Connect with us

LATEST NEWS

ರೋಹಿತ್ ಚಕ್ರತೀರ್ಥಗೆ ನಾಳೆ ನಾಗರಿಕ ಸನ್ಮಾನ: ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆಗಳ ನಿರ್ಧಾರ

Published

on

ಮಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಬ್ರಹ್ಮರ್ಷಿ ನಾರಾಯಣ ಗುರು, ಕುವೆಂಪು, ಬಾಬಾ ಸಾಹೇಬ್ ಅಂಬೇಡ್ಕರ್, ಕಯ್ಯಾರ ಕಿಂಞಣ್ಣ ರೈ ಮುಂತಾದ ಖ್ಯಾತನಾಮರನ್ನು ಅವಮಾನಿಸಿದ,

ಸಾಮಾಜಿಕ ಜಾಲತಾಣದಲ್ಲಿ ಮಹಾನ್ ಚೇತನಗಳು, ಸಾಹಿತಿ ಬರಹಗಾರರನ್ನು ಹೀನಾಯವಾಗಿ ನಿಂದಿಸುವ ರೋಹಿತ್ ಚಕ್ರತೀರ್ಥಗೆ ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯ ಸೇವಾಂಜಲಿ ಟ್ರಸ್ಟ್ ಸಹಯೋಗದಲ್ಲಿ ನಾಗರಿಕ ಸನ್ಮಾನ ಏರ್ಪಡಿಸಿರುವುದು,

ಜೊತೆಗೆ ಅಧ್ಯಕ್ಷತೆಯನ್ನು ಮಂಗಳೂರು ವಿ.ವಿ ಕುಲಪತಿ ಪ್ರೊ. ಯಡಪಡಿತ್ತಾಯರು ವಹಿಸಿರುವುದಕ್ಕೆ ‘ದೇಶಪ್ರೇಮಿ ಸಂಘಟನೆಗಳ ಒಕ್ಕೂಟ’ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಕಾರ್ಯಕ್ರಮ ರದ್ದತಿಗೆ ಆಗ್ರಹಿಸಿದೆ.


ನಾಳೆ(ಜೂನ್ 25) ಸಮಾನ ಮನಸ್ಕ ಸಂಘಟನೆಗಳು, ನಾಗರಿಕರ ಸಹಯೋಗದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ನಾಡಿನ ಇತಿಹಾಸವನ್ನು ವಿಕೃತವಾಗಿ ತಿರುಚಲು, ಶ್ರೇಣೀಕೃತ ಜಾತಿ ಶ್ರೇಷ್ಟತೆಯನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿರುವ ರೋಹಿತ್ ಚಕ್ರತೀರ್ಥ ವಿರುದ್ದ ಕರ್ನಾಟಕದ ಉದ್ದಗಲಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಾರಾಯಣ ಗುರು, ಕಯ್ಯಾರ ಕಿಂಞಣ್ಣ ರೈಗಳ ಮಹತ್ವವನ್ನು ಪಠ್ಯ‌ಪುಸ್ತಕದಲ್ಲಿ ಗೌಣಗೊಳಿಸಲು ಯತ್ನಿಸಿರುವುದು ಕರಾವಳಿ ಜಿಲ್ಲೆಗಳಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.

ಎಲ್ಲಡೆ ಪ್ರತಿಭಟನೆಗಳು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಂಗಳೂರಿನಲ್ಲಿ ಚಕ್ರತೀರ್ಥ ಗೆ ನಾಗರಿಕ ಸನ್ಮಾನ ಏರ್ಪಡಿಸಿರುವುದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ವಿದ್ಯಾನಿಲಯದ ಕುಲಪತಿಗಳು ವಹಿಸುತ್ತಿರುವುದು ವಿದ್ಯಾವಂತರ ನಗರ ಮಂಗಳೂರಿನ ನಾಗರಿಕರು ತಲೆ ತಗ್ಗಿಸುವಂತೆ ಮಾಡಿದೆ.

ವಿ ವಿ ಯ ಕುಲಪತಿಗಳಾದ ಯಡಪಡಿತ್ತಾಯರು ನಾರಾಯಣ ಗುರು, ಕುವೆಂಪು, ಅಂಬೇಡ್ಕರ್ ವಿರೋಧಿಯಾಗಿರುವ ಚಕ್ರತೀರ್ಥ ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು,

ನಾಗರಿಕ ಸನ್ಮಾನವನ್ನು ಆಯೋಜಕರು ರದ್ದುಗೊಳಿಸಬೇಕು ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದೆ.

