Connect with us

DAKSHINA KANNADA

ಯಕ್ಷಗಾನ ಭಾಗವತ ಬಲಿಪರ ಸ್ಮರಿಸಿದ ಪ್ರಧಾನಿ ಮೋದಿ : ಪತ್ರ ಬರೆದು ಬಲಿಪ ಭಾಗವತರಿಗೆ ಶ್ರದ್ಧಾಂಜಲಿ ಅರ್ಪಿಸಿದ ನಮೋ..!

Published

on

ಮಂಗಳೂರು :  ತೆಂಕುತಿಟ್ಟು ಯಕ್ಷಗಾನದ ದಂತಕತೆ, ಬಲಿಪ ಪರಂಪರೆಯ ಮೇರು ಶಿಖರವಾಗಿದ್ದ ದಿವಂಗತ ಬಲಿಪ ನಾರಾಯಣ ಭಾಗವತರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಶ್ರದ್ಧಾಂಜಲಿ ಅರ್ಪಿಸಿ ಪತ್ರವೊಂದನ್ನು ಬರೆದಿದ್ದಾರೆ.

ಈ ಪತ್ರವನ್ನು ದಿವಂಗತ ಬಲಿಪ ಭಾಗವತರ ಪುತ್ರ ಬಲಿಪ ಶಿವಶಂಕರ ಭಾಗವತರಿಗೆ ಬರೆಯಲಾಗಿದೆ.

ಫೆ.21ರಂದು ಬರೆದಿರುವ ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

“ಶ್ರೀ ಬಲಿಪ ಭಾಗವತರ ನಿಧನವು ನನಗೆ ಅತೀವ ನೋವನ್ನು ಉಂಟು ಮಾಡಿದೆ. ಅವರ ಕುಟುಂಬದವರಿಗೆ ಅತೀವ ಸಂತಾಪ ಸೂಚಿಸುತ್ತಿದ್ದೇನೆ” ಎಂದು ಮೋದಿ ಉಲ್ಲೇಖಿಸಿದ್ದಾರೆ.

ಬಲಿಪ ಭಾಗವತರು ಅವರ ಇಡೀ ಜೀವನವನ್ನೇ ಯಕ್ಷಗಾನ ಕಲೆಗೆ ಮುಡಿಪಾಗಿಟ್ಟವರು. ಬಲಿಪ ಶೈಲಿಯ ಭಾಗವತಿಕೆಯಿಂದಲೇ ಅವರು ಜನಮನ್ನಣೆ ಪಡೆದು ಕಲಾ ರಸಿಕರ ಮೆಚ್ಚುಗೆಯನ್ನು ಗಳಿಸಿದ್ದರು. ಯಕ್ಷಗಾನ ಕಲೆಯನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ತರವಾಗಿದೆ.

ಕಲಾ ರಸಿಕರ ಅತೀವ ದುಃಖವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈಗ ಭಾಗವತರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಮೌಲ್ಯ, ಆದರ್ಶ ನಮಗೆ ದಾರಿದೀಪವಾಗಲಿದೆ.

ಅವರ ಅಗಲುವಿಕೆಯಿಂದ ದುಃಖ ತಪ್ತರಾಗಿರುವ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಯಕ್ಷಗಾನ ಕಲಾ ರಸಿಕರಿಗೆ ದೇವರು ಶಕ್ತಿ ನೀಡಲಿ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಪತ್ರದಲ್ಲಿ ಬರೆದಿದ್ದಾರೆ.

ಪೆಡ್ರೆ ಜಟಾಧಾರಿ ಮೇಳ, ಕೂಡ್ಲು, ಇರಾ, ರೆಂಜಾಳ, ಸೌಕೂರು, ಧರ್ಮಸ್ಥಳ, ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. 1972ರಲ್ಲಿ ಕಟೀಲು ಮೇಳ ಸೇರಿದ ಅವರು 2003ರವರೆಗೆ ದೀರ್ಘಾವಧಿ ಕಾಲ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು.

DAKSHINA KANNADA

ನಿರೂಪಕ ಸಾಯಿಹೀಲ್ ರೈಗೆ ಪಿತೃ ವಿಯೋಗ

Published

on

ಮಂಗಳೂರು : ಉದ್ಯಮಿ, ಸಾಯಿ ಭಕ್ತ, ನಿರೂಪಕ ಸಾಯಿಹೀಲ್ ರೈ ಅವರ ತಂದೆ,  ಬೋಳಾರ ಮಂಗಳಾದೇವಿ ನಿವಾಸಿ ಬೆಳ್ಳಿಪ್ಪಾಡಿ ಸತೀಶ್ ರೈ ಅಗರಿ (66) ಅವರು ಇಂದು(ಮಾ.20) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.

