Connect with us

DAKSHINA KANNADA

ಗೋವುಗಳ ಮೇಲಿನ ಪೈಶಾಚಿಕ ಕೃ*ತ್ಯ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Published

on

ಮಂಗಳೂರು : ಬೆಂಗಳೂರಿನ ಚಾಮರಾಜನಗರದಲ್ಲಿ ಹಿಂದುಗಳು ಆರಾಧಿಸುವ ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ವಿ*ಕೃತಿ ಮೆರೆದಿರುವುದು ಹಾಗೂ ನಂಜನಗೂಡಿನಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದ ಹಸುವಿನ ಮೇಲೆ ದುಷ್ಟರು ಮಾ*ರಕಾಸ್ತ್ರದಿಂದ ದಾ*ಳಿ ಮಾಡಿ ಹಸುವಿನ ಬಾಲವನ್ನು ಕತ್ತರಿಸಿ ಪೈಶಾಚಿಕ ಕೃ*ತ್ಯ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಗೆ ವಿಶ್ವ ಹಿಂದು ಪರಿಷತ್‌ ಸೇರಿದಂತೆ ಹಲವು ಹಿಂದು ಪರ ಸಂಘಟನೆಗಳು ಸಾಥ್‌ ನೀಡಿದ್ದವು. ಮೊದಲಿಗೆ ಗೋವಿಗೆ ವಿಶೇಷ ಪೂಜೆ ಮಾಡುವ ಮೂಲಕ ಗೋವನ್ನು ಪೂಜಿಸಲಾಯಿತು.

ಬಳಿಕ ನಡೆದ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ  ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳು ಪವಿತ್ರ ಎಂದು ಪೂಜಿಸುವ ಗೋವಿನ ಮೇಲೆ ನಿರಂತರವಾಗಿ ದೌರ್ಜ*ನ್ಯ ದಬ್ಬಾಳಿಕೆ ನಡೆಯುತ್ತಿದೆ. ಯಾವುದೇ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಇಲ್ಲಿ ದೇವಸ್ಥಾನಕ್ಕೆ ಹೋಗಿ ಗಂಧಪ್ರಸಾದ ಸ್ವೀಕರಿಸುತ್ತಾರೆ. ಆದರೆ ಗೋವಿನ ಮೇಲೆ ದೌರ್ಜ*ನ್ಯ ನಡೆದಾಗ ತಮ್ಮ ಬಾಯಿ ಬಿಚ್ಚುತ್ತಿಲ್ಲ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡರಾದ ಎಂ.ಬಿ.ಪುರಾಣಿಕ್, ಶರಣ್ ಪಂಪ್‌ವೆಲ್, ಶಿವಾನಂದ ಮೆಂಡನ್‌, ಗೋಪಾಲ್ ಕುತ್ತಾರ್ ಮೊದಲಾದವರು ಭಾಗಿಯಾಗಿದ್ದರು.

DAKSHINA KANNADA

ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸಿ ಉರ್ವ ಮಾರಿಯಮ್ಮ ಜಾತ್ರೋತ್ಸವಕ್ಕೆ ಚಾಲನೆ

Published

on

ಮಂಗಳೂರು : ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿರುವ ಉರ್ವ ಮಾರಿಯಮ್ಮ ಕ್ಷೇತ್ರದಲ್ಲಿ ಫೆ.7 ರಿಂದ ಜಾತ್ರೋತ್ಸವದ ಕಾರ್ಯಕ್ರಮಗಳು ಆರಂಭವಾಗಿವೆ. ಫ್ರೆ.18 ರಂದು ದರ್ಶನ ಬಲಿ ಹಾಗೂ ವಿಶೇಷವಾಗಿ ನಡೆಯುವ ರಾಶಿ ಪೂಜೆಯೊಂದಿಗೆ ಜಾತ್ರೋತ್ಸವ ನಡೆಯಲಿದೆ.

