Connect with us

FILM

ಪ್ರಕಾಶ್ ರೈ ಒಬ್ಬ ಅಜ್ಞಾನಿ; ಪ್ರಧಾನಿ ಮೋದಿ ಬೆಂಬಲಿಸಿ ಪೋಸ್ಟ್ ಮಾಡಿದ ನಟ ಚೇತನ್

Published

on

ಬೆಂಗಳೂರು : ವಿನೇಶ್‌ ಫೋಗಟ್‌ ವಿಚಾರವಾಗಿ ಇಡೀ ಭಾರತ ದೇಶವೇ ನೋವಲ್ಲಿದೆ. ಕೇವಲ 100 ಗ್ರಾಂ ತೂಕದ ಹೆಚ್ಚಳದಿಂದ ವಿನೇಶ್ ಫೋಗಟ್ ಪದಕ ವಂಚಿತರಾಗಿರೋದು ದುಃಖವುಂಟು ಮಾಡಿದೆ. ಈ ನಡುವೆ, ಪ್ರಕಾಶ್ ರೈ ಕಾರ್ಟೂನ್ ವೊಂದನ್ನು ಹಂಚಿಕೊಂಡಿದ್ದರು. ವಿನೇಶ್ ಪದಕ ವಂಚಿತರಾಗಲು ಮೋದಿಯೇ ಕಾರಣ ಎಂಬಂತೆ ಈ ಕಾರ್ಟೂನ್ ನಲ್ಲಿ ಬಿಂಬಿಸಲಾಗಿತ್ತು.

ಪ್ರಕಾಶ್‌ ರೈ ಈ ನಿಲುವಿನ ವಿರುದ್ಧ ಕಿಡಿಕಾರಿರುವ ನಟ ಚೇತನ್‌ ಅಹಿಂಸಾ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್ ವೊಂದು ಆಶ್ಚರ್ಯ ಉಂಟು ಮಾಡಿದೆ.

ಚೇತನ್ ಪೋಸ್ಟ್ ಏನು?
ಯಾವಾಗಲೂ ಪ್ರಧಾನಿ ಮೋದಿ ವಿರುದ್ಧ ಮಾತನಾಡುತ್ತಿದ್ದ ಚೇತನ್ ಈ ಬಾರಿ ಮೋದಿ ಪರವಾಗಿ ಪೋಸ್ಟ್ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌-2024ರ ಫೈನಲ್‌ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್‌ ಫೋಗಟ್ ಪರ, ಮೋದಿ ವಿರುದ್ಧ ಪೋಸ್ಟ್‌ ಹಾಕಿದ್ದ ಪ್ರಕಾಶ್‌ ರೈ ನಡೆಯನ್ನು ಚೇತನ್‌ ಟೀಕಿಸಿದ್ದಾರೆ.

ವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು, ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ. ಆದರೆ, ಕೆಟ್ಟ ಹೋರಾಟಗಾರ ಎಂದು ಚೇತನ್ ಟೀಕಿಸಿದ್ದಾರೆ.

ಇದನ್ನೂ ಓದಿ : ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಿದ ಮಕ್ಕಳು; ಮುಂದೆ ಆಗಿದ್ದೇನು ಗೊತ್ತಾ?

ಪ್ರಕಾಶ್ ರೈ ಮಾಡಿದ್ದ ಪೋಸ್ಟ್ ಏನು?
ಯಾವಾಗಲೂ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಪ್ರಕಾಶ್ ರೈ, ಕಾರ್ಟೂನ್​ ವೊಂದನ್ನು ಶೇರ್ ಮಾಡಿದ್ದರು. ಈ ಕಾರ್ಟೂನ್ ನಲ್ಲಿ ಕುಸ್ತಿಪಟು ವಿನೇಶ್​ ಫೋಗಟ್ ಅವರು ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಂ ತೂಕ ಹೆಚ್ಚಾಗುವಂತೆ ಮಾಡುತ್ತಿರುವುದು ಕಂಡು ಬಂದಿತ್ತು. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿತ್ತು. ಮೋದಿಯೇ ವಿನೇಶ್ ಫೋಗಟ್  ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂಬ ಅರ್ಥ ಬರುವಂತೆ ಪೋಸ್ಟ್ ಹಂಚಿಕೊಂಡಿದ್ದರು.

FILM

‘ಪ್ರತಿದಿನ ನನ್ನನ್ನೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ’; ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್ ಪೋಸ್ಟ್!

Published

on

ಕನ್ನಡ ಚಿತ್ರರಂಗದ ಮಾದರಿ ದಂಪತಿಗಳಾದ ಯಶ್ ಮತ್ತು ರಾಧಿಕಾ ಪಂಡಿತ್ ಈ ಬಾರಿಯ ವ್ಯಾಲೆಂಟೈನ್ಸ್ ದಿನವನ್ನು ಪ್ರೀತಿಯಿಂದ ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪತಿ ಯಶ್ ಅವರೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.


