Connect with us

LATEST NEWS

ಇಂದು ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿ ಅಂತ್ಯ

Published

on

ಬೆಂಗಳೂರು: ಹಾಸನದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಶೇಷ ತನಿಖಾ ದಳದಿಂದ ಡ್ರಿಲ್ ಮುಂದುವರಿದಿದೆ. ಹೆಚ್ಚಿನ ವಿಚಾರಣೆಗಾಗಿ ಇಂದು ಪ್ರಜ್ವಲ್‌ರನ್ನು ಎಸ್‌ಐಟಿಯು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

evan

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಎಸ್‌ಐಟಿಯು ಮಾಹಿತಿ ಕಲೆ ಹಾಕಿ ಸಾಕ್ಷ್ಯಾಧಾರ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಆದರೆ, ಪ್ರಜ್ವಲ್ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನಲೆಯಲ್ಲಿ ವಿಚಾರಣೆಗೆ ಕೊಂಚ ಹಿನ್ನಡೆಯಾಗಿದೆ. ಇದೀಗ ಎಸ್‌ಐಟಿ ಕಸ್ಟಡಿಗೆ ಪಡೆದ ಅವಧಿಯು ಜೂ.6ಕ್ಕೆ ಮುಕ್ತಾಯಗೊಳ್ಳಲಿದೆ.

ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಬೇಕಿದೆ. ಹೀಗಾಗಿ ಎಸ್‌ಐಟಿಯು ಗುರುವಾರ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆಗಳಿವೆ.

DAKSHINA KANNADA

ಮಂಗಳೂರು : ಹೆಂಡತಿಯನ್ನು ಕೊಲೆಗೈದ ಪ್ರಕರಣ; ಗಂಡನಿಗೆ ಜೀವಾವಧಿ ಶಿಕ್ಷೆ..

Published

on

ಮಂಗಳೂರು: ತನ್ನ ಪತ್ನಿಯನ್ನು ಕುಡಿದ ಅಮಲಿನಲ್ಲಿ ಪತಿ ಕೊಂದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣದ ಮುಖ್ಯ ಆರೋಪಿ ಪತಿಗೆ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ನಿನ್ನೆ (ಫೆ.6) ತೀರ್ಪು ನೀಡಿದೆ.

ಸುಳ್ಯದ ತೋಡಿಕಾನ ಅಂಡ್ಯಡ್ಕ ಸಿಆರ್‌ಸಿ ಕ್ವಾಟ್ರರ್ಸ್ ನಿವಾಸಿ ರಾಜ (64) ಶಿಕ್ಷೆಗೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.

ರಾಜ ತನ್ನು ಪತ್ನಿ ಕಮಲಾ (57) ಎಂಬಾಕೆಯನ್ನು ಕೊಲೆಗೈದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ. 2022ರ ಸೆ.4ರಂದು ದಂಪತಿ ರಾಜಾ ಮತ್ತು ಕಮಲಾ ರಬ್ಬರ್ ಮ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ಕೊಯೂರು ಗ್ರಾಮದ ಅಲೆಕ್ಕಿ ಎಂಬಲ್ಲಿನಧರ್ಣಪ್ಪ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದರು. ಇವರಿಗೆ ರಬ್ಬರ್ ತೋಟದ ಶೆಡ್‌ನಲ್ಲೇ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿತ್ತು.

 

ಇದನ್ನೂ ಓದಿ : ಮಂಗಳೂರು : ಸ್ನ್ಯಾಪ್‌ನಲ್ಲಿ ಅಶ್ಲೀಲ ವಿಡಿಯೋ ಸೆಂಡ್ ಮಾಡಿ ಬೆದರಿಕೆ ಹಾಕಿದವನ ವಿರುದ್ಧ ದೂರು ದಾಖಲು

 

ಪ್ರಸ್ತುತ ಆರೋಪಿಗೆ ನ್ಯಾಯಲಯವು ಜಾವಾವಧಿ ಶಿಕ್ಷೆ ವಿಧಿಸಿ ಕಮಲಾ ಸಾವಿಗೆ ನ್ಯಾಯ ನೀಡಿದೆ.

 

Continue Reading

DAKSHINA KANNADA

ಸುರತ್ಕಲ್: ಡ್ರೆಸ್ ಅಂಗಡಿಗೆ ಆಕಸ್ಮಿಕ ಬೆಂಕಿ; ಭಾರೀ ನಷ್ಟ

Published

on

ಸುರತ್ಕಲ್: ಮೈ ಚಾಯ್ಸ್ ಬಟ್ಟೆ ವಿನ್ಯಾಸ ಹಾಗೂ ಜವಳಿ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು, ಭಾರೀ ನಷ್ಟ ಸಂಭವಿಸಿರುವ ಘಟನೆ ಸುರತ್ಕಲ್‌ನ ಪೂವ ಆರ್ಕೆಡ್‌ನಲ್ಲಿರುವ ಮಳಿಗೆಯಲ್ಲಿ ಬುಧವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದೆ.

