Connect with us

MANGALORE

SKF ಬಾಯ್ಲರ್ ಮತ್ತು ಡ್ರೈಯರ್‌ ಕಾರ್ಖಾನೆಯಿಂದ ಪರಿಸರ ಮಾಲಿನ್ಯ: ಸ್ಥಳೀಯರಿಂದ ಉಪವಾಸದ ಎಚ್ಚರಿಕೆ

Published

on

ಮಂಗಳೂರು: ಮೂಡಬಿದ್ರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಬನ್ನಡ್ಕದ ಕಾರ್ಖಾನೆಯಿಂದ ಪರಿಸರದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಮಂಗಳೂರಿ ನಲ್ಲಿರುವ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದರು.


ಬೆಂಗಳೂರು ಮೂಲದ ಎಸ್‌ಕೆಎಫ್ ಬಾಯ್ಲರ್ ಮತ್ತು ಡ್ರೈಯರ್‌ ಕಾರ್ಖಾನೆಯಿಂದ, ಪರಿಸರದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು,

ಈ ಬಗ್ಗೆ ಕಾರ್ಖಾನೆಗೆ ಹಲವಾರು ಬಾರಿ ಮನವಿ ನೀಡಿದ್ದು,
ನಂತರ ಸ್ಥಳೀಯ ಪಂಚಾಯತ್ ಕಚೇರಿಗೂ ಮನವಿ ನೀಡಿದರೂ ಸಮಸ್ಯೆಗೆ ಸ್ಪಂದಿಸದ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳೀಯ ನಿವಾಸಿಗಳ ನಿಯೋಗ ಇಂದು ಮಂಗಳೂರಿನಲ್ಲಿರುವ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿ ಕಾರ್ಖಾನೆಯಿಂದ ಪರಿಸರದಲ್ಲಿ ಆಗುವ ಸಮಸ್ಯೆ,

ಪೈಂಟ್‌ನಿಂದ ಗಾಳಿಯಲ್ಲಿ ಬರುವ ತೀಕ್ಷ್ಣ ವಾಸನೆ, ತಾಜ್ಯ ನೀರಿನ ಹರಿವು, ಇದರಿಂದ ಪರಿಸರದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಬಗ್ಗೆ ದೂರಿದರು.


ಈ ಹಿಂದೆ ಸ್ಥಳೀಯ ಪಂಚಾಯತ್ ಎಚ್ಚರಿಕೆ ನೀಡಿ, ನೋಟಿಸ್ ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳದಿದ್ದ ಕಾರಣ ಗ್ರಾಮಸ್ಥರನ್ನು ಸೇರಿಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿ ಆರು ತಿಂಗಳ ಹಿಂದೆಯೇ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು.

ಆದರೂ ಸ್ಪಂದಿಸಿಲ್ಲ. ಈಗ ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಶೀಘ್ರವಾಗಿ ಸ್ಥಳಕ್ಕೆ ಬೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲಾಖೆ
20 ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಇಲ್ಲದಿದ್ದರೆ ಮುಂದಿನ ಕ್ರಮವಾಗಿ ಕಾರ್ಖಾನೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನಿಯೋಗದ ಪ್ರಮುಖರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಪರಿಸರ ಇಲಾಖೆಯ ಅಧಿಕಾರಿ ಕೀರ್ತಿ ಕುಮಾರ ರವರು ಮಾತನಾಡಿ ಅಧಿಕಾರಿಗಳು ಈಗಾಗಲೇ ಕಾರ್ಖಾನೆಗೆ ಬೇಟಿ ನೀಡಿದ್ದು,ಇಂಜಿನಿಯರಿಂಗ್ ಕೆಲಸ ನಿರ್ವಹಿಸಲು ಪರವಾನಿಗೆ ಇದ್ದು,

ಪರವಾನಿಗೆ ಇಲ್ಲದೆ ಇದೀಗ ಪೈಂಟಿಂಗ್ ಕಾರ್ಯ ನಿರ್ವಹಿಸುವುತ್ತಿರುವುದು ಕಂಡು ಬಂದಿದೆ,ಇದಕ್ಕೆ ಪರವಾನಿಗೆ ತೆಗೆದುಕೊಂಡು ಕಾರ್ಯ ನಿರ್ವಹಿಸುವಂತೆ ನೋಟಿಸ್ ಜಾರಿ ಮಾಡಿದೆ.

ಸ್ವಲ್ಪ ಸಮಯವಕಾಶ ಕೋರಿದ್ದಾರೆ.ಆದರೆ ಇಂದು ತಾನು ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು.
ನಿಯೋಗದಲ್ಲಿ ಸಂದೀಪ್ ಪೂಜಾರಿ,ಸೂರಜ್ ಜೈನ್, ಮಾಜಿ ಅಧ್ಯಕ್ಷರಾದ ದಯಾನಂದ ಪೈ, ಶ್ರೀನಾಥ್ ಸುವರ್ಣ, ಸದಸ್ಯರಾದ ಎಸ್ತಿನಾ ರೋಡ್ರಿಗಸ್, ಸ್ಥಳೀಯ ಪ್ರಮುಖರಾದ ಪ್ರಸನ್ನ ಶೆಟ್ಟಿ, ಭಾರತಿ ದೇವಾಡಿಗ, ನಿರೀಕ್ಷಾ, ರೇಖಾ, ಪ್ರದೀಪ್, ಲೀಲಾ, ಪ್ರಶಾಂತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

