Connect with us

FILM

ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

Published

on

ಮುಂಬೈ: ಬಾಲಿವುಡ್ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಡ್ಯಾನ್ಸ್ ದೀವಾನೆ ಸೀಸನ್ 4 ಅನ್ನು ಹೋಸ್ಟ್ ಮಾಡುತ್ತಿರುವ ಖ್ಯಾತ ನಿರೂಪಕಿ ಭಾರತಿ ಸಿಂಗ್  ತೀವ್ರ ಹೊಟ್ಟೆ ನೋವಿನಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

bharathi

‘ಕಳೆದ ಮೂರು ದಿನಗಳಿಂದ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದೇನೆ’ ಎಂದು ತನ್ನ ವ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಗ್ಯಾಸ್ಟ್ರೊನಲ್ ಅಥವಾ ಆಮ್ಲೀಯ ಅಸ್ವಸ್ಥತೆ ಆಗಿರಬಹುದೆಂದು ಭಾವಿಸಿ ನಿರ್ಲಕ್ಷ ಮಾಡಿದ್ದರಂತೆ. ಆದರೆ, ನೋವು ತಡೆದುಕೊಳ್ಳಲಾಗದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವ್ಲಾಗ್‌ನಲ್ಲಿ ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಭಾರತಿಗೆ ಪಿತ್ತಕೋಶದಲ್ಲಿ ಕಲ್ಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏನೂ ತಿನ್ನಲು ಆಗುತ್ತಿಲ್ಲ ತಿಂದರೂ ವಾಂತಿ ಆಗುತ್ತಿದೆ ಎಂದ ಹೇಳಿದ ಅವರು ಭಾವುಕರಾದರು.

ಮುಂದೆ ಓದಿ..;‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಈ ನಡುವೆ ಭಾರತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ.

 

FILM

‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಗಾಗಿ ‘ಮೀರಾ’ ಚಿತ್ರ ಬಿಡುಗಡೆ ಮುಂದಕ್ಕೆ!

Published

on

ಮಂಗಳೂರು:  ಬಹುನಿರೀಕ್ಷಿತ ಮೀರಾ ತುಳು ಸಿನಿಮಾದ ಬಿಡುಗಡೆ ದಿನಾಂಕ ಈ ಹಿಂದೆ ಫೆಬ್ರವರಿ 21ಕ್ಕೆ ಘೋಷಿಸಲಾಗಿತ್ತು.  ಇದೀಗ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣದಿಂದ  ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಹಾಗಾಗಿ ಮೀರಾ ಚಿತ್ರ  ಮಾರ್ಚ್ 21ಕ್ಕೆ ಮೀರಾ ತೆರೆಗೆ ಬರಲಿದೆ.

ತುಳು ಸಿನೆಮಾಗಳಿಗೆ ಥಿಯೇಟರ್ ಕೂಡಾ ಕಡಿಮೆ ಇರುವ ಕಾರಣ ಪೈಪೋಟಿಯಿಂದ ಎಲ್ಲರಿಗೂ ನಷ್ಟ ಆಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ.

ಧನ್ಯವಾದ ತಿಳಿಸಿದ  ಚಿತ್ರತಂಡ :

ಸುದ್ದಿಗೋಷ್ಟಿ ನಡೆಸಿ ಎರಡು ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿತು.  ನಟ ವಿನೀತ್ ಕುಮಾರ್ ಮಾತನಾಡಿ,  ತುಳು ಸಿನಿಮಾಗಳಿಗೆ ಸೀಮಿತ ಮಾರುಕಟ್ಟೆ ಇದೆ. ಈ ಕಾರಣದಿಂದ ಸಿನಿಮಾಗಳ ಮಧ್ಯೆ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ಲಂಚುಲಾಲ್ ಮತ್ತವರ ತಂಡ ಈ ನಿರ್ಧಾರ ಮಾಡಿದೆ. ಇದಕ್ಕಾಗಿ ಮೀರಾ ಚಿತ್ರತಂಡಕ್ಕೆ ಅಭಿನಂದನೆಗಳು. ನಮ್ಮದು ಬಿಗ್ ಬಜೆಟ್ ಸಿನಿಮಾವಾಗಿರುವ ಕಾರಣಕ್ಕೆ ಬಹಳಷ್ಟು ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಿದ್ದೇವೆ. ತುಳುವರು ಎಲ್ಲರೂ ಸಿನಿಮಾ ನೋಡಿ ಎರಡೂ ಸಿನಿಮಾಗಳಿಗೆ ನಿಮ್ಮ ಬೆಂಬಲ ಇರಲಿ ಎಂದರು.

