Connect with us

LATEST NEWS

ಜಗ್ಗೇಶ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಪ್ರಧಾನಿ ಮೋದಿ

Published

on

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಇಂದು ತಮ್ಮ 62ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಜಗ್ಗೇಶ್ ಹಾಗೂ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಒಂದೇ ದಿನವಾದ್ದರಿಂದ ಅವರಿಬ್ಬರ ನಡುವೆ ಒಳ್ಳೆಯ ನಂಟು ಇತ್ತು. ಇದೀಗ ಕಾಮಿಡಿಯನ್ ಸ್ಟಾರ್ ಜಗ್ಗೇಶ್ ಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ವಿಶ್ ಮಾಡಿದ್ದು ಇದು ಜಗ್ಗೇಶ್ ಗೆ ತುಂಬಾನೇ ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ ಮಾಡಿದ ಪತ್ರವನ್ನು ತಮ್ಮ ಸೋಷಿಯಾಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಸೋಷಿಯಾಲ್ ಮೀಡಿಯಾದಲ್ಲಿ, “ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ. ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕರು @narendramodi ರವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ. ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು. ನನ್ನ ಸಲಹುತ್ತಿರುವ ಸರ್ವರಿಗು ನಮನಗಳು”ಎಂದು ಬರೆದುಕೊಂಡಿದ್ದಾರೆ.

ಇನ್ನು ಚಿತ್ರರಂಗದಲ್ಲಿ ಸದಾ ಆಕ್ಟೀವ್ ಆಗಿರುವ ಇವರು ಹೀರೋ ಆಗಿ, ಕಾಮಿಡಿಯನ್ ಆಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅವರು ಉಳಿದುಕೊಂಡಿದ್ದಾರೆ. ಇತ್ತೀಚೆಗೆ ರಾಜಕೀಯ ಕ್ಷೇತ್ರದಲ್ಲೂ, ತೊಡಗಿಕೊಂಡಿದ್ದು, ಪ್ರಧಾನಿ ಮೋದಿ ಪರಿಚಯ ಆಗಿದೆ.

LATEST NEWS

ಉಡುಪಿ : ಹುಲಿ ವೇಷದಾರಿ ಹೃದಯಾಘಾತಕ್ಕೆ ಬಲಿ

Published

on

ಉಡುಪಿ : ನವರಾತ್ರಿ ಸಮಯ ಹುಲಿ ವೇಷ ಹಾಕಿ ಮನರಂಜನೆ ನೀಡುತ್ತಿದ್ದ ಯುವ ಹುಲಿ ವೇಷದಾರಿ ಅಜ್ಜರಕಾಡು ನಿವಾಸಿ ಅನಿಲ್ ಕುಮಾರ್(31) ಇಂದು ಬೆಳಿಗ್ಗೆ (ಏ.28) ಹೃದಯಘಾತದಿಂದ ವಿಧಿವಶರಾಗಿದ್ದಾರೆ.

ಅನಿಲ್ ಕುಮಾರ್ ಕಾಡಬೆಟ್ಟು ಅಶೋಕ್ ರಾಜ್ ಅವರ ತಂದಡಲ್ಲಿ ಹುಲಿ ಕುಣಿತದಲ್ಲಿ ಕಲಾವಿದರಾಗಿ ಗುರುತಿಸಿ ಕೊಂಡಿದ್ದರು. ಜೊತೆಗೆ  ಪೈಂಟಿಂಗ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ : ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

ಈ ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರೈಲ್ವೇ ಇಲಾಖೆ ಪರೀಕ್ಷೆಯಲ್ಲೂ ಎಡವಟ್ಟು; ಜನಿವಾರದ ಜೊತೆ ತಾಳಿಗೂ ಕಂಟಕ

