Connect with us

DAKSHINA KANNADA

ಅಡ್ಡೂರು ಹೊಳೆಗೆ ಹಾರಿ ನಾಪತ್ತೆಯಾದ ಪ್ರಶಾಂತ್ – ಪತ್ತೆಗಾಗಿ ಶೋಧ ಕಾರ್ಯ

Published

on

ಮಂಗಳೂರು: ಸ್ನೇಹಿತನ ಜೊತೆಗೆ ದೇವಸ್ಥಾನಕ್ಕೆ ಹೋಗಿ ಗ್ಯಾರೇಜಿನಲ್ಲಿ ಕೆಲಸ ಮಾಡುವ ಯುವಕನೊಬ್ಬ ಏಕಾಏಕಿ ಅಡ್ಡೂರು ಸೇತುವೆಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ.

ನೀರಿಗೆ ಹಾರಿ ನಾಪತ್ತೆಯಾಗಿದ್ದವರನ್ನು ನಿವಾಸಿ ಮೂಲತಃ ಆಕಾಶಭವನದ ಪ್ರಶಾಂತ್  (41) ಎಂದು ಗುರುತಿಸಲಾಗಿದೆ. ಇವರು ಸ್ನೇಹಿತ ದೇವಿಪ್ರಸಾದ್ ಜೊತೆಗೆ ಎರಡು ದಿನಗಳ ಕಾಲ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಇಂದು ಗುರುಪುರದ ಸೇತುವೆ ಬಳಿ ಬಂದಿದ್ದರು. ಈ ನಡುವೆ ಪ್ರಶಾಂತ್‌ ಏಕಾಏಕಿ ಸೇತುವೆಯಿಂದ ಹಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ದೇವಿಪ್ರಸಾದ್ ನೋಡಿದ್ದು, ಕೂಡಲೇ ಅವರು ಅಲ್ಲಿದ್ದ ಸ್ಥಳೀಯ ಬೋಟಿನವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಪತ್ತೆಯಾಗಿಲ್ಲ. ಕೂಡಲೇ ಬಂಟ್ವಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಆತನ ದೇಹಕ್ಕಾಗಿ ಹುಡುಕಾಟ ನಡೆದಿದೆ. ಪ್ರಶಾಂತ್‌ ಅವರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರಿಗೆ ಮದುವೆಯಾಗಿದ್ದು, ಪುಟ್ಟ ಮಗುವೂ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾತುಕತೆ ನಡೆದು ಬಳಿಕ ಸ್ನೇಹಿತ ದೇವಿಪ್ರಸಾದ್ ಜೊತೆಗೆ ದೇಗುಲಕ್ಕೆ ಹೋಗಿದ್ದರು. ಇದೀಗ ನಾಪತ್ತೆಯಾದಾತನ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.  ಸ್ಥಳೀಯರು ಕೂಡಾ ಹುಡುಕಾಟ ಮುಂದುವರಿಸಿದ್ದಾರೆ.

BELTHANGADY

ಬೆಳ್ತಂಗಡಿ: ಡಿವೈಡರ್‌ಗೆ ಬೈಕ್‌ ಢಿಕ್ಕಿ, ಯುವಕ ಸ್ಥಳದಲ್ಲೇ ಜೀವಾಂತ್ಯ

Published

on

ಬೆಳ್ತಂಗಡಿ: ಡಿವೈಡರ್‌ಗೆ ಬೈಕ್‌ ಢಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ಸಂಭವಿಸಿದೆ.

ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್‌ ಪೂಜಾರಿ ಮೃತ ಪಟ್ಟ ಯುವಕನಾಗಿದ್ದಾನೆ. ಪ್ರಶಾಂತ್‌ ಪೂಜಾರಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್‌ ಚಲಾಯಿಸಿಕೊಂಡು ಹೋಗುತ್ತಾ ವೇಣೂರು ರಸ್ತೆಯ ದ್ವಾರದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆ ವಿದ್ಯುತ್‌ ಕಂಬಕ್ಕೆ ಬಡಿದು ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬೆಳ್ತಂಗಡಿ ಟ್ರಾಫಿಕ್‌ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯ ಜನರ ಸಹಕಾರದಿಂದ ಪ್ರಶಾಂತ್‌ ಪೂಜಾರಿಯ ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಿದರು. ಮಿತಿ ಮೀರಿದ ವೇಗದ ಚಾಲನೆ ಹಾಗೂ ಅಜಾಗ್ರತೆ ಮತ್ತು ನಿರ್ಲಕ್ಷ್ಯ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

