Connect with us

LATEST NEWS

ಉಪ್ಪಿನಂಗಡಿ ಅಶಾಂತಿ ಪ್ರಕರಣ; ಪಿಎಫ್‌ಐ, ಸಂಘ ಪರಿವಾರ ಮತ್ತು ಪೊಲೀಸ್ ಇಲಾಖೆ ಸಮಾನ ಹೊಣೆಗಾರರು-ಸಿಪಿಐ(ಎಂ) ಆರೋಪ

Published

on

ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಸಂಭವಿಸಿದ ಲಾಠಿಚಾರ್ಜ್ ಮತ್ತು ಅಶಾಂತಿಯ ಪ್ರಕರಣಗಳು ಜಿಲ್ಲೆಯಲ್ಲಿ ಕಳೆದ 8 ತಿಂಗಳಿನಿಂದ ನಡೆದುಕೊಂಡು ಬರುತ್ತಿರುವ ಸಂಘ ಪರಿವಾರ ಮತ್ತು ಪಿಎಫ್‌ಐ ಸಂಘಟನೆಗಳು ಸಂಯೋಜಿಸಿ ನಿರ್ದೇಶಿಸುತ್ತಿರುವ ಮತೀಯ ಹುನ್ನಾರ ಮತ್ತು ಕೋಮು ಗಲಭೆಗೆ ವೇದಿಕೆ ನಿರ್ಮಿಸುವ ಪೂರ್ವ ಯೋಜಿತ ಕೃತ್ಯಗಳ ಮುಂದುವರಿದ ಭಾಗವೇ ಆಗಿದೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ, ಭಿನ್ನ ಧರ್ಮಿಯ ಸಹಭೋಜನ ಮತ್ತು ಸಹಕೂಟಗಳ ಮೇಲೆ ಗುಂಪು ಹಲ್ಲೆ, ಪರಸ್ಪರ ವ್ಯಾಪಾರ-ವ್ಯವಹಾರಗಳ ಮೇಲೆ ದಾಂಧಲೆ,

ಲವ್ ಜಿಹಾದ್ ಕಟ್ಟುಕತೆಗಳು, ದನ ಕಳ್ಳತನ ಮತ್ತು ನಾಗಬನ ಧ್ವಂಸದ ಪ್ರಕರಣ ಹಾಗೂ ಪೂಜಾ ಸ್ಥಳಗಳ ಅಪವಿತ್ರ ಇವೇ ಮೊದಲಾದ ಸಮಾಜ ಬಾಹಿರ ಕೃತ್ಯಗಳು ಒಂದಾದ ಮೇಲೆ ಒಂದರಂತೆ ಜಿಲ್ಲೆಯಲ್ಲಿ ಕಳೆದ ೪ ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ.

ಇವುಗಳ ಹಿಂದೆ ಸಂಘ ಪರಿವಾರದ ಸಂಘಟನೆಗಳ ಸಿದ್ಧಾಂತ ಮತ್ತು ಕರ‍್ಯಕರ್ತರು ಭಾಗಿಯಾಗಿದ್ದಾರೆ. ಅದೇ ರೀತಿ ಅದಕ್ಕೆ ಪ್ರತಿಯಾಗಿ ಪಿ.ಎಫ್.ಐ.ನ ಸಿದ್ಧಾಂತದಿಂದ ಪ್ರಭಾವಿತರಾದ ಕಾರ‍್ಯಕರ್ತರು ಕ್ರಿಯೆಗೆ ಪ್ರತಿಕ್ರಿಯೆ ಎಂಬ ನೆಲೆಯಲ್ಲಿ ಸಕ್ರೀಯವಾಗಿ ಸಮಾಜ ಬಾಹಿರ ಶಾಂತಿ ಭಂಗದ ಕೃತ್ಯಗಳಲ್ಲಿ ಭಾಗವಹಿಸಿ ಕಾನೂನನ್ನು ಕೈಗೆತ್ತಿಕೊಂಡಿರುತ್ತಾರೆ.

ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನನ್ನು ಎತ್ತಿ ಹಿಡಿದು ಕಾನೂನಿನನ್ವಯ ಕಾರ‍್ಯ ಪ್ರವೃತ್ತರಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ಮತ್ತೆ ಇದೇ ಸಂಘಟನೆಗಳ ನಾಯಕರೊಂದಿಗೆ ಒಪ್ಪಂದ ನಡೆಸಿ ಅಪರಾಧಿಗಳನ್ನು ಹಸ್ತಾಂತರ ಮತ್ತು ಕೆಲವು ಘಟನೆಗಳಲ್ಲಿ ಅಪರಾಧಿಗಳ ಅದಲು ಬದಲಿನಂತಹ ಪರಸ್ಪರ ಸಂಯೋಜನೆಯನ್ನು ರೂಪಿಸುವ ಮೂಲಕ ಸಂಘ ಪರಿವಾರ ಮತ್ತು ಪಿಎಫ್‌ಐನಂತಹ ಸಮಾಜಬಾಹಿರ ಸಂಘಟನೆಗಳಿಗೆ ಕುಮ್ಮಕ್ಕು ನೀಡಿರುವುದನ್ನು ಕಾಣಬಹುದು.

ಆದುದರಿಂದ ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆಗಳು ಈ ಎರಡು ಸಮಾಜ ಬಾಹಿರ ಕೃತ್ಯಗಳ ವಾರೀಸುದಾರ ಸಂಘಟನೆಗಳೊಂದಿಗೆ ಪೊಲೀಸ್ ಇಲಾಖೆಯೂ ಹೊಣೆಯಾಗಿದೆ ಎಂದು ಸಿ.ಪಿ.ಐ(ಎಂ) ದ.ಕ.ಜಿಲ್ಲಾ ಸಮಿತಿ ಕಾರ‍್ಯದರ್ಶಿ ಕೆ.ಯಾದವ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಸಂಘ ಪರಿವಾರ ಹಾಗೂ ಪಿಎಫ್‌ಐ ಇತ್ತೀಚಿನ ಪೊಲೀಸ್ ಠಾಣೆಗಳ ಮುಂಭಾಗದ ಪ್ರತಿಭಟನೆಯಲ್ಲಿ ಭಜನೆ, ನಮಾಜಿನಂತಹ ಪವಿತ್ರ ಧಾರ್ಮಿಕ ಆಚರಣೆಗಳನ್ನು ಬಳಕೆ ಮಾಡಿರುವುದು ಸಮಾಜದಲ್ಲಿ ಮತೀಯ ದ್ರುವೀಕರಣ ಮತ್ತಷ್ಟು ಆಳಗೊಳಿಸುವ ವ್ಯವಸ್ಥಿತ ಹುನ್ನಾರವಾಗಿದೆ.

ಇಂತಹ ಅಪಾಯಕಾರಿ ಬೆಳವಣಿಗೆಗಳನ್ನು ಜನತೆ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ.

ಜಿಲ್ಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೂದಿಮುಚ್ಚಿದ ಕೆಂಡದಂತಿರುವ ಕೋಮು ಉದ್ವಿಘ್ನತೆಯ ಸಮಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ನೀಡಿರುವ ಹೇಳಿಕೆ ಸಮಾಜ ಬಾಹಿರ ಕೃತ್ಯಗಳಲ್ಲಿರುವ ಸಂಘ ಪರಿವಾರದ ಕರ‍್ಯಕರ್ತರನ್ನು ಹುರಿದುಂಬಿಸಿದೆ.

ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು ಮತ್ತು ಬಿಜೆಪಿ ಪಕ್ಷದ ಸಂಸದರು, ಶಾಸಕರು ಮತ್ತು ನಾಯಕರುಗಳು ಪೊಲೀಸ್ ಇಲಾಖೆಯ ಸ್ವತಂತ್ರ ಕಾರ‍್ಯನಿರ್ವಹಣೆಯ ಮೇಲೆ ಪ್ರಭಾವ ಬೀರಿದ್ದಾರೆ.