ಇಂದು ಕ್ಷೇತ್ರದಲ್ಲಿ ಮಾರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಮೆರವಣಿಗೆ ಮೂಲಕ ತೆರಳಿ ನಾಲ್ಕು ದಿಕ್ಕಿಗೆ ಪ್ರಸಾದ ಹಾರಿಸುವ ಧಾರ್ಮಿಕ ವಿಧಿಯ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿದೆ. ಉರ್ವ ಮೈದಾನದಲ್ಲಿ ಹಾಗೂ ಮೂರು ಮಾರ್ಗ ಸೇರುವ ಜಾಗದಲ್ಲಿ ಈ ಪ್ರಸಾದ ಹಾರಿಸುವ  ಧಾರ್ಮಿಕ ವಿಧಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ  ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ. ಫೆ.14 ರಂದು ಪರ್ಸಿನ್‌ ಮೀನುಗಾರರ ಸಂಘದಿಂದ ಕ್ಷೇತ್ರದಲ್ಲಿ ಚಂಡಿಕಾ ಯಾಗ ನಡೆಯಲಿದ್ದು, 17 ರಂದು ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಲಿದೆ. ಮಡೆಸ್ನಾನ, ದರ್ಶನ ಬಲಿ ಸೇವೆ, ರಾಶಿ ಪೂಜೆಗಳು ಫೆ.18 ರಂದು ನಡೆಯಲಿದ್ದು ಫೆ. 22 ರಂದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.

ಇದನ್ನೂ ಓದಿ: ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಇಂದು ನಡೆದ ಪ್ರಸಾದ ಹಾರಿಸುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಗಳೂರು ಏಳು ಪಟ್ನ ಮೊಗವೀರ ಸಂಯುಕ್ತ ಸಭಾದ ಕುದ್ರೋಳಿ 3 ನೇ ಗ್ರಾಮ ಅಧ್ಯಕ್ಷ ಲೋಕೇಶ್ ಸುವರ್ಣ, ದೇವಸ್ಥಾನದ ಮೊಕ್ತೇಸರ ಕುದ್ರೋಳಿ ಒಂದನೇ ಗ್ರಾಮದ ಮಾಧವ ಪುತ್ರನ್ ಗುರಿಕಾರ, 2 ನೇ ಗ್ರಾಮದ ಯಾದವ ಸುವರ್ಣ, 3 ನೇ ಗ್ರಾಮದ ಯಾದವ ಸಾಲ್ಯಾನ್, ಪುರುಷೋತ್ತಮ ಕೋಟ್ಯಾನ್ ಬೊಕ್ಕಪಟ್ನ, ಯಶವಂತ ಪಿ. ಮೆಂಡನ್ ಬೋಳೂರು, ರಂಜನ್ ಕಾಂಚನ್ ಬೋಳೂರು, ವಾಸುದೇವ ಸಾಲ್ಯಾನ್ ಬೈಕಂಪಾಡಿ, ಸುರೇಶ್ ಕುಂದರ್ ಕೂಳೂರು, ಅಮರನಾಥ ಸುವರ್ಣ ಗುರಿಕಾರ ಪಣಂಬೂರು ಮತ್ತು ಗ್ರಾಮದ ಭಕ್ತರು ಉಪ್ಥಿತರಿದ್ದರು.

 

Continue Reading

DAKSHINA KANNADA

ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ದಿಢೀರ್ ದಾಳಿ

Published

on

ಮಂಗಳೂರು : ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ-ಮಳಿಗೆಗಳಿಗೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ನಡೆಯಿತು.

ಮಂಗಳುರಿನ ಫಿಝಾ ಬೈ ನೆಕ್ಸ್ ಮಾಲ್ ಹಾಗೂ ಟೋಕಿಯಾ ಮಾರ್ಕೇಟ್‌ಗಳಿಗೆ ಮೇಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಕೆಲವೊಂದು ಅಂಗಡಿಗಳು ಟ್ರೇಡ್‌ಲೈನ್ಸನ್ ನವೀಕರಿಸದ ಹಿನ್ನಲೆಯಲ್ಲಿ ಬೀಗ ಜಡಿದರು. ಮಾತ್ರವಲ್ಲದೇ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಅಂಗಡಿ ಮಾಲಕಕರಿಗೆ ಮೇಯರ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ : ಸಿದ್ಧರಾಮಯ್ಯಗೆ ಬಿಗ್ ರಿಲೀಫ್; ಸಿಬಿಐ ತನಿಖೆಯಿಂದ ಪಾರಾದ ಸಿಎಂ

