Connect with us

LATEST NEWS

ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣ: 21ನೇ ಆರೋಪಿಯನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳ ತಂಡ

Published

on

ಸುಳ್ಯ : ಬಿಜೆಪಿ ಯುವ ಮುಖಂಡ, ಬೆಳ್ಳಾರೆಯ ಪ್ರವೀನ್‌ ನೆಟ್ಟಾರು ಕೊ*ಲೆ ಪ್ರಕರಣದ 21ನೇ ಆರೋಪಿ ಅತೀಕ್ ಅಹಮ್ಮದ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ಬಂಧಿಸಿದ್ದಾರೆ.

ಪಿಎಫ್‌ಐ ನಾಯಕತ್ವದ ಅಡಿಯಲ್ಲಿ ಪ್ರವೀಣ್ ನೆಟ್ಟಾರು ಕೊ*ಲೆ ಪ್ರಕರಣದ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಾಫಾ ಪೈಚಾರ್‌ಗೆ ಅತೀಕ್ ಅಹ್ಮದ್‌ ಆಶ್ರಯ ನೀಡಿ ಸಹಾಯ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಜನರಲ್ಲಿ ಭಯ ಮತ್ತು ಕೋಮುಗಲಭೆಗಳನ್ನು ಪ್ರಚೋದಿಸಲು ಪಿಎಫ್‌ಐ ಅಜೆಂಡಾದ ಭಾಗವಾಗಿ ಪ್ರವೀನ್‌ ನೆಟ್ಟಾರು ಕೊಲೆಯನ್ನು ಮುಸ್ತಾಫಾ ಯೋಜಿಸಿ ಕಾರ್ಯಗತಗೊಳಿಸಿದ್ದ. ಕೃತ್ಯದ ಬಳಿಕ ಮುಸ್ತಫಾ ಪರಾರಿ ಆಗಿದ್ದು, ಈ ವೇಳೆ ಆರೋಪಿ ಅತೀಕ್ ಆತನನ್ನು ಚೆನ್ನೈಗೆ ಕಳುಹಿಸಿರುವುದು ಸಹಿತ ಆತನಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದ.

ಇದನ್ನೂ ಓದಿ: ಅರೆಬೈಲ್ ಘಾಟ್‌ನಲ್ಲಿ ತರಕಾರಿ ತುಂಬಿದ್ದ ಲಾರಿ ಪಲ್ಟಿ: 9 ಜನರ ಸಾವು

2024ರ ಮೇ ತಿಂಗಳಿನಲ್ಲಿ ಮುಸ್ತಾಫನನ್ನು ಬಂಧಿಸುವವರೆಗೂ, ಆರೋಪಿ ಅತೀಕ್‌ ಅಹ್ಮದ್ ಸಹಕಾರ ನೀಡಿದ್ದಾನೆ ಎಂದು ತಿಳಿದು ಬಂದಿದೆ. 2022ರ ಆಗಸ್ಟ್‌ನಲ್ಲಿ ಪ್ರವೀಣ್‌ರನ್ನು ದುಷ್ಕರ್ಮಿಗಳು ಹ*ತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡಿತ್ತು.

ಪಿಎಫ್‌ಐ ಸೇವಾ ತಂಡಗಳು ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ ಮತ್ತು ಉದ್ದೇಶಿತ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ ಎಂದು ಎನ್‌ಐಎ ತನ್ನ ತನಿಖೆಯಲ್ಲಿ ಕಂಡು ಹಿಡಿದಿತ್ತು. ಪ್ರವೀಣ್ ಕೊಲೆ ಪ್ರಕರಣದ ಉಳಿದ 6 ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಎನ್‌ಐಎ ಹೇಳಿದೆ.

LATEST NEWS

ಮಾಲ್‌ನ ಶೌಚಾಲಯಗಳು ಈ ರೀತಿ ಯಾಕೆ ಇರುತ್ತದೆ ಗೊತ್ತಾ..?