ಇದರ ಪರಿಣಾಮವಾಗಿ ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಆಚರಣೆಯು ಸಂಘ ಪರಿವಾರದ ಡ್ರೆಸ್ ಕೋಡಿನೊಂದಿಗೆ ನಡೆದಿದೆ. ಇದನ್ನು ಬಲವಾಗಿ ಉನ್ನತ ಪೊಲೀಸರು ಬೆಂಬಲಿಸಿ ಪ್ರತಿಪಾದಿಸಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.

ಅದೇ ರೀತಿ ಇತ್ತೀಚೆಗೆ ಕರಾವಳಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಸಂಘ ಪರಿವಾರ ಪ್ರತಿಭಟನೆಯ ಭಾಗವಾಗಿ ಭಜನೆ ಹಾಡುವ ಕ್ರಮವನ್ನು ಪೊಲೀಸರು ತಡೆಯದಿರುವುದು.

ಇದೇ ರೀತಿಯಲ್ಲಿ ಉಪ್ಪಿನಂಗಡಿ ಠಾಣೆ ಆವರಣದಲ್ಲಿ ಪ್ರತಿಭಟನಾಕಾರರು ಧಾರ್ಮಿಕ ನಮಾಜನ್ನು ಕೂಡಾ ಮಾಡಲು ಅವಕಾಶ ನೀಡಿರುವುದು ಪೊಲೀಸ್ ಇಲಾಖೆಯ ದೌರ್ಬಲ್ಯವಾಗಿದೆ.

ಅಷ್ಟು ಮಾತ್ರವೇ ಅಲ್ಲದೆ ಕೆಲವು ಪೊಲೀಸ್ ಠಾಣೆಗಳಲ್ಲಿ ಗರ್ಭಿಣೆ ಮಹಿಳೆಯರಿಗೆ ಸಂಪ್ರದಾಯದ ಹಿನ್ನೆಲೆಯ ಸೀಮಂತನ ಇವೇ ಮೊದಲಾದ ಕರ‍್ಯಕ್ರಮಗಳನ್ನು ನಡೆಸುವ ಮೂಲಕ ಪೊಲೀಸ್ ಕರ್ತವ್ಯದ ಪರಿಧಿಯನ್ನು ದಾಟಿರುವ ಪ್ರಕರಣಗಳು ನಡೆದಿವೆ.

ಈ ರೀತಿಯ ಸಂಘ ಪರಿವಾರದ ಕ್ರಿಯೆ ಪಿಎಫ್‌ಐನಂತಹ ಸಂಘಟನೆಗಳ ಪ್ರತಿತಂತ್ರ ಮತ್ತು ಪೊಲೀಸರ ಓಲೈಕೆಯ ಅಧಿಕಾರ ತಂತ್ರಗಳು ಜಿಲ್ಲೆಯನ್ನು ಕೋಮು ಉದ್ವಿಘ್ನತೆ ಅಗ್ನಿ ಕುಂಡದ ಬಳಿ ತಂದಿರಿಸಿದೆ. ಜಿಲ್ಲೆಯ ಶಾಂತಿ, ಸಾಮರಸ್ಯ, ಸಹಬಾಳ್ವೆ ಮರೀಚಿಕೆಯಾಗಿದೆ.

ಕೊರೋನಾ ಸಾಂಕ್ರಮಿಕದಿಂದ ಮತ್ತು ಕೇಂದ್ರ, ರಾಜ್ಯ ಸರಕಾರದ ತಪ್ಪು ಆರ್ಥಿಕ ನೀತಿ, ಕೈಗಾರಿಕಾ ನೀತಿಯಿಂದ ವ್ಯಾಪಕ ಬಡತನ, ಹಸಿವು, ಬೆಲೆ ಏರಿಕೆ, ನಿರುದ್ಯೋಗದಿಂದ ಜಿಲ್ಲೆಯ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹಿಳೆಯರ ಮೇಲೆ, ಅಪ್ರಾಪ್ತ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದ ಘಟನೆಗಳು ಹೆಚ್ಚಾಗುತ್ತಿದೆ.