ರಾಧಿಕಾ ಪಂಡಿತ್‌ ಮತ್ತು ಯಶ್‌ ಇಬ್ಬರೂ ಧಾರಾವಾಹಿ ಮೂಲಕ ಪರಿಚಯ ಆಗಿದ್ದು, ಅಲ್ಲಿ ಇಬ್ಬರೂ ಒಟ್ಟಿಗೆ ನಟಿಸಿ, ಬಳಿಕ ಒಟ್ಟಾಗಿ ಸಿನಿಮಾ ಮಾಡಿದರು. ತೆರೆಮೇಲೆ ಜೋಡಿಯಾಗಿದ್ದ ಇವರು ತೆರೆಹಿಂದೆಯೂ ಕಪಲ್‌ ಆಗಿದ್ದಾರೆ. ಇದೀಗ ಯಶ್‌ ಅವರ ಕುರಿತು ರಾಧಿಕಾ ಪಂಡಿತ್‌ ಹಂಚಿಕೊಂಡಿರೋ ಪೋಸ್ಟ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಯಶ್ ಅವರಿಗೆ ಧನ್ಯವಾದ ಅರ್ಪಿಸಿರುವ ರಾಧಿಕಾ, ‘ನನ್ನ ಅಭದ್ರತೆಯನ್ನು ತೆಗೆದು ಹಾಕಿದವನು ನೀನು. ನಿನ್ನ ಕಣ್ಣುಗಳಲ್ಲಿ ದಣಿವು, ಬೇರೆ ಯಾರೂ ಗಮನಿಸದ ತ್ಯಾಗ, ದೂರು ನೀಡದೆ ನೀನು ಹೊತ್ತುಕೊಂಡ ದೀರ್ಘ ಭಾರ ನನಗೆ ಕಾಣುತ್ತಿದೆ. ಅದು ನಮಗಾಗಿ ಎಂದು ನನಗೆ ತಿಳಿದಿದೆ. ನನ್ನನ್ನು ದಿನವೂ ಆಯ್ಕೆ ಮಾಡಿದ್ದಕ್ಕೆ ನಿನಗೆ ಧನ್ಯವಾದ, ಹ್ಯಾಪಿ ವ್ಯಾಲೆಂಟೈನ್ಸ್ ಡೇ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಗೆಂದು ಬಂದಿದ್ದ ಮಹಿಳೆ ನಾಪತ್ತೆ: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಇಬ್ಬರೂ ಜೊತೆಯಾಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯ ಕೋರಿದ್ದಾರೆ. ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

Continue Reading

FILM

ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟ ರಾಮ್ ಚರಣ್; ವ್ಹಾವ್ ಅಂದ್ರು ಫ್ಯಾನ್ಸ್!

Published

on

ಮಂಗಳೂರು/ತೆಲಂಗಾಣ : ಸದ್ಯ ನಟ ರಾಮ್ ಚರಣ್ ಮನೆಯಲ್ಲಿ ಡಬಲ್ ಸಂಭ್ರಮವಿದೆ. ಇತ್ತೀಚೆಗಷ್ಟೆ ರಾಮ್  ಚರಣ್ ಪತ್ನಿ ಉಪಾಸನಾ ಕೊನಿಡೆಲ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಹೆಣ್ಣು, ಒಂದು ಗಂಡು ಮಗು ಆಗಿರುವ ಬಗ್ಗೆ ನಟ ಚಿರಂಜೀವಿ  ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.

ಇದೀಗ ಮಕ್ಕಳ ಹೆಸರನ್ನು ರಿವೀಲ್ ಮಾಡಲಾಗಿದೆ. ಸಾಂಪ್ರದಾಯಿಕ ಹೆಸರನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ ದಂಪತಿ. ಮಕ್ಕಳ ಸುಂದರ ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೆಸರೇನು?

ಗಂಡು ಮಗುವಿಗೆ ಶಿವರಾಮ್ ಎಂದು ಹೆಸರಿಟ್ಟರೆ,  ಹೆಣ್ಣು ಮಗುವಿಗೆ ಅನ್ವೀರಾ ದೇವಿ ಎಂದು ನಾಮಕರಣ ಮಾಡಲಾಗಿದೆ.  ಹೆಸರಿನ ವಿಶೇಷತೆ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಅಪರಿಮಿತ ಸಂತೋಷ ಮತ್ತು ದೈವಿಕ ಅನುಗ್ರಹದಿಂದ ನಮ್ಮ ಎರಡು  ಪುಟ್ಟ ಆಶೀರ್ವಾದಗಳ ಸುಂದರ ಹೆಸರುಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ

‘ಶಿವ ರಾಮ ಕೊನಿಡೆಲ  ಮತ್ತು ಅನ್ವೀರಾ ದೇವಿ ಕೊನಿಡೆಲ’

ಶಿವ ರಾಮ ಎರಡು ಶಾಶ್ವತ ಆದರ್ಶಗಳ ಆಳವಾದ ಸಂಗಮವಾಗಿದೆ. ‘ಶಿವ’ ಶಿವ ಶಂಕರ ವರ ಪ್ರಸಾದ್(ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರು) ಅವರಿಂದ ಪ್ರೇರಿತವಾಗಿದೆ. ಇದು ಆಂತರಿಕ ಶಕ್ತಿ, ಆಧ್ಯಾತ್ಮಿಕ ಆಳ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ.