Published

on

ಮಂಗಳೂರು: ಮನೆಯಲ್ಲಿ ಕುಳಿತು ತುಂಬಾ ಬೋರ್ ಆಗ್ತಾ ಇದ್ರೆ ಕೆಲವೊಮ್ಮೆ ಮಾಲ್‌ಗಳಿಗೆ ಹೋಗಿ ಎಂಜಾಯ್ ಮಾಡುವುದುಂಟು. ಮಾಲ್‌ಗಳನ್ನು ನೋಡುತ್ತಾ ನೋಡುತ್ತಾ ಪ್ರತಿಯೊಂದು ಳಿಗೆಗಳನ್ನು ಸುತ್ತುತ್ತಾ ಇದ್ದಾರೆ ದಿನ ಹೋಗುವುದೇ ಗೊತ್ತಾಗುವುದಿಲ್ಲ. ಮಾಲ್‌ಗಳಲ್ಲಿ ನೀವು ಶೌಚಾಲಯಕ್ಕೆ ಹೋಗಿರಬಹುದು. ಆ ಶೌಚಾಲಯಗಳ ಡಿಸೈನ್‌ ಅನ್ನು ನೀವು ನೋಡಿದ್ದೀರಾ..?

 

ಹೌದು.. ಹೆಚ್ಚಿನವರು ಮಾಲ್‌ಗಳಿಗೆ ಹೋದಾಗ ಅದರ ಡಿಸೈನ್‌ ಅನ್ನು ಗಮನಿಸಿರಬಹುದು. ನೋಡಲು ಸ್ವಲ್ಪ ವಿಭಿನ್ನವಾಗಿರುತ್ತದೆ. ಮನೆಯಲ್ಲಿ ಅಥವಾ ಬೇರೆ ಕಡೆ ಎಲ್ಲಿಯಾದರೆ ಶೌಚಾಲಯವು ಗೋಡೆಗೆ ಹಾಗೂ ನೆಲಕ್ಕೆ ಅಂಟಿಕೊಂಡಿರುತ್ತದೆ. ಆದರೆ ಮಾಲ್‌ಗಳ ಶೌಚಾಲಯವು ಗೋಡೆಗೆ ಮತ್ತು ನೆಲಕ್ಕೆ ಅಂಟಿಕೊಂಡಿರುವುದಿಲ್ಲ. ಇವೆರಡರ ನಡುವೆ ಗ್ಯಾಪ್ ಇರುತ್ತದೆ. ಈ ರೀತಿ ಯಾಕೆ ಮಾಡುತ್ತಾರೆ ಎಂಬುದನ್ನು ನೋಡೋಣ.

ಮಾಲ್‌ಗಳಲ್ಲಿ ದಿನವಿಡೀ ಜನರು ಈ ಶೌಚಾಲಯಗಳನ್ನು ಬಳಸುತ್ತಿರುತ್ತಾರೆ. ಇದನ್ನು ಕ್ಲೀನ್ ಮಾಡಲೆಂದೇ ತುಂಬಾ ಜನ ಕೆಲಸಗಾರರು ಅಲ್ಲಿ ಇರುತ್ತಾರೆ. ಜನರು ತುಂಬಾ ಬಾರೀ ಶೌಚಾಲಯವನ್ನು ಬಳಸುವುದರಿಂದ ಕೊಳಕಾಗುತ್ತದೆ. ಮಹಡಿ ಮತ್ತು ಬಾಗಿಲಿನ ಮಧ್ಯೆ ಗ್ಯಾಪ್ ಇದ್ರೆ ಕ್ಲೀನ್ ಮಾಡಲು ಸುಲಭವಾಗುತ್ತದೆ. ಮಾಪ್ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು.