ಕಾರ್ಯಕ್ರಮ ರದ್ದುಗೊಳಿಸಲು ಒತ್ತಾಯಿಸಿ ನಾಳೆ (ಜೂನ್ 25) ಸಂಜೆ 4 :30 ಕ್ಕೆ ಸಿಟಿ ಸೆಂಟರ್ ಮಾಲ್ ಸಮೀಪ ಸಮಾನ ಮನಸ್ಕ ಸಂಘಟನೆಗಳು,

ನಾಗರಿಕರು ಒಟ್ಟು ಸೇರಿ ಅಲ್ಲಿಂದ ಕಾರ್ಯಕ್ರಮ ನಡೆಯುವ ಡೊಂಗರಕೇರಿ ಕೆನರಾ ಹೈಸ್ಕೂಲ್ ಗೆ ಮೆರವಣಿಗೆಯಲ್ಲಿ ತೆರಳಲು ನಿರ್ಧರಿಸಲಾಯಿತು.

ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲು ಸಭೆ ಮನವಿ ಮಾಡಿತು.


ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಿಂಡಿಕೇಟ್ ಸದಸ್ಯ ಎಮ್ ಜಿ ಹೆಗ್ಡೆ, ದಲಿತ ನಾಯಕ ಎಂ ದೇವದಾಸ್, ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್,

ಸಿಪಿಐಎಂ ಮುಖಂಡರಾದ ಯಾದವ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಸಾಲ್ಯಾನ್, ಸಿಐಟಿಯು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್,

ಕಾರ್ಪೊರೇಟರ್ ಲತೀಫ್ ಕಂದಕ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಮನೋಜ್ ವಾಮಂಜೂರು,

ಯುವ ಕಾಂಗ್ರೆಸ್ ನ ಇಸ್ಮಾಯಿಲ್, ಫಯಾಜ್ ಜೆಡಿಎಸ್ ಮುಂದಾಳುಗಳಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ ಸಭೆಯಲ್ಲಿ ಹಾಜರಿದ್ದರು.

LATEST NEWS

ಕೆನಡಾ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ

Published

on

ಮಂಗಳೂರು/ಒಟ್ಟಾವ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟದಲ್ಲಿ ಭಾರತ ಮೂಲದ ಇಬ್ಬರೂ ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ.


ಭಾರತೀಯ ಮೂಲದ ಅನಿತಾ ಆನಂದ್ (58) ಹಾಗೂ ದೆಹಲಿ ಮೂಲದ ಕಮಲಾ ಖೇರಾ (36) ಅವರು ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕೆನಡಾ ಸಂಸತ್ತಿನ ಇತಿಹಾಸದಲ್ಲಿಯೇ ಖೇರಾ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಂಸತ್ತು ಪ್ರವೇಶಿಸಿದವರಾಗಿದ್ದಾರೆ.

ಇದನ್ನೂ ಓದಿ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆ

ಅನಿತಾ ಆನಂದ್ ಅವರು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿ ಹಾಗೂ ಕಮಲಾ ಖೇರಾ ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸಂಪುಟದಲ್ಲಿಯೂ ಈ ಇಬ್ಬರು ಕಾರ್ಯನಿರ್ವಹಿಸಿದ್ದರು. ಟ್ರಡೊ ಅವರ ರಾಜೀನಾಮೆ ಬಳಿಕ ಅನಿತಾ ಅವರೇ ಪ್ರಧಾನಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

 

Continue Reading

LATEST NEWS

ಮಂಗಳೂರು ಜೈಲಿನಲ್ಲಿ ನೇಣಿಗೆ ಶರಣಾದ ಪೋಕ್ಸೋ ಪ್ರಕರಣದ ಆರೋಪಿ

Published

on

ಮಂಗಳೂರು : ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯೊಬ್ಬ  ಮಂಗಳೂರು ಜೈಲಿನಲ್ಲಿ ನೇ*ಣಿಗೆ ಶರಣಾಗಿದ್ದಾನೆ.  ಪ್ರಕಾಶ್ ಗೋಪಾಲ ಮೂಲ್ಯ(50) ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿ. ಮೂಡುಬಿದ್ರೆ ಠಾಣೆಯಲ್ಲಿ ಈತನ ಬಗ್ಗೆ ಪೋಕ್ಸೋ ಕೇಸ್ ದಾಖಲಾಗಿತ್ತು. ಮಾ.11 ರಂದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದು, ಮಂಗಳೂರು ಜೈಲು ಸೇರಿದ್ದ. ಇಂದು(ಮಾ.16) ಜೈಲಿನ ಟಾಯ್ಲೆಟ್‌ನ ಕಿಟಕಿಗೆ ನೇ*ಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