ಈ ಸಂದರ್ಭ ಮಾತನಾಡಿದ ಮೇಯರ್, “ಹಲವಾರು ಮಂದಿಯ ದೂರಿನ ಮೇರಿಗೆ ದಾಳಿ ಮಾಡಲಾಗಿದೆ. ಕೆಲವೊಂದು ಅಂಗಡಿಗಳಲ್ಲಿ ಟ್ರೇಡ್‌ಲೈನ್ಸನ್ ನವೀಕರಣ ಮಾಡದ ಹಿನ್ನಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಲಾಗುವುದು” ಎಂದು ಹೇಳಿದರು. ಈ ವೇಳೆ ಉಪಮೇಯರ್ ಭಾನುಮತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕರಿಯ,ಕಂದಾಯ ಅಧಿಕಾರಿ ವಿಜಯ್,ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥತರಿದ್ದರು.

Continue Reading

BELTHANGADY

ಬೆಳ್ತಂಗಡಿ : ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳ ನರ್ತನ ಕಂಡು ಕಣ್ತುಂಬಿಸಿಕೊಂಡ ಭಕ್ತರು

Published

on

ಬೆಳ್ತಂಗಡಿ : ದೈವಾರಾಧನೆಯನ್ನು ಕರಾವಳಿ ಜನತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುವ ಕಾರಣಕ್ಕಾಗಿಯೇ ಇಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಹಾಗಾಗಿ ಇಂದಿಗೂ ಸುಮಾರು 500 ಕ್ಕೂ ಹೆಚ್ಚು ದೈವಗಳನ್ನು ಆರಾಧಿಸಲಾಗುತ್ತದೆ. ಇದೀಗ ಬೆಳ್ತಂಗಡಿ ತಾಲೂಕಿನ ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಗುಳಿಗ ದೈವಗಳಿಗೆ ಏಕಕಾಲದಲ್ಲಿ ನಡೆದ ನರ್ತನ ಸೇವೆ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದ್ದು, ಈ ಅಪರೂಪದ ಸೇವೆ ಇಡೀ ಕರಾವಳಿಯಲ್ಲಿಯೇ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

“ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ” ಎಂಬುವುದು ಆಡಳಿತ ಮುಖ್ಯಸ್ಥರ ಮಾತು. ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ಮಾತ್ರ ನರ್ತನ ಸೇವೆ ನಡೆಯುತ್ತವೆ. ಆದರೆ, ಬರ್ಕಜೆಯಲ್ಲಿ ಒಂಬತ್ತು ಗುಳಿಗ ದೈವಗಳಿಗೆ ನರ್ತನ ಸೇವೆ ನೆರವೇರಿದೆ.

ಇದನ್ನೂ ಓದಿ : ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಗುಳಿಗ ದೈವದ ಆರಾಧನೆ ಕರಾವಳಿ ಭಾಗದಲ್ಲಿ ಬಹು ಆಕರ್ಷಕ. ಅದರ ರೋಷಾವೇಷ ನೋಡೋದೇ ಒಂದು ರೋಮಾಂಚಕ ಅನುಭವ. ತುಳುನಾಡಿನಾದ್ಯಂತ ಆರಾಧಿಸಲ್ಪಡುವ ಗುಳಿಗ ದೈವಗಳು, ಕ್ಷೇತ್ರಪಾಲಕರಾಗಿ ನೆಲೆಸಿ, ಜನರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಒಂದೇ ದಿನ ಒಂದೇ ಬಾರಿ ಈ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು, ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಈ ಬಾರಿಯ ವಾರ್ಷಿಕ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಂಬತ್ತು ಮಂದಿ ದೈವ ನರ್ತಕರು ಏಕಕಾಲದಲ್ಲಿ ನವ ಗುಳಿಗನ ನೇಮೋತ್ಸವ ನಡೆಸಿಕೊಟ್ಟಿದ್ದು, ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Continue Reading
Advertisement

Trending

Copyright © 2025 Namma Kudla News

You cannot copy content of this page