Connect with us

ಯಕ್ಷ ಸಾಧಕರಿಗೆ ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ ಪ್ರದಾನ

Published

on

ಮಂಗಳೂರು :  ಶ್ರೀ ಕಟೀಲು ಮೇಳದ ಭಾಗವತ  ಅಂಡಾಲ ದೇವಿ ಪ್ರಸಾದ ಆಳ್ವ  ಹಾಗೂ ಬಣ್ಣದ ವೇಷಧಾರಿ ಸುರೇಶ ಕುಪ್ಪೆಪದವು ಅವರಿಗೆ ಈ ವರ್ಷದ “ಪೂಲ ವಿಠ್ಠಲ ಶೆಟ್ಟಿ ಪ್ರಶಸ್ತಿ” ಪ್ರದಾನ ಮಾಡಲಾಗಿದೆ. ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಪಡುಬಿದ್ರೆ ಕಲ್ಲಟೆಗುತ್ತು ಮೂಲ ಕುಟುಂಬಸ್ಥರಾದ ರಾಧಾ ವಿಠ್ಠಲ ಶೆಟ್ಟಿ ಮತ್ತು ಮಕ್ಕಳ ಶ್ರೀ ಕಟೀಲು ಮೇಳದ 28ನೇ ವರ್ಷದ ಸೇವೆ ಬಯಲಾಟದ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಟೀಲು ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು, ಪರಾಧೀನವಾಗಿದ್ದ ಕಟೀಲು ಮೂಲ ಕುದುರನ್ನು ಶ್ರೀ ಕ್ಷೇತ್ರಕ್ಕೆ ಮರಳಿಸಿದ ದಾನಿಗಳಾದ ಪೂಲ ವಿಠ್ಠಲ ಶೆಟ್ಟಿ ಪರಿವಾರದ ಸೇವೆಯನ್ನು ಸ್ಮರಿಸಿದರು.

ಕದ್ರಿ ನವನೀತ ಶೆಟ್ಟಿ ಮಾತನಾಡಿ, ಅಂಡಾಲ ದೇವಿಪ್ರಸಾದ ಅವರು ಕಳೆದ ಮೂರುವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಪ್ರಸಂಗ ರಚನೆ ಹಾಗೂ ಭಾಗವತಿಕೆಯಲ್ಲಿ ಪ್ರಬುದ್ಧತೆ ಮೆರೆದವರು. ತೆಂಕು ಹಾಗೂ ಬಡಗುತಿಟ್ಟಿನ ಟೆಂಟ್ ಮೇಳಗಳಲ್ಲೂ ಅವರ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕಟೀಲು ಮೇಳದಲ್ಲೇ ಬಣ್ಣದ ವೇಷಧಾರಿಯಾಗಿ ರೂಪುಗೊಂಡು ಕಳೆದ 35 ವರ್ಷ ಗಳಿಂದ ಕಲಾ ಸೇವೆಗೈಯ್ಯುತ್ತಿರುವ  ಸುರೇಶ ಕುಪ್ಪೆಪದವು ಅವರು ಮಹಿಷಾಸುರ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ ಎಂದು ಅಭಿನಂದಿಸಿದರು.

ಕಂಬಳ ಕೋಣಗಳ ಮಾಲಕರಾಗಿ ಖ್ಯಾತಿ ಪಡೆದಿದ್ದ ಮುಂಬೈ ಘಾಟಿಕೋಪರ್‌ನ ಭಾರತ್ ಕೆಫೆ ಸಂಸ್ಥಾಪಕ ಪೂಲ ವಿಠ್ಠಲ ಶೆಟ್ಟಿ ಅವರ ಸ್ಮರಣಾರ್ಥ  ಪ್ರತೀ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಇದನ್ನೂ ಓದಿ : ಉಕ್ರೇನ್ ಯುದ್ದದಲ್ಲಿ ರಷ್ಯಾ ಪರ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ಸಾವು

ಉದಯ ಶೆಟ್ಟಿ ಎರ್ಮಾಳ್, ಐಕಳ ವಿಶ್ವನಾಥ ಶೆಟ್ಟಿ, ವಿಶುಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು. ಸೇವಾಕರ್ತ ಸತೀಶ್ ವಿಠ್ಠಲ ಶೆಟ್ಟಿ ಸ್ವಾಗತಿಸಿದರು. ಶ್ರೀ ಕಟೀಲು ಮೇಳದವರಿಂದ “ರಾಮ-ಕೃಷ್ಣ-ಗೋವಿಂದ” ಯಕ್ಷಗಾನ ಬಯಲಾಟ ಜರಗಿತು.