ಅಲ್ಲದೇ ಒಂದು ವೇಳೆ ವ್ಯಕ್ತಿ ಟಾಯ್ಲೆಟ್ ಒಳಗೆ ಅನಾರೋಗ್ಯಕ್ಕೊಳಗಾದ್ರೆ, ಪುಜ್ಞೆ ತಪ್ಪಿದ್ರೆ, ಕುಸಿದು ಬಿದ್ರೆ ತಕ್ಷಣ ಹೊರಗಿರುವವರಿಗೆ ತಿಳಿಯುತ್ತದೆ. ಬಾಗಿಲು ಹಾಗೂ ಮಹಡಿ ಮಧ್ಯೆ ಜಾಗವಿಲ್ಲದೆ ಹೋದ್ರೆ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ.

ಕೆಲವೊಮ್ಮೆ ಮಕ್ಕಳು ಶೌಚಾಲಯದ ಬಾಗಿಲನ್ನು ಹಾಕಿಕೊಳ್ತಾರೆ. ನಂತರ ಅವರಿಗೆ ಬಾಗಿಲು ತೆಗೆಯಲು ಬರುವುದಿಲ್ಲ. ಹೊರಗೆ ಯಾರೂ ಇಲ್ಲವೆಂದಾದ್ರೆ ಬಾಗಿಲಿನಡಿಯಿಂದ ನುಸುಳಿ ಸುಲಭವಾಗಿ ಹೊರಗೆ ಬರಬಹುದಾಗಿದೆ.

Continue Reading

LATEST NEWS

ಎಟಿಎಂ ದರೋಡೆ ಪ್ರಕರಣ ಬಯಲು ಮಾಡಿತು ಟೀ ಅಂಗಡಿ ಬಳಿ ನಡೆದ ಜಗಳ!

Published

on

ಮಂಗಳೂರು/ಬೆಂಗಳೂರು : ಅವರು ಖತರ್ನಾಕ್ ಕಳ್ಳರು. ಎಟಿಎಂನಿಂದ ಹಣ ಲೂಟಿ ಮಾಡುತ್ತಿದ್ದರು. ಆದರೆ,  ಖದೀಮರ ಕರಾಮತ್ತು ಅವರೇ ಮಾಡಿದ ಎಡವಟ್ಟಿನಿಂದ  ಸಿಕ್ಕಿ ಬೀಳುವಂತಾಗಿದೆ. ಲೂಟಿ ಮಾಡಿದ ಹಣಕ್ಕಾಗಿ ಟೀ ಅಂಗಡಿ ಬಳಿ ಜಗಳವಾಡಿದ 6 ಮಂದಿ ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರ ಕೈಗೆ ತಗಲಾಕ್ಕೊಂಡಿದ್ದಾರೆ.

ಎಸ್‌ ಸಮೀರ್‌ (26), ಕೆ ಮನೋಹರ (29), ಎಸ್‌ ಗಿರೀಶ್‌ (26), ಜಗ್ಗೇಶ್‌ (28), ಲಗ್ಗೆರೆಯ ವಿಆರ್‌ ಜಶ್ವಂತ್‌ (27), ಶಿವು(27) ಬಂಧಿತ ಆರೋಪಿಗಳು. ಆರು ಮಂದಿಯೂ ಖಾಸಗಿ ನಗದು ನಿರ್ವಹಣಾ ಕಂಪನಿಯ ಉದ್ಯೋಗಿಗಳಾಗಿದ್ದು, ನಂದಿ ಲೇಔಟ್‌ನಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ವಿಚಾರಣೆ ವೇಳೆ ಬಯಲಾಯ್ತು ದರೋಡೆ ವಿಚಾರ :

ಕೆಂಪೇಗೌಡ ಲೇಔಟ್‌ನಲ್ಲಿರುವ ಟೀ ಸ್ಟಾಲ್‌ಗೆ ಬಂದಿದ್ದ ಆರೋಪಿಗಳು, ಕದ್ದ ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಚಾರಕ್ಕೆ ಜಗಳವಾಡುತ್ತಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹಲವು ಎಟಿಎಂ ಗಳಲ್ಲಿ ಹಣ ದೋಚಿರುವ ವಿಚಾರ ಬೆಳಕಿಗೆ ಬಂದಿದೆ.