ರಾಹುಲ್ ಅಮೀನ್ ಮಾತನಾಡಿ, ಈಗ ಕಲಾವಿದರ ಸಂಘ ಒಬ್ಬ ಒಳ್ಳೆಯ ಅಧ್ಯಕ್ಷರ ಕೈಯಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಉಂಟುಮಾಡಿದೆ. ಈ ಹಿಂದೆ ಒಂದೇ ದಿನ ಎರಡು ಸಿನಿಮಾಗಳು ಬಿಡುಗಡೆಯಾದ ಉದಾಹರಣೆ ನಮ್ಮಲ್ಲಿತ್ತು. ಹೀಗಿರುವಾಗ ಸಿನಿಮಾ ಬಿಡುಗಡೆಗೆ ಮೂರು ವಾರ ಇದ್ದರೂ  ನಮ್ಮ ಸಿನಿಮಾಕ್ಕೆ ಬೇಕಾಗಿ ತಮ್ಮ ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿರುವುದು ಶ್ಲಾಘನೀಯ. ಇದಕ್ಕಾಗಿ ಲಂಚುಲಾಲ್ ಅವರಿಗೆ ಧನ್ಯವಾದಗಳು ಎಂದರು.

ಇದನ್ನೂ ಓದಿ : ಅಭಿಮಾನಿಗಳಿಗೆ ನಿರಾಸೆ…ಗೆಳತಿಯ ಆಸೆ ಈಡೇರಿಸುತ್ತೇನೆ ಎಂದ ಡಿಬಾಸ್

ಪತ್ರಿಕಾಗೋಷ್ಟಿಯಲ್ಲಿ ಲಂಚುಲಾಲ್, ಪ್ರಕಾಶ್ ಧರ್ಮನಗರ,  ಅಶ್ವಥ್, ಸುಹಾನ್ ಪ್ರಸಾದ್, ಯತೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Continue Reading

FILM

ಅಭಿಮಾನಿಗಳಿಗೆ ನಿರಾಸೆ…ಗೆಳತಿಯ ಆಸೆ ಈಡೇರಿಸುತ್ತೇನೆ ಎಂದ ಡಿಬಾಸ್

Published

on

ಮಂಗಳೂರು/ಬೆಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ನಟ ದರ್ಶನ್ ಹುಟ್ಟುಹಬ್ಬ. ಡಿಬಾಸ್ ಅಭಿಮಾನಿಗಳು ದಿನಗಣನೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ದರ್ಶನ್ ಭೇಟಿಯಾಗುವ ಆಸೆಯಲ್ಲಿದ್ದಾರೆ. ಆದರೆ, ಅಭಿಮಾನಿಗಳಿಗೆ ದರ್ಶನ್ ನಿರಾಸೆಯುಂಟು ಮಾಡಿದ್ದಾರೆ.

ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿ ದರ್ಶನ್ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ.  ಈ ಬಾರಿ ಹುಟ್ಟುಹಬ್ಬಕ್ಕೆ  ಅಭಿಮಾನಿಗಳನ್ನು ಭೇಟಿಯಾಗಲು ಆಗುವುದಿಲ್ಲ ಎಂದಿದ್ದಾರೆ.  ಬೆನ್ನುನೋವಿನಿಂದ ಬಳಲುತ್ತಿರುವುದರಿಂದ ಬಹಳ ಹೊತ್ತು ನಿಲ್ಲಲಾಗುವುದಿಲ್ಲ. ಎಲ್ಲರಿಗೂ ವಿಶ್ ಮಾಡಲು ಆಗುವುದಿಲ್ಲ. ಇಂಜೆಕ್ಷನ್ ತೆಗೆದುಕೊಂಡು 10 – 20 ದಿನ ನೋವು ಕಡಿಮೆ ಇರುತ್ತದೆ. ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಹೆಚ್ಚಾಗುತ್ತದೆ. ಆಪರೇಷನ್ ಕಟ್ಟಿಟ್ಟ ಬುತ್ತಿ. ಅದನ್ನು ಮಾಡಿಸಬೇಕು. ಕೆಲವೇ ದಿನಗಳಲ್ಲಿ ಭೇಟಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಸೂರಪ್ಪ ಬಾಬು ಸಿನಿಮಾ ಬಗ್ಗೆ…