DAKSHINA KANNADA

ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆಯ ಆರ್ಭಟ; ಅಲ್ಲಲ್ಲಿ ಹಾನಿ

Published

on

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಎರಡನೇ ದಿನವಾದ ಇಂದು ಕೂಡಾ ಮುಂದುವರಿದಿದೆ. ಇದರಿಂದ ಸಾಮಾನ್ಯ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ನೆರೆ ರಾಜ್ಯ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಮಳೆ ತೀವ್ರವಾಗಿದೆ. ಹವಾಮಾನ ಇಲಾಖೆಯು ನಾಲ್ಕೂ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಿಸಿದೆ. ರಸ್ತೆ ಕಾಮಗಾರಿ, ಅವೈಜ್ಙಾನಿಕ ಚರಂಡಿ ಕೆಲಸ ಇತ್ಯಾದಿ ಕಾರಣಗಳಿಂದಾಗಿ ಮಳೆ ನೀರು ಸರಾಗವಾಗಿ ಹರಿಯದೆ ಕೃತಕ ನೆರೆ ಬಂದು ಅನೇಕ ಕಡೆಗಳಲ್ಲಿ ನಾಶ ನಷ್ಟ ಸಂಭವಿಸಿದೆ. ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಪಂಜಾಬ್‌ ನಲ್ಲಿ ಆಕಾಂಕ್ಷ ಆತ್ಮಹತ್ಯೆ ಪ್ರಕರಣ; ಮನೆಗೆ ತಲುಪಿದ ಮೃತದೇಹ

ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಹಲವಾರು ಕಡೆಗಳಲ್ಲಿ ಕಡಿತಗೊಂಡಿದೆ. ಮಂಗಳೂರು ನಗರ, ಉಡುಪಿ ನಗರ, ಮಣಿಪಾಲಗಳಲ್ಲಿ ಅಲ್ಲಲ್ಲಿ ಕೃತಕ ನೆರೆಯಿಂದ ಹಾನಿ ಸಂಭವಿಸಿದೆ. ಇಂದು ಮುಂಜಾನೆಯಿಂದ ಬಿಟ್ಟು ಬಿಟ್ಟು ಭಾರೀ ಮಳೆ ಬರುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Continue Reading

BANTWAL

ವಿಟ್ಲ: ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಕಾರು; ಆಕ್ಟಿವಾ, ಪಿಕಪ್ ಗೆ ಢಿಕ್ಕಿ

Published

on

ಬಂಟ್ವಾಳ: ಬಿ.ಸಿ.ರೋಡ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿದ್ದ ಆಲ್ಟೋ ಕಾರೊಂದು ಮುಂದೆ ಆಕ್ಟಿವಾ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದ ಘಟನೆ ಸಾಲೆತ್ತೂರು ಸಮೀಪದ ಪಾಲ್ತಾಜೆಯಲ್ಲಿ ನಡೆದಿದೆ.

ಕಾರಿನಲ್ಲಿ ಇಬ್ಬರು ಇದ್ದು, ಅವರು ಸಾಲೆತ್ತೂರು ಮೂಲಕ ಪರಾರಿಯಾಗಲು ಯತ್ನಿಸಿದಾಗ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ

ಸ್ಥಳಕ್ಕೆ ಗಸ್ತು ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರು ಹಾಗೂ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಯುವಕರಿಬ್ಬರೂ ಹಿಂದಿಯಲ್ಲಿ ಮಾತನಾಡುತ್ತಿದ್ದು, ಹೊರರಾಜ್ಯದಿಂದ ಬಂದವರೆನ್ನಲಾಗಿದೆ.

Continue Reading

DAKSHINA KANNADA

ಮಂಗಳೂರು: ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ

Published

on

ಮಂಗಳೂರು: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮೇ 20 ರಂದು ಮತ್ತೆ ಕೈದಿಗಳ ನಡುವೆ ಹೊಡೆದಾಟ ನಡೆದಿರುವುದಾಗಿ ವರದಿಯಾಗಿದೆ.

ಅಡುಗೆ ಕೆಲಸ ಮಾಡುತ್ತಿದ್ದ ಹಿಂದೂ ಕೈದಿಗೆ ಮತ್ತೋರ್ವ ಕೈದಿ ಮುನೀರ್ ಹೊಡೆದಿದ್ದಾನೆ. ಇದರಿಂದ, ಆಕ್ರೋಶಗೊಂಡ ಇತರ ಕೈದಿಗಳು ಮುನೀರ್ ಮೇಲೆ ಹಲ್ಲೆಗೆ ಮುಂದಾದರು.

ಇದನ್ನೂ ಓದಿ: ಮೇ 23 ರಿಂದ ತುಳುನಾಡಿನಾದ್ಯಂತ “ಗಂಟ್ ಕಲ್ವೆರ್’ ತುಳು ಚಿತ್ರ ತೆರೆಗೆ

ತಕ್ಷಣ ಜಾಗೃತರಾದ ಜೈಲಿನ ಅಧಿಕಾರಿಗಳು ಮುನೀರ್ ಮೇಲೆ ಹಲ್ಲೆ ಮಾಡುವುದನ್ನು ತಪ್ಪಿಸಿದರು. ಇದರಿಂದ ಕೆಲಕಾಲ ಜೈಲಿನೊಳಗೆ ಆತಂಕದ ವಾತಾವರಣ ಸೃಷ್ಟಿಯಾಯಿತು ಎಂದು ತಿಳಿದು ಬಂದಿದೆ.

ಬರ್ಕೆ ಪೊಲೀಸರು ಜೈಲು ಆವರಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page