Connect with us

LATEST NEWS

ಗರ್ಭಿಣಿ ಮಹಿಳೆ ಅಸ್ಮಿನಾ ಆತ್ಮಹತ್ಯೆ – ಪತಿ ಮತ್ತು ಅತ್ತೆಯ ಬಂಧನ..!

Published

on

ಕೇರಳ ಕೋಝಿಕ್ಕೋಡ್ ನಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಲಾಗಿದೆ.

ಕೋಝಿಕ್ಕೋಡ್ : ಕೇರಳ ಕೋಝಿಕ್ಕೋಡ್ ನಲ್ಲಿ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಲಾಗಿದೆ.

ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಆಕೆಯ ಪತಿ ಜಮ್ಶೀರ್ ಮತ್ತು ಅತ್ತೆ ನಫೀಸಾ ಅವರನ್ನು ಬಂಧಿಸಿದೆ.

ಐದು ತಿಂಗಳ ಗರ್ಭಿಣಿಯಾಗಿದ್ದ ಅಸ್ಮಿನಾ ಕಳೆದ ತಿಂಗಳು 13 ರಂದು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

ಅಸ್ಮಿನಾ ಅವರಿಗೆ ಪತಿ ಮತ್ತು ಕುಟುಂಬದವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕುಟುಂಬದವರು ತೊಟ್ಟಿಲಪಾಲಂ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆದರೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಳೆದ ದಿನ ಕ್ರಿಯಾ ಸಮಿತಿ ರಚಿಸಲಾಗಿತ್ತು.

ಕೊಲೆ ಆರೋಪವೂ ಕೇಳಿ ಬರುತ್ತಿದೆ. ಇದಾದ ನಂತರ ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಜಮ್ಶೀರ್ ಮತ್ತು ಆತನ ತಾಯಿ ನಫೀಸಾ ಅವರನ್ನು ಬಂಧಿಸಿದೆ.

ಕೌಟುಂಬಿಕ ಹಿಂಸಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

 

LATEST NEWS

ಇವನು ಮನುಷ್ಯನಲ್ಲ ನರರೂಪದ ರಾಕ್ಷಸ..! ತಾಯಿ ಹಾಗೂ ಹೆಂಡತಿಯನ್ನು ಕೊಂದು ಮಿದುಳಿನಿಂದ ಮಾಂಸ ಹೊರತೆಗೆದು ತಿಂದ ಪಾಪಿ..!

Published

on

ಲಕ್ನೋ: ಹೆಂಡ್ತಿ ಹಾಗೂ ತಾಯಿಯನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ಅವರ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ತಲೆಯ ಮಾಂಸವನ್ನು ಹೊರತೆಗೆದು ತಿಂದಿರುವ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದಿದೆ. ಸಂತ್ರಸ್ತರ ಕೂಗಾಟ ಕೇಳಿ ಅಲ್ಲಿಗೆ ಓಡಿ ಬಂದ ಅಕ್ಕಪಕ್ಕದ ಮನೆಯವರ ಮುಂದೆಯೇ ಈ ಭೀಭತ್ಸ ಕೃತ್ಯ ನಡೆದಿದ್ದು, ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಕೊಲೆಯಾದ ಮಹಿಳೆಯರ ಕಿರುಚಾಟ ಕೇಳಿ ಎಚ್ಚರಗೊಂಡ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದಾಗ, ಆರೋಪಿ ಸಿಕಂದರ್ ಮಾಂಸದ ತುಂಡುಗಳನ್ನು ಅವರ ಮೇಲೆ ಎಸೆಯಲು ಆರಂಭಿಸಿದ್ದಾನೆ. ಇದು ಅಲ್ಲಿದ್ದವರಲ್ಲಿ ಭೀತಿಗೆ ಹಾಗೂ ಗೊಂದಲಕ್ಕೆ ಕಾರಣವಾಗಿದೆ. ನಂತರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು 30 ವರ್ಷದ ಸಿಕಂದರ್ ಗುಪ್ತಾ ಎಂದು ಗುರುತಿಸಲಾಗಿದೆ. ಈತ ಮುಂಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸುಮಾರು ಒಂದು ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಮರಳಿದ್ದ. ಸಿಕಂದರ್ ಗುಪ್ತಾ ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಹೆಂಡತಿ ಮತ್ತು ತಾಯಿಯ ಮೇಲೆ ಹಲ್ಲೆ ಮಾಡುತ್ತಿದಿದ್ದಲ್ಲದೇ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, ಸಿಕಂದರ್ ಮೊದಲು ತನ್ನ ಹೆಂಡತಿ ಪ್ರಿಯಾಂಕಾ (28) ಮತ್ತು ತಾಯಿ ರೂನಾ ದೇವಿ (60) ಅವರ ಮೇಲೆ ಮನೆಯ ಮೇಲ್ಛಾವಣಿಯ ಮೇಲೆ ಕೋಲುಗಳಿಂದ ಹಲ್ಲೆ ನಡೆಸಿದ್ದಾನೆ. ನಂತರ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಕೊಂಡು ಅವರ ತಲೆಗಳನ್ನು ಪದೇ ಪದೇ ಒಡೆದು, ಇಬ್ಬರನ್ನೂ ಸ್ಥಳದಲ್ಲೇ ಕೊಂದಿದ್ದಾನೆ. ಬಳಿಕ ಶವಗಳನ್ನು ವಿರೂಪಗೊಳಿಸಿ, ತಲೆಬುರುಡೆಯಿಂದ ಮಾಂಸವನ್ನು ತೆಗೆದು, ಇಡೀ ಗ್ರಾಮದವರ ಮುಂದೆ ಅದನ್ನು ಸೇವಿಸಿದ್ದಾನೆ.

