Connect with us

DAKSHINA KANNADA

ಹರೇಕಳದಲ್ಲಿ ಪದವಿಪೂರ್ವ ಶಿಕ್ಷಣ ಆರಂಭ: ಹಾಜಬ್ಬರ ಕನಸು ನನಸು

Published

on

ಕೊಣಾಜೆ: ತಾನು ವಿದ್ಯಾವಂತನಲ್ಲದಿದ್ದರೂ ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪದ್ಮಶ್ರೀ ಪುರಸ್ಕ್ಋತರಾದ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಹರೇಕಳದ ನ್ಯೂಪಡ್ಪು ಎನ್ನುವಲ್ಲಿ ಶಾಲೆಯೊಂದನ್ನು ಆರಂಭಿಸಿದರು.

ಬಳಿಕ ಫ್ರೌಡಶಾಲೆಯ ಕನಸು ಕೂಡ ನನಸಾಗಿದ್ದು, ಇದೀಗ ಅವರ ಮತ್ತೊಂದು ಮಹಾದಾಸೆ ಆಗಿದ್ದ ಪದವಿ ಪೂರ್ವ ಕಾಲೇಜಿನ ಕನಸೂ ಕೂಡ ನೆರವೇರಿದೆ. ಈ ವರ್ಷದಿಂದ ಅಂದರೆ ಜೂನ್ 1 ರಿಂದ ಪದವಿ ಪೂರ್ವ ತರಗತಿಗಳು ಆರಂಭವಾಗಲಿದೆ.

ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ತರಗತಿಗಳು ನಡೆಯಲಿದ್ದು, ಪ್ರಾಂಶುಪಾಲರಾಗಿ ನಾಯಿಲಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್ ರಝಾಕ್ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

ನ್ಯೂಪಡ್ಪು ಶಾಲೆಯಿಂದ ಸಮೀಪದ ಹರೇಕಳ ದಗನೆಪಡ್ಪು ಬಳಿ ಕಾಲೇಜಿಗೆ 1.3 ಎಕ್ರೆ ಜಾಗ ಮೀಸಲಿಟ್ಟಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೊಂದಾವಣೆಯಾಗಿದೆ.

DAKSHINA KANNADA

ಪಿಕಪ್‌ ವಾಹನಗಳ ನಡುವೆ ಮುಖಾಮುಖಿ ಡಿ*ಕ್ಕಿ; 600 ಲೀಟರ್ ಹಾಲು ರಸ್ತೆ ಪಾಲು

Published

on

ಸುಳ್ಯ: ಹಾಲು ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಇನ್ನೊಂದು ಪಿಕಪ್ ವಾಹನ ಡಿಕ್ಕಿಯಾಗಿ ಹಾಲಿನ ವಾಹನ ಪಲ್ಟಿಯಾದ ಘಟನೆ ಬಾಳಿಲದಲ್ಲಿ ಮಂಗಳವಾರ ಸಂಭವಿಸಿದೆ.


ಈ ಅಪಘಾತದಲ್ಲಿ ಹಾಲಿನ ಕ್ಯಾನ್‌ಗಳು ಚೆಲ್ಲಾಪಿಲ್ಲಿ ಯಾಗಿದ್ದು, ಸುಮಾರು 600 ಲೀಟರ್ ಹಾಲು ರಸ್ತೆಯ ಪಾಲಾಗಿದೆ. ಚಾಲಕ ಸಯ್ಯದ್ ಅಬ್ದುಲ್ ಚೆನ್ನಾವರ ಅವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ; ಯುವ ವೈದ್ಯ ಸಾವು, ವೈದ್ಯ ವಿದ್ಯಾರ್ಥಿನಿಗೆ ಗಾಯ

4 ಹಾಲಿನ ಸೊಸೈಟಿಗಳಲ್ಲಿ ಸಂಗ್ರಹವಾದ ಸುಮಾರು 600 ಲೀಟರ್ ಹಾಲು ತುಂಬಿದ್ದ 20 ಕ್ಯಾನ್‌ಗಳನ್ನು ಹೇರಿಕೊಂಡು ಬೆಳ್ಳಾರೆಯತ್ತ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಬಹುತೇಕ ಹಾಲು ಚೆಲ್ಲಿ ಹೋಗಿದೆ ಎಂದು ಹೇಳಲಾಗಿದೆ.