ಅಪ್ರಾ*ಪ್ತೆ ಮೇಲೆ ಅತ್ಯಾ*ಚಾರ :

ಬೆಳಗಾವಿ ಮೂಲದವನಾದ ಪ್ರಕಾಶ್ ಮೂಡುಬಿದ್ರೆಯ ಲಾಡಿಯಲ್ಲಿ ನೆಲೆಸಿದ್ದ. ಕೂಲಿ ಕೆಲಸ ಮಾಡಿಕೊಂಡಿದ್ದ ಆತನಿಗೆ ವಿಪರೀತ ಕುಡಿತದ ಚಟವಿತ್ತು. ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದನಂತೆ.

ತನ್ನ ಪರಿಸರದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ಅತ್ಯಾ*ಚಾರ ಎಸಗಿದ್ದ. ಅಲ್ಲದೇ ವೀಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪ ಈತನ ಮೇಲಿತ್ತು. ಈ ಬಗ್ಗೆ ಪೋಕ್ಸೋ ಕೇಸ್ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

ಜೈಲಿಗೆ ಸೇರಿದಾತನನ್ನು ನೋಡಲು ಪತ್ನಿಯಾಗಲಿ ಯಾರೂ ಹೋಗಿಲ್ಲ. ತನಗೆ ಜಾಮೀನು ಸಿಗುವುದಿಲ್ಲ ಎಂದು ಜಿಗುಪ್ಸೆಗೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಉಳ್ಳಾಲ ಸೋಮೇಶ್ವರ ಕ್ಷೇತ್ರದಲ್ಲಿ ಸ್ಥಳವಕಾಶದ ಕೊರತೆ; ಸರಕಾರಿ ಜಾಗ ನೀಡುವಂತೆ ಸಂಸದರಿಗೆ ಮನವಿ

Published

on

ಉಳ್ಳಾಲ : ಉಳ್ಳಾಲ ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಪ್ರವಾಸೋದ್ಯಮ,ಗೋಶಾಲೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನ ನಡೆಸಲು ಸ್ಥಳವಕಾಶದ ಕೊರತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ದೇವಸ್ಥಾನದ ಅಂಗಣದ ರೈಲ್ವೇ ಇಲಾಖೆಯ ಅಧೀನದಲ್ಲಿರುವ ಒಟ್ಟು 3 ಎಕರೆ 66 ಸೆಂಟ್ಸ್ ಸರಕಾರಿ ಜಾಗವನ್ನ ಸೋಮನಾಥ ಕ್ಷೇತ್ರಕ್ಕೆ ಪಹಣಿ ಮಾಡಿಸುವಂತೆ ಕೋಟೆಕಾರಿನ‌ ಸನಾತನ ಧರ್ಮ ಜಾಗೃತಿ ಸಮಿತಿ ವತಿಯಿಂದ ಸಂಸದ ಬೃಜೇಶ್ ಚೌಟ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರಿಗೆ ಶನಿವಾರ(ಮಾ.15) ಮನವಿ ಸಲ್ಲಿಸಲಾಯಿತು.

ಸೋಮನಾಥೇಶ್ವರ ಕ್ಷೇತ್ರದ ಹೆಸರಲ್ಲಿ ಮುಂದಕ್ಕೆ ಪ್ರಸಾದ್ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ, ಗೋಶಾಲೆ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂಬ ಉದ್ದೇಶವಿದ್ದು,ಇದಕ್ಕೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಸೋಮನಾಥ ಕ್ಷೇತ್ರದ ಮುಂದುಗಡೆಯ ಸೋಮೇಶ್ವರ ಗ್ರಾಮಕ್ಕೊಳಪಟ್ಟ ಸರ್ವೆ ನಂಬ್ರ 74/12ಎ ಯಲ್ಲಿ 1 ಎಕರೆ 35 ಸೆಂಟ್ಸ್ ಹಾಗೂ ಸರ್ವೆ ನಂಬ್ರ 206/5ಸಿ ಯಲ್ಲಿ 2 ಎಕರೆ 31 ಸೆಂಟ್ಸ್ (ಒಟ್ಟು 3 ಎಕರೆ 66 ಸೆಂಟ್ಸ್) ಸರಕಾರಿ ಜಾಗವು ರೈಲ್ವೆ ಇಲಾಖೆಯ ಅಧೀನದಲ್ಲಿದೆ. ಈ ಎರಡು ಸರಕಾರಿ ಜಾಗದಲ್ಲಿ ಸಾಧಾರಣ 75 ವರ್ಷಕ್ಕಿಂತಲೂ ಹಿಂದೆ ರೈಲ್ವೆ ಇಲಾಖೆಗೆ ಜಲ್ಲಿ ಕಲ್ಲು ತೆಗೆಯಲಿಕ್ಕಾಗಿ ಭೂಮಾಪನ ಇಲಾಖೆಯಿಂದ ಪರವಾನಗಿ ನೀಡಲಾಗಿತ್ತು. ಸದ್ರಿ ಆ ಪರವಾನಗಿಯು ರದ್ದಾಗಿ ಸಾಧಾರಣ 35 ವರ್ಷ ಮೇಲ್ಪಟ್ಟಿದೆ. ಸೋಮೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸ್ಥಳದ ಕೊರತೆ ಇರುವ ಕಾರಣ, ನಾವು ತಿಳಿಸಿರುವ ಸರಕಾರಿ ಜಾಗವನ್ನು ರೈಲ್ವೆ ಇಲಾಖೆಯ ಹೆಸರಿನಿಂದ ಪಹಣಿ ಪತ್ರ ರದ್ದುಪಡಿಸಿ, ದೇವಸ್ಥಾನದ ಹೆಸರಿಗೆ ಮಾಡಿಸಿಕೊಡಬೇಕಾಗಿ ಕೋರಲಾಗಿದೆ.