Published

on

ಮಂಗಳೂರು : ಇತ್ತಿಚೆಗೆ ಸಿಇಟಿ ಪರೀಕ್ಷೆಯ ವೇಳೆ ಜನಿವಾರ ತೆಗೆಸಿದ ವಿಚಾರವಾಗಿ ಬ್ರಾಹ್ಮಣ ಸಮೂದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಿಂದೂ ಸಂಘಟನೆಗಳೂ ಕೂಡ ಪರೀಕ್ಷಾರ್ಥಿಗಳಿಗೆ ಜನಿವಾರ ತೆಗೆಸಿದ ವಿಚಾರವಾಗಿ ಪ್ರತಿಭಟನೆ ನಡೆಸಿತ್ತು. ಇದೀಗ ರೈಲ್ವೇ ಇಲಾಖೆ ಕೂಡಾ ಇಂತಹದೇ ಒಂದು ಯಡವಟ್ಟು ಮಾಡಿದೆ. ಅದೇನು ಗೊತ್ತಾ ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಜನಿವಾರ ಪ್ರಕರಣ ತೀವ್ರ ಸುದ್ಧಿಯಾಗುತ್ತಿರುವ ಬೆನ್ನಲ್ಲೇ ಇದೀಗ ಪರೀಕ್ಷೆ ಬರೆಯಲು ಜನಿವಾರ ಮತ್ತು ಮಂಗಳ ಸೂತ್ರ ತೆಗೆದು ಬರುವಂತೆ ಸೂಚಿಸಿದೆ. ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಏಪ್ರಿಲ್ 29 ರಂದು ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲೇ ಈ ಸೂಚನೆಯನ್ನು ನೀಡಿದೆ.

ಮಂಗಳೂರು ನಗರದ ಬೋಂದೇಲ್‌ ಸಮೀಪದ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಹುದ್ದೆಗೆ ಪರೀಕ್ಷೆ ನಡೆಯಲಿದ್ದು, ಹಾಲ್ ಟಿಕೇಟ್ ನಲ್ಲಿ ನಮೂದಿಸಿದ ವಿಚಾರ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ವಿಚಾವಾಗಿದೆ. ಹೀಗಾಗಿ ಈ ಸೂಚನೆಯನ್ನು ರದ್ದು ಪಡಿಸುವಂತೆ ರೈಲ್ವೇ ಇಲಾಖೆಗೆ ಸೂಚಿಸಬೇಕು ಎಂದು ಹಿಂದೂ ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.

Continue Reading

LATEST NEWS

ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಗುಂಡೇಟು; ಆಸ್ಪತ್ರೆಗೆ ದಾಖಲು

Published

on

ಮಂಜೇಶ್ವರ:  ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತನ ಮೇಲೆ ನಿನ್ನೆ ತಡರಾತ್ರಿ ಶೂಟೌಟ್ ನಡೆದಿದೆ. ಈ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ಸಂಭವಿಸಿದೆ. ನಿನ್ನೆ ಸಂಜೆ ವೇಳೆ ಬೈಕ್ ನಲ್ಲಿ ಮನೆ ಕಡೆಗೆ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಶೂಟೌಟ್ ನಡೆದಿದೆ.

ಕಾಲಿಗೆ ಗಂ*ಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಿ ಬೇಟೆ ಬಂದವರು ತಪ್ಪಿ ಗುಂಡು ಹಾರಿಸಿರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.  ಇನ್ನೊಂದು ಮೂಲಗಳ ಪ್ರಕಾರ ಗಾಂಜಾ ವ್ಯಸನಿಗಳು ಅಥವಾ ವ್ಯಾಪಾರಿಗಳು ಕೃತ್ಯ ಎಸಗಿರುವ ಸಾಧ್ಯತೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: ಕಂಟ್ರೋಲ್ ತಪ್ಪಿ ಪಾಳು ಬಾವಿಗೆ ಬಿದ್ದ ಕಾರು; 12 ಜನರ ದುರಂತ ಅಂತ್ಯ

ಬೈಕ್ ನಲ್ಲಿ ತೆರಳುವ ಸಂದರ್ಭ ನಿರ್ಜನ ಪ್ರದೇಶದಲ್ಲಿ ವಾಹನದ ಹೆಡ್ಲೈಟ್ ಕಾಣಿಸಿದ್ದು, ಅದನ್ನು ಗಮನಿಸಿ ಸವಾದ್ ಬೈಕ್ ನಿಲ್ಲಿಸಿದ ಕಾರಣಕ್ಕೆ ಶೂಟೌಟ್ ನಡೆದಿದೆ ಅನ್ನುವ ಮಾತುಗಳು ಕೇಳಿಬಂದಿದೆ. ಮಂಜೇಶ್ವರ ಠಾಣಾ ಪೋಲೀಸರು ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page