Connect with us

DAKSHINA KANNADA

ಉಗ್ರ ಪರ  ಗೋಡೆ ಬರಹ ಕೃತ್ಯ ಆತಂಕಕಾರಿ ಸಂಗತಿ: ಸಚಿವ ಬಸವರಾಜ್ ಬೊಮ್ಮಾಯಿ…!

Published

on

ಉಗ್ರ ಪರ  ಗೋಡೆ ಬರಹ ಕೃತ್ಯ ಆತಂಕಕಾರಿ ಸಂಗತಿ: ಸಚಿವ ಬಸವರಾಜ್ ಬೊಮ್ಮಾಯಿ…!

 ಮಂಗಳೂರು:  ಮಂಗಳೂರಿನಲ್ಲಿರುವ ಜನನಿಬಿಡ ಪ್ರದೇಶಗಳಲ್ಲಿ ಕಂಡು ಬಂದಿರುವ ಉಗ್ರ ಪರ  ಗೋಡೆ ಬರಹ ಕೃತ್ಯ ಆತಂಕಕಾರಿಯಾದ ಸಂಗತಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

.

ಮಂಗಳೂರಿನಲ್ಲಿ  ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ ಇದು ಅಂತರಾಷ್ಟ್ರೀಯ ಮಟ್ಟದ ಉಗ್ರವಾದ ಮಾಡುವ ಮಾದರಿಯಂತೆ ಕಂಡು ಬರುತ್ತಿದೆ.

ಕಾಶ್ಮೀರ, ಇರಾಕ್, ಇರಾನ್ ದೇಶದಲ್ಲೂ ಈ ರೀತಿ ಗೋಡೆ ಬರಹಗಳು ಕಂಡು ಬಂದಿವೆ. ಉಗ್ರರು ಕೃತ್ಯ ಮಾಡುವ ಮೊದಲು ಈ ರೀತಿ ಬರೆಯುತ್ತಾರೆ.

ಇದೇ ರೀತಿಯ ಸಣ್ಣ ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ ಎಂದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅತೀ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

DAKSHINA KANNADA

ಪುತ್ತೂರಿನಲ್ಲಿದೆಯಂತೆ ನಕಲಿ ವೈದ್ಯರ ಹಾವಳಿ; ಪ್ರತಿಭಟನೆಯಲ್ಲಿ ಬಯಲಾಯ್ತು ರಹಸ್ಯ!

Published

on

ಪುತ್ತೂರು : ಪುತ್ತೂರಿನಲ್ಲಿ ಸರ್ಕಾರಿ ವೈದ್ಯಾಧಿಕಾರಿ ಮೇಲೆ ಹ*ಲ್ಲೆಗೆ ಮುಂದಾದ ಪ್ರಕರಣದ ವಿಚಾರದಲ್ಲಿ ವೈದ್ಯರು ಪ್ರತಿಭಟನೆ ನಡೆಸಿದ್ದರು. ಸೂಕ್ತ ಕಾನೂನು ಭರವಸೆ ಬಳಿಕ ವೈದ್ಯರ ಪ್ರತಿಭಟನೆ ಅಂತ್ಯವಾಗಿದೆಯಾದ್ರೂ ಶನಿವಾರ(ಎ.26) ಸಂಜೆ ತನಕ ಗಡುವು ನೀಡಲಾಗಿದೆ. ಆದ್ರೆ, ಈ ನಡುವೆ ಪುತ್ತೂರಿನಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಕೂಡ ಬಯಲಿಗೆ ಬಂದಿದೆ.

ಪುತ್ತೂರಿನಲ್ಲಿರುವ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿಗೆ ದೂರು ನೀಡಲಾಗಿದೆ ಅಂತ ಸ್ವತಃ ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಹೇಳಿದ್ದಾರೆ. ವಿಪರ್ಯಾಸ ಅಂದ್ರೆ, ಈ ವಿಚಾರವಾಗಿ ದೂರು ನೀಡಿ ಎರಡು ವರ್ಷವಾಗಿದ್ರೂ ಕ್ರಮ ಕೈಗೊಂಡಿಲ್ಲ ಎಂಬ ವಿಚಾರವನ್ನೂ ಅವರೇ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಜನಿವಾರ ಪ್ರಕರಣ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಂತ ಅಗತ್ಯದ ವಿಚಾರವಾಗಿದ್ದು, ಇದರ ವಿಚಾರವಾಗಿ ವೈದ್ಯಕೀಯ ಸಂಘ ನೀಡಿದ ದೂರಿಗೆ ಕ್ರಮ ಆಗದೇ ಇದ್ರೂ ಮೌನವಾಗಿರುವುದೇ ಅಚ್ಚರಿಯ ಸಂಗತಿ. ಈ ಬಗ್ಗೆ ಆರೋಗ್ಯ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