ರಾಮ್ ಚರಣ್ ಹೆಸರಿನ ‘ರಾಮ’ ಪದವನ್ನು ಆಯ್ಕೆ ಮಾಡಲಾಗಿದ್ದು, ರಾಮ ಎನ್ನುವುದು ಸದಾಚಾರ, ಕರುಣೆ ಮತ್ತು ನೈತಿಕ ಧೈರ್ಯವನ್ನು ಸಾಕಾರಗೊಳಿಸುತ್ತದೆ. ಒಟ್ಟಿನಲ್ಲಿ, ಈ ಹೆಸರು ಆಂತರಿಕ ಶಕ್ತಿ ಮತ್ತು ಜವಾಬ್ದಾರಿಯುತ ಕ್ರಿಯೆಯ ನಡುವಿನ ಸಾಮರಸ್ಯವನ್ನು ಸೂಚಿಸುತ್ತದೆ.

ಅನ್ವೀರಾ ದೇವಿ ದೈವಿಕ ಸ್ತ್ರೀತ್ವದ ಅಪರೂಪದ ಮತ್ತು ಶಕ್ತಿಯುತ ಅಭಿವ್ಯಕ್ತಿ. ಕನಕ ದುರ್ಗಾ ದೇವಿಯ ಆಶೀರ್ವಾದದಿಂದ ಪ್ರೇರಿತವಾದ ಅನ್ವೀರಾ ನಿರ್ಭಯತೆ, ಸ್ಥಿತಿಸ್ಥಾಪಕತ್ವ ಮತ್ತು ದೈವಿಕ ರಕ್ಷಣೆಯನ್ನು ಪ್ರತಿನಿಧಿಸುತ್ತದೆ. ಅನುಗ್ರಹ, ಧೈರ್ಯ ಮತ್ತು ಅಚಲ ಶಕ್ತಿಯನ್ನು ಪ್ರತಿಬಿಂಬಿಸುವ ಹೆಸರು.

ಇದನ್ನೂ ಓದಿ : ಕಾವ್ಯ ಶೈವ ಹಿಂದೆ ಬಿದ್ದ ಗಿಲ್ಲಿ ನಟ: ರಕ್ಷಿತಾ ಶೆಟ್ಟಿಗೆ ಶುರುವಾಯ್ತಾ ಅಸೂಯೆ?

ಶಿವ ರಾಮ ಮತ್ತು ಅನ್ವೀರಾ ದೇವಿ ತಮ್ಮ ಸುಂದರ ಜೀವನ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಾವು ಅವರಿಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

Continue Reading

FILM

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಶ್ರೀಲೀಲಾ…ಫೋಟೋ, ವೀಡಿಯೋ ವೈರಲ್!

Published

on

ಮಂಗಳೂರು/ಬೆಂಗಳೂರು : ಶ್ರೀಲೀಲಾ  ಸಿನಿರಸಿಕರ ಮನಗೆದ್ದಿರುವ ಚೆಲುವೆ. ತನ್ನ ನಟನೆ, ನೃತ್ಯ ಎಲ್ಲದರ ಮೂಲಕ ಗಮನ ಸೆಳೆದಿರುವ ನಟಿ. ಇದೀಗ ಕಿಸ್ ಬೆಡಗಿ ಡಾಕ್ಟರ್ ಆಗಿದ್ದಾರೆ.

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಸಿನಿಮಾಗಳಲ್ಲಿ ಬಿಝಿ ಆಗಿದ್ದರೂ, ಮತ್ತೊಂದೆಡೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಡಾಕ್ಟರ್ ಶ್ರೀಲೀಲಾ ಆಗಿದ್ದಾರೆ.

ಒಂದೆಡೆ ಸಿನಿಮಾ, ಮತ್ತೊಂದೆಡೆ ವಿದ್ಯಾಭ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು  ಬಂದಿರುವ ಶ್ರೀಲೀಲಾ, ಎಂಬಿಬಿಎಸ್ ಮಾಡಿದ್ದಾರೆ. ಘಟಿಕೋತ್ಸವದಲ್ಲಿ ಅವರು ಕಾಣಿಸಿಕೊಂಡ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ

ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ಶ್ರೀಲೀಲಾ ಬಳಿಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೆಲ್ಲಿ ಸಂದಡಿ ಚಿತ್ರದ ಮೂಲಕ ಗಮನ ಸೆಳೆದರು. ಪುಷ್ಪ 2 ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಿದ್ದರು. ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಶ್ರೀಲೀಲಾ ಸದ್ಯ ಧನುಷ್ ಜೊತೆ D55ನಲ್ಲಿ ನಟಿಸುತ್ತಿದ್ದಾರೆ.

Continue Reading
Advertisement

Trending

Copyright © 2025 Namma Kudla News

You cannot copy content of this page