ಇದನ್ನೂ ಓದಿ: ಹಾಸನ: ಕಾಡಾನೆ ದಾ*ಳಿಗೆ ಬ*ಲಿಯಾದ ಮಹಿಳೆ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಡಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯ ಭಾಗವಾಗಿ ಪೊಲೀಸರು ಆರೋಪಿಯ ಮಾನಸಿಕ ಸ್ಥಿತಿಯನ್ನು ಸಹ ಪರಿಶೀಲಿಸುತ್ತಿದ್ದಾರೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಮಿಶ್ರಾ ಹೇಳಿದ್ದಾರೆ.

Continue Reading

INTERNATIONAL

‘ಈಗಲೇ ಇರಾನ್‌ನಿಂದ ಹೊರಡಿ’ ಅಮೆರಿಕನ್‌ ಪ್ರಜೆಗಳಿಗೆ ಎಚ್ಚರಿಕೆ ಸಂದೇಶ

Published

on

ವಾಷಿಂಗ್ಟನ್:‌ ಅಮೆರಿಕ-ಇರಾನ್‌ ಉದ್ವಿಗ್ನತೆ ಮಹತ್ವದ ಘಟ್ಟ ತಲುಪುತ್ತಿರುವಂತೆ ತೋರುತ್ತಿದೆ. ಕಾರಣ, ಈಗಲೇ ಇರಾನ್‌ ನಿಂದ ಹೊರಡಿ, ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸಬೇಡಿ. ನಿಮ್ಮದೇ ಯೋಜನೆ ರೂಪಿಸಿಕೊಳ್ಳಿ ಎಂದು ಹೇಳಿದೆ. ಹೀಗಾಗಿ ಅಮೆರಿಕ ವಿದೇಶಾಂಗ ಇಲಾಖೆ ಹೊರಡಿಸಿದ ತುರ್ತು ಭದ್ರತಾ ಎಚ್ಚರಿಕೆ ಜಗತ್ತನ್ನೇ ಬೆಚ್ಚಿಬೀಳಿಸಿದೆ.


‌ಹೌದು, ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲಾ ಖಮೇನಿ ಆಡಳಿತ ವಿರೋಧಿಸಿ ದೇಶಾದ್ಯಾಂತ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಎರಡು ವಾರಗಳನ್ನು ಪೂರೈಸಿರುವ ಪ್ರತಿಭಟನೆಯಿಂದ ಸಂಭವಿಸಿರುವ ಹಿಂಸಾಚಾರದಲ್ಲಿ 600 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹಿಂಸಾಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಮೆರಿಕ ತನ್ನ ಪ್ರಜೆಗಳಿಗೆ ಇರಾನ್‌ ತೊರೆಯುವಂತೆ ಎಚ್ಚರಿಕೆ ನೀಡಿದೆ.

ಇರಾನ್‌ನಾದ್ಯಂತ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿವೆ ಮತ್ತು ಹಿಂಸಾಚಾರ ಹೆಚ್ಚಾಗಬಹುದು ಎಂದು ಅಮೆರಿಕ ಎಚ್ಚರಿಸಿದೆ. ಇದು ಪ್ರತಿಭಟನಾಕಾರರ ಬಂಧನ, ಗಲಭೆಯಿಂದಾಗಿ ದೈನಂದಿನ ಜೀವನಕ್ಕೆ ತೀವ್ರ ಅಡ್ಡಿಗಳಿಗೆ ಕಾರಣವಾಗಬಹುದು ಎಂದು ಅಮೆರಿಕ ತಿಳಿಸಿದೆ.