Advertisement
Click to comment

Leave a Reply

Your email address will not be published. Required fields are marked *

LATEST NEWS

ಬೆಂಗಳೂರಿನ ಸರಣಿ ಹಂತಕನ ಗುರುತು ಪತ್ತೆಹಚ್ಚಿದ ಪೊಲೀಸರು

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಇಂದಿರಾನಗರದಲ್ಲಿ  ಐದು ಗಂಟೆಗಳ ಅವಧಿಯಲ್ಲಿ ನಾಲ್ವರ ಮೇಲೆ ಚಾಕುವಿನಿಂದ ಹ*ಲ್ಲೆ ನಡೆಸಿದ ಸರಣಿ ಹಂತಕನ ಗುರುತು ಪತ್ತೆಯಾಗಿದೆ.

ಬೆಂಗಳೂರಿನ ಇಂದಿರಾನಗರದಲ್ಲಿ ಶನಿವಾರ ಮತ್ತು ರವಿವಾರದ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಪ್ರತ್ಯೇಕ ನಾಲ್ಕು ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಯಿಂದ ಹಲ್ಲೆ ನಡೆದಿದ್ದು, ಇವುಗಳನ್ನು ಒಬ್ಬನೇ ವ್ಯಕ್ತಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆತನ ಗುರುತು ಪತ್ತೆಯಾಗಿದೆ.

ಈ ಬಗ್ಗೆ ಬೆಂಗಳೂರು ಪೂರ್ವ ಉಪ ಪೊಲೀಸ್ ಆಯುಕ್ತ ಡಿ. ದೇವರಾಜ್ ಮಾಹಿತಿ ನೀಡಿದ್ದು,”ಆರೋಪಿಯನ್ನು ಕದಂಬ ಎಂದು ಗುರುತಿಸಲಾಗಿದ್ದು, ಈ ಮೊದಲೇ ಪೊಲೀಸ್ ದಾಖಲೆಗಳಲ್ಲಿ ಮೊಬೈಲ್ ಫೋನ್ ಕಳ್ಳ ಮತ್ತು ಕುಡುಕ ಎಂದು ತಿಳಿದುಬಂದಿದೆ. ಆತ ಕುಡಿದ ಮತ್ತಿನಲ್ಲಿ ದಾಳಿ ನಡೆಸಿದ್ದಾನೆ. ಆರೋಪಿ ಬೈಯಪ್ಪನಹಳ್ಳಿ ಕೊಳಗೇರಿ ನಿವಾಸಿ. ಆತ ಕೊನೆಯ ಬಾರಿ ಹೊಸಕೋಟೆಯಲ್ಲಿ ಕಾಣಿಸಿಕೊಂಡಿದ್ದ” ಎಂದು ಹೇಳಿದರು.

ಇದನ್ನೂ ಓದಿ: ಮೃತದೇಹವನ್ನು ಸಾಗಿಸುತ್ತಿದ್ದ ಅಂಬುಲೆನ್ಸ್‌ನಲ್ಲಿ ಬೆಂಕಿ: ಪ್ರಾಣಾಪಾಯದಿಂದ 4 ಜನ ಬಚಾವ್

ಏನಿದು ಪ್ರಕರಣ?

ಇಂದಿರಾನಗರದ ರಸ್ತೆಯ ಸಮೀಪವಿರುವ ಹೋಟೆಲ್ ಬಳಿ ರಾತ್ರಿ 9:40ರ ಸುಮಾರಿಗೆ ತಿಂಡಿ ಮಾರುತ್ತಿದ್ದ ದೀಪಕ್ ಕುಮಾರ್ ವರ್ಮಾ (24) ಎಂಬುವವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹ*ಲ್ಲೆ ನಡೆಸಿದ್ದ. ಕುಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ ನಡೆಸಿ ಆತ ಪರಾರಿಯಾಗಿದ್ದ. ಇದೇ ರೀತಿ ಇನ್ನೊಂದು ಕಡೆ ರಸ್ತೆ ಬದಿಯಲ್ಲಿ ತಿಂಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೂ ದಾಳಿ ನಡೆದಿತ್ತು.

ಬಳಿಕ ಬೈಕ್ ಟ್ಯಾಕ್ಸಿ ಸವಾರನ ಮೇಲೆ ಹಲ್ಲೆ ನಡೆಸಿದ ದಾಳಿಕೋರ ಸವಾರನ ಬೈಕ್ ಮತ್ತು ಮೊಬೈಲ್ ಕಳ್ಳತನ ಮಾಡಿದ್ದ. ಆದರೆ ನಾಲ್ಕನೇ ದಾಳಿಯನ್ನು ಭದ್ರತಾ ಸಿಬ್ಬಂದಿಯು ತಡೆದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪರಿಚಿತ ಹಂತಕನ ದಾಳಿಗಳಿಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಲ್ಕು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಸರಣಿ ಹಂತಕನ ಗುರುತು ಪತ್ತೆಯಾಗಿದ್ದು, ಸದ್ಯ ಆತನನ್ನು ಬಂಧಿಸಲು ಬಲೆ ಬೀಸಿದ್ದಾರೆ.