Continue Reading

DAKSHINA KANNADA

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವರ್ಗಾವಣೆ

Published

on

ಮಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ಬದಲಾವಣೆ ಮಾಡಿದ್ದು, ಮಂಗಳವಾರದಂದು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಇದರಲ್ಲಿ ಐವರು ಜಿಲ್ಲಾಧಿಕಾರಿಗಳು ಸೇರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಗಿಲನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯಕ್ತ ದರ್ಶನ್ ಎಚ್.ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

ಮುಲ್ಲೈ ಮುಗಿಲನ್ ಅವರನ್ನು ನೋಂದಣಿ ಮತ್ತು ಮುದ್ರಾಂಕದ ಐಜಿಯಾಗಿ ನೇಮಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿಯಾಗಿದ್ದ ವಿದ್ಯಾಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದುವರೆಗೆ ಇ- ಆಡಳಿತ ನಿರ್ದೇಶಕರಾಗಿದ್ದ ಸ್ವರೂಪ ಟಿ.ಕೆ ಅವರನ್ನು ಉಡುಪಿ ಜಿಲ್ಲಾಧಿಕಾರಿಗಳಾಗಿ ನೇಮಿಸಲಾಗಿದೆ.

ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿಯಾಗಿ ವರ್ಗಾಯಿಸಿದ್ದು, ಪ್ರಭಾರ ಹುದ್ದೆಯಲ್ಲಿದ್ದ ಡಾ.ಆರ್. ವಿಶಾಲ್ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಇದನ್ನೂ ಓದಿ: Watch Video: ಮಂಗಳೂರಿನಲ್ಲಿ ರಸ್ತೆಯ ಮೇಲೆ ಕುಸಿದು ಬಿದ್ದ ಕಾಂಪೌಂಡ್ ವಾಲ್; ಭಯಾನಕ ವೀಡಿಯೋ ವೈರಲ್

ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರನ್ನು ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕಿಯಾಗಿ ವರ್ಗಾಯಿಸಿದ್ದು, ಡಾ.ಕೆ.ವಿ. ತ್ರಿಲೋಕ್‌ಚಂದ್ರ ಅವರನ್ನು ಹೆಚ್ಚುವರಿ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಿದೆ. ಜತೆಗೆ ಬೆಂಗಳೂರು ನಗರ ಜಿಪಂ ಸಿಇಒ ಕೆ.ಎಸ್. ಲತಾಕುಮಾರಿ ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಿದೆ.

 

Continue Reading

DAKSHINA KANNADA

ರಾಜ್ಯ ಸರಕಾರದ ವಿರುದ್ಧ ಜೂನ್‌ 23 ರಂದು ಬಿಜೆಪಿ ಪ್ರತಿಭಟನೆ; ಕ್ಯಾಪ್ಟನ್ ಬ್ರಿಜೇಶ್‌ ಚೌಟ

Published

on

ಮಂಗಳೂರು: ಬಿಜೆಪಿ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಜೂನ್‌ 23 ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯ 223 ಗ್ರಾಮ ಪಂಚಾಯತ್‌, 2 ನಗರ ಸಭೆ, 3 ಪುರಸಭೆ, 1 ಮಹಾನಗರ ಪಾಲಿಕೆ ಮತ್ತು 8 ಪಟ್ಟಣ ಪಂಚಾಯತ್‌ ಕಚೇರಿಗಳ ಎದುರು ಈ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ

ನೈನ್‌ ಇಲೆವೆನ್‌ ಸರಳೀಕರಣ, ಅಕ್ರಮ ಸಕ್ರಮ ಅರ್ಜಿಗಳನ್ನು ಸಮಿತಿಯ ಗಮನಕ್ಕೆ ತಂದು ವಿಲೇವಾರಿ, ಆಶ್ರಯ ಮನೆ ಮಂಜೂರು, ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆ, ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬೇಡಿಕೆಗಳ ಬಗ್ಗೆ ಈ ಮೊದಲು ವಿವಿಧ ವೇದಿಕೆಗಳಲ್ಲಿ ಆಗ್ರಹ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಈಗ ಜನಾಗ್ರಹ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

Continue Reading
Advertisement

Trending

Copyright © 2025 Namma Kudla News

You cannot copy content of this page