Connect with us

LATEST NEWS

ಚಿಕ್ಕಮಗಳೂರು ದತ್ತಪೀಠಕ್ಕೆ ಕುಟುಂಬ ಸಮೇತ ಸಚಿವ ಸುನೀಲ್ ಕುಮಾರ್ ಭೇಟಿ; ದತ್ತಪಾದುಕೆ ದರ್ಶನ

Published

on

ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ದತ್ತಪಾದುಕೆಯ ದರ್ಶನವನ್ನು ಮಾಡಿದರು.

ಚಿಕ್ಕಮಗಳೂರು : ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಇಂಧನ ಸಚಿವ ವಿ ಸುನೀಲ್ ಕುಮಾರ್ ಕುಟುಂಬ ಸಮೇತರಾಗಿ ಇಂದು ಭೇಟಿ ನೀಡಿ ದತ್ತಪಾದುಕೆಯ ದರ್ಶನವನ್ನು ಮಾಡಿದರು. 

ಪತ್ನಿ ಮಕ್ಕಳೊಂದಿಗೆ ದತ್ತಮಾಲೆ ಧಾರಣೆ ಮಾಡಿಕೊಂಡು ಸಚಿವ ಸುನೀಲ್ ಕುಮಾರ್ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಯ ದರ್ಶನವನ್ನು ಮಾಡಿದರು.

ನಂತರ ಸುದ್ದಿಗಾರೊಂದಿಗೆ ಮಾತಾಡಿದ ಅವರು, ಪ್ರತಿವರ್ಷಕ್ಕಿಂತ ಈ ವರ್ಷ ದತ್ತಜಯಂತಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಕೂಡಿದೆ ಎಂದರು.

ಇಷ್ಟು ದಿನ ದತ್ತಾತ್ರೇಯರ ಪಾದುಕೆ ದರ್ಶನ ಮಾಡಿಕೊಂಡು ಹೋಗುತ್ತಿದ್ದೇವು. ಆದರೆ, ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನ ನೋಡುವ ಭಾಗ್ಯ ಲಭಿಸಿದೆ.

ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತಿರಿಗೆ ಅತ್ಯಂತ ಸಂತಸದ ದಿನ ಎಂದರು.

ದತ್ತಪೀಠದ ಹೋರಾಟದಲ್ಲಿ ಈ ವರ್ಷ ಪುಳಕಿತ ವರ್ಷವಾಗಿದ್ದು ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದ್ದುದ್ದೇ ದತ್ತಾತ್ರೇಯರ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆ ಜೊತೆ, ತ್ರಿಕಾಲ ಪೂಜೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೇವು.

ಅದರಿಂದ ಬಿಜೆಪಿ ಸರ್ಕಾರ ಇಂದು ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಹಿಂದೂ ಅರ್ಚಕರಿಂದ ಪೂಜೆ ನೋಡಲು ಅವಕಾಶ ಕಲ್ಪಿಸಿದೆ.

ಇದು ಹಿಂದೂಬಾಂಧವರಿಗೆ ಅತ್ಯಂತ ಸಂಭ್ರಮದ ದಿನವಾಗಿದ್ದು ನಾಲ್ಕೈದು ದಶಕಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದರು.

ಹಿಂದೂಗಳ ಮನದಲ್ಲಿ ಮತ್ತಷ್ಟು ಧಾರ್ಮಿಕ ಭಾವನೆಗಳು ಅರಳಿವೆ, ಬಿಜೆಪಿ ಸರ್ಕಾರ ಬಂದಾಗೆಲ್ಲಾ ಹಿಂದೂಗಳ ಬೇಡಿಕೆಗೆ ಸಹಮತ ನೀಡುತ್ತಿದ್ದೇವೆ ಎಂದು ಹೇಳಿ ಮುಜರಾಯಿ ದೇವಸ್ಥಾನದಂತೆ ಎಲ್ಲಾ ಹಿಂದೂ ಧಾರ್ಮಿಕ ಚಟುವಟಿಕೆ ನಡೆಯಬೇಕು ಅದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದ ಜೊತೆ ಎಲ್ಲಿ ಏನೇನು ಆಗಬೇಕೋ ಅದೆಲ್ಲವನ್ನೂ ಮಾಡ್ತೀವಿ ಎಂದು ಭರವಸೆ ನೀಡಿದರು.

FILM

ನಟಿ ಮೇಲೆ ಲೈಂ*ಗಿಕ ದೌರ್ಜ*ನ್ಯ ಪ್ರಕರಣ : ನಟ ದಿಲೀಪ್ ಖುಲಾಸೆ

Published

on

ಮಂಗಳೂರು/ಕೊಚ್ಚಿ : ಬಹುಭಾಷಾ ನಟಿಗೆ ಲೈಂ*ಗಿಕ ಕಿರುಕು*ಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ರನ್ನು ಕೇರಳ ಹೈಕೋರ್ಟ್ ಖುಲಾಸೆಗೊಳಿಸಿದೆ. ಹಾಗೆಯೇ, ಸುನೀಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ ಸೇರಿದಂತೆ 6 ಮಂದಿಯನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ.