ಆರೋಪಿಗಳು ಎಟಿಎಂಗಳಿಗೆ ಹಣವನ್ನು ತುಂಬುವ ಹಾಗೂ ಎಟಿಎಂಗಳನ್ನು ರಿಪೇರಿ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಅಲ್ಲದೆ, ಎಟಿಎಂಗಳಿಗೆ ಹಣವನ್ನು ತುಂಬುವಾಗ ಕಡಿಮೆ ಹಣವನ್ನು ತುಂಬಿ ಉಳಿದ ಹಣವನ್ನು ಲಪಟಾಯಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ, ಎಟಿಎಂ ಯಂತ್ರಗಳನ್ನು ರಿಪೇರಿ ಮಾಡುವಾಗ ಪಾಸ್‌ವರ್ಡ್ ಪಡೆದು ಎಟಿಎಂಗಳಲ್ಲಿದ್ದ ಹಣವನ್ನು ದೋಚುತ್ತಿದ್ದರು ಎಂಬ ವಿಚಾರ ಬಯಲಾಗಿದೆ.

ಇದನ್ನೂ ಓದಿ : ನಿಮಗೆ ಕೂದಲು ಉದುರುತ್ತಿದೆಯೇ ? ಹಾಗಾದ್ರೆ ಇಂದೇ ಆಲೋವೆರಾ ತೆಗೊಳ್ಳಿ, ಹೀಗೆ ಮಾಡಿ..ಅಷ್ಟೇ..!!

ಕಳೆದ ಎರಡು ವರ್ಷಗಳಿಂದ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಪೈಕಿ ಮೂವರು ಕದ್ದ ಹಣವನ್ನು ಬಳಸಿಕೊಂಡು ಮೂರು ಎಸ್‌ಯುವಿಗಳನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 51 ಲಕ್ಷ ರೂ. ನಗದು ಮತ್ತು ಮೂರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Continue Reading

LATEST NEWS

ನಿಮಗೆ ಕೂದಲು ಉದುರುತ್ತಿದೆಯೇ ? ಹಾಗಾದ್ರೆ ಇಂದೇ ಆಲೋವೆರಾ ತೆಗೊಳ್ಳಿ, ಹೀಗೆ ಮಾಡಿ..ಅಷ್ಟೇ..!!

Published

on

ಕೂದಲು ಉದುರುವಿಕೆ ಎಂಬುವುದು ಇಂದಿನ ದಿನದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಕೂದಲು ಒಡೆಯುವುದು, ತೆಳುವಾಗುವುದು ಮತ್ತು ಬಿಳಿಯಾಗುವ ಸಮಸ್ಯೆಗಳಿಂದ ಬಹುತೇಕ ಎಲ್ಲರೂ ತೊಂದರೆಗೀಡಾಗಿದ್ದಾರೆ. ಕೆಲವರು ಚಿಕ್ಕ ವಯಸ್ಸಿನಲ್ಲಿಯೇ ಬೋಳುತಲೆ ಸಮಸ್ಯೆ ಅನುಭವಿಸುತ್ತಾರೆ. ಕೆಲವೊಮ್ಮೆ, ಹವಾಮಾನ ಅಥವಾ ಜೀವನಶೈಲಿ ಬದಲಾದಾಗ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಕೆಲವು ದಿನಗಳವರೆಗೆ ಸಂಭವಿಸುವುದು ಸಾಮಾನ್ಯ, ಆದರೆ ದೀರ್ಘಕಾಲದವರೆಗೆ ನಿರಂತರವಾಗಿ ಕೂದಲು ಉದುರುತ್ತಿದ್ದರೆ ಬೋಳುತನಕ್ಕೆ ಕಾರಣವಾಗಬಹುದು.