ಇಂತಹ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಸಂಘ ಪರಿವಾರದ ಸಂಘಟನೆಗಳು ಮತ್ತು ಪಿ.ಎಫ್.ಐ. ಜನರನ್ನು ದಾರಿ ತಪ್ಪಿಸಿ ರಾಜಕೀಯ ಲಾಭ ಪಡೆಯಲು ಕೋಮು ದ್ವೇಷದ ವಿಷ ಪ್ರಸರಿಸುತ್ತಿರುವುದು ತೀವ್ರ ಖಂಡನೀಯ ಎಂದು ಕೆ.ಯಾದವ ಶೆಟ್ಟಿ ತಿಳಿಸಿದ್ದಾರೆ.

bangalore

ರಕ್ಷಕನೇ ಭಕ್ಷಕ: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್‌ಟೇಬಲ್‌ ಅರೆಸ್ಟ್‌

Published

on

ಬೆಂಗಳೂರು: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಕಾನ್ಸ್‌ಟೇಬಲ್‌ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ ಬೆಳಕಿಗೆ ಬಂದಿದೆ. ಈ ರೀತಿಯ ಘಟನೆಯಿಂದ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪೊಲೀಸರೇ ಈ ರೀತಿ ಅನ್ಯಾಯ ಮಾಡಿದರೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆಗಳು ಉದ್ಭವಿಸಿದೆ.


ಯಮುನಾ ನಾಯಕ್‌ ಲೈಂಗಿಕ ಕಿರಿಕುಳ ನೀಡಿದ ಆರ್‌.ಟಿ. ನಗರ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌. ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ವೇಳೆ ಯಮುನಾ ನಾಯಕ್‌, ಪ್ರಥಮ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುತ್ತಾನೆ.

ಇದನ್ನೂ ಓದಿ: ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಮೌಲ್ಯದ ತೊರಕೆ ಮೀನು

ಈ ಕುರಿತು ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್‌ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಯಮುನಾ ನಾಯಕ್‌ನನ್ನು ಬಂಧಿಸಿದ್ದಾರೆ.

Continue Reading

LATEST NEWS

ನಿಧಿ ಪತ್ತೆಯಾದ ಬೆನ್ನಲ್ಲೆ ಸಿಕ್ತು 7 ಹೆಡೆಯ ಘಟಸರ್ಪ ಶಿಲೆ!

Published

on

ಮಂಗಳೂರು/ಗದಗ: ಸದ್ಯ ಎಲ್ಲರ ಚಿತ್ತ ಲಕ್ಕುಂಡಿ ಗ್ರಾಮದತ್ತ. ದಿನನಿತ್ಯ ಅಪರೂಪದ ಐತಿಹಾಸಿಕ ಕುರುಹುಗಳು ಪತ್ತೆಯಾಗುತ್ತಿವೆ. ಇದೀಗ ನಾಗಶಿಲೆ ಪತ್ತೆಯಾಗಿದೆ.

ರವದಿ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ, ಏಳು ಹೆಡೆಗಳನ್ನು ಹೊಂದಿರುವ ಹಾಗೂ ಹಣೆಯ ಮೇಲೆ ನಾಗಮಣಿಯಂತಹ ಅಮೂಲ್ಯ ಕೆತ್ತನೆಯಿರುವ ನಾಗಶಿಲೆ ಪತ್ತೆಯಾಗಿರೋದು ಕುತೂಹಲ ಹುಟ್ಟಿಸಿದೆ.

ಹೇಗಿದೆ ರಚನೆ?

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿರುವ ರವದಿ ಕುಟುಂಬದ ಜಮೀನಿನ ಬಾವಿಯ ಪಕ್ಕದಲ್ಲಿ ಈ ಶಿಲೆ ಸಿಕ್ಕಿದೆ. ಈ ಶಿಲೆಯಲ್ಲಿ ಹಾವಿನ ಏಳು ಹೆಡೆಗಳನ್ನು ಅತ್ಯಂತ ನೈಪುಣ್ಯತೆಯಿಂದ ಕೆತ್ತಲಾಗಿದೆ. ಇದು ಉಬ್ಬು ಚಿತ್ರದ ಮಾದರಿಯಲ್ಲಿದೆ. ವಿಶೇಷ ಅಂದ್ರೆ, ಹಾವಿನ ಹಣೆಯ ಭಾಗದಲ್ಲಿ ವಜ್ರ ಅಥವಾ ನಾಗಮಣಿಯ ಆಕಾರದ ಕೆತ್ತನೆಯಿದೆ.