2017 ರಲ್ಲಿ ನಟಿಯನ್ನು ಅಪಹರಿಸಿ ಲೈಂ*ಗಿಕ ದೌರ್ಜ*ನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ನ್ಯಾಯಾಲಯ ಇಂದು(ಡಿ.08) ಮಹತ್ವದ ತೀರ್ಪು ಪ್ರಕಟಿಸಿದ್ದು, ನಟ ದಿಲೀಪ್‌ರನ್ನು ಖುಲಾಸೆಗೊಳಿಸಿದೆ. ಈ ಪ್ರಕರಣದಲ್ಲಿ ಎನ್.ಎಸ್.ಸುನಿಲ್ ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಬಿ.ಮಣಿಕಂದನ್, ವಿ.ಪಿ.ವಿಜೀಶ್, ಎಚ್. ಸಲೀಂ(ವಡಿವಲ್ ಸಲೀಂ) ಮತ್ತು ಪ್ರದೀಪ್ ಅವರನ್ನು ತಪ್ಪಿತಸ್ಥರೆಂದು ಪ್ರಧಾನ ಸೆಷನ್ಸ್ ನ್ಯಾಯಾಧೀಶ ಹನಿ ಎಂ ವರ್ಗೀಸ್ ಘೋಷಿಸಿದರು.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಯಲ್ಲಿ ನಟಿಸಿದ್ದ ನಟಿಯೊಬ್ಬರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು 2017ರಲ್ಲಿ ದೂರು ನೀಡಲಾಗಿತ್ತು. ನಟ ದಿಲೀಪ್ ಸೇರಿದಂತೆ 10 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಕೃತ್ಯದಲ್ಲಿ ನೇರವಾಗಿ ಭಾಗವಹಿಸದಿದ್ದರೂ ಘಟನೆಯ ಮುಖ್ಯ ಸೂತ್ರಧಾರ ನಟ ದಿಲೀಪ್‌ ಕುಮಾರ್‌ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಸಂತ್ರಸ್ತ ನಟಿಯ ಮೇಲಿನ ವೈಯಕ್ತಿಕ ದ್ವೇಷದಿಂದ ಅತ್ಯಾ*ಚಾರಕ್ಕೆ ಸುಪಾರಿ ನೀಡಿದ್ದರು ಎಂದು ದಿಲೀಪ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಆದರೆ, ದಿಲೀಪ್ ಇದನ್ನು ಅಲ್ಲಗಳೆದಿದ್ದು, ತಾನೇನು ತಪ್ಪು ಮಾಡಿಲ್ಲವೆಂದು ವಾದಿಸಿದ್ದರು.

Continue Reading

LATEST NEWS

ಬೆಟ್ಟ ಹತ್ತುವಾಗ ಕಾಲು ಜಾರಿ ಬಿ*ದ್ದು ವೃದ್ಧ ಸಾ*ವು

Published

on

ಮಂಗಳೂರು/ರಾಮನಗರ : ಬೆಟ್ಟ ಹತ್ತುವಾಗ ಕಾಲು ಜಾ*ರಿ ಬಿ*ದ್ದು ವೃದ್ಧ ಸಾ*ವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ. ಬಿಡದಿ ಹೋಬಳಿಯ ಕೆಂಪನಹಳ್ಳಿ ನಿವಾಸಿ, 65 ವರ್ಷದ ರೇವಣ್ಣ ಮೃ*ತ ದು*ರ್ದೈವಿ.

ಕುಟುಂಬ ಸಮೇತ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದಿದ್ದ ರೇವಣ್ಣ ದೇವರ ದರ್ಶನ ಮಾಡಲು ಬೆಟ್ಟ ಹತ್ತುವಾಗ ಕಾಲು ಜಾ*ರಿ ಕಂದಕಕ್ಕೆ ಬಿ*ದ್ದು, ಸ್ಥಳದಲ್ಲೇ ಕೊನೆಯು*ಸಿರೆಳೆದಿದ್ದಾರೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರೇವಣ್ಣ ಶ*ವ ಮೇಲಕ್ಕೆತ್ತಿದ್ದಾರೆ. ಘಟನೆ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ : ಡಿಸ್ಕಸ್ ಥ್ರೋನಲ್ಲಿ ಮಂಗಳೂರಿನ ಕೃತಿ ಎನ್.ಪಿ ಪ್ರಥಮ

Published

on

ಮಂಗಳೂರು/ಬೆಂಗಳೂರು : ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026 ನಡೆಯಿತು.

ಡಿಸ್ಕಸ್ ಥ್ರೋ ವಿಭಾಗದಲ್ಲಿ ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಮಾಣಿಯ ವಿದ್ಯಾರ್ಥಿನಿ  ಕೃತಿ. ಎನ್.ಪಿ ಪ್ರಥಮ ಸ್ಥಾನ ಪಡೆದಿದ್ದು,  ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾಳೆ.

ಇದನ್ನೂ ಓದಿ : ಹಾಲಿನ ಟ್ಯಾಂಕರ್‌ಗೆ ಡಿ*ಕ್ಕಿಯಾಗಿ ಸುಟ್ಟು ಕರಕಲಾದ ಕಾರು

ಕೃತಿ ಗೋಳ್ತಮಜಲು ಗ್ರಾಮದ ನಿವಾಸಿ ದಿನೇಶ್.ಬಿ ಮತ್ತು ತೇಜಾಕ್ಷಿ ದಂಪತಿ ಪುತ್ರಿ.

Continue Reading
Advertisement

Trending

Copyright © 2025 Namma Kudla News

You cannot copy content of this page