Continue Reading

DAKSHINA KANNADA

ಉಳ್ಳಾಲದಲ್ಲಿ ಸರಣಿ ಅಪಘಾತ; ಬಸ್, ಬೈಕ್‌ಗೆ ಡಿ*ಕ್ಕಿ ಹೊ*ಡೆದು ಕಂದಕಕ್ಕೆ ಉರುಳಿದ ಜೀಪ್

Published

on

ಉಳ್ಳಾಲ: ಚಾಲಕನ ಧಾವಂತದ ಚಾಲನೆಗೆ ಜೀಪೊಂದು ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಡಿ*ಕ್ಕಿ  ಹೊಡೆದು ಬಳಿಕ ಎಡ ಭಾಗದಿಂದ ಸಾಗುತ್ತಿದ್ದ ಬೈಕ್ ಸವಾರರಿಗೆ ಡಿ*ಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಆಡಂಕುದ್ರು ಎಂಬಲ್ಲಿ ನಿನ್ನೆ (ಫೆ.12) ಸಂಜೆ ವೇಳೆ ಸಂಭವಿಸಿದೆ.

ಬೈಕ್ ಸವಾರರಿ ಬ್ಬರೂ ಗಾ*ಯಗೊಂಡಿದ್ದಾರೆ. ಮಂಗಳೂರು ಭಾಗದಿಂದ ತೊಕ್ಕೋಟು ಕಡೆಗೆ ಸಾಗುತ್ತಿದ್ದ ಜೀಪನ್ನು ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮಂಗಳೂನಿಂದ ಕಾಸರಗೋಡು ಕಡೆಗೆ ಹೋಗುತ್ತಿದ್ದ ಕೇರಳ ಸಾರಿಗೆ ಬಸ್ಸಿನ ಹಿಂಬದಿಗೆ ಗು*ದ್ದಿದ್ದಾನೆ. ಅಲ್ಲಿಂದ ಮತ್ತೆ ಎಡ ಭಾಗಕ್ಕೆ ತಿರುಗಿಸಿದ ಪರಿಣಾಮ ಸವಾರರಿಬ್ಬರು ತೆರಳುತ್ತಿದ್ದ ಬೈಕಿಗೆ ಡಿ*ಕ್ಕಿ ಹೊಡೆದು ಬಳಿಕ ಜೀಪ್‌ ಕಂ*ದಕಕ್ಕೆ ಉರುಳಿದೆ.

ಇದನ್ನೂ ಓದಿ : ಮಂಗಳೂರು: ಹೆದ್ದಾರಿಯಲ್ಲಿ ವಾಹನ ಅಪಘಾತ, ಆಪತ್ಭಾಂದವರಾದ ಖಾದರ್

ಈ ಸರಣಿ ಅ*ಪಘಾತದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲವು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.  ಮಂಗಳೂರು ದಕ್ಷಿಣ ಸಂಚಾರಿ ಠಾಣಾ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

DAKSHINA KANNADA

ಮಂಗಳೂರು: ಹೆದ್ದಾರಿಯಲ್ಲಿ ವಾಹನ ಅಪಘಾತ, ಆಪತ್ಭಾಂದವರಾದ ಖಾದರ್

Published

on

ಮಂಗಳೂರು ಹೊರವಲಯದ ಪಡೀಲ್ ಸಮೀಪದ ಈಚರ್ ಲಾರಿಯೊಂದು ಅಪಘಾತಕ್ಕೆ ಒಳಗಾಗಿದೆ. ಎದುರಿನಿಂದ ಹೋಗುತ್ತಿದ್ದ ವಾಹನಕ್ಕೆ ಹಿಂಬದಿಯಿಂದ ಈಚರ್ ವಾಹನ ಡಿಕ್ಕಿಹೊಡೆದಿದ್ದು ಚಾಲಕ ವಾಹನದ ಒಳಗೆ ಸಿಲುಕಿಕೊಂಡಿದ್ದಾನೆ . ಈ ವೇಳೆ ಇದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು ತಕ್ಷಣ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

ಈಚರ್ ವಾಹನದ ಮುಂಭಾಗ ನುಚ್ಚುಗುಜ್ಜಾದ ಕಾರಣ ಚಾಲಕನ ಕಾಲು ವಾಹನದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಾರ್ವಜನಿಕರ ಸಹಕಾರದೊಂದಿಗೆ ವಾಹನದ ಮುಂಭಾಗವನ್ನು ಬಲವಾಗಿ ಎಳೆದು ಆತನನ್ನು ಹೊರೆತೆಗೆಯಲಾಗಿದೆ.

ಸ್ಪೀಕರ್ ಖಾದರ್ ಅವರು ಕೂಡಾ ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ಗಾಯಾಳು ಹೊರಬಂದ ತಕ್ಷಣ ಆತನಿಗೆ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಅವರು ಈ ಹಿಂದೆಯೂ ಹಲವಾರು ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ತಮ್ಮ ವಾಹನದಲ್ಲೇ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಗಮನ ಸೆಳೆದಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page