ಸುಟ್ಟು ಕರಕಲಾಗಿದ್ದ ಮಳಿಗೆಯು ಕೃಷ್ಣಾಪುರ ನಿವಾಸಿ ಶಮೀಮ್ ಎಂಬವರಿಗೆ ಸೇರಿದ್ದು, ಬಟ್ಟೆ ಬರೆಗಳು ಹಾಗೂ ಯಂತ್ರೋಪಕರಣಗಳು ಸೇರಿ ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯ ಮೇಲ್ಛಾವಣಿಯಲ್ಲಿನ ಬಟ್ಟೆ ವಿನ್ಯಾಸ ವಿಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಯನ್ನು ಸುಟ್ಟು ಭಸ್ಮ ಮಾಡಿತು.

ಇದನ್ನೂ ಓದಿ : ಸುರತ್ಕಲ್ : ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಹೊಂಡಕ್ಕೆ ; ದಂಪತಿಗೆ ಗಾಯ

ಘಟನಾ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಮೂರು ಮತ್ತು ಎಂಆರ್ ಪಿಎಲ್ ನ ಒಂದು ಅಗ್ನಿ ನಿರೋಧಕ ವಾಹನಗಳು ಸತತ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Continue Reading

DAKSHINA KANNADA

ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

Published

on

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಫಿಝಾ ಬೈ ನೆಕ್ಸಸ್ ಮಾಲ್ ಮತ್ತು ಮಂಗಳೂರಿನ ಪ್ರಸಿದ್ಧ ಟ್ರೈ ತಿಂಡಿ ಇನ್ಸ್ಟಾ ಗ್ರಾಮ್ ಪೇಜ್ ಸಹಭಾಗಿತ್ವದಲ್ಲಿ ಫೆ.7, 8 ಮತ್ತು 9ರಂದು 3 ದಿನ 2ನೇ ಆವ್ರತ್ತಿಯ ಐಸ್ ಕ್ರೀಮ್ ಪರ್ಬವನ್ನು ಅಯೋಜಿಸಲಾಗಿದೆ.

ಈ ತಣ್ಣನೆಯ ಚಳಿಗೂ ಐಸ್‌ಕ್ರೀಂ ಎಂದಾಕ್ಷನ ಬಾಯಲ್ಲಿ ನೀರು ಬರುವವರೇ ಹೆಚ್ಚು. ಹಾಗಾಗಿ ಅಂತಹ ಐದ್‌ಕ್ರೀಂ ಪ್ರಿಯರಿಗೆ ಬಿಗ್ ಗುಡ್‌ನ್ಯೂಸ್ ಸಿಕ್ಕಿದ್ದು,  ಭರ್ಜರಿ ಐಸ್ ಕ್ರೀಮ್ ಪರ್ಬ ಇಂದಿನಿಂದ ಮೂರು ದಿನ ಬೆಳಗ್ಗೆ 11ರಿಂದ ರಾತ್ರಿ 9 ರವರೆಗೆ ನಡೆಯಲಿದೆ.

ಯಾವೆಲ್ಲಾ ಐಸ್‌ಕ್ರೀಂ ಸಂಸ್ಥೆಗಳು ಭಾಗಿಯಾಗಲಿದೆ ?

ಮಂಗಳೂರನ್ನು ‘ಐಸ್ ಕ್ರೀಮ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ. ಎಲ್ಲಾ ಐಸ್ ಕ್ರೀಮ್ ಸಂಸ್ಥೆಗಳನ್ನ ಒಂದೇ ಸೂರಿನಡಿ ಸೇರಿಸಬೇಕು ಅನ್ನುವ ಆಲೋಚನೆಯಲ್ಲಿ ಈ ಕಾರ್ಯಕ್ರಮ ಆಯೋಜಕರದ್ದು, ಈ ಬಾರಿ 14ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ. ಐಡಿಯಲ್ – ಪಬ್ಬಾಸ್ , ಹ್ಯಾಂಗ್ಯೋ, ಮ್ಯಾಂಗೋ ಬೆರ್ರಿಸ್ , ಎಂಚಿ ಕ್ರಂಚಿ – ದಿ ಮಿಲೆಟ್ ಹೌಸ್ , ಸ್ಕೂಪ್ಸೊ , ಕೈಲಾರ್ಸ್ , ಸ್ವಿರ್ಲಿಯೊ , ಎಫ್ 5, ಐಸ್ ಕ್ರೀಮ್ ಆಂಡ್ ಮೋರ್ , ಫ್ರೂಟ್ ಪೊಪ್ಜ್ , ಫ್ಲೇವರ್ಸ್ , ಹೈವ್ ಸ್ಕ್ಯೂಬ್ , ಬೊನ್ ಬೊನ್ಸ್, ಕ್ಯಾಮೆರಿ ಭಾಗವಹಿಸುವ ಐಸ್ ಕ್ರೀಮ್ ಸಂಸ್ಥೆಗಳು ಪಾಲ್ಗೊಳ್ಳಲಿದೆ.

 

Continue Reading
Advertisement

Trending

Copyright © 2025 Namma Kudla News

You cannot copy content of this page