ಇರಾನ್‌ ಸರ್ಕಾರವು ಮೊಬೈಲ್‌, ಲ್ಯಾಂಡ್‌ಲೈನ್‌ ಮತ್ತು ಇಂಟರ್ನೆಟ್‌ ನೆಟ್‌ವರ್ಕ್‌ ಅನ್ನು ನಿರ್ಬಂಧಿಸಿದೆ ಎಂದು ಹೇಳಿದೆ. ಅಲ್ಲದೆ ಹಲವಾರು ವಿಮಾನಯಾನ ಸಂಸ್ಥೆಗಳು ಇರಾನ್‌ಗೆ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ಸೀಮಿತಗೊಳಿಸಿವೆ ಅಥವಾ ರದ್ದುಗೊಳಿಸಿವೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಭಾರತೀಯರಿಗೆ ಗುಡ್ ನ್ಯೂಸ್ : ವೀಸಾ ಮುಕ್ತ ಪ್ರಯಾಣ ಘೋಷಿಸಿದ ಜರ್ಮನಿ

‘ನಿರಂತರ ಇಂಟರ್ನೆಟ್‌ ಕಡಿತ ಇರುವುದರಿಂದ ಪರ್ಯಾಯ ಸಂವಹನ ವಿಧಾನಗಳನ್ನು ಯೋಜಿಸಬೇಕು ಮತ್ತು ಸುರಕ್ಷಿತವಾಗಿದ್ದರೆ, ಅರ್ಮೇನಿಯಾ ಅಥವಾ ಟರ್ಕಿ ಮೂಲಕ ಭೂಮಾರ್ಗದಲ್ಲಿ ಇರಾನ್‌ನಿಂದ ಹೊರಡುವುದನ್ನು ಪರಿಗಣಿಸಬೇಕು’ ಎಂದು ಎಚ್ಚರಿಕೆಯಲ್ಲಿ ಸೂಚಿಸಲಾಗಿದೆ.

Continue Reading

LATEST NEWS

ಇತ್ತ ಯೋಧ ಸಾ*ವು…ಅತ್ತ ಹೆಣ್ಣು ಮಗು ಜನನ…ಹಸುಗೂಸಿನೊಂದಿಗೆ ಸ್ಟ್ರೆಚರ್‌ನಲ್ಲಿ ಬಂದು ಅಂತಿಮ ದರ್ಶನ ಪಡೆದ ಪತ್ನಿ!

Published

on

ಮಂಗಳೂರು/ಮಹಾರಾಷ್ಟ್ರ : ಆತ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ. ಪತ್ನಿ ಗರ್ಭಿಣಿಯಾಗಿದ್ದ ಕಾರಣ ಪಿತೃತ್ವ ರಜೆ ಪಡೆದು ಹುಟ್ಟೂರಿಗೆ ಬಂದಿದ್ರು. ಅತ್ತ ಪತ್ನಿಗೆ ಹೆರಿಗೆ ನೋ*ವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಆಗಮನಕ್ಕಾಗಿ ಯೋಧನ ಕುಟುಂಬ ಕಾಯುತ್ತಿತ್ತು. ಆದ್ರೆ, ವಿಧಿಯಾಟ ಬೇರೆಯೇ ಆಗಿತ್ತು.

ಹೌದು, ಪತ್ನಿಗೆ ಬೇಕಾದ ಅಗತ್ಯ ವಸ್ತುಗಳನ್ನು ತರಲು ಬೈಕ್ ನಲ್ಲಿ ತೆರಳಿದ್ದ ಯೋಧ ಅಪ*ಘಾತಕ್ಕೀಡಾಗಿ ಪ್ರಾ*ಣ ಕಳೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ನಡೆದಿರೋದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ.

35 ವರ್ಷದ ಪ್ರಮೋದ್ ಜಾಧವ್ ಮೃ*ತ ಯೋಧ. ಮಿನಿ ಟ್ರಕ್  ಬೈಕ್‌ಗೆ ಡಿ*ಕ್ಕಿಯಾಗಿ ಪ್ರಮೋದ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಕೊನೆಯು*ಸಿರೆಳೆದಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿ ರುತುಜಾ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾರೆ.

ಇದನ್ನೂ ಓದಿ : ಶಬರಿಮಲೆಗೆ ಹೋಗಿ ಬಂದ ದಿನವೇ ಕ್ರೌ*ರ್ಯ ಮೆರೆದ ಪತಿ; ಪತ್ನಿಯ ಕೊಂ*ದು ನದಿಗೆ ಎಸೆದ ಪಾಪಿ

ಪತಿಗೆ ವಿದಾಯ ಹೇಳಲು ಪುಟ್ಟ ಕಂದಮ್ಮನೊಂದಿಗೆ ಪತ್ನಿ ಸ್ಟ್ರೆಚರ್ ನಲ್ಲಿ ಬಂದ ದೃಶ್ಯ ಕರುಳು ಹಿಂಡುವಂತಿತ್ತು.  ಈ ದೃಶ್ಯ  ಕಂಡು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page