ಈ ನಡುವೆ ಯಾರ್ಯಾರ ಸಿನಿಮಾ ಒಪ್ಪಿಕೊಂಡಿದ್ದೇನೆ ಅವರೆಲ್ಲಾ ಕಾದಿದ್ದಾರೆ. ಅವರಿಗೆ ತೊಂದರೆಯಾಗೋದು ಇಷ್ಟ ಇಲ್ಲ. ಸೆಲೆಬ್ರಿಟಿಗಳು ಯಾವ ಊಹಾಪೋಹಗಳಿಗೂ ಕಿವಿ ಕೊಡಬೇಡಿ. ಸೂರಪ್ಪ ಬಾಬು ಅವರು ನನ್ನ ಬಳಿಗೆ ಸಿನಿಮಾ ಮಾಡಬೇಕೆಂದು ಬಂದಿದ್ದಾಗ ಅವರಿಗೆ ಸಹ ತುಂಬಾ ಕಮಿಟ್ ಮೆಂಟ್ ಗಳಿದ್ದವು. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡೆ. ಈ ನಡುವೆ ತುಂಬಾ ವಿಷಯಗಳು ನಡೆದು ವಿಳಂಬವಾಯಿತು, ಸೂರಪ್ಪ ಬಾಬು ಅವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂದು ಅವರು ಕೊಟ್ಟ ಮುಂಗಡ ಹಣವನ್ನು ವಾಪಾಸ್ ಕೊಟ್ಟಿದ್ದೇನೆ ಮುಂದೊಂದು ದಿನ ಉತ್ತಮ ಸಬ್ಜೆಕ್ಟ್ ಸಿಕ್ಕಿದರೆ ಸೂರಪ್ಪ ಬಾಬು ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದರು.

 ಗೆಳತಿ ಆಸೆ ಈಡೇರಿಸುವೆ :

ನಿರ್ದೇಶಕ ಜೋಗಿ ಪ್ರೇಮ್ ಅವರ ಜೊತೆ ಖಂಡಿತ ಸಿನಿಮಾ ಮಾಡೇ ಮಾಡುತ್ತೇನೆ. ಅವರು ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಆಸೆ ಕೂಡ ನಾನು ಸಿನಿಮಾ ಮಾಡಬೇಕು ಅಂತ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈಗಾಗಲೇ ಸಿನಿಮಾ ತಯಾರಾಗುತ್ತಿದೆ. ಅದರ ಮಧ್ಯೆ ಇನ್ನೊಂದು ಸಿನಿಮಾ ಸದ್ಯಕ್ಕೆ ಬೇಡ ಎಂದು ಮುಂದೆ ಹಾಕಿದ್ದೇವೆ. ಮುಂದೆ ಖಂಡಿತ ಮಾಡುತ್ತೇನೆ ಎಂದರು.

ವಿಶೇಷ ಥ್ಯಾಂಕ್ಸ್ ಹೇಳಿದ ಡಿಬಾಸ್ :

ವೀಡಿಯೋದ ಆರಂಭದಲ್ಲಿ ದರ್ಶನ್ ಸೆಲೆಬ್ರಿಟಿಗಳಿಗೆ(ಅಭಿಮಾನಿಗಳು) ನಮಸ್ಕಾರ ಹೇಳಬೇಕೋ, ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಕೊನೆಯಲ್ಲಿ ಮತ್ತೆ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಯಾವಾಗಲೂ ಚಿರಋಣಿ ಎಂದಿದ್ದಾರೆ.

