ಬಿಗ್‌ಬಾಸ್‌ನಲ್ಲಿ ಚಿಗುರಿದ್ದ ಪ್ರೇಮವೊಂದು ಇನ್ನೇನು ಸುಖಾಂತ್ಯ ಕಂಡಿತು ಎನ್ನುವಾಗಲೇ ಬಿರುಗಾಳಿಯ ರೀತಿ ಇಬ್ಬರ ನಡೆವೆ ಡಿವೋರ್ಸ್ ಪಡೆದುಕೊಂಡಿತ್ತು. ಪ್ರೀತಿಸಿ ಜೊತೆಯಾಗಿ ಸಪ್ತಪದಿ ತುಳಿದಿದ್ದ ಜೋಡಿಯು ಇದೀಗ ವಿಚ್ಛೇದನ ಪಡೆಯುವ ಮೂಲಕ ಭಾರೀ ಸುದ್ಧಿಯಲ್ಲಿದ್ದಾರೆ. ಇವರಿಬ್ಬರ ಜೀವನದ ಕುರಿತು ಅದೆಷ್ಟೋ ಗಾಳಿಸುದ್ಧಿಗಳು ಹರಡಿದ್ದರೂ ಕ್ಯಾರೇ ಎನ್ನದೆ ತಮ್ಮಿಷ್ಟದಂತೆ ಬದುಕುತ್ತಿದ್ದಾರೆ. ಪ್ರೀತಿಸಿ ಸುಖವಾಗಿ ಮದುವೆಯಾಗಿದ್ದ ಜೋಡಿ ದಿಡೀರ್ ಎಂದು ಡಿವೋರ್ಸ್ ಪಡೆದುಕೊಳ್ಳಲು ಕಾರಣವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕನ್ನಡನಾಡಿನ ರಾಪರ್, ಆಕ್ಟರ್ ಹಾಗೂ ಮ್ಯೂಸಿಕ್ ಕಂಪೋಸರ್ ಚಂದನ್ ಶೆಟ್ಟಿ ಮಾಜಿ ಪತ್ನಿ ನಿವೇದಿತಾ ಗೌಡ ಜೊತೆಗಿನ ಡಿವೋರ್ಸ್ ವಿಚಾರ ಮತ್ತ ಮಾತನಾಡಿದ್ದಾರೆ. ಸಮಾಜಕ್ಕೆ ಅವರಿಬ್ಬರ ವೈಯಕ್ತಿಕ ಜೀವನದ ಬಗ್ಗೆ ಅದು ಯಾಕೆ ಅಷ್ಟು ಆಸಕ್ತಿಯೋ ಏನೋ ಗೊತ್ತಿಲ್ಲ! ಏಕೆಂದರೆ ಅವರಿಬ್ಬರಲ್ಲಿ ಯಾರೇ ಸಿಕ್ಕರೂ, ಕಣ್ಣಿಗೆ ಕಂಡರೂ, ಸಿನಿಮಾ ಪ್ರೆಸ್‌ಮೀಟ್ ಇದ್ದರೂ ಮೊದಲು ಅಥವಾ ಕೊನೆಗೆ ಕೇಳುವುದು ಅದು ಒಂದೇ ಪ್ರಶ್ನೆ. ಚಂದನ್ ಹಾಗೂ ನಿವೇದಿತಾ ಇಬ್ಬರಿಗೂ ಅದನ್ನು ಕೇಳಿಯೇ ಸಾಕಾಗಿ ಹೋಗಿದೆಯಂತೆ..!
ಏನದು ಪದೇ ಪದೇ ಕೇಳಲ್ಪಡುವ ಪ್ರಶ್ನೆ ..?
ಇತ್ತೀಚೆಗೆ ಚಂದನ್ ನಟನೆಯ ‘ಸೂತ್ರಧಾರಿ’ ಚಿತ್ರದ ಪ್ರೆಸ್‌ಮೀಟ್ ನಡೆದಿತ್ತು. ಅದರಲ್ಲಿಯೂ ಆ ಒಂದು ಪ್ರಶ್ನೆಯನ್ನು ಮತ್ತೆ ಕೇಳಲಾಗಿದೆ. ಅದಕ್ಕೆ ಚಂದನ್ ಶೆಟ್ಟಿ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. “ನಮ್ಮಿಬ್ಬರ ಮಧ್ಯೆ ಅದೇನು ನಡೆಯಿತು ಎಂಬುದು ನಮಗಿಬ್ಬರಿಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ಲವ್, ಮದುವೆ ನಡೆದಂತೆ ಡಿವೋರ್ಸ್ ಕೂಡ ಆಯ್ತು. ಅದ್ಯಾವುದನ್ನೂ ನಾವೀಗ ಸಾರ್ವಜನಿಕವಾಗಿ ಚರ್ಚೆ ಮಾಡಲು ಬಯಸೋದಿಲ್ಲ. ಆದರೆ, ಒಂದಂತೂ ಸತ್ಯ, ನಮ್ಮಿಬ್ಬರ ಮಧ್ಯೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಖಂಡಿತವಾಗಿಯೂ ಡಿವೋರ್ಸ್ ಆಗಿದ್ದಲ್ಲ” ಎಂದು ಗರಂ ಆಗಿದ್ದಾರೆ.
“ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಸಮಸ್ಯೆ ಇತ್ತು, ಸಾಕಷ್ಟು ಸಮಯ ತೆಗೆದುಕೊಂಡರೂ ನಮ್ಮಿಬ್ಬರ ಮಧ್ಯೆ ಮತ್ತೆ ಆಪ್ತತೆ ಮೂಡಲೇ ಇಲ್ಲ. ಆದರೆ, ವಿರಸ ಕೂಡ ಇರಲಿಲ್ಲ.. ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಎನ್ನಿಸ್ತು. ಆ ಕಾರಣಕ್ಕೆ ಡಿವೋರ್ಸ್ ಆಯ್ತು.. ಆ ಬಗ್ಗೆ ಈಗ ಬೇಸರವೂ ಇಲ್ಲ ಖುಷಿಯೂ ಇಲ್ಲ. ಆ ಬಗ್ಗೆ ಮತ್ತೆಮತ್ತೆ ಮಾತನ್ನಾಡಲು ಇಷ್ಟವೂ ಇಲ್ಲ. ಆದರೆ, ಪ್ರಶ್ನೆ ಕೇಳುವವರ ಬಗ್ಗೆ ಬೇಸರವೂ ಇಲ್ಲ. ಏಕೆಂದರೆ, ಅವರಿಗೆ ಆ ಬಗ್ಗೆ ಕ್ಲಾರಿಟಿ ಅಥವಾ ಸಮಾಧಾನ ಆಗುವಂತಹ ಉತ್ತರ ಬೇಕಾಗಿರಬಹುದು. ಆದರೆ, ಯಾವ ಉತ್ತರದಿಮದ ಅವರಿಗೆ ಸಮಾಧಾನ ಆಗಬಹುದು ಎಂಬ ಕ್ಲಾರಿಟಿ ನನಗಿಲ್ಲ” ಎಂದು ಚಂದನ್ ವೇದನೆ ವ್ಯಕ್ತ ಪಡಿಸಿದ್ದಾರೆ.
“ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಆಗಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿತ್ತು. ಆದರೆ, ಸಾಮಾನ್ಯವಾಗಿ ಇರುವಂತೆ ನಮ್ಮಿಬ್ಬರ ಮಧ್ಯೆ ಪದೇಪದೇ ಜಗಳ ಇರಲಿಲ್ಲ. ರಸ-ವಿರಸಗಳ ವಿಲೇವಾರಿ ಕೂಡ ಇರಲಿಲ್ಲ. ಹೀಗಾಗಿ ಸಾಕಷ್ಟು ಕಾಲ ಆರಾಮವಾಗಿಯೇ ಕಳೆದು ಹೋಯ್ತು. ಆದರೆ, ಎಷ್ಟು ದಿನ ಹಾಗೇ ಇರೋದಕ್ಕೆ ಆಗುತ್ತೆ? ಸಹಜವಾಗಿಯೇ ಇಬ್ಬರೂ ವಿಚ್ಛೇದನನ ನಿರ್ಧಾರ ತೆಗೆದುಕೊಳ್ಳಲೇಬೇಕಾಯ್ತು. ಆದರೆ, ಬಹಳಷ್ಟು ಕೇಸ್‌ಗಳಂತೆ ನಮ್ಮಿಬ್ಬರಲ್ಲಿ ಜಗಳ ಇರಲಿಲಲ, ಜೀವನಾಂಶದ ಸಮಸ್ಯೆಯೂ ಇರಲಿಲ್ಲ. ಹೀಗಾಗಿ ಎಲ್ಲವೂ ಫಟಾಫಟ್ ಅಂತ ಮಿಗಿದುಹೋಯ್ತು” ಎಂದಿದ್ದಾರೆ ಚಂದನ್ ಶೆಟ್ಟಿ.
ಒಟ್ಟಿನಲ್ಲಿ ಹೇಳಬೇಕು ಎಂದರೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಳ್ಳುವ ನಿಜವಾದ ಕಾರಣ, ಮಗು ಮಾಡಿಕೊಳ್ಳುವ ವಿಚಾರದ ಬಗ್ಗೆ ಅಲ್ಲ… ಎಂಬ ಕ್ಲಾರಿಟಿಯನ್ನು ಸ್ವತಃ ಚಂದನ್ ಶೆಟ್ಟಿ ಕೊಟ್ಟಿದ್ದಾರೆ. ಅದೇನು ಕಾರಣವೋ ಏನೋ ಒಟ್ಟಿನಲ್ಲಿ ಬೇರೆಯವರು ಅಂದುಕೊಳ್ಳದ್ದು, ಅವರಿಬ್ಬರೂ ಅಂದುಕೊಂಡಿದ್ದು ಬೇರೆಬೇರೆಯಾಗಿದೆ.