 

Continue Reading

DAKSHINA KANNADA

ಶೋಷಣೆಯನ್ನು ಎದುರಿಸಿ ನಿಂತ ವಿದ್ಯಾವಂತ ಮಹಿಳೆಯ ಕಥೆ; ‘ಪಿದಾಯಿ’ ಮೇ 9 ಕ್ಕೆ ತೆರೆಗೆ

Published

on

ಮಂಗಳೂರು : ಸಂಪ್ರದಾಯಸ್ತರ ಮನೆಯಲ್ಲಿ ನಡೆಯುವ ಮಹಿಳಾ ಶೋಷಣೆಯ ವಿರುದ್ಧದ ಹೋರಾಟ ಹಾಗೂ ಮಹಿಳೆಯರ ಘನತೆ ಎತ್ತಿಹಿಡಿಯುವ ಸಂದೇಶ ಹೊಂದಿರುವ ತುಳು ಸಿನೆಮಾ ‘ಪಿದಾಯಿ’. ಈಗಾಗಲೇ ಈ ಚಿತ್ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಗಮನ ಸೆಳೆದಿದೆ.  2 ನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೀಗ ಈ ಚಿತ್ರ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ಬರುತ್ತಿದ್ದು, ಮೇ 9 ರಂದು ತೆರೆಗೆ ಅಪ್ಪಳಿಸಲಿದೆ.

ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಸಂತೋಷ್ ಮಾಡ. ಜೀಟಿಗೆ ಚಿತ್ರ ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸಂತೋಷ್ ಮಾಡ ಈ ಬಾರಿ ಮಹಮ್ಮಾಯಿ ಪಾತ್ರಿಯ ಮನೆಯಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೇಲಾಗುವ ಶೋಷಣೆಯ ಕುರಿತು ಕಥೆ ಹೇಳಿದ್ದಾರೆ. ನಮ್ಮ ಕನಸು ಬ್ಯಾನರ್ ನಲ್ಲಿ  ಕೆ . ಸುರೇಶ್ ನಿರ್ಮಿಸಿದ್ದಾರೆ.  ಮುಡಿಪು ಹಾಗೂ ಮಂಜೇಶ್ವರ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

ರಮೇಶ್ ಶೆಟ್ಟಿಗಾರ್ ಅವರು ಚಿತ್ರಕತೆ ಬರೆದಿದ್ದು,  ಮಹಾಮಾಹಿ ಪಾತ್ರಿಯಾಗಿ ಖ್ಯಾತ ನಟ ಶರತ್ ಲೋಹಿತಾಶ್ವ ನಟಿಸಿದ್ದಾರೆ.  ಹಲವಾರು ಪ್ರಶಸ್ತಿ ಪಡೆದಿರುವ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಖ್ಯಾತನಾಮರು ಈ ಸಿನೆಮಾದಲ್ಲಿ ಕೆಲಸ ಮಾಡಿದ್ದಾರೆ. ರೂಪಾ ವರ್ಕಾಡಿ, ಇಳಾ ವಿಟ್ಲ, ದೀಪಕ್ ರೈ ಪಾಣಾಜೆ, ದೇವಿ ನಾಯರ್, ಪುಷ್ಪರಾಜ್ ಬೋಳಾರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ ಮೊದಲಾದವರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ರನ್ಯಾ ರಾವ್‌ಗೆ ಮತ್ತೆ ಸಂಕಷ್ಟ; ನಟಿ ವಿರುದ್ಧ’ಕಾಫಿಪೋಸಾ’ ಜಾರಿ

ಈ ಸಿನಿಮಾದ ಛಾಯಾಗ್ರಾಹಣ ಹೊಣೆಯನ್ನು ಉಣ್ಣಿ ಮಾಡವೂರ್‌ ಹೊತ್ತಿದ್ದು, ಅಜಯ್ ನಂಬೂದಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Continue Reading

DAKSHINA KANNADA

 ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಿದ ಐಕಳ ಹರೀಶ್ ಶೆಟ್ಟಿ

Published

on

ಮಂಗಳೂರು : ಕಾರ್ಕಳದ ನೀರೆ ಗ್ರಾಮದ ನಿವಾಸಿ  ನರೇಂದ್ರ ಶೆಟ್ಟಿ ಎಂಬವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಕಷ್ಟವನ್ನರಿತ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸಮಾಜ ಕಲ್ಯಾಣ ಯೋಜನೆಯಡಿ ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನದ ಚೆಕ್‌ನ್ನು ವಿತರಿಸಿದರು.