ಮೃತರು ಪತ್ನಿ ಶೋಭಾ ರೈ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಬಿ. ಸಿ. ರೋಡ್, ಸಜೀಪ – ನಾಲ್ ಕೈ ತ್ತಾಯ ದೈವಸ್ಥಾನದ ಸಮೀಪ ಇರುವ “ಅಗರಿ ಮನೆ”  ಯಲ್ಲಿ ಸಂಜೆ 4.30 ರಿಂದ 7 ನಡೆಯಲಿದೆ.

 

Continue Reading

DAKSHINA KANNADA

ಸುಳ್ಯ : ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ; ಕಾರಣ ನಿಗೂಢ

Published

on

ಸುಳ್ಯ : ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾರಣಗಳು ನಿಖರವಾಗಿರುವುದಿಲ್ಲ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ಸುಳ್ಯದ ನಲ್ಲೂರು ಕಮ್ರಾಜೆಯ ಪೊಲ್ಲಾಜೆ ಎಂಬಲ್ಲಿ, ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ಮಹಿಳೆಯನ್ನು ರೇವತಿ (51) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

DAKSHINA KANNADA

ಕಡಬ : ಹಾಸ್ಟೆಲ್ ಮಕ್ಕಳ ಆಹಾರದಲ್ಲಿ ಹುಳ ಪತ್ತೆ

Published

on

ಕಡಬ : ಕಡಬ ತಾಲೂಕಿನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ ಮಂಗಳೂರು ಲೋಕಾಯುಕ್ತ ಪೊಲೀಸರ ತಂಡವು ಇಲ್ಲಿನ ಸರಕಾರಿ ಹಾಸ್ಟೆಲಿಗೆ ದಿಢೀರ್ ಭೇಟಿ ನೀಡಿದ್ದು,ತಪಾಸಣೆ ನಡೆಸಿದೆ.

ಕಡಬದ ಸರಕಾರಿ ಕಾಲೇಜು ಪಕ್ಕದಲ್ಲಿರುವ ಬಾಲಕರ ವಸತಿಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಈ ಹಿಂದಿನಿಂದಲೂ ಆರೋಪಗಳು ಕೇಳಿಬರುತ್ತಿದ್ದು,ಮಕ್ಕಳ ಪೊಷಕರಾಗಲೀ ಇತರ ಯಾರೊಬ್ಬರೂ ಈ ಬಗ್ಗೆ ದೂರು ನೀಡುವುದಾಗಲೀ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡುವುದಾಗಲೀ ಮಾಡುತ್ತಿರಲಿಲ್ಲ. ದ.ಕ. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗಾಗಮಿಸಿ ತಪಾಸಣೆ ನಡೆಸಿದಾಗ ಅವ್ಯವಸ್ಥೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಮಂಗಳೂರು ಲೋಕಾಯುಕ್ತ ಎಸ್ಪಿ ಕುಮಾರ್‌ಚಂದ್ರ ಮತ್ತು ಡಿವೈಎಸ್‌ಪಿ ಗಾನಾ ಪಿ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿಗಳು ವಸತಿಗೃಹದಲ್ಲಿ ತಪಾಸಣೆ ನಡೆಸಿದ್ದು ಕಳಪೆ ಆಹಾರ ಪೂರೈಕೆ, ಸಿಸಿ ಕ್ಯಾಮರಾ ಸರಿಯಿಲ್ಲದ ವಿಚಾರ, ಮ್ಯಾಟ್ ಮಾರಾಟ ಆರೋಪ, ಸುರಕ್ಷತಾ ಸಿಬ್ಬಂದಿ ವಾರ್ಡನ್ ಇಲ್ಲದಿರುವುದು ಸೇರಿದಂತೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಮಕ್ಕಳಲ್ಲಿ ವಸತಿಗೃಹದ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಾರ್ಡನ್ ಸೇರಿದಂತೆ ಸಿಬ್ಬಂದಿಗಳು ಇಲ್ಲಿಗೆ ಬಾರದಿರುವ ಬಗ್ಗೆ ಮತ್ತು ಇಲ್ಲಿಗೆ ಬಂದಿರುವ ರಬ್ಬರ್ ಮ್ಯಾಟ್‌ಗಳಲ್ಲಿ ಸುಮಾರು 110 ಮ್ಯಾಟ್‌ಗಳು ಮಾರಾಟ ಮಾಡಿರುವ ಬಗ್ಗೆ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಡುಗೆ ಸಾಮಾಗ್ರಿಗಳನ್ನು ಸಂಗ್ರಹಿಸಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆಹಾರ ಪದಾರ್ಥಗಳಲ್ಲಿ ಹುಳಗಳಿರುವುದನ್ನು ನೋಡಿದರು. ಹಾಜರಾತಿ ಪುಸ್ತಕದಲ್ಲಿ ಮಕ್ಕಳು ಮತ್ತು ಅಧಿಕಾರಿಗಳ ಸಹಿ ಇಲ್ಲದಿರುವ ಬಗ್ಗೆ ಮನಗಂಡರು.ಈ ಬಗ್ಗೆ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸುವುದಾಗಿ ಲೋಕಾಯುಕ್ತ ಎಸ್ಪಿ ಹೇಳಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page