ಈ ವೇಳೆ ತನ್ನ ಕಷ್ಟ ಕಾಲದಲ್ಲಿ ಸಾಥ್ ಕೊಟ್ಟ ಮೂವರ ಹೆಸರು ಉಲ್ಲೇಖಿಸಿದ್ದಾರೆ. ನಟ ಧನ್ವೀರ್, ಬುಲ್ ಬುಲ್ ರಚಿತಾ ರಾಮ್, ಪ್ರಾಣ ಸ್ನೇಹಿತೆ ರಕ್ಷಿತಾಗೆ ತುಂಬಾ ಥ್ಯಾಂಕ್ಸ್ ಎಂದಿದ್ದಾರೆ.

ಇದನ್ನೂ ಓದಿ : ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್​ ಇ*ನ್ನಿಲ್ಲ

ಇದೇ ಸಂದರ್ಭ ದರ್ಶನ್ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಗಾಸಿಪ್ ಬಗ್ಗೆ ಮಾತಾಡಿದ ಅವರು, ಈ ವಿಷಯ ಆಗಾಗ ಸುದ್ದಿಯಾಗುತ್ತಿರುತ್ತದೆ. ನನ್ನ ಕೊನೆಯ ಉಸಿರು ಇರುವವರೆಗೂ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ, ಕನ್ನಡದ ಜನತೆ ನನಗೆ ಪ್ರೀತಿ, ಆಶೀರ್ವಾದ ನೀಡಿದ್ದಾರೆ. ಇಲ್ಲಿ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ ಎಂದು  ಹೇಳಿದ್ದಾರೆ.

Continue Reading

FILM

ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್​ ಇ*ನ್ನಿಲ್ಲ

Published

on

ಮಂಗಳೂರು/ಬೆಂಗಳೂರು : ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿನಯದ ನವಗ್ರಹ ಸಿನಿಮಾದಲ್ಲಿ ಶೆಟ್ಟಿ ಪಾತ್ರದಲ್ಲಿ ಮಿಂಚಿದ್ದ ಗಿರಿ ದಿನೇಶ್ (45) ಹೃದ*ಯಾಘಾತದಿಂದ ನಿ*ಧನರಾಗಿದ್ದಾರೆ.  ಗಿರಿ ದಿನೇಶ್  ಶುಕ್ರವಾರ(ಫೆ.07) ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ​ ಅವರು ಕು*ಸಿದು ಬಿ*ದ್ದಿದ್ದರು. ತಕ್ಷಣ  ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ,  ದಾರಿ ಮಧ್ಯೆಯೇ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿರಿಯ ಹಾಸ್ಯ ನಟ ದಿನೇಶ್ ಅವರ ಪುತ್ರ ಗಿರಿ ದಿನೇಶ್. ಮದುವೆಯಾಗದೆ ಉಳಿದುಕೊಂಡಿದ್ದ ಅವರು ಅಣ್ಣನ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.  ಚಮಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲವು ಚಿತ್ರಗಳಲ್ಲಿ ಗಿರಿ ದಿನೇಶ್ ನಟಿಸಿದ್ದರು.

ಇದನ್ನೂ ಓದಿ : ಮದುವೆಯ ಬಗ್ಗೆ ಕ್ಲೂ ನೀಡಿದ ಬಿಗ್ ಬಾಸ್ ಐಶ್ವರ್ಯ

ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಖ್ಯಾತಿ ತಂದು ಕೊಟ್ಟಿತ್ತು. ದಿನಕರ್​ ನಿರ್ದೇಶನದ ನವಗ್ರಹ ಚಿತ್ರವನ್ನು ಮೀನಾ ತೂಗುದೀಪ ನಿರ್ಮಾಣ ಮಾಡಿದ್ದರು. ಈ ಚಿತ್ರ 2008ರಲ್ಲಿ ಬಿಡುಗಡೆಯಾಗಿತ್ತು. ಕಳೆದ ವರ್ಷ ನವೆಂಬರ್​ 8ರಂದು ಮರುಬಿಡುಗಡೆಯಾಗಿತ್ತು. ಆದರೆ, ಕ್ಯಾಮೆರಾದಿಂದ ದೂರ ಉಳಿದಿದ್ದ ಗಿರಿ ದಿನೇಶ್ ರೀರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page