ಕೂದಲು ಉದುರುವ ಸಮಸ್ಯೆಯ ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಅದರಲ್ಲಿ ಅಲೋವೆರಾ ಅತ್ಯುತ್ತಮ ಪರಿಹಾರವಾಗಿದೆ. ಕೂದಲಿನ ಅನೇಕ ಸಮಸ್ಯೆಗಳನ್ನುಇದು ಪರಿಹರಿಸುತ್ತದೆ.  ಅಲೋವೆರಾ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೆ. ಅಲೋವೆರಾ ಜೆಲ್ ನಲ್ಲಿ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ 12, ಕೊಬ್ಬಿನಾಮ್ಲಗಳು ಮತ್ತು ಅಮೈನೋ ಆಮ್ಲಗಳಿವೆ. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ತುರಿಕೆ, ಸೋಂಕು ಮತ್ತು ಕೂದಲಿನ ಶುಷ್ಕತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಲೋವೆರಾದಲ್ಲಿ ಅಲೋಯಿನ್ ಎಂಬ ರಾಸಾಯನಿಕ ಸಂಯುಕ್ತವಿದೆ. ಇದು ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸ :

ಅಲೋವೆರಾ ಜೆಲ್ ಮತ್ತು ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಮಿಶ್ರಣವನ್ನು ಕೆಲವು ತಿಂಗಳುಗಳ ಕಾಲ ನಿರಂತರವಾಗಿ ಬಳಸಿ. ಈರುಳ್ಳಿ ರಸದೊಂದಿಗೆ ಬೆರೆಸಿದ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ಅನ್ವಯಿಸಿ 1 ಗಂಟೆ ಕಾಲ ಬಿಟ್ಟು ಸ್ನಾನ ಮಾಡಬೇಕು.

ಅಲೋವೆರಾ ಜೆಲ್ ಮತ್ತು ಆಮ್ಲಾ ಪುಡಿ ಮಿ :

ಅಲೋವೆರಾದ ಜೊತೆ ಆಮ್ಲವನ್ನು ಸೇರಿಸಿ ಕೂದಲಿಗೆ ಹಚ್ಚುವುದರಿಂದ  ಕೂದಲಿಗೆ ತುಂಬಾನೆ ಪ್ರಯೋಜನ ನೀಡುತ್ತೆ. ಒಂದು ಬಟ್ಟಲಿನಲ್ಲಿ ಅಲೋವೆರಾ ಜೆಲ್ ಮತ್ತು ಸ್ವಲ್ಪ ಆಮ್ಲಾ ಅಥವಾ ನೆಲ್ಲಿಕಾಯಿ ಪುಡಿಯನ್ನು ಬೆರೆಸಬೇಕು ಅಥವಾ ಆಮ್ಲಾ ರಸವನ್ನು ಸಹ ಸೇರಿಸಬಹುದು. ಬಳಿಕ ಅದನ್ನು ಪೇಸ್ಟ್ ನಂತೆ ತಲೆಬುರುಡೆಗೆ ಹಚ್ಚಿ ಅರಿಶಿನದಿಂದ ಮಸಾಜ್ ಮಾಡಿ. 1-2 ಗಂಟೆಗಳ ಕಾಲ ಹಾಗೆ ಬಿಟ್ಟು ಕೂದಲನ್ನು ತೊಳೆಯಬೇಕು. ಇದನ್ನು ವಾರಕ್ಕೆ ಕನಿಷ್ಠ 2 ಬಾರಿ ಮಾಡಿದರೆ ಕೂದಲು ಉದುರುವಿಕೆ ಕಡಿಮೆಯಾಗಿ, ಹೊಸ ಕೂದಲು ಬೆಳೆಯುತ್ತದೆ.

Continue Reading
Advertisement

Trending

Copyright © 2025 Namma Kudla News

You cannot copy content of this page