ ಸ್ವಂತ ಕಂಪನಿಯಿದ್ದಂತೆ. ನವೀನ್ ಮತ್ತು ರವಿ ಎಲ್ಲರೂ ನನ್ನ ಮಕ್ಕಳು. ನಾನು ಫಸ್ಟ್ ಶ್ರೀಮಂತುಡು ಸಿನಿಮಾದಲ್ಲಿ ನಟಿಸಿದೆ. ಇಂದು ನಾನು ರಾಬಿನ್ ಹುಡ್‌ನಲ್ಲಿ ನಟಿಸಿದ್ದೇನೆ. ಇಂದು ನಿಮ್ಮೆಲ್ಲರ ಮುಂದೆ ನಿಂತು ಮಾತನಾಡುವ ಹಕ್ಕು ನನಗಿದೆ. ಏಕೆ ಎಂಬುದು ಈ ಚಿತ್ರ ನೋಡಿದ ನಂತರ ನಿಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page