ಸೋಮೇಶ್ವರ ಕ್ಷೇತ್ರದಲ್ಲಿ ಪ್ರಕೃತಿ ರಮಣೀಯ ಬೀಚ್, ವಿಶಾಲವಾದ ರುದ್ರಪಾದೆ, ಪಾದೆಕಲ್ಲಿನ ಮೇಲೆ ಕಾರಣೀಕ ಸೋಮನಾಥ ದೇವಸ್ಥಾನವಿದ್ದು, ಪವಿತ್ರವಾದ”ಗಧಾ ತೀರ್ಥ” ಕೆರೆಯೂ ಇಲ್ಲಿದೆ. ಈ ಕ್ಷೇತ್ರವನ್ನ ಕೇಂದ್ರ ಸರಕಾರದ ಪ್ರಸಾದ್ ಯೋಜನೆ ಹಾಗೂ ಸ್ವದೇಶ್ ದರ್ಶನ್ ಯೋಜನೆಯ ಪಟ್ಟಿಗೆ ಸೇರಿಸುವಂತೆ ಸನಾತನ ಧರ್ಮ‌ ಜಾಗೃತಿ ಸಮಿತಿಯು ಸಂಸದರು ಮತ್ತು ಅಪರ ಜಿಲ್ಲಾಧಿಕಾರಿಯವರಿಗೆ ಲಿಖಿತ ಮನವಿ ನೀಡಿ ವಿನಂತಿಸಿದೆ.

ಇದನ್ನೂ ಓದಿ : ಕಿನ್ನಿಗೋಳಿ ಸಮೀಪದ ಉಳೆಪಾಡಿಯಲ್ಲಿ ಚಿರತೆಯ ಶ*ವ ಪತ್ತೆ!

ಈ ಸಂದರ್ಭ ಕೋಟೆಕಾರು ಸನಾತನ ಧರ್ಮ ಜಾಗೃತಿ ಸಮಿತಿ ಅಧ್ಯಕ್ಷ ರಮೇಶ್ ಕೊಲ್ಯ, ಉಪಾಧ್ಯಕ್ಷ ಸುರೇಂದ್ರನ್ ಪಿ.ಬೀರಿ, ಕೋಶಾಧಿಕಾರಿ ಗಣೇಶ್ ಕೊಲ್ಯ, ಪ್ರ.ಕಾರ್ಯದರ್ಶಿ ಕೃಷ್ಣರಾಜ್ ಕೆ.ಆರ್, ಜೊತೆ ಕಾರ್ಯದರ್ಶಿ ಜಯಂತ್ ಸಂಕೋಳಿಗೆ, ಸದಸ್ಯರಾದ ಕೃಷ್ಣ ಶೆಟ್ಟಿ ತಾಮಾರ್,ರಾಘವೇಂದ್ರ ಮಾಸ್ಟರ್, ಪವಿತ್ರ ಗಟ್ಟಿ,ರಾಘವನ್ ಬೀರಿ, ಪದ್ಮನಾಭ ಗಟ್ಟಿ, ಕೃಷ್ಣ ಬಿ.ಎಮ್, ರೇವತಿ ಟೀಚರ್, ಪ್ರದೀಪ್ ಚಂದ್ರ ಶೆಟ್ಟಿ ಅಡ್ಕಗುತ್ತು, ವಸಂತ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page