 

 

 

Continue Reading

BELTHANGADY

ಬೆಳ್ತಂಗಡಿ: ದಿನಸಿ ಅಂಗಡಿಗೆ ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ದೋಚಿದ ಕಳ್ಳರು

Published

on

ಬೆಳ್ತಂಗಡಿ: ದಿನಸಿ ಅಂಗಡಿಗೆ ಕಳ್ಳರು ನುಗ್ಗಿ ನಗದು ಸೇರಿ ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಓಡೀಲು ಎಂಬಲ್ಲಿ ಫೆ.10 ರಂದು ರಾತ್ರಿ ನಡೆದಿದೆ.

ಹರೀಶ್ ಕುಲಾಲ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ನಿನ್ನೆಯ ದಿನ ರಾತ್ರಿ ಕಳ್ಳರು ಅಂಗಡಿಗೆ ಹಾಕಿದ್ದ ಬೀಗವನ್ನು ಮುರಿದು ಒಳಗೆ ಹೋದಿ ಅಂಗಡಿಯಲ್ಲಿದ್ದ ಹಲವಾರು ವಸ್ತುಗಳನ್ನು ಬಾಚಿಕೊಂಡು ಹೋಗಿದ್ದಾರೆ.

ಇಂದು ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದೆ. ಅಂಗಡಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Continue Reading

LATEST NEWS

ಹೆಚ್ಚುವರಿ ಮಟನ್ ಪೀಸ್ ಕೊಡಲು ನಿರಾಕರಿಸಿದ ಅಂಗಡಿ ಮಾಲಕ; ಬಳಿಕ ನಡೆದಿದ್ದು ಭ*ಯಾನಕ!

Published

on

ಮಂಗಳೂರು/ಚೆನ್ನೈ : ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ದುಷ್ಕೃ*ತ್ಯ ಮೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲೊಬ್ಬ  ಒಂದು ಪೀಸ್ ಮಟನ್ ಪೀಸ್ ಹೆಚ್ಚುವರಿಯಾಗಿ ನೀಡಿಲ್ಲ ಎಂಬ ಕಾರಣಕ್ಕೆ ಮಟನ್ ಶಾಪ್ ಎದುರು ಕೊ*ಳೆತ ಶ*ವ ಎಸೆದಿದ್ದಾನೆ. ಈ ಘಟನೆ ನಡೆದಿರೋದು ತಮಿಳುನಾಡಿನ ಥೇನಿಯಲ್ಲಿ.


ಕುಮಾರ್ ಕೃ*ತ್ಯ ಎಸಗಿದ ಆರೋಪಿ. ಮಣಿಯರಸನ್ ಎಂಬವರು ನಡೆಸುತ್ತಿದ್ದ ಮಟನ್ ಶಾಪ್‌ ಮುಂದೆ ಕುಮಾರ್, ಕೊಳೆತ ಶ*ವವನ್ನು ಎಸೆದಿರುವ ಬಗ್ಗೆ ವರದಿಯಾಗಿದೆ. ಆರೋಪಿ ಕುಮಾರ್ ಸ್ಮಶಾನದಲ್ಲಿ ಶ*ವ ಸುಡುವ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಡೆದಿದ್ದೇನು?

ಕುಮಾರ್ ಮಣಿಯರಸನ್ ಅವರ ಮಟನ್ ಶಾಪ್‌ಗೆ  ಬಂದು ಮಟನ್ ಖರೀದಿ ಮಾಡಿದ್ದಾನೆ. ಈ ವೇಳೆ ಒಂದು ಪೀಸ್ ಮಟನ್‌ನ್ನು ಹೆಚ್ಚುವರಿಯಾಗಿ ಕೇಳಿದ್ದಾನೆ. ಅದರೆ, ಆತನ ಮನವಿಗೆ ಮಾಲಕ ನಿರಾಕರಿಸಿದ್ದಾರೆ. ಮಟನ್ ಬೆಲೆ ಹೆಚ್ಚಾಗಿದ್ದು, ಹೆಚ್ಚುವರಿ ಪೀಸ್ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಕುಪಿತಗೊಂಡ ಕುಮಾರ್ ನೇರವಾಗಿ  ಸ್ಮಶಾನಕ್ಕೆ ಹೋಗಿದ್ದಾನೆ. ಈ ವೇಳೆ ಕೊಳೆತ ಶವವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಂದು ಮಣಿಯರಸನ್  ಅಂಗಡಿಯ ಮುಂದೆ  ಎಸೆದಿದ್ದಾನೆ. ತಕ್ಷಣ ಮಣಿಯರಸನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃ*ತದೇಹ ವಿಲೇವಾರಿ ಮಾಡಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಮೃ*ತದೇಹವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದನ್ನೂ ಓದಿ : ಭೂಮಿ ತಾಯಿ ಮುಟ್ಟಾಗಿದ್ದಾಳೆ; ತುಳುನಾಡಿನಲ್ಲಿ ‘ಕೆಡ್ಡಸ’ ದ ಸಂಭ್ರಮ

ಘಟನೆಯ ವೇಳೆ ಕುಮಾರ್ ಮದ್ಯಪಾನ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರ್ಟ್ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page