ಬಂಟರ ಯಾನೆ ನಾಡವರ ಸಂಘ ಬಟ್ಟೆಮಲ್ಲಪ್ಪದ ಅಧ್ಯಕ್ಷರ  ಶಿಫಾರಸ್ಸಿನ ಮೇರೆಗೆ ಹೊಸನಗರದ ಹರತಾಳು ಗ್ರಾಮದ ನಿವಾಸಿ ಸಾಧಮ್ಮ ಶೆಡ್ತಿಯವರು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಮತ್ತು ಶಿವಮೊಗ್ಗದ ಮಾರುತಿಪುರ ಗುಬ್ಬಿಗ ನಿವಾಸಿ, ಪ್ರಭಾಕರ್ ಶೆಟ್ಟಿಯವರು ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಿನ ಹಸ್ತ ಚಾಚಲಾಗಿದೆ.

ಬಂಟ್ವಾಳದ ಸಾಲೆತ್ತೂರಿನ ನಿವಾಸಿ ಶಾರದ ಆಳ್ವರವರು ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ, ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಕಾರ್ಕಳದ ನಿವಾಸಿ ಸುಪ್ರಿತಾ ಶೆಟ್ಟಿಯವರ ಮದುವೆಗೆ, ಮುಂಬೈಯ  ದಯಾಸಾಗರ್ ಚೌಟರವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳದ ಮಂಚಿಯ ನಿವಾಸಿ ಕುಮಾರಿ ಸುಭಾಷಿಣಿ ಶೆಟ್ಟಿಯವರ ಮದುವೆಗೆ, ಬಂಟರ ಸಂಘ ಕುಂಬ್ಳೆ ವಲಯ ಕಾಸರಗೋಡು ಇದರ ಅಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಕಾಸರಗೋಡಿನ ನಿವಾಸಿ ಉಷಾ ಆರ್ ಶೆಟ್ಟಿಯವರ ಮಗಳ ಮದುವೆಗೆ, ಮಂಗಳೂರಿನ ಕಣ್ಣೂರು ಪಡೀಲಿನ ನಿವಾಸಿ ಪೂಜಾಶ್ರೀ ಶೆಟ್ಟಿಯವರ ಮದುವೆಗೆ, ಅಂತೆಯೇ ಪ್ರದೀಪ್ ಶೆಟ್ಟಿ ಅಧ್ಯಕ್ಷರು ಕನ್ನಡ ಸಂಘ ಬ್ಯಾರಿನ್ ಇವರ ಶಿಫಾರಸ್ಸಿನ ಮೇರೆಗೆ ಮಂಗಳೂರಿನ ಐಕಳ ನಿವಾಸಿ ರವಿಕಲ ಶೆಟ್ಟಿಯವರು ಬಹಳ ಕಷ್ಟದಲ್ಲಿರುವುದರಿಂದ ಅವರ ಪುತ್ರಿ ಅನಿಷಾ ಶೆಟ್ಟಿಯವರ ವಿದ್ಯಾಭ್ಯಾಸಕ್ಕೆ, ಮಂಗಳೂರಿನ ಮೂಡುಬಿದ್ರೆ ನಿವಾಸಿ ಶರಣ್ಯ ಶೆಟ್ಟಿಯವರ ವಿದ್ಯಾಭ್ಯಾಸಕ್ಕೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಪಲಾನುಭವಿಗಳಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘದ ನೂತನ ಪದಾಧಿಕಾರಿಗಳಾದ ಪೂರ್ಣಿಮಾ ಎನ್.ಹೆಗ್ಡೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಜಯಂತಿ ಎಸ್. ಶೆಟ್ಟಿ ಹಾಗೂ ಕೋಶಾಧಿಕಾರಿ ಶುಭ ಕಡoಬತಿ ಇವರುಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನ ಕಚೇರಿಗೆ ಭೇಟಿ ನೀಡಿದ ಸಂದರ್ಭ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರನ್ನು ಶಾಲು ಹೊದಿಸಿ, ಫಲ ಪುಷ್ಪ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಇದನ್ನೂ ಓದಿ : ಭಾರತ-ಪಾಕ್ ಗಡಿ ಬಂದ್; ರಾಜಸ್ಥಾನದ ಯುವಕನ ಮದುವೆ ಕ್ಯಾನ್ಸಲ್..!

ಈ ಸಂದರ್ಭದಲ್ಲಿ ರವಿ ಶೆಟ್ಟಿ ಕುಕ್ಕುಂದೂರು, ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಫಲಾನುಭವಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

 

 

 

 

Continue Reading
Advertisement

Trending

Copyright © 2025 Namma Kudla News

You cannot copy content of this page