ಇದನ್ನೂ ಓದಿ : ಉತ್ತರಕನ್ನಡ: ಕಾರು ಅಪಘಾತದಿಂದ ಇಬ್ಬರು ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್; ಇದು ಅಪಘಾತವಲ್ಲ ಕೊಲೆ!

ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಯ ಶೈಲಿಯನ್ನು ಈ ಶಿಲೆ ಹೋಲುತ್ತದೆ ಎನ್ನಲಾಗಿದೆ. ಹನ್ನೆರಡನೇ ಶತಮಾನದ ಅನೇಕ ಕಲ್ಲುಗಳು ಮತ್ತು ವಿಗ್ರಹಗಳು ಈಗಾಗಲೇ ಇಲ್ಲಿ ಪತ್ತೆಯಾಗಿವೆ. ಅಲ್ಲದೆ, ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸಿವೆ.ಇದು ಲಕ್ಕುಂಡಿಯ ಇತಿಹಾಸದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಲಿದೆ.

Continue Reading

LATEST NEWS

ಆಳಸಮುದ್ರ ಮೀನುಗಾರರ ಬಲೆಗೆ ಬಿದ್ದ ಲಕ್ಷಾಂತರ ಮೌಲ್ಯದ ತೊರಕೆ ಮೀನು

Published

on

ಉಡುಪಿ: ಆಳಸಮುದ್ರ ಮೀನುಗಾರರಿಗೆ ಬಂಪರ್ ಲಾಟರಿ ಎದ್ದಿದ್ದು ಭರ್ಜರಿ ಬೇಟೆ ಸಿಕ್ಕಿದೆ. ಲಕ್ಷಾಂತರ ಬೆಲೆಯ ತೊರಕೆ ಮೀನು ಬಲೆಗೆ ಬಿದ್ದಿದೆ.


ಲಕ್ಷಾಂತರ ರೂ. ಖರ್ಚು ಮಾಡಿ ತುಂಬ ದೂರದ ತನಕ ಮೀನುಗಾರಿಕೆಗೆ ಹೋದಾಗ ಕೆಲವೊಮ್ಮೆ ಮೀನೇ ಸಿಗದೆ ನಿರಾಶೆ ಅಗುತ್ತೆ. ಆದರೆ ದಿಢೀರ್ ಲಕ್ಷಾಂತರ ಮೌಲ್ಯದ ಮೀನುಗಳು ಬಲೆಗೆ ಬಿದ್ದಿದೆ.

ಇದನ್ನೂ ಓದಿ: ಫೆ.14ರಂದು 16ನೇ ವರ್ಷದ ಜಯ-ವಿಜಯ ಜೋಡುಕರೆ ಕಂಬಳ; ಆಮಂತ್ರಣ ಪತ್ರಿಕೆ ಬಿಡುಗಡೆ

ಕರಾವಳಿಯಲ್ಲಿ ಬೋಟ್ ನಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ರಾಶಿ ರಾಶಿ ತೊರಕೆ ಮೀನು ಸಿಕ್ಕಿದ್ದು ಫುಲ್ ಖುಷ್ ಆಗಿದ್ದಾರೆ. ಇದನ್ನು ಇಂಗ್ಲೀಷಿನಲ್ಲಿ ಸ್ಟಿಂಗ್ ರೇ ಎಂದು ಕರೆಯಲಾಗುತ್ತದೆ. ಇದನ್ನೇ ಒಣಗಿಸಿ ಮಾರಾಟ ಮಾಡುವ ಉದ್ಯಮವೂ ಇದೆ. ಇದೀಗ ಅರಬ್ಬೀ ಸಮುದ್ರದಲ್ಲಿ‌ ಮೀನುಗಾರರ ಬಲೆಗೆ ಬಿದ್ದ ತೊರಕೆ ಮೀನಿನ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page